ದೀರ್ಘಾವಧಿ ವ್ಯಾಲಿಡಿಟಿ ಬಯಸೋರಿಗೆ ಬಿಎಸ್‌ಎನ್‌ಎಲ್‌ನ ಈ ಪ್ಲಾನ್‌ಗಳು ಸೂಕ್ತ!

|

ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಇದರ ನಡುವೆ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಟೆಲಿಕಾಂ ಕೂಡ ಆಕರ್ಷಕ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಅಗ್ಗದ ಬೆಲೆಯಲ್ಲಿ ಅನಿಯಮಿತ ಕರೆ ಪ್ರಯೋಜನ ಹಾಗೂ ಅಧಿಕ ಡೇಟಾ ನೀಡುವ ಅನೇಕ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ನೀಡುತ್ತಾ ಬಂದಿದೆ. ಇದಲ್ಲದೆ ದೀರ್ಘಾವಧಿ ಪ್ಲಾನ್‌ಗಳಲ್ಲಿ ಕೂಡ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತಿದೆ. ಇದರಲ್ಲಿ ಅನೇಕ ಪ್ಲಾನ್‌ಗಳು 425 ದಿನಗಳ ಮಾನ್ಯತೆಯನ್ನು ನೀಡುತ್ತದೆ.

ಬಿಎಸ್‌ಎನ್‌ಎಲ್‌

ಹೌದು, ಖಾಸಗಿ ಟೆಲಿಕಾಂಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಬಿಎಸ್‌ಎನ್‌ಎಲ್‌ ಅನೇಕ ಆಕರ್ಷಕ ಪ್ಲಾನ್‌ಗಳನ್ನು ಪರಿಚಯಿಸಿದೆ. ಯಾವುದೇ ಖಾಸಗಿ ಟೆಲಿಕಾಂ ನೀಡದ ವ್ಯಾಲಿಡಿಟಿ ಪ್ಲಾನ್‌ಗಳನ್ನು ಬಿಎಸ್‌ಎನ್‌ಎಲ್‌ ನೀಡುತ್ತಾ ಬಂದಿದೆ. ಅದರಲ್ಲೂ ದೀರ್ಘಾವಧಿ ಪ್ಲಾನ್‌ಗಳಲ್ಲಿ 425 ದಿನಗಳ ಮಾನ್ಯತೆ ನೀಡುವ ಟೆಲಿಕಾಂಗಳಲ್ಲಿ ಬಿಎಸ್‌ಎನ್‌ಎಲ್‌ ಮಾತ್ರ ಸೇರಿದೆ. 300 ಮತ್ತು 425 ದಿನಗಳ ಅವಧಿಯ ದೀರ್ಘಾವಧಿಯ ಯೋಜನೆಗಳನ್ನು ಹುಡುಕುತ್ತಿರುವ ಬಳಕೆದಾರರು ಈ ಯೋಜನೆಗಳನ್ನು ಆಯ್ಕೆ ಮಾಡಬಹುದು. ಹಾಗಾದ್ರೆ ಬಿಎಸ್‌ಎನ್‌ಎಲ್‌ ಟೆಲಿಕಾಂ 2500ರೂ.ಗಿಂತ ಕಡಿಮೆ ಬೆಲೆಯಲ್ಲಿ ನೀಡುತ್ತಿರುವ ದೀರ್ಘಾವಧಿ ಪ್ಲಾನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

BSNL ಟೆಲಿಕಾಂ 397ರೂ. ಪ್ರಿಪೇಯ್ಡ್‌ ಪ್ಲಾನ್

BSNL ಟೆಲಿಕಾಂ 397ರೂ. ಪ್ರಿಪೇಯ್ಡ್‌ ಪ್ಲಾನ್

BSNL ಟೆಲಿಕಾಂ 397ರೂ.ಗಳ ಪ್ರಿಪೇಯ್ಡ್‌ ಪ್ಲಾನ್‌ನಲ್ಲಿ 2GB ದೈನಂದಿನ ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ಪ್ರಯೋಜನ ನೀಡುತ್ತಿದೆ. ಅಲ್ಲದೆ ಉಚಿತ ರಿಂಗ್‌ಟೋನ್‌ಗಳನ್ನು ನೀಡುವ ಈ ಪ್ಲಾನ್‌ 300 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. 500 ರೂ. ಒಳಗಿನ ಪ್ಲಾನ್‌ಗಳಲ್ಲಿ ಯಾವೊಂದು ಟೆಲಿಕಾಂ ಕೂಡ 300 ದಿನಗಳ ಮಾನ್ಯತೆಯನ್ನು ನೀಡುವುದಿಲ್ಲ ಅನ್ನೊದು ಗಮನಾರ್ಹವಾಗಿದೆ.

ಬಿಎಸ್‌ಎನ್‌ಎಲ್‌ 693ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 693ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 693ರೂ. ಡೇಟಾ ಎಸ್‌ಟಿವಿ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 300GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಇದು ಡೇಟಾ ಪ್ರೀಪೇಯ್ಡ್ ಯೋಜನೆ ಆಗಿರುವುದರಿಂದ ಯಾವುದೇ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯಗಳು ದೊರೆಯುವುದಿಲ್ಲ.

ಬಿಎಸ್‌ಎನ್‌ಎಲ್‌ 1,212ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 1,212ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 1,212ರೂ. ಡೇಟಾ ಎಸ್‌ಟಿವಿ ಡೇಟಾ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 500GB ಡೇಟಾ ಪ್ರಯೋಜನೆ ದೊರೆಯುತ್ತದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಯಾವುದೇ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯಗಳು ದೊರೆಯುವುದಿಲ್ಲ. ಇದೊಂದು ಡೇಟಾ ಪ್ಲ್ಯಾನ್ ಆಗಿದೆ.

ಬಿಎಸ್‌ಎನ್‌ಎಲ್‌ 1,499 ರೂ. ಪ್ರಿಪೇಯ್ಡ್ ಪ್ಲಾನ್‌

ಬಿಎಸ್‌ಎನ್‌ಎಲ್‌ 1,499 ರೂ. ಪ್ರಿಪೇಯ್ಡ್ ಪ್ಲಾನ್‌

ಇನ್ನು BSNL 1499 ರೂ.ಗಳ ಪ್ರಿಪೇಯ್ಡ್ ಪ್ಲಾನ್‌ ಕೂಡ ಹೊಂದಿದೆ. ಇದು ದೀರ್ಘಾವಧಿ ಪ್ಲಾನ್‌ ಆಗಿದ್ದು, 24GB ಡೇಟಾ, ಉಚಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ನೀಡುತ್ತದೆ. ಈ ಪ್ಲಾನ್‌ 365 ದಿನಗಳ ಮಾನ್ಯತೆಯನ್ನು ಹೊಂದಿದೆ.

ಬಿಎಸ್‌ಎನ್‌ಎಲ್‌ 1,999ರೂ. ಪ್ರಿಪೇಯ್ಡ್‌ ಪ್ಲಾನ್‌

ಬಿಎಸ್‌ಎನ್‌ಎಲ್‌ 1,999ರೂ. ಪ್ರಿಪೇಯ್ಡ್‌ ಪ್ಲಾನ್‌

ಈ ಪ್ರಿಪೇಯ್ಡ್‌ ಪ್ಲಾನ್‌ ಒಂದು ವರ್ಷದ ಮಾನ್ಯತೆಯನ್ನು ಪಡೆದಿದೆ. ಇದು 100GB ಹೆಚ್ಚುವರಿ ಡೇಟಾದೊಂದಿಗೆ 500GB ನಿಯಮಿತ ಡೇಟಾವನ್ನು ನೀಡುತ್ತದೆ. ಅಲ್ಲದೆ ಈ ಪ್ಲಾನ್‌ ಯಾವುದೇ FUP ಮಿತಿಯಿಲ್ಲದೆ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯ್ಸ್‌ ಕಾಲ್‌ ಪ್ರಯೋಜನ ನೀಡಲಿದೆ. ಜೊತೆಗೆ ಉಚಿತ PRBT ಜೊತೆಗೆ ಅನ್‌ಲಿಮಿಟೆಡ್‌ ಟ್ಯೂನ್‌ ಚೇಂಜ್ ಆಯ್ಕೆ ಮತ್ತು Eros Now ಮನರಂಜನಾ ಸೇವೆಗೆ ಪ್ರವೇಶವನ್ನು ನೀಡುತ್ತದೆ.

