ಆಸುಸ್ ಸಂಸ್ಥೆಯಿಂದ ಎಕ್ಸ್‌ಪರ್ಟ್‌ಬುಕ್ ಲ್ಯಾಪ್‌ಟಾಪ್‌ ಸರಣಿ ಲಾಂಚ್‌!

|

ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿರುವ ಆಸುಸ್‌ ಕಂಪೆನಿ ಭಾರತದಲ್ಲಿ ಲ್ಯಾಪ್‌ಟಾಪ್ ಮತ್ತು ಡೆಸ್ಕ್‌ಟಾಪ್ ಪಿಸಿಗಳ ಸರಣಿಯನ್ನು ಬಿಡುಗಡೆ ಮಾಡಿದೆ. ವೃತ್ತಿಪರ ಬಳಕೆದಾರರ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿರುವ ಈ ಹೊಸ ಲ್ಯಾಪ್‌ಟಾಪ್‌ ಸರಣಿಯಲ್ಲಿ ಎಕ್ಸ್‌ಪರ್ಟ್‌ಬುಕ್ B9, ಎಕ್ಸ್‌ಪರ್ಟ್‌ಬುಕ್ P2, ಮತ್ತು ಎಕ್ಸ್‌ಪರ್ಟ್‌ಬುಕ್ P1 ಸರಣಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿದೆ. ಜೊತೆಗೆ ಆಸುಸ್‌ಪ್ರೊ ಎಕ್ಸ್‌ಪರ್ ಸೆಂಟರ್ D3, ಎಕ್ಸ್‌ಪರ್ಟ್ ಸೆಂಟರ್ D6 ಮತ್ತು ಎಕ್ಸ್‌ಪರ್ಟ್ ಸೆಂಟರ್ D8 ಡೆಸ್ಕ್‌ಟಾಪ್ ಪಿಸಿಗಳನ್ನು ಒಳಗೊಂಡಿದೆ.

ಆಸುಸ್

ಹೌದು, ಆಸುಸ್ ಕಂಪೆನಿ ತನ್ನ ಹೊಸ ಸರಣಿಯ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿದೆ. ಈಗಾಗಲೇ ಅಸುಸ್‌ ಸಂಸ್ಥೆ ಭಾರತದಲ್ಲಿ ಹಲವು ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿದೆ. ಇನ್ನು ವಾಣಿಜ್ಯ-ಆಧಾರಿತ ಕಂಪ್ಯೂಟರ್‌ಗಳು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್, ಕ್ರೋಮಾ ಮತ್ತು ರಿಲಯನ್ಸ್ ಡಿಜಿಟಲ್ ಮೂಲಕ ಶೀಘ್ರದಲ್ಲೇ ಖರೀದಿಗೆ ಲಭ್ಯವಾಗಲಿವೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಸುಸ್ ಎಕ್ಸ್‌ಪರ್ಟ್‌ಬುಕ್ B9

ಆಸುಸ್ ಎಕ್ಸ್‌ಪರ್ಟ್‌ಬುಕ್ B9

ಆಸುಸ್ ಎಕ್ಸ್‌ಪರ್ಟ್‌ಬುಕ್ B9 ಲ್ಯಾಪ್‌ಟಾಪ್‌ 14 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ಕ್ರೀನ್-ಟು-ಬಾಡಿ 94% ಅನುಪಾತವನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ 10 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಜೊತೆಗೆ ಇದು 16GB RAM ಮತ್ತು 4TB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎರಡು ಥಂಡರ್ಬೋಲ್ಟ್ 3 ಮತ್ತು ಎಚ್‌ಡಿಎಂಐ ಪೋರ್ಟ್‌ಗಳನ್ನು ಹೊಂದಿದೆ, ಜೊತೆಗೆ ವೈ-ಫೈ 6 ಅನ್ನು ಬೆಂಬಲಿಸಲಿದೆ. ಇದಲ್ಲದೆ ಲ್ಯಾಪ್‌ಟಾಪ್ ವೇಗದ ಡೇಟಾ ಪ್ರವೇಶಕ್ಕೆ ಅನುಕೂಲವಾಗುವಂತೆ ಟಚ್‌ಪ್ಯಾಡ್‌ನಲ್ಲಿ ಸ್ವಾಮ್ಯದ ನಂಬರ್ ಪ್ಯಾಡ್ ಅನ್ನು ನಿರ್ಮಿಸಿದೆ. ಇದು ಹರ್ಮನ್ ಕಾರ್ಡನ್-ಆಪ್ಟಿಮೈಸ್ಡ್ ಆಡಿಯೊ ಸಿಸ್ಟಮ್ ಮತ್ತು ಅಮೆಜಾನ್ ಅಲೆಕ್ಸಾ ಅನ್ನು ಬೆಂಬಲಿಸಲಿದೆ. ಇನ್ನು ಈ ಲ್ಯಾಪ್‌ಟಾಪ್ ನ ಆರಂಭಿಕ ಬೆಲೆ 1,02,228,ರೂ ಆಗಿದೆ.

