ಐಫೋನ್ 12 ಪ್ರೊ ಮತ್ತು 12 ಪ್ರೊ ಮ್ಯಾಕ್ಸ್ ಲಾಂಚ್‌!ಭಾರತದಲ್ಲಿ ಬೆಲೆ ಎಷ್ಟು!

|

ಜಾಗತಿಕ ಮಾರುಕಟ್ಟೆಯ ಟೆಕ್‌ ದೈತ್ಯ ಆಪಲ್ ಸಂಸ್ಥೆ ತನ್ನ ಬಹುನಿರೀಕ್ಷಿತ ಐಫೋನ್ 12 ಸರಣಿಯನ್ನು ಬಿಡುಗಡೆ ಆಗಿದೆ. ಈಗಾಗಲೇ ಮಾರುಕಟ್ಟೆಗೆ ಎಂಟ್ರಿ ಕೊಡಬೇಕಾಗಿದ್ದ ಐಫೋನ್‌ 12 ಸರಣಿ ಕೊರೊನಾ ವೈರಸ್‌ ಹಾವಳಿಯಿಂದಾಗಿ ಈಗ ಬಿಡುಗಡೆ ಆಗಿದೆ. ಇನ್ನು ಈ ಸರಣಿ ಐಫೋನ್ 11 ಸರಣಿಯ ಮುಂದುವರಿದ ಆವೃತ್ತಿಯಾಗಿದ್ದು, ಐಫೋನ್‌ 12 ಸಾಕಷ್ಟು ಅಪ್‌ಡೇಟ್‌ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಹಾಕಿದೆ. ಈ ಐಫೋನ್‌ಗಳು ನಿರೀಕ್ಷೆಯಂತೆ ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಅಪ್‌ಗ್ರೇಡ್‌ ಹಾಗೂ ಹೊಸತನದ ಟಚ್‌ ಅನ್ನು ಒಳಗೊಂಡಿವೆ.

 ಐಫೋನ್ 12

ಹೌದು, ಜನಪ್ರಿಯ ಆಪಲ್‌ ಸಂಸ್ಥೆ ತನ್ನ Hi, Speed ಹೆಸರಿನ ಕಾರ್ಯಕ್ರದಲ್ಲಿ ಐಫೋನ್ 12 ಸರಣಿಯನ್ನು ಪರಿಚಯಿಸಿದೆ. ಸದ್ಯ ಬಿಡುಗಡೆ ಆಗಿರುವ ಐಫೋನ್ 12 ಸರಣಿಯು ಐಫೋನ್‌ 12, ಐಫೋನ್‌ 12 ಮಿನಿ, ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್‌ ಫೋನ್‌ಗಳನ್ನು ಒಳಗೊಂಡಿದೆ. ಈ ಐಫೋನ್‌ಗಳು ಸಾಕಷ್ಟು ಅಪ್‌ಗ್ರೇಡ್‌ ಬ್ಯಾಟರಿ, ಅಪ್‌ಗ್ರೇಡ್‌ ಕ್ಯಾಮೆರಾ ಫೀಚರ್ಸ್ ಅನ್ನು ಹೊಂದಿದೆ. ಇನ್ನು ಐಫೋನ್‌ 12 ಸರಣಿಯಲ್ಲಿ ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್‌ ಫೋನ್‌ಗಳ ವಿಶೇಷತೆ ಏನು, ಇವುಗಳ ಫೀಚರ್ಸ್‌ಗಳು ಹೇಗಿವೆ ಅನ್ನೊದನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ಮತ್ತು ಡಿಸೈನ್‌

ಡಿಸ್‌ಪ್ಲೇ ಮತ್ತು ಡಿಸೈನ್‌

ಐಫೋನ್ 12 ಪ್ರೊ ಫೋನ್‌ 6.1-ಇಂಚಿನ ಇಂಚಿನ ಸೂಪರ್ ರೇಟಿನಾ XDR ಮಾದರಿಯ OLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಐಫೋನ್‌ ಪ್ರೊ ಮ್ಯಾಕ್ಸ್‌ ಫೋನ್‌ 6.7-ಇಂಚಿನ ರೇಟಿನಾ XDR ಮಾದರಿಯ OLED ಡಿಸ್‌ಪ್ಲೇಯನ್ನು ಹೊಂದಿದೆ ಮತ್ತು ಬಣ್ಣ ನಿಖರತೆಗಾಗಿ ಸಿಸ್ಟಮ್‌ವೈಡ್ ಕಲರ್‌ ಮ್ಯಾನೇಜ್‌ಮೆಂಟ್‌ ಹೊಂದಿದೆ. ಇದಲ್ಲದೆ, ಈ ಎರಡೂ ಫೋನ್‌ಗಳಲ್ಲಿ ಒಎಲ್ಇಡಿ ಡಿಸ್‌ಪ್ಲೇ ಸುಮಾರು 3.5 ಮಿಲಿಯನ್ ಪಿಕ್ಸೆಲ್‌ಗಳನ್ನು ಹೊಂದಿರುತ್ತದೆ ಮತ್ತು ಗರಿಷ್ಠ ಬ್ರೈಟ್‌ನೆಶ್‌ ಮಟ್ಟ 1200 ನಿಟ್‌ಗಳವರೆಗೆ ಹೊಂದಿದೆ. ಅಲ್ಲದೆ ಎರಡೂ ಸ್ಮಾರ್ಟ್‌ಫೋನ್‌ಗಳು ಐಪಿ 68 ರೇಟಿಂಗ್ ಆಗಿದ್ದು, 6 ಮೀಟರ್‌ವರೆಗೆ 30 ನಿಮಿಷಗಳವರೆಗೆ ನೀರಿನ ಮುಳುಗುವಿಕೆಯನ್ನು ತಡೆದುಕೊಳ್ಳುತ್ತವೆ ಮತ್ತು ಕಾಫಿ ಮತ್ತು ಸೋಡಾ ಬಿದ್ದರೂ ಫೋನ್‌ಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪ್ರೊಟೆಕ್ಷನ್‌ ನೀಡಲಾಗಿದೆ.

