Just In
Don't Miss
- News
ಏಪ್ರಿಲ್ 1 ರಂದೇ ಪಠ್ಯಪುಸ್ತಕ ಪೂರೈಕೆಗೆ ಡಿಸಿಎಂ ಸೂಚನೆ
- Movies
'ಮನೆ ಮಾರಾಟಕ್ಕಿಟ್ಟ' ನಿರ್ದೇಶಕನ ಜೊತೆಗೆ ರಾಧಿಕಾ ಕುಮಾರಸ್ವಾಮಿ ಸಿನಿಮಾ.!
- Sports
ಐಎಸ್ಎಲ್ 2019: ಒಡಿಶಾ ಎಫ್ಸಿಗೆ ಪುಣೆಯಲ್ಲಿ ಅಮೂಲ್ಯ ಜಯ
- Lifestyle
ಗುರುವಾರದ ದಿನ ಭವಿಷ್ಯ 12-12-2019
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
'ಆಸೂಸ್ Z6' ಮತ್ತು 'ಆಸೂಸ್ Z5' ಫೋನ್ಗಳ ಬೆಲೆಯಲ್ಲಿ ಭಾರಿ ಕಡಿತ!
ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಭಿನ್ನವಾಗಿ ಗುರುತಿಸಿಕೊಂಡಿರುವ ತೈವಾನ್ ಮೂಲದ 'ಆಸೂಸ್' ಕಂಪನಿಯು ಈ ವರ್ಷ 'ಆಸೂಸ್ ROG 2' ಸ್ಮಾರ್ಟ್ಫೋನ್ ಮತ್ತು ಆಸೂಸ್ z6 ಸ್ಮಾರ್ಟ್ಫೋನ್ ಮೂಲಕ ಸದ್ದು ಮಾಡಿತ್ತು. ಆದ್ರೆ ಕಂಪನಿಯು ತನ್ನ ಜನಪ್ರಿಯ 'ಆಸೂಸ್ z6' ಸೇರಿದಂತೆ 'ಆಸೂಸ್ Z5' ಸ್ಮಾರ್ಟ್ಫೋನ್ ಬೆಲೆಯಲ್ಲಿ ಶಾಶ್ವತ ಇಳಿಕೆ ಮಾಡಿದೆ. ಆ ಪೈಕಿ ಆಸೂಸ್ Z6 ಸ್ಮಾರ್ಟ್ಫೋನ್ ಫ್ಲಿಪ್ ಕ್ಯಾಮೆರಾದಿಂದ ಗ್ರಾಹಕರನ್ನು ಆಕರ್ಷಿಸಿದೆ.

ಹೌದು, ಆಸೂಸ್ ಸಂಸ್ಥೆಯು ತನ್ನ 'ಆಸೂಸ್ Z6' ಮತ್ತು 'ಆಸೂಸ್ Z5' ಸ್ಮಾರ್ಟ್ಫೋನ್ಗಳ ಬೆಲೆಯಲ್ಲಿ ಭಾರಿ ಕಡಿತ ಮಾಡಿದೆ. 'ಆಸೂಸ್ Z6' ಫ್ಲ್ಯಾಗ್ಶಿಪ್ ಫೋನ್ 6GB RAM 64GB ಬೇಸ್ ವೇರಿಯಂಟ್ 27,999ರೂ.ಗಳಾಗಿದೆ. ಹಾಗೆಯೇ 'ಆಸೂಸ್ Z5' ಸ್ಮಾರ್ಟ್ಫೋನ್ 6GB RAM 64GB ವೇರಿಯಂಟ್ 16,999ರೂ.ಗಳಿಗೆ ಇಳಿಕೆಯಾಗಿದೆ. ಇದರೊಂದಿಗೆ ಆಸೂಸ್ Z6 ಫೋನಿನ ಇತರೆ ವೇರಿಯಂಟ್ಗಳಿಗೂ ಅಧಿಕ ಕಡಿತ ಮಾಡಲಾಗಿದೆ.

