Just In
Don't Miss
- Education
International Labour Day 2021: ಮೇ 1ರಂದು ಕಾರ್ಮಿಕರ ದಿನವನ್ನಾಗಿ ಏಕೆ ಆಚರಿಸಲಾಗುತ್ತೆ ?
- News
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಕೊರೊನಾ ಸೋಂಕಿತೆ ಸಾವು
- Sports
ಐಪಿಎಲ್ 2021: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್
- Movies
ಸಿನಿಮಾಕ್ಕಾಗಿ ಪ್ರಭಾಸ್-ಸೈಪ್ ಅಲಿ ಖಾನ್ ತೆಗೆದುಕೊಳ್ಳುತ್ತಿದ್ದಾರೆ ದೊಡ್ಡ ರಿಸ್ಕ್
- Finance
ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್ನ ಏಪ್ರಿಲ್ 19ರ ಮಾರುಕಟ್ಟೆ ದರ ಇಲ್ಲಿದೆ
- Automobiles
ಪವರ್ಫುಲ್ ಎಂಜಿನ್ ಹೊಂದಿರುವ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್ಯುವಿ ಕಾರಿನ ವಿಡಿಯೋ
- Lifestyle
ಪ್ರತಿದಿನ ಒಂದು ಕಪ್ ಅನಾನಸ್ ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳಿವು
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೊರೊನಾ ಸೋಂಕಿತರಿಗೆ ಔಷಧಿ ತಲುಪಿಸಲು ರೋಬೋಟ್ ಬಳಕೆ!
ಜಾಗತಿಕವಾಗಿ ಕೊರೋನಾ ವೈರಸ್ನಿಂದ ಎಲ್ಲಾ ರಾಷ್ಟ್ರಗಳು ತತ್ತಿರಿಸಿ ಹೋಗಿವೆ. ದಿನೇ ದಿನೇ ಸೊಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಲೇ ಇದೆ. ಇದಕ್ಕೆ ಭಾರತ ದೇಶವು ಕೂಡ ಹೊರತಾಗಿಲ್ಲ. ಈ ನಡುವೆ ಕೊರೊನಾ ವಿರುದ್ದ ಜಾಗೃತಿ ಮೂಡಿಸುವ ಕಾರ್ಯವೂ ಕೂಡ ನಿರಂತರವಾಗಿ ಸಾಗುತ್ತಿದೆ. ಇದಲ್ಲದೆ ಕೊರೋನಾ ಸೊಂಕು ಕಾಣಿಸಿಕೊಂಡವರಿಗೆ ಸೂಕ್ತ ಔಷದಿ ದೊರೆತಿಲ್ಲವಾದರೂ ಉತ್ತಮ ಚಿಕಿತ್ಸೆ ನೀಡುವಲ್ಲಿ ನಮ್ಮ ವೈಧ್ಯಕೀಯ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇದಕ್ಕಾಗಿ ವೈದ್ಯಕೀಯ ಕಿಟ್ಗಳನ್ನ ಹೆಚ್ಚು ಹೆಚ್ಚು ನೀಡಲಾಗ್ತಿದೆ. ಇದರ ನಡುವೆ ಕೊರೋನಾ ರೋಗಿಗಳಿರುವ ಆಸ್ಪತ್ರಗಳಲ್ಲಿ ಕೆಲ ಬದಲಾವಣೆಗಳನ್ನು ಸಹ ಮಾಡಲಾಗಿದೆ.

ಹೌದು, ಕೊರೋನಾ ಎಂಬ ಮಹಾಮಾರಿ ಇಡೀ ವಿಶ್ವಕ್ಕೆ ಆವರಿಸಿಕೊಂಡು ಜಗತ್ತನ್ನೇ ಕತ್ತಲೇಯ ಕೂಪಕ್ಕೆ ತಳ್ಳಿದೆ. ಕೇವಲ ರೋಗಿಗಳ ಸಂಪರ್ಕಕ್ಕೆ ಬಂದರೆ ಸಾಕು ಕೊರೋನಾ ವೈರಸ್ ಹರಡುತ್ತಿರುವುದರಿಂದ ಚಿಕಿತ್ಸೆ ನೀಡುತ್ತಿರುವ ವೈದ್ಯರು ಕೂಡ ಸದಾ ನಿಗಾದಲ್ಲಿರಬೇಕಾಗಿದೆ. ಈ ನಡುವೆ ಕರ್ನಾಟಕದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೊಸದೊಂದು ಸಾಧನವನ್ನ ಬಳಸಲಾಗುತ್ತಿದೆ. ಇದರ ಮೂಲಕ ರೋಗಿಗಳಿಗೆ ಆಹಾರ ಹಾಗೂ ಹಣ್ಣು ಹಂಪಲುಗಳನ್ನ ತಲುಪಿಸುವ ವ್ಯವಸ್ಥೆ ಇದೆ. ಅಷ್ಟಕ್ಕೂ ಇದು ಬೇರೆನೂ ಅಲ್ಲ ಇದೊಂದು ರೋಬೋಟ್ ಅನ್ನೊದು ವಿಶೇಷವಾಗಿದೆ.

