ಆಸೂಸ್‌ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರಿ ಇಳಿಕೆ!

|

ಜನಪ್ರಿಯ ಆಸೂಸ್‌ ಕಂಪನಿಯ ಇತ್ತೀಚಿಗಿನ ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಅವುಗಳಲ್ಲಿ ಝೆನ್‌ಫೋನ್‌ M ಸರಣಿಯ ಸ್ಮಾರ್ಟ್‌ಫೋನ್‌ಗಳು ಸೇರಿವೆ. ಆಸೂಸ್ ಇದೀಗ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದು, ತನ್ನ ಝೆನ್‌ಫೋನ್ ಮ್ಯಾಕ್ಸ್ ಸರಣಿಯ ಕೆಲವು ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದೆ. ಆಸೂಸ್‌ನ ಈ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡಿವೆ.

ಆಸೂಸ್ ಸಂಸ್ಥೆಯ

ಹೌದು, ಆಸೂಸ್ ಸಂಸ್ಥೆಯು ಇದೀಗ ಕೆಲವು ಪ್ರಮುಖ ಝೆನ್‌ಫೋನ್‌ ಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಕಡಿತ ಮಾಡಿದ್ದು, ಅಗ್ಗದ ಬೆಲೆಯಲ್ಲಿ ದೊರೆಯಲಿವೆ. ಕಂಪನಿಯ ಆಸೂಸ್‌ ಮ್ಯಾಕ್ಸ್ ಪ್ರೊ M1, ಆಸೂಸ್‌ ಮ್ಯಾಕ್ಸ್‌ M2 ಮತ್ತು ಆಸೂಸ್‌ ಮ್ಯಾಕ್ಸ್ M1 ಸ್ಮಾರ್ಟ್‌ಫೋನ್‌ಗಳೆ ಬೆಲೆ ಇಳಿಕೆ ಕಂಡ ಸ್ಮಾರ್ಟ್‌ಫೋನ್‌ಗಳಾಗಿವೆ. ಹಾಗಾದರೇ ಆಸೂಸ್‌ನ ಈ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳೆನು ಮತ್ತು ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ.

ಆಸೂಸ್‌ ಮ್ಯಾಕ್ಸ್ ಪ್ರೊ M1

ಆಸೂಸ್‌ ಮ್ಯಾಕ್ಸ್ ಪ್ರೊ M1

ಆಸೂಸ್‌ ಕಂಪನಿಯ 'ಮ್ಯಾಕ್ಸ್ ಪ್ರೊ M1' ಸ್ಮಾರ್ಟ್‌ಫೋನ್ ಒಟ್ಟು ಮೂರು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, ಮೂರು ವೇರಿಯಂಟ್ ಬೆಲೆ ಅಗ್ಗವಾಗಿದೆ. 3GB+32GB ವೇರಿಯಂಟ್ ಬೆಲೆಯು 7,499ರೂ.ಆಗಿದೆ. 4GB+64GB ವೇರಿಯಂಟ್ ಬೆಲೆಯು 8,999ರೂ. ಆಗಿದ್ದು, ಇನ್ನು 6GB+64GB ವೇರಿಯಂಟ್‌ ಫೋನ್ 11,499ರೂ.ಗಳಿಗೆ ಸಿಗಲಿದೆ.

ಆಸೂಸ್‌ ಮ್ಯಾಕ್ಸ್  M2

ಆಸೂಸ್‌ ಮ್ಯಾಕ್ಸ್ M2

ಆಸೂಸ್‌ ಕಂಪನಿಯ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಲ್ಲಿ 'ಆಸೂಸ್‌ ಮ್ಯಾಕ್ಸ್ M2' ಸ್ಮಾರ್ಟ್‌ಫೋನ್ ಕೂಡಾ ಒಂದಾಗಿದೆ. ಈ ಸ್ಮಾರ್ಟ್‌ಫೋನ್ 3GB+32GB ವೇರಿಯಂಟ್ ಮತ್ತು 4GB+64GB ವೇರಿಯಂಟ್ ಆಯ್ಕೆಯಲ್ಲಿ ಲಭ್ಯವಿದ್ದು, ಇದೀಗ ಬೆಲೆ ಇಳಿಕೆಯಿಂದ 3GB+32GB - 7,499ರೂ.ಗಳಿಗೆ ಮತ್ತು 4GB+64GB-8,999ರೂ.ಗಳಿಗೆ ಗ್ರಾಹಕರಿಗೆ ಸಿಗಲಿದೆ.

ಆಸೂಸ್‌ ಮ್ಯಾಕ್ಸ್  M1

ಆಸೂಸ್‌ ಮ್ಯಾಕ್ಸ್ M1

ಆಸೂಸ್‌ ಮ್ಯಾಕ್ಸ್‌ ಎಂ1 ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ ಆಗಿದ್ದು, ಇದೀಗ ಬೆಲೆ ಇಳಿಕೆಯಿಂದ ಇನ್ನಷ್ಟು ಅಗ್ಗದವಾಗಿದೆ. ಈ ಸ್ಮಾರ್ಟ್‌ಫೋನ್ 3GB+32GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಹೊಂದಿದ್ದು, 6,999ರೂ ಪ್ರೈಸ್‌ಟ್ಯಾಗ್‌ ಪಡೆದಿತ್ತು. ಆದರೆ ಇದೀಗ ಬೆಲೆ ಇಳಿಕೆಯಿಂದ 5,999ರೂ.ಗಳಿಗೆ ಗ್ರಾಹಕರ ಕೈ ಸೇರಲಿದೆ.

ಲಭ್ಯತೆ

ಲಭ್ಯತೆ

ಆಸೂಸ್‌ ಕಂಪನಿಯ ಬೆಲೆ ಇಳಿಕೆ ಕಂಡ ಆಸೂಸ್‌ ಮ್ಯಾಕ್ಸ್ ಪ್ರೊ M1, ಆಸೂಸ್‌ ಮ್ಯಾಕ್ಸ್‌ M2 ಮತ್ತು ಆಸೂಸ್‌ ಮ್ಯಾಕ್ಸ್ M1 ಸ್ಮಾರ್ಟ್‌ಫೋನ್‌ಗಳು ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗಲಿವೆ.

Most Read Articles
Best Mobiles in India

English summary
Asus has announced price cuts on three of its low-end phones in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X