ಬಿಎಸ್‌ಎನ್‌ಎಲ್‌ನ ಈ ಪ್ಲ್ಯಾನ್‌ಗಳಲ್ಲಿ ಜಾಸ್ತಿ ಡೇಟಾ ಜೊತೆಗೆ ಅಧಿಕ ವ್ಯಾಲಿಡಿಟಿ!

|

ಪ್ರಸ್ತುತ ದೇಶದ ಟೆಲಿಕಾಂ ಸಂಸ್ಥೆಗಳು ಹಲವು ಆಕರ್ಷಕ ಡೇಟಾ ಯೋಜನೆಗಳನ್ನು ತಮ್ಮ ಚಂದಾದಾರರಿಗಾಗಿ ಪರಿಚಯಿಸುತ್ತಿವೆ. ಅದಾಗ್ಯೂ ಬಳಕೆದಾರರಿಗೆ ಹೆಚ್ಚಿನ ಡೇಟಾದ ಅಗತ್ಯತೆ ಕಂಡುಬರುತ್ತದೆ. ಈ ನಿಟ್ಟಿನಲ್ಲಿ ಅಧಿಕ ಡೇಟಾ ಪ್ರಯೋಜನದ ಪ್ಲ್ಯಾನ್‌ಗಳತ್ತ ಬಳಕೆದಾರರು ಮುಖ ಮಾಡುತ್ತಾರೆ. ಈ ಹಿನ್ನಲೆಯಲ್ಲಿ ಟೆಲಿಕಾಂಗಳು ಆಕರ್ಷಕ ಡೇಟಾ ವೋಚರ್‌ಗಳನ್ನು ಪರಿಚಯಿಸಿ ಬಳಕೆದಾರರ ಗಮನ ಸೆಳೆದಿವೆ. ಈ ನಿಟ್ಟಿನಲ್ಲಿ ಬಿಎಸ್‌ಎನ್‌ಎಲ್‌ ಸಹ ಬೊಂಬಾಟ್ STV ಡೇಟಾ ವೋಚರ್‌ಗಳನ್ನು ನೀಡಿದೆ.

ಬಿಎಸ್‌ಎನ್‌ಎಲ್‌

ಹೌದು, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಅಧಿಕ ಡೇಟಾ ಮತ್ತು ವ್ಯಾಲಿಡಿಟಿಯ ಪ್ರೀಪೇಯ್ಡ್‌ ಪ್ಲ್ಯಾನ್‌ಗಳೊಂದಿಗೆ ಆಕರ್ಷಕ STV ಡೇಟಾ ವೋಚರ್‌ಗಳನ್ನು ಹೊಂದಿದೆ. ಈ ಯೋಜನೆಗಳು ಬಳಕೆದಾರರಿಗೆ ಹೆಚ್ಚುವರಿ ಡೇಟಾ ಅಗತ್ಯತೆಯನ್ನು ಪೂರೈಸಲಿವೆ. ಇನ್ನು ಡೇಟಾ ವೋಚರ್‌ಗಳ ಪ್ಲ್ಯಾನ್‌ಗಳು ಭಿನ್ನ ಬೆಲೆಯಲ್ಲಿವೆ. ಹಾಗೆಯೇ ಭಿನ್ನ ಪ್ರಯೋಜನಗಳನ್ನು ಪಡೆದಿವೆ. ಅವುಗಳಲ್ಲಿ ಕೆಲವು ಪ್ಲ್ಯಾನ್‌ಗಳು ಎಸ್‌ಎಮ್‌ಎಸ್‌ ಸೌಲಭ್ಯ ಪಡೆದಿವೆ. ಬಿಎಸ್‌ಎನ್‌ಎಲ್‌ ಸಂಸ್ಥೆಯ ಆಕರ್ಷಕ ಡೇಟಾ ವೋಚರ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಬಿಎಸ್‌ಎನ್‌ಎಲ್‌ PRBTSTV 548ರೂ.

ಬಿಎಸ್‌ಎನ್‌ಎಲ್‌ PRBTSTV 548ರೂ.

ಬಿಎಸ್ಎನ್ಎಲ್ ಈ ಡೇಟಾ STV ವೋಚರ್ ಹೆಚ್ಚುವರಿ ಡೇಟಾ ಬಯಸುವ ಗ್ರಾಹಕರಿಗೆ ಸೂಕ್ತ ಅನಿಸಲಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 5GB ಡೇಟಾ ಪ್ರಯೋಜನ ದೊರೆಯುತ್ತದೆ. ಇನ್ನು ಈ ಡೇಟಾ ವೋಚರ್ ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಇದನ್ನು ಹೊರತುಪಡಿಸಿ ಈ ಪ್ಲ್ಯಾನಿನಲ್ಲಿ ಯಾವುದೇ ಹೆಚ್ಚುವರಿ ಸೌಲಭ್ಯಗಳು ಲಭ್ಯ ಇರುವುದಿಲ್ಲ. ಇದೊಂದು ಡೇಟಾ ವೋಚರ್ ಆಗಿದೆ.

ಬಿಎಸ್‌ಎನ್‌ಎಲ್‌ ಡೇಟಾ 1098ರೂ.

ಬಿಎಸ್‌ಎನ್‌ಎಲ್‌ ಡೇಟಾ 1098ರೂ.

ಬಿಎಸ್ಎನ್ಎಲ್ ಈ ಡೇಟಾ ವೋಚರ್ ಸಹ ಹೆಚ್ಚುವರಿ ಡೇಟಾ ಪ್ರಯೋಜನದ ಜೊತೆಗೆ ಇತರೆ ಸೌಲಭ್ಯ ಪಡೆದಿದೆ. ಈ ಡೇಟಾ ವೋಚರ್‌ನಲ್ಲಿ ಬಳಕೆದಾರರಿಗೆ ಅನಿಯಮಿತ ಡೇಟಾ ಸೌಲಭ್ಯ ಇದ್ದು, ಹಾಗೂ ವಾಯಿಸ್ ಕರೆ ಪ್ರಯೋಜನವು ಸಹ ದೊರೆಯಲಿದೆ. ಇನ್ನು ಈ ವೋಚರ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ ಲಭ್ಯವಾಗುತ್ತವೆ.

ಬಿಎಸ್‌ಎನ್‌ಎಲ್‌ STV 998ರೂ.

ಬಿಎಸ್‌ಎನ್‌ಎಲ್‌ STV 998ರೂ.

ಬಿಎಸ್‌ಎನ್‌ಎಲ್‌ STV 998ರೂ. ಡೇಟಾ ವೋಚರ್ ಹೆಚ್ಚುವರಿ ಡೇಟಾ ಅಗತ್ಯತೆಗೆ ಪೂರಕವಾಗಿದೆ. ಈ ವೋಚರ್‌ನಲ್ಲಿ ಬಳಕೆದಾರರಿಗೆ 80 Kbps ಇಂಟರ್ನೆಟ್ ವೇಗದಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನದ ಲಭ್ಯವಾಗಲಿದೆ. ಇದರೊಂದಿಗೆ ಎರಡು ತಿಂಗಳ ಅವಧಿಗೆ ಪರ್ಸನಲೈಜ್ ರಿಂಗ್‌ಟೋನ್ ಸೌಲಭ್ಯ ಸಿಗಲಿದೆ. ಇನ್ನು ಈ ಡೇಟಾ ವೋಚರ್ ಒಟ್ಟು 270 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ.

Most Read Articles
Best Mobiles in India

English summary
With BSNL data STVs, you can get cheap data and that too with a longer period of validity.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X