ಆಸುಸ್‌ ಸಂಸ್ಥೆಯಿಂದ ಭಾರತದಲ್ಲಿ ಹೊಸ ಮಾದರಿಯ ಲ್ಯಾಪ್‌ಟಾಪ್‌ ಬಿಡುಗಡೆ!

|

ಇತ್ತೀಚಿನ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳ ಬಳಕೆ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮ ವೈವಿಧ್ಯಮಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ಆಸುಸ್‌ ಕಂಪೆನಿ ಕೂಡ ಒಂದಾಗಿದೆ. ಸದ್ಯ ಆಸುಸ್‌ ಕಂಪೆನಿ ಇದೀಗ ನ್ಯೂ ಜೆನ್‌ಬುಕ್ ಮತ್ತು ವಿವೋಬುಕ್ ಅಡಿಯಲ್ಲಿ ಭಾರತದಲ್ಲಿ ಹೊಸ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್‌ಗಳು ಎಎಮ್‌ಡಿ ರೈಜೆನ್ 5000 ಯು-ಸೀರೀಸ್‌ನಿಂದ ಕಾರ್ಯನಿರ್ವಹಿಸಲಿವೆ.

ಆಸುಸ್‌

ಹೌದು, ಆಸುಸ್‌ ಸಂಸ್ಥೆ ಜೆನ್‌ಬುಕ್ ಮತ್ತು ವಿವೋಬುಕ್ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳು ಲೈಟ್ ಗೇಮಿಂಗ್ ಮತ್ತು ವಿಡಿಯೋ ರೆಂಡರಿಂಗ್, ಫೋಟೋ ಎಡಿಟಿಂಗ್ ಅಥವಾ 3-ಡಿ ವಿನ್ಯಾಸ ರಚನೆಯಂತಹ ಭಾರವಾದ ಕೆಲಸದ ಹೊರೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಸದ್ಯ ಈ ಪಟ್ಟಿಯಲ್ಲಿ ಜೆನ್‌ಬುಕ್ 13 ಒಎಲ್‌ಇಡಿ, ವಿವೊಬುಕ್ ಎಸ್ ಎಸ್ 14 , ವಿವೊಬುಕ್ ಅಲ್ಟ್ರಾ ಕೆ 14 / ಕೆ 15 , ವಿವೊಬುಕ್ ಫ್ಲಿಪ್ 14, ಎಎಸ್ಯುಎಸ್ ವಿವೋಬುಕ್ 15 ಮತ್ತು 17 ವಿವೊಬುಕ್ ಸೇರಿವೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ರೀಮಿಯಂ ಜೆನ್‌ಬುಕ್ 13

ಪ್ರೀಮಿಯಂ ಜೆನ್‌ಬುಕ್ 13

ಪ್ರೀಮಿಯಂ ಜೆನ್‌ಬುಕ್ 13 Oled (UM325UA) ಫುಲ್‌ ಹೆಚ್‌ಡಿ ನ್ಯಾನೊ ಎಡ್ಜ್‌ ಒಎಲ್ಇಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಪ್ಯಾಂಟೋನ್ ವ್ಯಾಲಿಡೇಷನ್‌ ಅನ್ನು ಹೊಂದಿದೆ. ಇದು 178 ಡಿಗ್ರಿ ವೈಡ್‌ ವ್ಯೂವ್‌ ಆಂಗಲ್‌ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ 67Wh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಸಿಂಗಲ್‌ ಚಾರ್ಜ್‌ನಲ್ಲಿ 16 ಗಂಟೆಗಳ ಬ್ಯಾಟರಿ ಅವಧಿಯನ್ನು ತಲುಪಿಸುತ್ತದೆ ಎಂದು ಹೇಳಲಾಗಿದೆ.

ವಿವೋಬುಕ್ SS14 (M433)

ವಿವೋಬುಕ್ SS14 (M433)

ವಿವೋಬುಕ್ SS14 (M433) ಲ್ಯಾಪ್‌ಟಾಪ್‌ ಲೈಟ್ ಗೇಮಿಂಗ್ ಮತ್ತು ಮಲ್ಟಿ ಟಾಸ್ಕಿಂಗ್ ಮಾಡುವುದಕ್ಕಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು 85% ಸ್ಕ್ರೀನ್-ಟು-ಬಾಡಿ ಅನುಪಾತ ಮತ್ತು ವೈಡ್ ಆಂಗಲ್ ವೀಕ್ಷಣೆ ಬೆಂಬಲದೊಂದಿಗೆ ಫುಲ್‌-ಹೆಚ್‌ಡಿ ಎಲ್ಇಡಿ ನ್ಯಾನೊ ಎಡ್ಜ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಎಎಮ್‌ಡಿ ರೈಜೆನ್ 5000 ಯು-ಸೀರಿಸ್ ಎಸ್‌ಒಸಿ ಪ್ರೊಸೆಸರ್‌ ಅನ್ನು ಹೊಂದಿದೆ.

