Just In
Don't Miss
- Lifestyle
Today Rashi Bhavishya: ಸೋಮವಾರದ ದಿನ ಭವಿಷ್ಯ: ಕರ್ಕ, ತುಲಾ, ಕುಂಭ ರಾಶಿಯ ಉದ್ಯೋಗಿಗಳಿಗೆ ಶುಭ ದಿನ
- Sports
ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್; ಟಿ20 ಸರಣಿಗೆ ರೆಡಿ
- Movies
ಗುಬ್ಬಿ ವೀರಣ್ಣ ಪುತ್ರಿ, ಹಿರಿಯ ನಟಿ ಹೇಮಲತಾ ನಿಧನ
- News
ISWA: ಆಸ್ಟ್ರೇಲಿಯಾದ ಅನಿವಾಸಿ ಭಾರತೀಯರೊಂದಿಗೆ ಸಚಿವ ಪ್ರಲ್ಹಾದ್ ಜೋಶಿ ನಿಯೋಗ ಭೇಟಿ
- Finance
Gold Rate Today: ಚಿನ್ನ ಸ್ಥಿರ: ಪ್ರಮುಖ ನಗರಗಳಲ್ಲಿ ಜು.3ರಂದು ಬೆಲೆ ಎಷ್ಟು
- Automobiles
ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್
- Education
JNV Result 2022 : 6ನೇ ತರಗತಿ ತಾತ್ಕಾಲಿಕ ಆಯ್ಕೆ ಪಟ್ಟಿ ಜು.10ರಂದು ಪ್ರಕಟ ಸಾಧ್ಯತೆ
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
ಅತೀ ಹೆಚ್ಚು ಡೌನ್ಲೋಡ್ ಮಾಡಿದ ಹೊಸ ಮೊಬೈಲ್ ಗೇಮ್ ಯಾವುದು ಗೊತ್ತಾ?
ಗೇಮಿಂಗ್ ವಲಯವು ಸಾಕಷ್ಟು ಅಪ್ಡೇಟ್ ಆಗಿದ್ದು, ನೂತನ ಮಾದರಿಯ ಗೇಮ್ಗಳು ಎಂಟ್ರಿ ಕೊಡುತ್ತಲೆ ಇವೆ. ಇತ್ತೀಚಿಗಷ್ಟೆ ರೆಸ್ಪಾನ್ ಎಂಟರ್ಟೈನ್ಮೆಂಟ್ ಮತ್ತು ಎಲೆಕ್ಟ್ರಾನಿಕ್ ಆರ್ಟ್ಸ್ ಅಭಿವೃದ್ಧಿಪಡಿಸಿದ ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ. ಬಿಡುಗಡೆ ಆದ ಕೆಲವೇ ದಿನಗಳಲ್ಲಿ, ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್ 60 ದೇಶಗಳಲ್ಲಿ ಅತಿ ಹೆಚ್ಚು ಡೌನ್ಲೋಡ್ ಮಾಡಿದ ಐಫೋನ್ ಗೇಮ್ ಆಗಿದೆ ಎಂದು ಪಾಕೆಟ್ಗೇಮರ್ ವರದಿ ಮಾಡಿದೆ.

ಹೌದು, ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್ ಗೇಮ್ ಪ್ರಿಯರ ಗಮನ ಸೆಳೆದಿದ್ದು, ಹೆಚ್ಚು ಜನಪ್ರಿಯ ಪಡೆಯುತ್ತಿದೆ. ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ 89 ದೇಶಗಳಲ್ಲಿ ಐಫೋನ್ಗಳಲ್ಲಿ ಅತಿ ಹೆಚ್ಚು ಡೌನ್ಲೋಡ್ ಆಗಿರುವ ಟಾಪ್ ಟೆನ್ ಗೇಮ್ಗಳಲ್ಲಿ ಒಂದಾಗಿದೆ ಎಂದು ವರದಿ ಬಹಿರಂಗಪಡಿಸಿದೆ. ಇದೀಗ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ನಲ್ಲಿ ಡೌನ್ಲೋಡ್ ಮಾಡಲು ಲಭ್ಯವಿದೆ. ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಅಗ್ರ ಐಫೋನ್ ಗೇಮ್ ಆಗಿರುವ ಕೆಲವು ದೇಶಗಳು ಸೇರಿವೆ. ಆ ಪೈಕಿ ಭಾರತ, ಜರ್ಮನಿ, ಜಪಾನ್, ಯುಕೆ ಮತ್ತು ಯುಎಸ್ ರಾಷ್ಟ್ರಗಳು ಸೇರಿವೆ.
ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಒಂದು ಶೂಟಿಂಗ್ ಮಾದರಿಯ ಗೇಮ್ ಆಗಿದ್ದು, ಅದು ವಿಶೇಷ ಅಧಿಕಾರಗಳು ಮತ್ತು ಸಾಮರ್ಥ್ಯಗಳೊಂದಿಗೆ ಬಹು ಪಾತ್ರಗಳು ಅಥವಾ 'ಲೆಜೆಂಡ್ಸ್' ಅನ್ನು ತರುತ್ತದೆ. ಆಟವು ಹಲವಾರು ಆಟದ ವಿಧಾನಗಳನ್ನು ನೀಡುತ್ತದೆ. ಆದರೆ ಗುರಿಯು ಎಲ್ಲಾ ಇತರ ಬ್ಯಾಟಲ್ ರಾಯಲ್ ಆಟಗಳಂತೆಯೇ ಇರುತ್ತದೆ. ಆಟಗಾರರು ತಮ್ಮ ತಂಡದ ಜೊತೆಗಾರರೊಂದಿಗೆ ಕಾರ್ಯತಂತ್ರ ರೂಪಿಸಬೇಕು, ಹಾಗೆಯೇ ಶತ್ರುಗಳನ್ನು ಕೊಲ್ಲಬೇಕು ಮತ್ತು ಗೇಮ್ನಲ್ಲಿ ಕೊನೆಯವರೆಗೂ ಉಳಿಯಬೇಕು.
ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್ ಡೌನ್ಲೋಡ್
ಹೊಸ ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ನಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಲು ಲಭ್ಯವಿದೆ. ಗೇಮ್ ಅನ್ನು ಪ್ರಾರಂಭಿಸುವ ಮೊದಲು ಪೂರ್ವ-ನೋಂದಣಿಗಾಗಿ ಲಭ್ಯಗೊಳಿಸಲಾಯಿತು. ಗೇಮ್ ಅನ್ನು ಮುಂಗಡವಾಗಿ ನೋಂದಾಯಿಸಿದ ಬಳಕೆದಾರರು ತಮ್ಮ ಮೊಬೈಲ್ ಫೋನ್ಗಳಲ್ಲಿ ಗೇಮ್ ಅನ್ನು ಇನ್ಸ್ಟಾಲ್ ಮಾಡಿದ ನಂತರ ಮುಂಗಡ-ನೋಂದಾಯಿತ ಬಹುಮಾನಗಳನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ.

ಈ ಗೇಮ್ ಅನ್ನು ಆಂಡ್ರಾಯ್ಡ್ ಫೋನಿನಲ್ಲಿ ಡೌನ್ಲೋಡ್ ಮಾಡಲು ಈ ಫೀಚರ್ಸ್ ಅಗತ್ಯ:
* ಆಂಡ್ರಾಯ್ಡ್ 6.0 ಅಥವಾ ನಂತರದ ಆವೃತ್ತಿಗಳನ್ನು ರನ್ ಮಾಡಿ
* ಕನಿಷ್ಠ 3GB RAM. ಆದಾಗ್ಯೂ, 2GB RAM ಹೊಂದಿರುವ ವಿವೋ, ಒಪ್ಪೊ, ಹುವಾವೇ, ಮೊಟೊರೊಲಾ, ಸ್ಯಾಮ್ಸಂಗ್, ಲೆನೊವಾ ಅಥವಾ ಶಿಯೋಮಿ ಫೋನ್ಗಳು ಸಹ ಗೇಮ್ ಅನ್ನು ಬೆಂಬಲಿಸಲು ಸಾಧ್ಯವಾಗುತ್ತದೆ.
* ಕನಿಷ್ಠ 4GB ಸ್ಟೋರೇಜ್
* N/L/XL ಸ್ಕ್ರೀನ್ ಗಾತ್ರಗಳು
* CPU: ಸ್ನ್ಯಾಪ್ಡ್ರಾಗ್ನ್ 435, ಮೀಡಿಯಾ ಟೆಕ್ ಹಿಲಿಯೋ P20, Exynos 7420
ಈ ಗೇಮ್ ಅನ್ನು ಆಂಡ್ರಾಯ್ಡ್ ಫೋನಿನಲ್ಲಿ ಡೌನ್ಲೋಡ್ ಮಾಡಲು ಈ ಫೀಚರ್ಸ್ ಅಗತ್ಯ:
* ಐಫೋನ್ 6s ಅಥವಾ ನಂತರ ಮಾದರಿಗಳು
* iOS 11.0 ಅಥವಾ ನಂತರದ ಆವೃತ್ತಿಗಳು
* ಸಿಪಿಯು: A9
* ಕನಿಷ್ಠ 2GB RAM ಅಗತ್ಯ
* ಕನಿಷ್ಠ 4GB ಸ್ಟೋರೇಜ್ ಅಗತ್ಯ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086