ಆಪಲ್‌ iOS 14 ಅನಾವರಣ: ಐಫೋನ್‌ ಆಪರೇಟಿಂಗ್‌ನಲ್ಲಿ ಇನ್ನು ಸಂಪೂರ್ಣ ಹೊಸ ಲುಕ್!

|

ಕೊರೊನಾ ವೈರಸ್ ಸಾಂಕ್ರಾಮಿಕ ವೈರಸ್‌ ಕಾರಣದಿಂದಾಗಿ ಆಪಲ್ ಸಂಸ್ಥೆಯ ವರ್ಲ್ಡ್ ವೈಡ್ ಡೆವಲಪರ್ ಕಾನ್ಫರೆನ್ಸ್ (WWDC) 2020ರ ವಾರ್ಷಿಕ ಡೆವಲಪರ್ ಸಮ್ಮೇಳನವನ್ನು ಮುಂದೂಡಿತ್ತು. ಆದ್ರೆ ಆಪಲ್ ಜೂನ್ 22ರಂದು ಈ ವರ್ಷದ ವರ್ಲ್ಡ್ ವೈಡ್ ಡೆವಲಪರ್ ಕಾನ್ಫರೆನ್ಸ್ (WWDC) 2020 ಅನ್ನು ಆನ್‌ಲೈನ್‌ನಲ್ಲಿ ಆರಂಭಿಸಿದೆ. ಈ ಸಮ್ಮೇಳನದಲ್ಲಿ ಬಹುನಿರೀಕ್ಷಿತ ಆಪಲ್ ಐಓಎಸ್ 14 ಅನಾವರಣ ಆಗಿದೆ.

ವರ್ಲ್ಡ್ ವೈಡ್ ಡೆವಲಪರ್

ಹೌದು, ಆಪಲ್ ಸಂಸ್ಥೆಯು ಜೂನ್ 22ರಂದು ವರ್ಲ್ಡ್ ವೈಡ್ ಡೆವಲಪರ್ ಕಾನ್ಫರೆನ್ಸ್ (WWDC) ಈ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮವು ಜೂನ್ 26, 2020 ರವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಆಪಲ್ ios 14 ಓಎಸ್‌ ಅನಾವರಣ ಮಾಡಿದೆ. ಈ ಓಎಸ್‌ ಹಲವು ನೂತನ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಆಪಲ್‌ ಪ್ರಿಯರ ಗಮನ ಸೆಳೆಯುತ್ತವೆ. ಯಾವೆಲ್ಲಾ ಫೀಚರ್ಸ್‌ಗಳು ಸೇಋಇಕೊಂಡಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಬದಲಾದ ಹೋಮ್ ಸ್ಕ್ರೀನ್

ಬದಲಾದ ಹೋಮ್ ಸ್ಕ್ರೀನ್

ಆಪಲ್ ಸಂಸ್ಥೆಯ ಹೊಸ ಐಓಎಸ್ 14 ಐಫೋನ್‌ಗಳ ಹೋಮ್ ಸ್ಕ್ರೀನ್‌ ಲುಕ್ ಅನ್ನು ಬದಲು ಮಾಡಿದೆ. widgets ಗಳ ಗಾತ್ರ ಬದಲಾವಣೆಗೆ ಅವಕಾಶ ಇದೆ. ಹಾಗೂ widgets ಪಿನ್ ಮಾಡುವ ಆಯ್ಕೆಯು ಸೇರಿದೆ.

ಆಪ್ ಲೈಬ್ರರಿ

ಆಪ್ ಲೈಬ್ರರಿ

ಫೋನಿನಲ್ಲಿ ಒಂದೇ ರೀತಿಯ ಅಪ್ಲಿಕೇಶನ್‌ಗಳ ಗುಂಪುಗಳಂತೆ ವರ್ತಿಸುವ ಅಪ್ಲಿಕೇಶನ್ ಲೈಬ್ರರಿ ಅನ್ನು ಈ ಓಎಸ್ ಒದಗಿಸಿದೆ. ಸಲಹೆಗಳು ಹಾಗೂ ಇತ್ತೀಚಿಗೆ ಸೇರಿಸಲಾದ ಆಪ್ಸ್‌ಗಳ ಸಂಗ್ರಹಕ್ಕೆ AI ಬಳಕೆ ಮಾಡಲಾಗುತ್ತದೆ. ಆಪ್ಸ್‌ ಹುಡುಕಾಟ ಪ್ರಕ್ರಿಯೆಯು ಸುಲಭವಾಗಿರಲಿದೆ.

