1000ರೂ.ಒಳಗೆ ಲಭ್ಯವಾಗುವ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳು!

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ ಡಿವೈಸ್‌ಗಳಿಗೆ ಇಂಟರ್‌ನೆಟ್‌ ಅತ್ಯಗತ್ಯವಾಗಿದೆ. ಇದೇ ಕಾರಣಕ್ಕೆ ಬಹುತೇಕ ಮಂದಿ ಇಂಟರ್‌ನೆಟ್‌ ಸೇವೆಗಾಗಿ ಬ್ರಾಡ್‌ಬ್ಯಾಂಡ್‌ ಸಂಪರ್ಕಕ್ಕೆ ಮುಂದಾಗುತ್ತಾರೆ. ಇನ್ನು ಏರ್‌ಟೆಲ್‌, ಜಿಯೋಫೈಬರ್‌, ಬಿಎಸ್‌ಎನ್‌ಎಲ್‌, ಎಕ್ಸೈಟೆಲ್‌ ಮತ್ತು ಟಾಟಾ ಸ್ಕೈ ಸಂಸ್ಥೆಗಳು ಪ್ರಮುಖ ಬ್ರಾಡ್‌ಬ್ಯಾಂಡ್‌ ಪೂರೈಕೆದಾರ ಸಂಸ್ಥೆಗಳಾಗಿ ಗುರುತಿಸಿಕೊಂಡಿವೆ. ಇನ್ನ ಬ್ರಾಂಡ್‌ಬ್ಯಾಂಡ್‌ ಕನೆಕ್ಷನ್‌ ಅಧಿಕ ವೇಗದ ಡೇಟಾ ಕನೆಕ್ಷನ್‌, ಕಡಿಮೆ ಲೇಟೆನ್ಸಿ ನೆಟ್‌ವರ್ಕ್‌ ಮತ್ತು ಇತರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ಬ್ರಾಂಡ್‌ಬ್ಯಾಂಡ್‌

ಹೌದು, ಬ್ರಾಂಡ್‌ಬ್ಯಾಂಡ್‌ ಕನೆಕ್ಷನ್‌ ಇತ್ತೀಚಿನ ದಿನಗಳಲ್ಲಿ ಅಗತ್ಯ ಎನಿಸಿದೆ. ತಡೆರಹಿತ ಇಂಟರ್‌ನೆಟ್‌ ಸಂಪರ್ಕವನ್ನು ನೀಡುವಲ್ಲಿ ಬ್ರಾಂಡ್‌ಬ್ಯಾಂಡ್‌ ಸಂಸ್ಥೆಗಳು ಪ್ರಮುಖ ಪಾತ್ರವಹಿಸುತ್ತವೆ. ಪ್ರಮುಖ ಬ್ರಾಂಡ್‌ಬ್ಯಾಂಡ್‌ ಪೂರೈಕೆದಾರರ ಸಂಸ್ಥೆಗಳಾಗಿ ಗುರುತಿಸಿಕೊಂಡಿರುವ ಏರ್‌ಟೆಲ್‌, ಜಿಯೋ,ಎಕ್ಸೈಟೆಲ್‌ ಮತ್ತು ಟಾಟಾ ಸ್ಕೈ ಸಂಸ್ಥೆಗಳು 1000ರೂ.ಗಿಂತ ಕಡಿಮೆ ಬೆಲೆಯಲ್ಲಿ 300 Mbps ವೇಗದ ಡೇಟಾವನ್ನು ನೀಡುತ್ತಿವೆ. ಹಾಗಾದ್ರೆ 1000 ರೂ.ಕಡಿಮೆ ಬೆಲೆಯಲ್ಲಿ ಪರಿಗಣಿಸಬಹುದಾದ ಏರ್‌ಟೆಲ್ ಎಕ್ಸ್‌ಸ್ಟ್ರೀಮ್, ಜಿಯೋಫೈಬರ್, ಬಿಎಸ್‌ಎನ್‌ಎಲ್, ಎಕ್ಸೈಟೆಲ್ ಮತ್ತು ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

