ಆಪಲ್ WWDC 2020 ಕಾರ್ಯಕ್ರಮಕ್ಕೆ ಇಂದು ಚಾಲನೆ: ನೀವು ಏನನ್ನು ನಿರೀಕ್ಷಿಸಬಹುದು?

|

ಕೊರೊನಾ ವೈರಸ್ ಸಾಂಕ್ರಾಮಿಕ ವೈರಸ್‌ ಕಾರಣದಿಂದಾಗಿ ಆಪಲ್ ಸಂಸ್ಥೆಯ ವರ್ಲ್ಡ್ ವೈಡ್ ಡೆವಲಪರ್ ಕಾನ್ಫರೆನ್ಸ್ (WWDC) 2020ರ ವಾರ್ಷಿಕ ಡೆವಲಪರ್ ಸಮ್ಮೇಳನವನ್ನು ಮುಂದೂಡಿತ್ತು. ಆದ್ರೆ ಆಪಲ್ ಇದೀಗ ಈ ವರ್ಷ ವರ್ಲ್ಡ್ ವೈಡ್ ಡೆವಲಪರ್ ಕಾನ್ಫರೆನ್ಸ್ (WWDC) 2020 ಅನ್ನು ಆನ್‌ಲೈನ್‌ನಲ್ಲಿ ಆಯೋಜಿಸಲು ಮುಂದಾಗಿದೆ. ಸಂಸ್ಥೆಯು ಸಮ್ಮೇಳನಕ್ಕೆ ಮುಹೂರ್ತ ಕೂಡಾ ನಿಗದಿಪಡಿಸಿದೆ.

WWDC

ಹೌದು, ಕೊರೊನಾ ವೈರಸ್‌ ಹರಡುವ ಭೀತಿಯಿಂದಾಗಿ ಆಪಲ್ ಸಂಸ್ಥೆಯ ವರ್ಲ್ಡ್ ವೈಡ್ ಡೆವಲಪರ್ ಕಾನ್ಫರೆನ್ಸ್ (WWDC) ಈ ಕಾರ್ಯಕ್ರಮ ನಡೆಸುವುದನ್ನು ಮುಂದೂಡಿತ್ತು. ಈಗ ಆನ್‌ಲೈನ್‌ ಮೂಲಕ ಕಾರ್ಯಕ್ರಮ ನಡೆಸಲು ಸಜ್ಜಾಗಿದೆ. ಈ ಕಾರ್ಯಕ್ರಮವು ಭಾರತೀಯ ಕಾಲಮಾನ ಇಂದು ರಾತ್ರಿ 10.30ಕ್ಕೆ ಪ್ರಾರಂಭವಾಗಲಿದ್ದು, ಜೂನ್ 26, 2020 ರವರೆಗೆ ನಡೆಯಲಿದೆ. ಆಪಲ್‌ ಸಂಸ್ಥೆಯ ಯೂಟ್ಯೂಬ್ ಪೇಜ್‌ನಲ್ಲಿ ವೀಕ್ಷಿಸಬಹುದಾಗಿದೆ. ಗ್ರಾಹಕರು ಈ ಕಾರ್ಯಕ್ರಮದಲ್ಲಿ ಏನನ್ನು ನಿರೀಕ್ಷಿಸಬಹುದು?..ಯಾವೆಲ್ಲಾ ಹೊಸ ಉತ್ಪನ್ನಗಳು ಅನಾವರಣಗೊಳ್ಳಲಿವೆ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಆಪಲ್ IOS 14

ಆಪಲ್ IOS 14

ಆಪಲ್‌ನ ಬಹು ನಿರೀಕ್ಷಿತ ಐಒಎಸ್ 14 ಅನಾವರಣಗೊಳ್ಳುವ ಸಾಧ್ಯತೆಗಳಿವೆ. ಇದು ಆಪಲ್‌ನ ಹೊಸ ಆಪರೇಟಿಂಗ್ ಸಿಸ್ಟಂ ಆವೃತ್ತಿ ಆಗಿರುತ್ತದೆ. ಐಫೋನ್ ಬಳಕೆದಾರರಿಗೆ ಪ್ರಾಯೋಗಿಕ ಹಂತವಾಗಿ ಈ ಓಎಸ್ ಬಳಕೆಗೆ ಲಭ್ಯವಾಗುವ ನಿರೀಕ್ಷಿಗಳಿವೆ. ಹಾಗೆಯೇ ಆಪಲ್ CarKey API ಕಾರ್ ಅನ್‌ಲಾಕ್, ಸುಧಾರಿತ ಐಮೆಸೆಜ್‌ ಸೌಲಭ್ಯಗಳು ಅನಾವರಣ ಆಗುವ ಸಾಧ್ಯತೆಗಳಿವೆ.

