ಭಾರತದಲ್ಲಿ ಆಪಲ್‌ನ ಆನ್‌ಲೈನ್‌ ಸ್ಟೋರ್‌ ಪ್ರಾರಂಭ!

|

ಭಾರತದಲ್ಲಿ ಆಪಲ್‌ನ ಆನ್‌ಲೈನ್ ಸ್ಟೋರ್ ಇಂದು ನೇರ ಪ್ರಸಾರಕ್ಕೆ ಸಜ್ಜಾಗಿದೆ. ಇದಕ್ಕೆ ಸಂಬಂದಿಸಿದಂತೆ ಆಪಲ್‌ನ ವೆಬ್‌ಸೈಟ್‌ನಲ್ಲಿ 'Coming Soon' ಎಂಬ ಉಲ್ಲೇಖಿಸಲಾಗಿದೆ. ಇದೇ ಕಾರಣಕ್ಕೆ ಆಪಲ್‌ನ ಆನ್‌ಲೈನ್‌ ಸ್ಟೋರ್‌ 'ಶೀಘ್ರದಲ್ಲೇ' ಲೈವ್ ಆಗುವ ನಿರೀಕ್ಷೆಯಿದೆ. ಆಪಲ್‌ನ ಆನ್‌ಲೈನ್‌ ಸ್ಟೋರ್‌ ಲೈವ್‌ ಆದಾಗ ಶಾಪಿಂಗ್ ಹೆಲ್ಫ್‌, ಉಚಿತ ಸಂಪರ್ಕವಿಲ್ಲದ ವಿತರಣೆ, ವಿಭಿನ್ನ ಪಾವತಿ ಆಯ್ಕೆಗಳು ಗ್ರಾಹಕರಿಗೆ ಲಬ್ಯವಾಗಲಿದೆ ಎಂದು ಆಪಲ್‌ ಸಂಸ್ಥೆ ಹೇಳಿಕೊಂಡಿದೆ. ಅಲ್ಲದೆ ಆಪಲ್‌ ಐಫೋನ್‌ಗಳನ್ನು ನೀವು ಹೇಗೆ ಉತ್ತಮವಾಗಿ ಬಳಸುವುದು ಎಂಬುದನ್ನು ಅರ್ಥಮಾಡಿಕೊಳ್ಳಲು ಉಚಿತ ಸೆಷನ್‌ಗಳು, ಕೂಡ ಇದರಲ್ಲಿ ಲಭ್ಯವಾಗಲಿವೆ.

ಆಪಲ್‌ನ ಆನ್‌ಲೈನ್‌ ಸ್ಟೋರ್‌

ಹೌದು, ಆಪಲ್‌ನ ಆನ್‌ಲೈನ್‌ ಸ್ಟೋರ್‌ ಲೈವ್‌ ಭಾರತದಲ್ಲಿ ಲೈವ್‌ ಆಗಿದೆ. ಈ ಮೂಲಕ ಆಪಲ್‌ ಸಂಸ್ಥೆ ಭಾರತದಲ್ಲಿ ಅಧಿಕೃತ ಆನ್‌ಲೈನ್‌ ಸ್ಟೋರ್‌ ಅನ್ನು ಪ್ರಾರಂಭಿಸಲಾಗ್ತಿದೆ. ಇಲ್ಲಿಯವರೆಗೆ ಭಾರತದಲ್ಲಿ ಆಪಲ್ ಪ್ರಾಡಕ್ಟ್‌ಗಳನ್ನು ಖರೀದಿಸುವುದಕ್ಕೆ ಥರ್ಡ್‌ ಪಾರ್ಟಿ ಸ್ಟೋರ್‌ಗಳಾದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್‌ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳನ್ನು ಅವಲಂಬಿಸಲಾಗಿತ್ತು. ಆದರೆ ಇನ್ನು ಮುಂದೆ ಆಪಲ್‌ನ ಆನ್‌ಲೈನ್‌ ಸ್ಟೋರ್‌ನಲ್ಲಿಯೇ ಖರೀದಿಸಬಹುದಾಗಿದೆ. ಇನ್ನು ಆಪಲ್‌ನ ಆನ್‌ಲೈನ್‌ ಸ್ಟೋರ್‌ ನಲ್ಲಿ ಯಾವೆಲ್ಲಾ ಸೌಲಭ್ಯಗಳು ದೊರೆಯಲಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್‌ನ ಆನ್‌ಲೈನ್‌ ಸ್ಟೋರ್

