ವೃದ್ಧನ ಜೀವ ಉಳಿಸಲು ನೇರವಾದ ಆಪಲ್‌ ವಾಚ್‌ನ ECG ಫೀಚರ್‌!

|

ಜನಪ್ರಿಯ ಆಪಲ್‌ ಕಂಪೆನಿಯ ಆಪಲ್‌ ವಾಚ್‌ ನಲ್ಲಿರುವ ECG ಫೀಚರ್‌ ವೃದ್ದನೊಬ್ಬನ ಜೀವ ಉಳಿಸಲು ಸಹಾಯಕವಾಗಿದೆ. ಸದ್ಯ ಈ ಘಟನೆ ಇಂದೂರ್‌ನಲ್ಲಿ ನಡೆದಿದ್ದು, ಆ ವ್ಯಕ್ತಿಯ ಆರೋಗ್ಯ ಚೇತರಿಕೆ ಕಾಣಲಿ ಅಂತಾ ಆಪಲ್ ಸಿಇಒ ಟಿಮ್ ಕುಕ್ ಅವರು ಹಾರೈಸಿದ್ದಾರೆ. ಇನ್ನು ಈ ವೃದ್ದ ಆಪಲ್‌ ವಾಚ್‌ 5 ಅನ್ನು ಬಳಸುತ್ತಿದ್ದು, ತಮ್ಮ ಇಸಿಜಿ ಪರೀಕ್ಷೆಯನ್ನ ಆಪಲ್‌ ವಾಚ್‌ನಲ್ಲಿ ಆಗಾಗ ಪರೀಕ್ಷಿಸುತ್ತಿದ್ದರು ಎನ್ನಲಾಗಿದೆ. ಇನ್ನು ಯಾವುದೇ ಹೃದಯಘಾತದ ಸೂಚನೆ ಇಲ್ಲದ ಇವರಿಗೆ ಆಪಲ್‌ ವಾಚ್‌ ನಿಂದ ಬಂದ ಇಸಿಜಿ ನೊಟೀಫಿಕೇಶನ್‌ ಅವರ ಜೀವ ಉಳಿಸಿದೆ ಎಂದು ಹೇಳಲಾಗಿದೆ.

ಆಪಲ್ ವಾಚ್ 5

ಹೌದು, ಆಪಲ್ ವಾಚ್ 5 ನಲ್ಲಿರುವ ಇಸಿಜಿ ಫೀಚರ್‌ ಮೂಲಕ ವೃದ್ಧನೊಬ್ಬನ ಜೀವ ಉಳಿಸಿದೆ. ಮಧ್ಯರಾತ್ರಿಯಲ್ಲಿ ರಕ್ತದೊತ್ತಡ ಉಂಟಾಗಿರುವ ಸೂಚನೆಯನ್ನ ಆಪಲ್‌ ವಾಚ್‌ ತನ್ನ ನೋಟಿಫಿಕೇಶನ್ ಅನ್ನು ಕಳುಹಿಸಿದೆ. ಇದು ಕನೆಕ್ಟ್‌ ಆಗಿದ್ದ ಸ್ಮಾರ್ಟ್‌ಫೋನ್‌ಗೆ ಕಳುಹಿಸಿದೆ. ಈ ಮೂಲಕ ವೃದ್ದನ ಮಗನಿಗೆ ತಮದೆಯ ಆನಾರೋಗ್ಯದ ವಿಚಾರ ತಿಳಿದಿದೆ. ಕೂಡಲೇ ತಮ್ಮ ತಂದೆಯನ್ನ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಚೇತರಿಕೆ ಕಾಣುತ್ತಿದ್ದಾರೆ ಎನ್ನಲಾಗಿದೆ.