ಐಪ್ಯಾಡ್‌ಓಎಸ್ 14

ಐಪ್ಯಾಡ್‌ಓಎಸ್ 14

ಅದೇ ಕಾರ್ಯಕ್ರಮದಲ್ಲಿ ಸಂಸ್ಥೆಯು ಐಪ್ಯಾಡೋಸ್ 14 ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೊಸ ಐಪ್ಯಾಡೋಸ್ ಐಪ್ಯಾಡ್ ಮಿನಿ 4 ಮತ್ತು ಐಪ್ಯಾಡ್ ಏರ್ 2 ಗಾಗಿ ಹೊರಹೊಮ್ಮುವುದಿಲ್ಲ ಎಂದು ವರದಿಯಾಗಿದೆ. ಇದರರ್ಥ 12.9-ಇಂಚಿನ ಐಪ್ಯಾಡ್ ಪ್ರೊ, 11 ಇಂಚಿನ ಐಪ್ಯಾಡ್ ಪ್ರೊ, 10.5-ಇಂಚಿನ ಐಪ್ಯಾಡ್ ಪ್ರೊ, 9.7-ಇಂಚಿನ ಐಪ್ಯಾಡ್ ಪ್ರೊ, ಐಪ್ಯಾಡ್ (7 ನೇ ತಲೆಮಾರಿನ) , ಐಪ್ಯಾಡ್ (6 ನೇ ತಲೆಮಾರಿನ), ಐಪ್ಯಾಡ್ (5 ನೇ ತಲೆಮಾರಿನ), ಐಪ್ಯಾಡ್ ಮಿನಿ (5 ನೇ ತಲೆಮಾರಿನ), ಐಪ್ಯಾಡ್ ಏರ್ (3 ನೇ ತಲೆಮಾರಿನ), ಮತ್ತು 2020 ಐಪ್ಯಾಡ್ ಬೆಂಬಲವನ್ನು ಪಡೆಯಲಿದೆ.

ಆಪಲ್ ಟಿವಿ 4K

ಆಪಲ್ ಟಿವಿ 4K

ದಿ ವರ್ಜ್‌ನ ವರದಿಯ ಪ್ರಕಾರ, ಆಪಲ್ ಪ್ರಸ್ತುತ ಆಪಲ್ ಟಿವಿ 4 ಕೆ ಮಾದರಿಯ ಪರಿಷ್ಕೃತ ಆವೃತ್ತಿಯನ್ನು ಮತ್ತೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದು 64GB ಮತ್ತು 128GB ಆಂತರಿಕ ಸಂಗ್ರಹಣೆ ಹೊಂದಿರಲಿದೆ ಮತ್ತು ಹೊಸ ಪ್ರೊಸೆಸರ್ ಅನ್ನು ನೀಡಬಹುದೆಂದು ವರದಿ ಸೂಚಿಸುತ್ತದೆ.

ಏರ್‌ಟ್ಯಾಗ್

ಏರ್‌ಟ್ಯಾಗ್

ಈ ಕಾರ್ಯಕ್ರಮದಲ್ಲಿ ಆಪಲ್‌ ಏರ್‌ಟ್ಯಾಗ್‌ಗಳು ಬಿಡುಗಡೆ ಆಗುವ ವದಂತಿಗಳಿವೆ. ಇವು U1 ಚಿಪ್‌ಗಳೊಂದಿಗೆ ಬರುವ ವೃತ್ತಾಕಾರದ ಡಿಸ್ಕ್‌ಗಳ ಮಾದರಿಯಲ್ಲಿರಲಿವೆ. ಈ ಏರ್‌ಟ್ಯಾಗ್‌ಗಳು ನಿಮ್ಮ ಡಿವೈಸ್‌ಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುವತ್ತವೆ ಎನ್ನಲಾಗಿದೆ. ಏರ್‌ಟ್ಯಾಗ್‌ಗಳು ಬ್ಲೂಟೂತ್ ಸಂಪರ್ಕವನ್ನು ಹೊಂದಿರುವ ಸಣ್ಣ ಟ್ರ್ಯಾಕಿಂಗ್ ಟೈಲ್ಸ್‌ಗಳಾಗಿವೆ, ಕಳೆದುಹೋದ ವಸ್ತುಗಳನ್ನು ಹುಡುಕಲು ಬಳಸಬಹುದು.

Most Read Articles
Best Mobiles in India

English summary
Apple is finally hosting the World Wide Developer Conference (WWDC) 2020 online this year.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X