ಆಸುಸ್ ಎಕ್ಸ್‌ಪರ್ಟ್‌ಬುಕ್ P2

ಆಸುಸ್ ಎಕ್ಸ್‌ಪರ್ಟ್‌ಬುಕ್ P2

ಎಕ್ಸ್‌ಪರ್ಟ್‌ಬುಕ್ P2 ಲ್ಯಾಪ್‌ಟಾಪ್‌ ಇದು 10ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದನ್ನು 7200RPM HDD ಜೊತೆಗೆ ಜೋಡಿಸಲಾಗಿದೆ. ಇನ್ನು ಈ ಲ್ಯಾಪ್‌ಟಾಪ್ 180 ಡಿಗ್ರಿ ಹಿಂಜ್ ವಿನ್ಯಾಸದೊಂದಿಗೆ ತೆಳುವಾದ ಅಂಚಿನ ನ್ಯಾನೊ ಎಡ್ಜ್ 14 ಇಂಚಿನ ಫುಲ್‌-ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ ಯುಎಸ್‌ಬಿ 3.2 ಟೈಪ್-ಸಿ ಜನ್ 2 ಪೋರ್ಟ್ ಜೊತೆಗೆ ಮೂರು ಯುಎಸ್‌ಬಿ ಟೈಪ್-ಎ ಪೋರ್ಟ್‌ಗಳು, ಮೈಕ್ರೊ ಎಸ್‌ಡಿ ಕಾರ್ಡ್ ರೀಡರ್ ಜೊತೆಗೆ RJ45 ಪೋರ್ಟ್ ಅನ್ನು ಒಳಗೊಂಡಿದೆ.

ಆಸುಸ್ ಎಕ್ಸ್‌ಪರ್ಟ್‌ಬುಕ್ P1

ಆಸುಸ್ ಎಕ್ಸ್‌ಪರ್ಟ್‌ಬುಕ್ P1

ಈ ಲ್ಯಾಪ್‌ಟಾಪ್‌ 14 ಇಂಚಿನ ಮತ್ತು 15 ಇಂಚಿನ ಎರಡೂ ಮಾದರಿಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಸರಣಿಯಲ್ಲಿ P1545FA, P1510CJA, P1410CJA, ಮತ್ತು P1440FA ಎಂಬ ನಾಲ್ಕು ರೂಪಾಂತರಗಳ ಆಯ್ಕೆಗಳಲ್ಲಿ ದೊರೆಯಲಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ 10 ನೇ ತಲೆಮಾರಿನ ಇಂಟೆಲ್ ಕೋರ್ ಐ 5 ಪ್ರೊಸೆಸರ್‌ ಅನ್ನು ಹೊಂದಿವೆ. ಇದರಲ್ಲಿ ಎಕ್ಸ್‌ಪರ್ಟ್‌ಬುಕ್ P1440 ಮಿಲಿಟರಿ ದರ್ಜೆಯ 810G ಪ್ರಮಾಣೀಕರಣ, ಫಿಂಗರ್‌ಪ್ರಿಂಟ್ ಸೆನ್ಸಾರ್, ಎಚ್‌ಡಿ ಕ್ಯಾಮೆರಾ, 180 ಡಿಗ್ರಿ ಲೇ-ಫ್ಲಾಟ್ ಹಿಂಜ್ ಮತ್ತು 44Wh ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ಎಕ್ಸ್‌ಪರ್ಟ್‌ಬುಕ್ P1 ಸರಣಿಯ ಬೆಲೆ 25,323.ರೂ ಆಗಿದೆ.

Most Read Articles
Best Mobiles in India

English summary
Asus has launched a series of laptops and desktop PCs in India, under the brand umbrella of ExpertBook and ExpertCenter.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X