ಆಪಲ್ ವಾಚ್

ಆಪಲ್ ವಾಚ್ ಇಸಿಜಿ ಕಾರ್ಯವನ್ನು ಅನುಮತಿಸುವುದರಿಂದ, ಒಬ್ಬರು ಅದನ್ನು ಹೆಚ್ಚು ನಿಯಮಿತವಾಗಿ ಪರಿಶೀಲಿಸಬಹುದಾಗಿದೆ. ಇದೇ ಮಾದರಿಯಲ್ಲಿ ಪ್ರತಿನಿತ್ಯ ಇಸಿಜಿಯನ್ನು ಆರ್‌ ರಾಜನ್‌ ಪರೀಕ್ಷಿಸುತ್ತಿದ್ದರು ಎನ್ನಲಾಗಿದೆ. ಇದೇ ಮಾದರಿಯಲ್ಲಿ ಕೆಲವು ದಿನಗಳ ಹಿಂದೆ ಮಧ್ಯರಾತ್ರಿಯಲ್ಲಿ ಆರ್‌ ರಾಜನ್‌ ಅವರಿಗೆ ತೀವೃ ರಕ್ತದೊತ್ತಡ ಸಮಸ್ಯೆ ಎದುರಾಗಿದೆ. ಈ ಮಾಹಿತಿಯನ್ನು ಆಪಲ್‌ ವಾಚ್‌ ಇಸಿಜಿ ಮೂಲಕ ನೋಟಿಫಿಕೇಶನ್ ಕಳುಹಿಸಿದೆ. ಇದೇ ಕಾರಣಕ್ಕೆ ಅವರಿಗಿದ್ದ ರಕ್ತದೊತ್ತಡ ಸಮಸ್ಯೆಯನ್ನು ಅರಿಯಲು ಸಾದ್ಯವಾಗಿದೆ ಎನ್ನಲಾಗಿದೆ.

ಆಪಲ್‌ ವಾಚ್

ರಾಜನ್ಸ್‌ ಅವರಿಗೆ ಅಧಿಕ ರಕ್ತದೊತ್ತಡ ಇದ್ರೂ ಸಹ ಯಾವುದೇ ರೀತಿಯ ಸಮಸ್ಯೆ ಕಾಣುತ್ತಿರಲಿಲ್ಲ ಆದರೆ ಆಪಲ್‌ ವಾಚ್‌ ಇಸಿಜಿ ಫೀಚರ್ಸ್‌ ಮೂಲಕ ತಿಳಿದಿದೆ. ಅಲ್ಲದೆ ರಾಜನ್ಸ್‌ ಕಡಿಮೆ ಎಜೆಕ್ಷನ್ ಭಾಗವನ್ನು ಹೊಂದಿದ್ದು, ತಕ್ಷಣದ ಹೃದಯ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎನ್ನುವ ಸೂಚನೆ ನೀಡಿದೆ. ಸದ್ಯ ಆರ್‌ ರಾಜನ್ಸ್‌ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಇನ್ನು ಆಪಲ್‌ ವಾಚ್‌ ನಲ್ಲಿರುವ ಇಸಿಜಿ ಅಪ್ಲಿಕೇಶನ್ ಮತ್ತು ಅನಿಯಮಿತ ಹೃದಯ ರಿದಮ್ ನೋಟಿಫಿಕೇಶನ್ ಫೀಚರ್ಸ್‌ ಅನಿಯಮಿತ ಲಯದ ಸಾಮಾನ್ಯ ರೂಪವಾದ ಎಫಿಬ್‌ನ ಚಿಹ್ನೆಗಳನ್ನು ಗುರುತಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ.

ಆಪಲ್‌ ವಾಚ್

ಸದ್ಯ ಆಪಲ್‌ ವಾಚ್‌ ಫೀಚರ್ಸ್‌ ಮೂಲಕ ವ್ಯಕ್ತಿಯೊಬ್ಬರ ಜೀವ ಉಳಿಸದಿರೋದು ಟೆಕ್ನಾಲಜಿಯ ಅವಶ್ಯಕತೆ ಎಷ್ಟಿದೆ ಅನ್ನೊದು ತಿಳಿಯುತ್ತೆ. ಹಾಗಂತ ಆಪಲ್‌ ವಾಚ್‌ ಫೀಚರ್ಸ್‌ ಮೂಲಕ ವ್ಯಕ್ತಿಯೊಬ್ಬರ ಜೀವ ಉಳಿದಿರೋದು ಇದೇ ಮೊದಲೇನಲ್ಲ. ಆದರೆ ಆಪಲ್‌ ವಾಚ್‌ ಫೀಚರ್ಸ್‌ ಈ ರೀತಿ ಸಾಕಷ್ಟು ಉಪಯುಕ್ತ ವಾಗುತ್ತಿರೋದು ನಿಜಕ್ಕೂ ಆಪಲ್‌ ವಾಚ್‌ ಬಳಕೆದಾರರಿಗೆ ಇನ್ನಷ್ಟು ಖುಷಿ ನೀಡಿದೆ.

Most Read Articles
Best Mobiles in India

Read more about:
English summary
An Apple Watch feature has saved the life of a 61-year-old Indore resident and Apple CEO Tim Cook has wished him fast recovery post-surgery.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X