ವಿವೊಬುಕ್ ಫ್ಲಿಪ್ 14 (TM420)

ವಿವೊಬುಕ್ ಫ್ಲಿಪ್ 14 (TM420)

ವಿವೊಬುಕ್ ಫ್ಲಿಪ್ 14 (TM420) ಲ್ಯಾಪ್‌ಟಾಪ್‌ 14 ಇಂಚಿನ ತೆಳು-ಅಂಚಿನ ನ್ಯಾನೊ ಎಡ್ಜ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 82% ಸ್ಕ್ರೀನ್-ಟು-ಬಾಡಿ ಅನುಪಾತ ಮತ್ತು ಟಚ್‌ ಬೆಂಬಲವನ್ನು ಹೊಂದಿದೆ. ನೀವು ಇದನ್ನು ಸೃಜನಶೀಲ ಕಾರ್ಯಗಳಿಗಾಗಿ ಬಳಸಲು ಬಯಸಿದರೆ, ಇದು ಆಸಸ್ ಪೆನ್ ಅನ್ನು ಸಹ ಬೆಂಬಲಿಸುತ್ತದೆ. ಪೆನ್ ಅನ್ನು ಪ್ಯಾಕ್‌ನ ಜೊತೆಗೆ ನೀಡಲಾಗುತ್ತೆ.

ವಿವೋಬುಕ್ 15 (M515)

ವಿವೋಬುಕ್ 15 (M515)

ವಿವೋಬುಕ್ 15 (M515) ಆಧುನಿಕ ಮತ್ತು ‘ಸ್ಟೈಲಿಶ್' ನೋಟವನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ 15.6-ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಎರಡು ಬದಿಯ ನ್ಯಾನೊ ಎಡ್ಜ್ ಡಿಸ್‌ಪ್ಲೇಯನ್ನು ಹೊಂದಿದ್ದು, 83% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ.

ವಿವೊಬುಕ್ 17 (M712)

ವಿವೊಬುಕ್ 17 (M712)

ವಿವೊಬುಕ್ 17 (M712) ಲ್ಯಾಪ್‌ಟಾಪ್‌ ಕಾಂಪ್ಯಾಕ್ಟ್ ವಿನ್ಯಾಸದ ಮೂಲಕ ಗಮನಸೆಳೆದಿದೆ. ಇದು 85% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿರುವ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ ಆಸುಸ್‌ ಕಂಪನಿಯ ಎರ್ಗೋಲಿಫ್ಟ್ ಹಿಂಜ್ ಅನ್ನು ಸಹ ಹೊಂದಿದೆ, ಇದು ಕೀಬೋರ್ಡ್ ಅನ್ನು ಆರಾಮದಾಯಕ ಟೈಪಿಂಗ್ ಮಾಡುವುದಕ್ಕೆ ಅವಕಾಶ ನೀಡಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಆಸುಸ್‌ ಜೆನ್‌‌ಬುಕ್ 13 Oled (UM325UA) ಬೆಲೆ 79,990 ರೂ ಆಗಿದೆ. ಹಾಗೆಯೇ ವಿವೊಬುಕ್ SS14 (M433) ಬೆಲೆ 65,990ರೂ,ಹೊಂದಿದೆ. ವಿವೊಬುಕ್ ಅಲ್ಟ್ರಾ K14 /K 15 ಬೆಲೆ 58,990 ರೂ ಆಗಿದೆ. ಜೊತೆಗೆ ವಿವೊಬುಕ್ ಫ್ಲಿಪ್ 14 (TM420) 59,990 ರೂ ಬೆಲೆಯನ್ನು ಹೊಂದಿದೆ. ಅಲ್ಲದೆ ವಿವೊಬುಕ್ 15 (M515) 54,990 ರೂ. ಮತ್ತು ವಿವೊಬುಕ್ 17 (M712) 62,990 ರೂ.ಬೆಲೆಯನ್ನು ಪಡೆದುಕೊಂಡಿವೆ.

Most Read Articles
Best Mobiles in India

English summary
Asus India launches new ZenBook, VivoBook laptops.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X