999ರೂ.ಗಳ ಏರ್‌ಟೆಲ್ ಎಂಟರ್‌ಟೈನ್‌ಮೆಂಟ್ ಬ್ರಾಡ್‌ಬ್ಯಾಂಡ್ ಪ್ಲಾನ್‌

999ರೂ.ಗಳ ಏರ್‌ಟೆಲ್ ಎಂಟರ್‌ಟೈನ್‌ಮೆಂಟ್ ಬ್ರಾಡ್‌ಬ್ಯಾಂಡ್ ಪ್ಲಾನ್‌

ಏರ್‌ಟೆಲ್‌ ಟೆಲಿಕಾಂನ 999 ರೂ.ಗಳ ಏರ್‌ಟೆಲ್‌ ಎಂಟರ್‌ಟೈನಮೆಂಟ್‌ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ 200 Mbps ವರೆಗೆ ಡೇಟಾ ವೇಗವನ್ನು ನೀಡುತ್ತದೆ. ಈ ಬ್ರಾಡ್‌ಬ್ಯಾಂಡ್ ಯೋಜನೆಯ ಒಂದು ತಿಂಗಳ ವ್ಯಾಲಿಡಿಟಿ ಹೊಂದಿದ್ದು, ಇದರ ಎಫ್‌ಯುಪಿ ಮಿತಿ 300 ಜಿಬಿ ಆಗಿದೆ. ಇದರೊಂದಿಗೆ ಉಚಿತ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್ ಚಂದಾದಾರಿಕೆ ಗ್ರಾಹಕರಿಗೆ ಲಭ್ಯವಾಗಲಿದೆ. ಉಚಿತ ಲ್ಯಾಂಡ್‌ಲೈನ್ ಸಂಪರ್ಕದೊಂದಿಗೆ ಬರುತ್ತದೆ ಹಾಗೂ ದೇಶದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ.

BSNL ಪ್ರೀಮಿಯಂ ಫೈಬರ್ 999ರೂ. ಬ್ರಾಡ್‌ಬ್ಯಾಂಡ್ ಯೋಜನೆ

BSNL ಪ್ರೀಮಿಯಂ ಫೈಬರ್ 999ರೂ. ಬ್ರಾಡ್‌ಬ್ಯಾಂಡ್ ಯೋಜನೆ

BSNL ಸಂಸ್ಥೆಯ 999ರೂ,ಗಳ ಫೈಬರ್ ಪ್ರೀಮಿಯಂ ಬ್ರಾಡ್‌ಬ್ಯಾಂಡ್ ಪ್ಲಾನ್ 200 Mbps ವೇಗವನ್ನು ನೀಡಲಿದೆ. ಇದು ಒಂದು ತಿಂಗಳ ವ್ಯಾಲಿಡಿಟಿ ಪಡೆದುಕೊಂಡಿದ್ದು, ಈ ಪ್ಲಾನ್‌ 3.3 TB ವರೆಗೆ ಡೇಟಾವನ್ನು ನೀಡಲಿದೆ. ನಂತರ ಅದರ ವೇಗವನ್ನು 2Mbps ಗೆ ಇಳಿಸಲಾಗುತ್ತದೆ. ಇನ್ನು ಈ ಪ್ಲಾನ್‌ ಡಿಸ್ನಿ+ ಹಾಟ್‌ಸ್ಟಾರ್‌ಗೆ ಉಚಿತ ಪ್ರೀಮಿಯಂ ಸದಸ್ಯತ್ವದೊಂದಿಗೆ ಬರುತ್ತದೆ. ಇದಲ್ಲದೆ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ತಿಂಗಳಿಗೆ ರೂ 129 ಕ್ಕೆ ಸ್ಟ್ರೀಮಿಂಗ್ ಪ್ರಯೋಜನಗಳನ್ನು ನೀಡಲು ಬಿಎಸ್‌ಎನ್‌ಎಲ್ ಸಹ YuppTV ಜೊತೆ ಪಾಲುದಾರಿಕೆ ಹೊಂದಿದೆ. ಇದರೊಂದಿಗೆ ಚಂದಾದಾರರಿಗೆ ಅನಿಯಮಿತ ಧ್ವನಿ ಕರೆ ಪ್ರಯೋಜನವನ್ನು ಸಹ ನೀಡುತ್ತದೆ. ಹಾಗೆಯೇ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ವಿಐಪಿ ಚಂದಾದಾರಿಕೆಯ ಪ್ರಯೋಜನ ನೀಡಿದೆ.

