ಶೀಘ್ರದಲ್ಲೇ ಅಸುಸ್‌ ZenFone 7 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆ!

|

ಜನಪರಿಯ ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳಿಗೆ ಪ್ರಸಿದ್ದಿ ಪಡೆದಿರುವ ಆಸುಸ್ ಕಂಪೆನಿ ಕಳೆದ ಕೆಲವು ವರ್ಷಗಳಿಂದ ತನ್ನ ROG ಫೋನ್ ಸರಣಿಯಲ್ಲಿ ಹಲವು ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿದೆ. ಸದ್ಯ ಇದೀಗ ತನ್ನ zenಫೋನ್‌7 ಸರಣಿಯ ಸ್ಮಾರ್ಟ್‌ಫೋನ್‌ ಪರಿಚಯಿಸಲು ಸಿದ್ದತೆ ನಡೆಸಿದೆ. ಸದ್ಯ zenಫೋನ್‌7 ಸರಣಿಯಲ್ಲಿ zenಫೋನ್ 7 ಪ್ರೊ ಅನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗ್ತಿದೆ. ಅಷ್ಟೇ ಅಲ್ಲ ಆಸುಸ್ ಕಂಪೆನಿ ಜೆನ್‌ಫೋನ್‌7 ಪ್ರೊ ಸ್ಮಾರ್ಟ್‌ಫೋನ್‌ ಸೆಪ್ಟೆಂಬರ್‌ನಲ್ಲಿ ಅದು ಕೂಡ ಐಫೋನ್ 12ರ ಬಿಡುಗಡೆ ಸಮಯದಲ್ಲಿಯೇ ಇದನ್ನು ಪ್ರಾರಂಭಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಅಸುಸ್‌

ಹೌದು, ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾದ ಅಸುಸ್‌ ಕಂಪೆನಿ ಈಗಾಗಲೇ ತನ್ನ 6z ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಅದರ ಉತ್ತರಾಧಿಕಾರಿಯಾಗಿ ಜೆನ್‌ಫೋನ್‌7ಪ್ರೊ ಅನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಇದರ ಕುರಿತು ಆನ್‌ಲೈನ್‌ನಲ್ಲಿ ಮಾಹಿತಿ ಸೊರಿಕೆಯಾಗಿದ್ದು, ಇದು ಶೀಘ್ರದಲ್ಲಿಯೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಎಂದು ಹೇಳಲಾಗ್ತಿದೆ. ಇದಲ್ಲದೆ ಈ ಸ್ಮಾರ್ಟ್‌ಫೊನ್‌ ಹೊಸ ಮಾದರಿಯ ಗೇಮಿಂಗ್‌ ಅನುಭವ ನೀಡುವ ಫೀಚರ್ಸ್‌ ಅನ್ನು ಒಳಗೊಂಡಿದೆ ಎಂದು ಅಂದಾಜಿಸಲಾಗಿದೆ.

ಅಸುಸ್

ಅಸುಸ್ zenಫೋನ್ 7 ಪ್ರೊ ಸ್ಮಾರ್ಟ್‌ಫೋನ್‌ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೂ ನಿರೀಕ್ಷೆಯಂತೆ, ನೀವು ಜೆನ್‌ಫೋನ್ 7 ಪ್ರೊ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 865 ಪ್ಲಸ್ ಪ್ರೊಸೆಸರ್‌ ಅನ್ನು ಹೊಂದಿರಲಿದೆ ಎನ್ನಲಾಗ್ತಿದೆ. ಇನ್ನು ಸಾಮಾನ್ಯ ಜೆನ್‌ಫೋನ್ 7 ಸ್ನಾಪ್‌ಡ್ರಾಗನ್ 865 ಚಿಪ್ ಅನ್ನು ಮಾತ್ರ ಪಡೆಯುತ್ತದೆ. ಆದರೆ ಕಾರ್ಯಕ್ಷಮತೆಯ ದೃಷ್ಟಿಯಿಂದ ಈ ಚಿಪ್‌ಗಳ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಹೇಳಲಾಗ್ತಿದೆ. ಆದ್ದರಿಂದ, ಜೆನ್‌ಫೋನ್ 7 ಪ್ರೊ ಅನ್ನು ಒನ್‌ಪ್ಲಸ್ 8 ಪ್ರೊ ಅನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.

ಅಸುಸ್‌

ಇನ್ನು ಅಸುಸ್‌ ಜೆನ್‌ಫೋನ್‌ 7 ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಆಸುಸ್ 6Z ನಿಂದ ಸರಿಯಾದ ಆಪ್ಡೇಟ್ ಅನ್ನು ಅನುವಾದಿಸಬಹುದಾಗಿದೆ. ಅಲ್ಲದೆ ಆಸುಸ್ ಇದನ್ನು ಆರ್‌ಒಜಿ ಫೋನ್ ಸರಣಿಯಲ್ಲಿ ಹೆಚ್ಚಿನ ರಿಫ್ರೆಶ್ ರೇಟ್‌ ಅನ್ನು ಡಿಸ್‌ಪ್ಲೇ ಜೊತೆಗೆ ಎಸಿ ಮಾಡುತ್ತಿದೆ. ಅಲ್ಲದೆ ಜೆನ್‌ಫೋನ್‌ 7 ಪ್ರೊ 120Hz ಅಮೋಲೆಡ್ ಡಿಸ್‌ಪ್ಲೇಯೊಂದಿಗೆ ಯಾವುದೇ ಕಟೌಟ್ ಅಥವಾ ದರ್ಜೆಯಿಲ್ಲದೆ ವಿನ್ಯಾಸಗೊಳಿಸಲಾಗಿದೆ.

ಸ್ಮಾರ್ಟ್‌ಫೋನ್‌

ಇನ್ನು ಈ ಸ್ಮಾರ್ಟ್‌ಫೋನ್‌ 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 30W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ನೀಡುವ ನಿರೀಕ್ಷೆಯಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ ಮೊದಲ ಬಾರಿಗೆ ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಒಳಗೊಂಡಿರಬಹುದು ಎನ್ನಲಾಗ್ತಿದೆ. ಸದ್ಯ ಈ ಸ್ಮಾರ್ಟ್‌ಫೊನ್‌ ಕುರಿತಂತೆ ಆನ್‌ಲೈನ್‌ ಮಾಹಿತಿ ಮಾತ್ರ ಲಬ್ಯವಾಗಿದ್ದು, ಅಸುಸ್‌ ಸಂಸ್ಥೆಯಿಂದ ಇನ್ನು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

Most Read Articles
Best Mobiles in India

Read more about:
English summary
The Asus ZenFone 7 Pro has just been certified at Bluetooth SIG. The ZenFone 7 Pro is expected to succeed the Asus 6Z from last year, with all flagship specifications.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X