ಆಸೂಸ್ Z6 ಸ್ಮಾರ್ಟ್ಫೋನ್ ಫ್ಲಿಪ್ ಕ್ಯಾಮೆರಾ, 5,000mAh ಬ್ಯಾಟರಿ ಹಾಗೂ ಸೋನಿ IMX586 ಸೆನ್ಸಾರ್ ಬೆಂಬಲಿತ 48ಎಂಪಿ ಕ್ಯಾಮೆರಾ ಫೀಚರ್ಸ್ಗಳು ಪ್ರಮುಖ ಹೈಲೈಟ್ಸ್ಗಳಾಗಿವೆ. ಹಾಗೆಯೇ ಆಸೂಸ್ Z5' ಸ್ಮಾರ್ಟ್ಫೋನ್ ಕ್ಯಾಮೆರಾ ಸಹ IMX363 ಸೆನ್ಸಾರ್ ಪಡೆದಿದ್ದು, ಸ್ನ್ಯಾಪ್ಡ್ರಾಗನ್ 845 ಪ್ರೊಸೆಸರ್ ಕಾರ್ಯವೈಖರಿ ಹೊಂದಿದೆ. ಹಾಗಾದರೇ ಆಸೂಸ್ Z6' ಮತ್ತು 'ಆಸೂಸ್ Z5' ಸ್ಮಾರ್ಟ್ಫೋನ್ಗಳ ಫೀಚರ್ಸ್ಗಳೆನು ಮತ್ತು ಬೆಲೆ ತಿಳಿಯಲು ಮುಂದೆ ಓದಿರಿ.

ಆಸೂಸ್ Z6 ಡಿಸ್ಪ್ಲೇ
ಆಸೂಸ್ 6z ಸ್ಮಾರ್ಟ್ಫೋನಿನಲ್ಲಿ 6.4 ಇಂಚಿನ ಪೂರ್ಣ ಹೆಚ್ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದ್ದು, ಸ್ಕ್ರೀನ್ LCD ಮಾದರಿಯಲ್ಲಿದೆ. ಡಿಸ್ಪ್ಲೇಯ ಸುತ್ತಲೂ ನಾಚ್ ಇಲ್ಲದ, ಅತೀ ಕಡಿಮೆ ಅಂಚಿನ ರಚನೆಯನ್ನು ಪಡೆದಿದೆ. ಹಾಗಾಯೇ ಡಿಸ್ಪ್ಲೇ ಸುತ್ತಲಿನ ನಾಲ್ಕು ಮೂಲೆಗಳು ಕರ್ವ್ ಮಾದರಿಯ ಆಕಾರದಲ್ಲಿದ್ದು, ಸ್ಮಾರ್ಟ್ಫೋನ್ ಅಂದವನ್ನು ಹೆಚ್ಚಿಸಿದೆ.

ಆಸೂಸ್ Z6 ಪ್ರೊಸೆಸರ್
ಆಸೂಸ್ 6z ಸ್ಮಾರ್ಟ್ಫೋನಿನಲ್ಲಿ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 855 ಪ್ರೊಸೆಸರ್ ಅನ್ನು ಹೊಂದಿದ್ದು, ಈ ಫೋನ್ ಎರಡು RAM ಆಯ್ಕೆಗಳನ್ನು ಹೊಂದಿದೆ. ಅವು ಕ್ರಮವಾಗಿ 6GB RAM ಮತ್ತು 8GB RAM ಸಾಮರ್ಥ್ಯದಲ್ಲಿವೆ. ಹಾಗೆಯೇ ಆಂತರಿಕ ಸಂಗ್ರಹಕ್ಕಾಗಿ 64GB, 128GB ಮತ್ತು 256GB ಸ್ಥಳಾವಕಾಶದ ಮೂರು ಆಯ್ಕೆಗಳನ್ನು ಒದಗಿಸಲಾಗಿದೆ.