ಸದ್ಯ ಕರೋನಾ ವೈರಸ್ ಫಿಡಿತ ರೋಗಿಗಳನ್ನ ಐಸೋಲೇಶನ್ ಅಲ್ಲಿ ಇಡಲಾಗಿರುತ್ತದೆ. ಅಲ್ಲದೆ ಆ ರೋಗಿಗಳನ್ನ ಯಾರ ಸಂಪರ್ಕಕಕ್ಕೂ ಭಾರದಂತೆ ಎಚ್ಚರ ವಹಿಸಬೇಕಾಗಿದೆ. ಅಲ್ಲದೆ ಅವರಿಗೆ ಊಟೋಪಚಾರಕ್ಕೆ ಪ್ರತ್ಯೇಕ ಸಿಬ್ಬಂದಿಗಳನ್ನ ನೇಮಿಸಿದೆರೆ ಅವರಿಂದ ಅವರಿಗೂ ಸೊಂಕು ಹರಡುವ ಸಾಧ್ಯತೆ ಇರೊದ್ರಿಂದ ವಿಕ್ಟೋರಿಯಾ ಆಸ್ಪತ್ರೆ ಆಡಳಿತ ಮಂಡಳಿ ಇಂತಹದೊಂದು ಕಾರ್ಯಕ್ಕೆ ಮುಂದಾಗಿದೆ. ಹೀಗೆ ರೋಬೊಟ್ ಮೂಲಕ ಹಣ್ಣು ಹಂಪಲುಗಳನ್ನ ರೋಗಿಗಳಿಗೆ ನಿಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಇನ್ನು ಈ ರೋಬೋಟ್ ತಳ್ಳುವ ಗಾಡಿಯ ಮಾದರಿಯಲ್ಲಿದ್ದು, ತಳಭಾಗದಲ್ಲಿ ವರ್ಕಿಂಗ್ ಸಿಸ್ಟಂ ಅನ್ನು ಹೊಂದಿದೆ. ಇನ್ನು ಮೆಲ್ಬಾಗದಲ್ಲಿ ಎರಡು ಹಾಗೂ ಅದರ ಕೆಳಗಡೆ ಎರಡು ಟ್ರೇಗಳನ್ನ ಇಡಲಾಗಿದ್ದು, ಇದರಲ್ಲಿ ಹಣ್ನು ಹಾಗೂ ಆಹಾರ ಇತರೆ ಆಗತ್ಯವಾದ ವಸ್ತುಗಳನ್ನ ಆದರಲ್ಲಿ ಜೋಡಿಸಿಟ್ಟು ಯಾವ ಬೆಡ್ ನಂಬರ್ ಹಾಗೂ ಯಾವ ರೂಂಗೆ ತಲುಪಿಸಬೇಕು ಅನ್ನೊದನ್ನ ತಿಳಿಸಿದರೆ ಸಾಕು ಆ ಕಾರ್ಯವನ್ನ ಅಚ್ಚುಕಟ್ಟಾಗಿ ಮಾಡುತ್ತದೆ ಈ ರೋಬೋಟ್.

ಅಲ್ಲದೆ ನಿಮಗೆಲ್ಲಾ ತಿಳಿದಿರುವಂತೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿಯೇ ಹೆಚ್ಚಿ ಪ್ರಮಾಣದ ಕೊರೋನಾ ಫೀಡಿತ ರೋಗಿಗಳನ್ನ ದಾಖಲಿಸಿಕೊಳ್ಳಲಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಆಪಾಯ ಕಟ್ಟಿಟ್ಟ ಬುತ್ತಿ. ಇದೇ ಕಾರಣಕ್ಕಾಗಿ ಅಗತ್ಯವಿರುವ ಎಲ್ಲಾ ಕಡೆ ಅವಕಾಶವಿರುವ ಎಲ್ಲಾ ಮಾದರಿಯ ಹೊಸ ಪ್ರಯತ್ನಗಳನ್ನ ಮಾಡಲಾಗುತ್ತಿದೆ. ಇದರ ಫಲವೇ ಈ ರೋಬೋಟ್ ಆಗಿದೆ. ಇದು ಕೇವಲ ಆಹಾರ ಮಾತ್ರವಲ್ಲ ಕೆಲವೊಮ್ಮೆ ಕರೋನವೈರಸ್ ರೋಗಿಗಳಿಗೆ ಆಹಾರ ಮತ್ತು ಔಷಧಿಗಳನ್ನು ಸಹ ಪೂರೈಸಲಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999