ಅತೀ ಹೆಚ್ಚು ಡೌನ್‌ಲೋಡ್‌ ಮಾಡಿದ ಹೊಸ ಮೊಬೈಲ್‌ ಗೇಮ್‌ ಯಾವುದು ಗೊತ್ತಾ?

|

ಗೇಮಿಂಗ್ ವಲಯವು ಸಾಕಷ್ಟು ಅಪ್‌ಡೇಟ್‌ ಆಗಿದ್ದು, ನೂತನ ಮಾದರಿಯ ಗೇಮ್‌ಗಳು ಎಂಟ್ರಿ ಕೊಡುತ್ತಲೆ ಇವೆ. ಇತ್ತೀಚಿಗಷ್ಟೆ ರೆಸ್ಪಾನ್ ಎಂಟರ್‌ಟೈನ್‌ಮೆಂಟ್ ಮತ್ತು ಎಲೆಕ್ಟ್ರಾನಿಕ್ ಆರ್ಟ್ಸ್‌ ಅಭಿವೃದ್ಧಿಪಡಿಸಿದ ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ. ಬಿಡುಗಡೆ ಆದ ಕೆಲವೇ ದಿನಗಳಲ್ಲಿ, ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್‌ 60 ದೇಶಗಳಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಮಾಡಿದ ಐಫೋನ್ ಗೇಮ್ ಆಗಿದೆ ಎಂದು ಪಾಕೆಟ್‌ಗೇಮರ್ ವರದಿ ಮಾಡಿದೆ.

ಅತೀ ಹೆಚ್ಚು ಡೌನ್‌ಲೋಡ್‌ ಮಾಡಿದ ಹೊಸ ಮೊಬೈಲ್‌ ಗೇಮ್‌ ಯಾವುದು ಗೊತ್ತಾ?

ಹೌದು, ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್ ಗೇಮ್‌ ಪ್ರಿಯರ ಗಮನ ಸೆಳೆದಿದ್ದು, ಹೆಚ್ಚು ಜನಪ್ರಿಯ ಪಡೆಯುತ್ತಿದೆ. ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ 89 ದೇಶಗಳಲ್ಲಿ ಐಫೋನ್‌ಗಳಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಆಗಿರುವ ಟಾಪ್ ಟೆನ್ ಗೇಮ್‌ಗಳಲ್ಲಿ ಒಂದಾಗಿದೆ ಎಂದು ವರದಿ ಬಹಿರಂಗಪಡಿಸಿದೆ. ಇದೀಗ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಅಗ್ರ ಐಫೋನ್ ಗೇಮ್ ಆಗಿರುವ ಕೆಲವು ದೇಶಗಳು ಸೇರಿವೆ. ಆ ಪೈಕಿ ಭಾರತ, ಜರ್ಮನಿ, ಜಪಾನ್, ಯುಕೆ ಮತ್ತು ಯುಎಸ್ ರಾಷ್ಟ್ರಗಳು ಸೇರಿವೆ.

ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಒಂದು ಶೂಟಿಂಗ್ ಮಾದರಿಯ ಗೇಮ್‌ ಆಗಿದ್ದು, ಅದು ವಿಶೇಷ ಅಧಿಕಾರಗಳು ಮತ್ತು ಸಾಮರ್ಥ್ಯಗಳೊಂದಿಗೆ ಬಹು ಪಾತ್ರಗಳು ಅಥವಾ 'ಲೆಜೆಂಡ್ಸ್' ಅನ್ನು ತರುತ್ತದೆ. ಆಟವು ಹಲವಾರು ಆಟದ ವಿಧಾನಗಳನ್ನು ನೀಡುತ್ತದೆ. ಆದರೆ ಗುರಿಯು ಎಲ್ಲಾ ಇತರ ಬ್ಯಾಟಲ್ ರಾಯಲ್ ಆಟಗಳಂತೆಯೇ ಇರುತ್ತದೆ. ಆಟಗಾರರು ತಮ್ಮ ತಂಡದ ಜೊತೆಗಾರರೊಂದಿಗೆ ಕಾರ್ಯತಂತ್ರ ರೂಪಿಸಬೇಕು, ಹಾಗೆಯೇ ಶತ್ರುಗಳನ್ನು ಕೊಲ್ಲಬೇಕು ಮತ್ತು ಗೇಮ್‌ನಲ್ಲಿ ಕೊನೆಯವರೆಗೂ ಉಳಿಯಬೇಕು.

ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್ ಡೌನ್‌ಲೋಡ್
ಹೊಸ ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಗೇಮ್‌ ಅನ್ನು ಪ್ರಾರಂಭಿಸುವ ಮೊದಲು ಪೂರ್ವ-ನೋಂದಣಿಗಾಗಿ ಲಭ್ಯಗೊಳಿಸಲಾಯಿತು. ಗೇಮ್‌ ಅನ್ನು ಮುಂಗಡವಾಗಿ ನೋಂದಾಯಿಸಿದ ಬಳಕೆದಾರರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಗೇಮ್‌ ಅನ್ನು ಇನ್‌ಸ್ಟಾಲ್ ಮಾಡಿದ ನಂತರ ಮುಂಗಡ-ನೋಂದಾಯಿತ ಬಹುಮಾನಗಳನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ.

ಅತೀ ಹೆಚ್ಚು ಡೌನ್‌ಲೋಡ್‌ ಮಾಡಿದ ಹೊಸ ಮೊಬೈಲ್‌ ಗೇಮ್‌ ಯಾವುದು ಗೊತ್ತಾ?

ಈ ಗೇಮ್‌ ಅನ್ನು ಆಂಡ್ರಾಯ್ಡ್‌ ಫೋನಿನಲ್ಲಿ ಡೌನ್‌ಲೋಡ್‌ ಮಾಡಲು ಈ ಫೀಚರ್ಸ್‌ ಅಗತ್ಯ:

* ಆಂಡ್ರಾಯ್ಡ್ 6.0 ಅಥವಾ ನಂತರದ ಆವೃತ್ತಿಗಳನ್ನು ರನ್ ಮಾಡಿ

* ಕನಿಷ್ಠ 3GB RAM. ಆದಾಗ್ಯೂ, 2GB RAM ಹೊಂದಿರುವ ವಿವೋ, ಒಪ್ಪೊ, ಹುವಾವೇ, ಮೊಟೊರೊಲಾ, ಸ್ಯಾಮ್‌ಸಂಗ್, ಲೆನೊವಾ ಅಥವಾ ಶಿಯೋಮಿ ಫೋನ್‌ಗಳು ಸಹ ಗೇಮ್‌ ಅನ್ನು ಬೆಂಬಲಿಸಲು ಸಾಧ್ಯವಾಗುತ್ತದೆ.

* ಕನಿಷ್ಠ 4GB ಸ್ಟೋರೇಜ್

* N/L/XL ಸ್ಕ್ರೀನ್‌ ಗಾತ್ರಗಳು

* CPU: ಸ್ನ್ಯಾಪ್‌ಡ್ರಾಗ್ನ್ 435, ಮೀಡಿಯಾ ಟೆಕ್‌ ಹಿಲಿಯೋ P20, Exynos 7420

ಈ ಗೇಮ್‌ ಅನ್ನು ಆಂಡ್ರಾಯ್ಡ್‌ ಫೋನಿನಲ್ಲಿ ಡೌನ್‌ಲೋಡ್‌ ಮಾಡಲು ಈ ಫೀಚರ್ಸ್‌ ಅಗತ್ಯ:

* ಐಫೋನ್ 6s ಅಥವಾ ನಂತರ ಮಾದರಿಗಳು

* iOS 11.0 ಅಥವಾ ನಂತರದ ಆವೃತ್ತಿಗಳು

* ಸಿಪಿಯು: A9

* ಕನಿಷ್ಠ 2GB RAM ಅಗತ್ಯ

* ಕನಿಷ್ಠ 4GB ಸ್ಟೋರೇಜ್‌ ಅಗತ್ಯ.

Most Read Articles
Best Mobiles in India

English summary
Apex Legends Mobile now most Downloaded iPhone Game: Report.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X