ಆಸೂಸ್ Z6 ಫ್ಲಿಪ್ ಕ್ಯಾಮೆರಾ
ಆಸೂಸ್ ಮೊದಲ ಬಾರಿಗೆ ಹೊಸದಾಗಿ ಫ್ಲಿಪ್ ಕ್ಯಾಮೆರಾವನ್ನು ಪರಿಚಯಿಸಿದ್ದು, ಈ ಕ್ಯಾಮೆರಾವು ಹಿಂಬದಿ ಮತ್ತು ಮುಂಬದಿಗೆ ತಿರುಗುವ ಮಾದರಿಯಲ್ಲಿದೆ. ಹೀಗಾಗಿ ಸೆಲ್ಫಿಗಾಗಿ ಪ್ರತ್ಯೇಕ ಕ್ಯಾಮೆರಾ ಒದಗಿಸಿಲ್ಲ. ಸ್ಮಾರ್ಟ್ಫೋನಿನ ಹಿಂಬದಿ ಇರುವ ಕ್ಯಾಮೆರಾ ಸೆಲ್ಫಿ ಸೆರೆಹಿಡಿಯುವಾಗ ಮುಂಬದಿಗೆ ತಿರುಗುತ್ತವ ಆಯ್ಕೆಯನ್ನು ಪಡೆದಿದೆ. ಎರಡು ಬದಿಗೂ ಈ ಒಂದೇ ಕ್ಯಾಮೆರಾ ಬಳಕೆಯಾಗಲಿದೆ.

ಆಸೂಸ್ Z6 ಕ್ಯಾಮೆರಾ
ಆಸೂಸ್ 6z ಸ್ಮಾರ್ಟ್ಫೋನಿನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ನೀಡಲಾಗಿದ್ದು, ಕ್ಯಾಮೆರಾ ಆಯ್ಕೆಯು ಫ್ಲಿಪ್ ಮಾದರಿಯಲ್ಲಿದೆ. ಪ್ರಮುಖ ಕ್ಯಾಮೆರಾವು ಸೋನಿಯ IMX586 ಸೆನ್ಸಾರ್ನೊಂದಿಗೆ 48 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು ವೈಲ್ಡ್ ಆಂಗಲ್ ಲೆನ್ಸ್ನೊಂದಿಗೆ 13 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ. ಸೆಲ್ಫಿಗೂ ಈ ಕ್ಯಾಮೆರಾವೇ ಬಳಕೆಯಾಗಲಿದೆ.

ಆಸೂಸ್ Z6 ಬ್ಯಾಟರಿ
ಆಸೂಸ್ 6z ಸ್ಮಾರ್ಟ್ಫೋನಿಗೆ 5000mAh ಸಾಮರ್ಥ್ಯದ ಪವರ್ಫುಲ್ ಬ್ಯಾಟರಿ ಶಕ್ತಿಯನ್ನು ನೀಡಲಾಗಿದೆ. ದೀರ್ಘಕಾಲದ ಬಾಳಿಕೆಗೆ ಬೆಂಬಲ ನೀಡಲಿದೆ. ಇದರೊಂದಿಗೆ 4.0. ವೇಗದ ಚಾರ್ಜಿಂಗ್ ತಂತ್ರಜ್ಞಾನ ಸೌಲಭ್ಯವನ್ನು ಸಹ ಒದಗಿಸಲಾಗಿದ್ದು, ಇದರ ನೆರವಿನಿಂದ ಸ್ಮಾರ್ಟ್ಫೋನ್ ವೇಗವಾಗಿ ಚಾರ್ಜಿಂಗ್ ಪಡೆದುಕೊಳ್ಳಲಿದೆ.

ಆಸೂಸ್ Z5 ಡಿಸ್ಪ್ಲೇ
6.2 ಇಂಚಿನ ಪೂರ್ಣ ಹೆಚ್ಡಿ ಪ್ಲಸ್ ಡಿಸ್ಪ್ಲೇಯನ್ನು ಒಳಗೊಂಡಿರುವ ಆಸೂಸ್ 5Z ಸ್ಮಾರ್ಟ್ಫೋನ್ 1080x2246 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಡಿಸ್ಪ್ಲೇಯ ಅನುಪಾತವು 18.7:9 ಆಗಿದ್ದು, ಸ್ಕ್ರೀನ್ ಗೊರಿಲ್ಲಾ ಗ್ಲಾಸ್ನ ರಕ್ಷಣೆ ಪಡೆದುಕೊಂಡಿದೆ. ಹಾಗೆಯೇ ಫೋನಿನ ಡಿಸ್ಪ್ಲೇ ಸುತ್ತಲೂ ಕಡಿಮೆ ಅಂಚನ್ನು ಹೊಂದಿದೆ.