ಪ್ರೊಸೆಸರ್‌ ಹೇಗಿದೆ

ಪ್ರೊಸೆಸರ್‌ ಹೇಗಿದೆ

ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್ ಫೋನ್‌ಗಳು ಆಪಲ್‌ನ ಎ 14 ಬಯೋನಿಕ್ ಸಿಸ್ಟಮ್-ಆನ್-ಚಿಪ್‌ಸೆಟ್‌ ಪ್ರೊಸೆಸರ್‌ ಕಾರ್ಯನಿರ್ವಹಿಸಲಿವೆ. ಪ್ರೊಸೆಸರ್‌ಗೆ ಪೂರಕವಾಗಿ iOS 14 ಬೆಂಬಲ ನೀಡಲಿದೆ. ಇನ್ನು ಎ 14 ಬಯೋನಿಕ್ ಅನ್ನು 4 ಕೆ ವಿಡಿಯೋ ಎಡಿಟಿಂಗ್ ಸೇರಿದಂತೆ ಮಾತುಕತೆಗಳನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಇದು ಈಗಾಗಲೇ ಅಸ್ತಿತ್ವದಲ್ಲಿರುವ ಎ 13 ಬಯೋನಿಕ್ ಚಿಪ್‌ಗಿಂತ ಸಿಪಿಯು ಕಾರ್ಯಕ್ಷಮತೆಯಲ್ಲಿ 40 ಪ್ರತಿಶತದಷ್ಟು ವರ್ಧನೆ ಮತ್ತು ಗ್ರಾಫಿಕ್ಸ್‌ನಲ್ಲಿ 30 ಪ್ರತಿಶತದಷ್ಟು ಸುಧಾರಣೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ, ಹೊಸ 16-ಕೋರ್ ನ್ಯೂರಾಲ್ ಎಂಜಿನ್ ಸೆಕೆಂಡಿಗೆ 11 ಟ್ರಿಲಿಯನ್ ಕಾರ್ಯಾಚರಣೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್ ಫೋನ್‌ಗಳು ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿವೆ. ಇದರಲ್ಲಿ ಐಫೋನ್ 12 ಪ್ರೊ ಎರಡು ವೈಡ್ ಆಂಗಲ್ ಸೆನ್ಸಾರ್‌ಅನ್ನು ಹೊಂದಿದೆ ಮತ್ತು 4x ಆಪ್ಟಿಕಲ್ ಜೂಮ್‌ಗಾಗಿ 52 ಎಂಎಂ ಫೋಕಲ್ ಲೆಂಗ್ತ್ ಟೆಲಿಫೋಟೋ ಸೆನ್ಸಾರ್‌ ಅನ್ನು ಒಳಗೊಂಡಿದೆ. ಐಫೋನ್ 12 ಪ್ರೊ ಮ್ಯಾಕ್ಸ್ ಟೆಲಿಫೋಟೋ ಕ್ಯಾಮೆರಾದೊಂದಿಗೆ ಉತ್ತಮವಾದ ಕ್ಯಾಮೆರಾ ಸೆಟ್ ಹೊಂದಿದ್ದು, ಇದು 65 ಎಂಎಂ ಫೋಕಲ್ ಉದ್ದವನ್ನು ಹೊಂದಿದ್ದು ಅದು ನಿಮಗೆ 2.5x ಆಪ್ಟಿಕಲ್ ಜೂಮ್ ಮತ್ತು 5x ಜೂಮ್ ಶ್ರೇಣಿಯನ್ನು ಅನುಮತಿಸುತ್ತದೆ. ಸುಧಾರಿತ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಕೂಡ ಹೊಂದಿದೆ. ಡಾಲ್ಬಿ ಸಪೋರ್ಟ್‌ ಸಹ ಪಡೆದಿದೆ. ಇದಲ್ಲದೆ ಐಫೋನ್ 12 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಉತ್ತಮ ಗುಣಮಟ್ಟದ ವೀಡಿಯೊ ರೆಕಾರ್ಡಿಂಗ್ ಸಾಮರ್ಥ್ಯವನ್ನು ಹೊಂದಿದೆ. ಸಿನೆಮಾ-ಗ್ರೇಡ್ ಪ್ರೊಡಕ್ಷನ್‌ಗಳಿಗೆ ಇನ್ನೂ ಉತ್ತಮವಾದ ವೀಡಿಯೊ ಸ್ಥಿರೀಕರಣ. ಫೋಟೋಗಳ ಅಪ್ಲಿಕೇಶನ್ ಅಥವಾ ಐಮೊವಿಯಲ್ಲಿ ಸಂಪಾದಿಸುವಾಗ ಡಾಲ್ಬಿ ವಿಷನ್ ಗ್ರೇಡಿಂಗ್ ಅನ್ನು ನೇರ ಸಂಸ್ಕರಿಸಲಾಗುತ್ತದೆ ಮತ್ತು ಉಳಿಸಿಕೊಳ್ಳಲಾಗುತ್ತದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್ 20 ಗಂಟೆಗಳ ವೀಡಿಯೊ ಪ್ಲೇಬ್ಯಾಕ್‌ ಅನ್ನು ಹೊಂದಿದ್ದು, "ಐಫೋನ್‌ನಲ್ಲಿ ಅತಿ ಉದ್ದದ ಬ್ಯಾಟರಿ ಅವಧಿಯನ್ನು" ಹೊಂದಿವೆ. ಇನ್ನು ಈ ಐಫೋನ್‌ಗಳ ಬ್ಯಾಟರಿ 15W ವರೆಗೆ ಮ್ಯಾಗ್‌ಸೇಫ್ ವೈರ್‌ಲೆಸ್ ಚಾರ್ಜಿಂಗ್ ಮತ್ತು 7.5W ವರೆಗೆ Qi ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಆಪಲ್ ಐಫೋನ್ 12 ಸರಣಿಯಲ್ಲಿ ನವೀಕರಿಸಿದ ವಾಯರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಸಹ ನೀಡಿದೆ, ಇದು ಮ್ಯಾಗ್‌ಸೇಫ್ ಬ್ರ್ಯಾಂಡಿಂಗ್ ಅನ್ನು ಹೊತ್ತ ಮ್ಯಾಗ್ನೆಟಿಕ್ ಚಾರ್ಜರ್‌ಗಳನ್ನು ಬೆಂಬಲಿಸುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್ 128GB, 256GB, ಮತ್ತು 512GB ಮೂರು ವೇರಿಯೆಂಟ್‌ ಆಯ್ಕೆಗಳಲ್ಲಿ ಲಭ್ಯವಾಗಲಿವೆ. ಇವುಗಳಲ್ಲಿ ಐಫೋನ್ 12 ಪ್ರೊ 128GB ಮಾದರಿಯ ಬೆಲೆ 1,19,900 ರೂ, ಐಫೋನ್ 12 ಪ್ರೊ 256GB ಮಾದರಿಯ ಬೆಲೆ 1,29,900 ರೂ ಮತ್ತು ಐಫೋನ್ 12 ಪ್ರೊ 512GB ಮಾದರಿಯ ಬೆಲೆ 1,49,900 ರೂ ಆಗಿದೆ. ಹಾಗೆಯೇ ಐಫೋನ್ 12 ಪ್ರೊ ಮ್ಯಾಕ್ಸ್ 128GB ಮಾದರಿಯ ಬೆಲೆ 1,29,900 ರೂ, ಐಫೋನ್ 12 ಪ್ರೊ ಮ್ಯಾಕ್ಸ್ 256GB ಮಾದರಿಯ ಬೆಲೆ 1,39,900 ರೂ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್ 512GB ಮಾದರಿಯ ಬೆಲೆ 1,59,900 ರೂ ಆಗಿದೆ. ಇನ್ನು ಈ ಐಫೋನ್‌ಗಳು ಗ್ರ್ಯಾಫೈಟ್, ಸಿಲ್ವರ್, ಗೋಲ್ಡ್ ಅಂಡ್ ಪೆಸಿಫಿಕ್ ಬ್ಲೂ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದ್ದು, ಆಪಲ್.ಕಾಂ ಮತ್ತು ಅಧಿಕೃತ ಆಪಲ್‌ ಐಫೋನ್‌ ಮಾರಾಟ ಮಳಿಗೆಗಳಲ್ಲಿ ಖರೀದಿಸಬಹುದಾಗಿದೆ.

Most Read Articles
Best Mobiles in India

English summary
iPhone 12 Pro and iPhone 12 Pro Max will be available in 128GB, 256GB, and 512GB storage variants, priced Rs 119,900 and Rs 129,900 onwards.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X