ಆಪಲ್‌ನ ಆನ್‌ಲೈನ್‌ ಸ್ಟೋರ್‌ನಿಂದ ಆಪಲ್ ಉತ್ಪನ್ನಗಳನ್ನು ಖರೀದಿಸಲು ಬಯಸುವ ಭಾರತೀಯ ಗ್ರಾಹಕರು ಈ ಸ್ಟೋರ್‌ಗೆ ಬೇಟಿ ನೀಡಬಹುದಾಗಿದೆ. ಅಲ್ಲದೆ ಆಪಲ್‌ನ ನಿರ್ದಿಷ್ಟ ಉತ್ಪನ್ನ, ಸಲಹೆ ಅಥವಾ ಮಾರ್ಗದರ್ಶನಕ್ಕಾಗಿ ಕರೆ ಅಥವಾ ಚಾಟ್ ಮೂಲಕ ಅಥವಾ ಯಾವುದೇ ಮ್ಯಾಕ್ ಅನ್ನು ಕಸ್ಟಮ್-ಕಾನ್ಫಿಗರ್ ಮಾಡಲು ಆಪಲ್ ತಜ್ಞರೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ. ಇದರಿಂದ ತಜ್ಞರು ತಮ್ಮ ಹೊಸ ಡಿವೈಸ್‌ಗಳನ್ನು ಹೊಂದಿಸಲು ಗ್ರಾಹಕರಿಗೆ ಸಹಾಯ ಮಾಡಬಹುದು. ಈ ಸ್ಟೋರ್‌ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಬೆಂಬಲವನ್ನು ನೀಡಲಿದೆ.

ಆಪಲ್ ಸ್ಟೋರ್ ಆನ್‌ಲೈನ್

ಆಪಲ್ ಸ್ಟೋರ್ ಆನ್‌ಲೈನ್ ಮೂಲಕ ಐಫೋನ್ ಮಾದರಿಗಳಿಗಾಗಿ ಟ್ರೇಡ್-ಇನ್ ಪ್ರೋಗ್ರಾಂ ಅನ್ನು ಪರಿಚಯಿಸಲಾಗಿದ್ದು. ಇಲ್ಲಿ ಗ್ರಾಹಕರು ಹೊಸ ಐಫೋನ್‌ ಖರೀದಿಸುವಾಗ ಸಾಲ ಪಡೆಯಲು ಯಾವುದೇ ಅರ್ಹ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ. ಆಪಲ್ ಪ್ರಕಾರ, ನೀವು ವಿನಿಮಯ ಮಾಡಿಕೊಳ್ಳಲು ಬಯಸುವ ಡಿವೈಸ್‌ನ ಸ್ಥಿತಿ, ವರ್ಷ ಮತ್ತು ಸಂರಚನೆಯ ಆಧಾರದ ಮೇಲೆ ಟ್ರೇಡ್-ಇನ್ ಮೌಲ್ಯಗಳು ಬದಲಾಗಲಿವೆ. ಆದರೆ ಎಲ್ಲಾ ರೀತಿಯಲ್ಲೂ ಪರಿಶೀಲಿಸಿದ ನಂತರ ಮಾತ್ರ ಟ್ರೇಡ್-ಇನ್ ಮೌಲ್ಯವನ್ನು ಕಡಿತಗೊಳಿಸಲಾಗುತ್ತದೆ ಎಂದು ಆಪಲ್‌ ಸಂಸ್ಥೆ ಹೇಳಿಕೊಂಡಿದೆ.

ಆಪಲ್‌ಕೇರ್ +

ಇದಲ್ಲದೆ ವಿಶೇಷ ರಿಯಾಯಿತಿ ದರದಲ್ಲಿ ವಿದ್ಯಾರ್ಥಿಗಳು ಮ್ಯಾಕ್ಸ್ ಅಥವಾ ಐಪ್ಯಾಡ್ ಮಾದರಿಗಳನ್ನು ಖರೀದಿಸಬಹುದಾಗಿದೆ. ಜೊತೆಗೆ ಐಫೋನ್‌ನ ಬಿಡಿಭಾಗಗಳು ಮತ್ತು ಕಂಪನಿಯ ವಿಸ್ತೃತ ಖಾತರಿ ಕಾರ್ಯಕ್ರಮವಾದ ಆಪಲ್‌ಕೇರ್ + ನಲ್ಲಿ ರಿಯಾಯಿತಿಯನ್ನು ಪಡೆಯಬಹುದು. ಆಪಲ್ ಸ್ಟೋರ್ ಆನ್‌ಲೈನ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್ ಇಎಂಐ, ಯುಪಿಐ, ರುಪೇ, ನೆಟ್ ಬ್ಯಾಂಕಿಂಗ್, ಮತ್ತು ಕ್ರೆಡಿಟ್ ಕಾರ್ಡ್ ಆನ್ ಡೆಲಿವರಿ ಆಯ್ಕೆಯನ್ನು ಒಳಗೊಂಡಂತೆ ಅನೇಕ ಪಾವತಿ ವಿಧಾನಗಳನ್ನು ಸಹ ಇದು ಒಳಗೊಂಡಿದೆ. ಈ ಮೂಲಕ ಭಾರತದಲ್ಲಿ ಆಪಲ್‌ ಆನ್‌ಲೈನ್‌ ಸ್ಟೋರ್‌ ಹಲವು ಆಕರ್ಷಕ ಆಫರ್‌ಗಳನ್ನ ಗ್ರಾಹಕರಿಗೆ ಪರಿಚಯಿಸಿದೆ.

Most Read Articles
Best Mobiles in India

English summary
Apple Store Online has launched in India today, September 23, providing customers not only the ability to purchase products directly from the Apple Store.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X