ಆಸೂಸ್ Z5 ಪ್ರೊಸೆಸರ್
ಆಕ್ಟಾ ಕೋರ್ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 845 SoC ಪ್ರೊಸೆಸರ್ ಶಕ್ತಿ ಇದ್ದು, ಜೊತೆಗೆ ಆಡ್ರೆನೊ 630 GPU ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗೆಯೇ ಈ ಸ್ಮಾರ್ಟ್ಫೋನ್ ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ 6GB RAM + 128GB ವೇರಿಯಂಟ್ 8GB RAM + 256GB ವೇರಿಯಂಟ್ ಸಾಮರ್ಥ್ಯದಲ್ಲಿವೆ.

ಆಸೂಸ್ Z5 ಕ್ಯಾಮೆರಾ
ಆಸೂಸ್ Z5 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆಯನ್ನು ಹೊಂದಿದೆ. ಪ್ರಾಥಮಿಕ ಕ್ಯಾಮೆರಾವು ಸೋನಿಯ IMX363 ಸೆನ್ಸಾರ್ನೊಂದಿಗೆ f/1.8 ಲೆನ್ಸ್ನ 12 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು ಮೆಗಾಪಿಕ್ಸಲ್ ಓಮಿನಿವಿಶನ್ 8856 ಸೆನ್ಸಾರ್ನೊಂದಿಗೆ f/2.2 ಲೆನ್ಸ್ ಒಳಗೊಂಡ 8ಎಂಪಿ ಕ್ಯಾಮೆರಾ ಇದೆ. ಸೆಲ್ಫಿ ಕ್ಯಾಮೆರಾ ಸಹ 8ಎಂಪಿ ಸೆನ್ಸಾರ್ ಹೊಂದಿದೆ.

ಆಸೂಸ್ Z5 ಬ್ಯಾಟರಿ
ಆಸೂಸ್ 5Z ಸ್ಮಾರ್ಟ್ಫೋನ್ 3,300mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಜೊತೆಗೆ 3.0 ಕ್ವಿಕ್ ಚಾರ್ಜಿಂಗ್ ಸೌಲಭ್ಯದ ಬೆಂಬಲವನ್ನು ಸಹ ಒಳಗೊಂಡಿದೆ. ಇದರೊಂದಿಗೆ ಬ್ಲೂಟೂತ್ 5.0, ವೈಫೈ 802.11ac (2.4GHz/ 5GHz), 3.5mm ಆಡಿಯೊ ಜಾಕ್, NFC, ಯುಎಸ್ಬಿ, ಓಟಿಜಿ, ಯುಎಸ್ಬಿ ಟೈಪ್-ಸಿ ಮತ್ತು ಜಿಪಿಎಸ್ ಸೌಲಭ್ಯಗಳನ್ನು ಸಹ ಪಡೆದುಕೊಂಡಿದೆ.

ಬೆಲೆ ಎಷ್ಟು
'ಆಸೂಸ್ Z6' ಮತ್ತು 'ಆಸೂಸ್ Z5' ಸ್ಮಾರ್ಟ್ಫೋನ್ಗಳಿಗ ಅಧಿಕ ಬೆಲೆ ಇಳಿಕೆ ಕಂಡಿವೆ. ಆಸೂಸ್ Z6 ಫೋನ್ 6GB RAM 64GB ವೇರಿಯಂಟ್ ಬೆಲೆಯು 27,999ರೂ. ಆಗಿದೆ. 6GB RAM ಮತ್ತು 128GB ವೇರಿಯಂಟ್ ಬೆಲೆಯು 30,999ರೂ ಆಗಿದೆ ಹಾಗೂ 8GB RAM ಮತ್ತು 256GB ವೇರಿಯಂಟ್ ಬೆಲೆಯು 34,999ರೂ.ಗಳಾಗಿದೆ. ಇನ್ನು ಆಸೂಸ್ 5Z 6GB RAM ಮತ್ತು 64GB ವೇರಿಯಂಟ್ 16,999ರೂ. ಆಗಿದ್ದು, 6GB RAM ಮತ್ತು 128GB ವೇರಿಯಂಟ್ ಬೆಲೆಯು 18,999ರೂ. ಆಗಿದೆ ಹಾಗೂ 8GB RAM ಮತ್ತು 256GB ವೇರಿಯಂಟ್ 21,999ರೂ.ಗಳಿಗೆ ಸಿಗಲಿದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090