ಪಿಚ್ಚರ್ ಟು ಪಿಚ್ಚರ್ (pip)

ಪಿಚ್ಚರ್ ಟು ಪಿಚ್ಚರ್ (pip)

ಸದ್ಯ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಈಗ pip ಫೀಚರ್‌ ಹೆಚ್ಚು ಬಳಕೆಯಲ್ಲಿದೆ. ವಿಡಿಯೊ ಲಿಂಕ್‌ಗಳನ್ನು ತೆರೆಯಲು ಪ್ರತ್ಯೇಕ ಆಪ್ ತೆರೆಯದೆ ಅಲ್ಲಿಯೇ ವಿಡಿಯೊ ಪ್ಲೇ ಆಗುವ ಅವಕಾಶವನ್ನು ಈ ವ್ಯವಸ್ಥೆ ಒಳಗೊಂಡಿರುತ್ತದೆ. ಲಿಂಕ್ ಇರುವ ಆಪ್‌ನಲ್ಲಿಯೇ ಸಣ್ಣ ವಿಂಡೊದಲ್ಲಿ ವಿಡಿಯೊ ವೀಕ್ಷಿಸಬಹುದು.

ಟ್ರಾನ್ಸಲೇಟ್ ಆಪ್

ಟ್ರಾನ್ಸಲೇಟ್ ಆಪ್

ಆಪಲ್ IOS 14 ಟ್ರಾನ್ಸ್‌ಲೇಟ್ ಆಪ್ ಸೌಲಭ್ಯವನ್ನು ಒಳಗೊಂಡಿದ್ದು, ಆಫ್‌ಲೈನ್‌ನಲ್ಲಿರುವಾಗಲೂ ಸುಲಭವಾಗಿ ಟ್ರಾನ್ಸ್‌ಲೇಟ್ ಮಾಡುವ ಅನುಕೂಲವನ್ನು ಒದಗಿಸಲಿದೆ. ಗೂಗಲ್ ಟ್ರಾನ್ಸ್‌ಲೇಟ್ ಹಾಗೂ ಮೈಕ್ರೋಸಾಫ್ಟ್‌ ಟ್ರಾನ್ಸ್‌ಲೇಟ್ ಮಾದರಿಯಂತೆ ಆಪಲ್ ಕ್ವಿಕ್ ಟ್ರಾನ್ಸ್‌ಲೇಟ್ ಇದೆ.

imessage ಆಪ್

imessage ಆಪ್

ಆಪಲ್ IOS 14 ಸುಧಾರಿತ ಮತ್ತು ಪೂರ್ಣ ಅಪ್‌ಡೇಟ್‌ನೊಂದಿಗೆ imessage ಆಪ್‌ ಅನ್ನು ಹೊಂದಿದೆ. ಈ ಆಪ್‌ನಲ್ಲಿ ಅಪ್‌ಡೇಟ್ ಮೆಮೋಜಿ, ಗ್ರೂಪ್ ಸಂಭಾಷಣೆಯಲ್ಲಿ ಬದಲಾವಣೆ, ಡೈನಾಮಿಕ್ ಲೊಗೊ ಆಯ್ಕೆಗಳು ಸೇರಿವೆ.

ಕಾರ ಪ್ಲೇ

ಕಾರ ಪ್ಲೇ

ಆಪಲ್ IOS 14 ಓಎಸ್ ಡಿಜಿಟಲ್ ಕಾರ್ ಕೀ ಯನ್ನು ಹೊಸದಾಗಿ ಪರಿಚಯಿಸಿದೆ. ಈ ಮೂಲಕ ಕಾರ ಪ್ಲೇ ಗೆ ಸಾಕಷ್ಟು ಸುಧಾರಣೆಗಳನ್ನು ಮಾಡಿದೆ. NFC ತಂತ್ರಜ್ಞಾನದೊಂದಿಗೆ ಐಫೋನ್ ಬಳಸಿ ಕಾರ ಲಾಕ್ ಹಾಗೂ ಅನ್‌ಲಾಕ್ ಮಾಡಬಹುದಾಗಿದೆ.

Most Read Articles
Best Mobiles in India

English summary
Apple iOS 14 and iPadOS 14 from WWDC 2020 here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X