ಜಿಯೋಫೈಬರ್ 999ರೂ. ಬ್ರಾಡ್‌ಬ್ಯಾಂಡ್ ಯೋಜನೆ

ಜಿಯೋಫೈಬರ್ 999ರೂ. ಬ್ರಾಡ್‌ಬ್ಯಾಂಡ್ ಯೋಜನೆ

ಇನ್ನು ಜಿಯೋಫೈಬರ್‌ನ ಬ್ರಾಡ್‌ಬ್ಯಾಂಡ್ ಪ್ಲಾನ್ 150Mbps ವರೆಗಿನ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ನೀಡಲಿದೆ. ಈ ಪ್ಲಾನ್‌ ಒಂದು ತಿಂಗಳ ವ್ಯಾಲಿಡಿಟಿ ಹೊಂದಿದ್ದು, ಇದು ಅನಿಯಮಿತ ಇಂಟರ್‌ನೆಟ್‌ನೊಂದಿಗೆ ಬರುತ್ತದೆ. ಇದಲ್ಲದೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ ಮತ್ತು ಅಮೆಜಾನ್ ಪ್ರೈಮ್, ಡಿಸ್ನಿ+ ಹಾಟ್ ಸ್ಟಾರ್ ಸೇರಿದಂತೆ 14 OTT ಆಪ್‌ಗಳಿಗೆ ಪ್ರವೇಶವನ್ನು ನೀಡಲಿದೆ. ಜೊತೆಗೆ ಲಯನ್ಸ್‌ಗೇಟ್, ಸನ್‌ಎನ್‌ಕ್ಸ್ಟ್, ಹೊಯಿಚೊಯ್, ಆಲ್ಟ್ ಬಾಲಾಜಿ, ವೂಟ್ ಕಿಡ್ಸ್, ಇರೋಸ್ ನೌ, ಡಿಸ್ಕವರಿ +, ಆಲ್ಟ್ ಬಾಲಾಜಿ, ಮತ್ತು ಹಂಗಾಮ ಪ್ಲೇ ಸೇವೆಗಳಿಗೆ ಬೆಲೆಗಳು ಸ್ವಲ್ಪ ಉನ್ನತ ಶ್ರೇಣಿಯಲ್ಲಿ ಇರಲಿದೆ.

ಎಕ್ಸೈಟೇಲ್ 999ರೂ. ಬ್ರಾಡ್‌ಬ್ಯಾಂಡ್ ಯೋಜನೆ

ಎಕ್ಸೈಟೇಲ್ 999ರೂ. ಬ್ರಾಡ್‌ಬ್ಯಾಂಡ್ ಯೋಜನೆ

ಒಂದು ತಿಂಗಳ ವ್ಯಾಲಿಡಿಟಿ ಹೊಂದಿರುವ ಈ ಎಕ್ಸಿಟೇಲ್ ಬ್ರಾಡ್‌ಬ್ಯಾಂಡ್ ಪ್ಲಾನ್ ಅನಿಯಮಿತ ಇಂಟರ್‌ನೆಟ್‌ ಪ್ರಯೋಜನ ಹೊಂದಿದೆ. ಇನ್ನು ಈ ಪ್ಲಾನ್‌ 300 Mbps ವೇಗವನ್ನು 999ರೂ. ಬೆಲೆಯಲ್ಲಿ ನೀಡಲಿದೆ. ಅದೇ ಯೋಜನೆಯು ತಿಂಗಳಿಗೆ 499ರೂ.ಗಳಿಗೆ ದೊರೆಯಲಿದೆ. ಇದಲ್ಲದೆ ಎಕ್ಸಿಟೈಲ್ 752ರೂ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಹೊಂದಿದ್ದು, ಬಳಕೆದಾರರಿಗೆ ಹೆಚ್ಚಿನ ಶುಲ್ಕವಿಲ್ಲದೆ ZEE5, Voot, Eros, Shemaroo ಗೆ ಬಹು ಓವರ್‌-ದಿ-ಟಾಪ್ (OTT) ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನೀಡುತ್ತದೆ.

ಟಾಟಾ ಸ್ಕೈ 950ರೂ. ಬ್ರಾಡ್‌ಬ್ಯಾಂಡ್ ಯೋಜನೆ

ಟಾಟಾ ಸ್ಕೈ 950ರೂ. ಬ್ರಾಡ್‌ಬ್ಯಾಂಡ್ ಯೋಜನೆ

ಟಾಟಾ ಸ್ಕೈ ನ ಈ ಬ್ರಾಡ್‌ಬ್ಯಾಂಡ್ ಪ್ಲಾನ್ 100 Mbps ಡೇಟಾ ಮತ್ತು ಅನಿಯಮಿತ ಕರೆಗಳನ್ನು ನೀಡುತ್ತದೆ. ಇದರ ಬೆಲೆ ತಿಂಗಳಿಗೆ 950 ರೂ.ಆಗಿದೆ. ಇದೇ ಯೋಜನೆಯು 2700ರೂ. 4500ರೂ ಮತ್ತು 8400ರೂ, 900ರೂ. 750ರೂ ಮತ್ತು 700ರೂ ಪ್ಲಾನ್‌ಗಳನ್ನು ನೀಡಲಿದೆ. ಈ ಪ್ಲಾನ್‌ಗಳು ಕ್ರಮವಾಗಿ 3 ತಿಂಗಳು, 6 ತಿಂಗಳು ಮತ್ತು 12 ತಿಂಗಳುಗಳಿಗೆ ಚಂದಾದಾರಿಕೆಯನ್ನು ನೀಡುತ್ತದೆ. ಟಾಟಾ ಸ್ಕೈ ಈ ಯೋಜನೆಯೊಂದಿಗೆ ಯಾವುದೇ ಸ್ಟ್ರೀಮಿಂಗ್ ಪ್ರಯೋಜನಗಳನ್ನು ನೀಡುವುದಿಲ್ಲ.

Most Read Articles
Best Mobiles in India

English summary
If you can spend as much as Rs 1000 for your monthly broadband plan, you can consider the following plans from Airtel XStream, JioFiber, Excitel, Tata Sky broadband and BSNL Bharat Fiber.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X