ಬಿಎಸ್‌ಎನ್‌ಎಲ್‌ 2,399ರೂ.ಪ್ರಿಪೇಯ್ಡ್‌ ಪ್ಲಾನ್‌

ಬಿಎಸ್‌ಎನ್‌ಎಲ್‌ 2,399ರೂ.ಪ್ರಿಪೇಯ್ಡ್‌ ಪ್ಲಾನ್‌

BSNL ತನ್ನ ರೂ 2399 ವಾರ್ಷಿಕ ಪ್ರಿಪೇಯ್ಡ್ ಪ್ಲಾನ್‌ ಈಗ 425 ದಿನಗಳ ಮಾನ್ಯತೆಯನ್ನು ನೀಡಲಿದೆ. ಈ ಪ್ಲಾನ್‌ ಪ್ರತಿನಿತ್ಯ 3GB ಡೇಟಾ ಪ್ರಯೋಜನ ನೀಡಲಿದ್ದು, ಡೇಟಾ ಮುಗಿದ ನಂತರ 80 Kbps ವೇಗದೊಂದಿಗೆ ಅನಿಯಮಿತ ಡೇಟಾವನ್ನು ನೀಡುತ್ತದೆ. ಇದು ಯಾವುದೇ ನೆಟ್‌ವರ್ಕ್‌ಗೆ ದಿನಕ್ಕೆ 100 SMS ಪ್ರಯೋಜನ ನೀಡಲಿದೆ. ಜೊತೆಗೆ BSNL ಟ್ಯೂನ್ಸ್ ಮತ್ತು Eros Now ವಿಷಯಕ್ಕೆ 425 ದಿನಗಳವರೆಗೆ ಪ್ರವೇಶವನ್ನು ನೀಡುತ್ತದೆ.

ಬಿಎಸ್‌ಎನ್‌ಎಲ್‌ 1,498ರೂ. ಪ್ರಿಪೇಯ್ಡ್ ಡೇಟಾ ವೋಚರ್

ಬಿಎಸ್‌ಎನ್‌ಎಲ್‌ 1,498ರೂ. ಪ್ರಿಪೇಯ್ಡ್ ಡೇಟಾ ವೋಚರ್

ಇನ್ನು ಬಿಎಸ್‌ಎನ್‌ಎಲ್‌ ಟೆಲಿಕಾಂನ 1,498ರೂ.ಗಳ ಡೇಟಾ ವೋಚರ್ ದೈನಂದಿನ 2GB ಡೇಟಾದೊಂದಿಗೆ ಅನಿಯಮಿತ ವೇಗವನ್ನು ನೀಡುತ್ತದೆ. ನಂತರ ವೇಗವನ್ನು 40 Kbps ಗೆ ಕಡಿಮೆ ಮಾಡುತ್ತದೆ. ಮನೆಯಿಂದಲೇ ಕೆಲಸ ನಿರ್ವಹಣೆ ಮಾಡುವ ಬಳಕೆದಾರರಿಗೆ ಈ ಪ್ಲಾನ್‌ ಸೂಕ್ತವಾಗಿದೆ.

BSNL

ಇದಲ್ಲದೆ BSNL ಟೆಲಿಕಾಂ ಪರಿಚಯಿಸಿರುವ 1000ರೂ. ಒಳಗಿನ ಪ್ರಿಪೇಯ್ಡ್‌ ಪ್ಲಾನ್‌ಗಳು 120 ದಿನಗಳು ಮತ್ತು 180 ದಿನಗಳ ನಡುವಿನ ಮಾನ್ಯತೆಯನ್ನು ಹೊಂದಿವೆ. ಇದರಲ್ಲಿ BSNL 666ರೂ.ಗಳ ಪ್ರಿಪೇಯ್ಡ್ ಪ್ಲಾನ್‌ ದೈನಂದಿನ 1.5GB ಡೇಟಾ ಪ್ರಯೋಜನ ನೀಡಲಿದೆ. ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಮತ್ತು 100 ಉಚಿತ SMS ಪ್ರಯೋಜನ ನೀಡಲಿದೆ. ಇದು 120 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಬಿಎಸ್‌ಎನ್‌ಎಲ್‌ 365ರೂ.ಪ್ರಿಪೇಯ್ಡ್ ಪ್ಲಾನ್‌

ಬಿಎಸ್‌ಎನ್‌ಎಲ್‌ 365ರೂ.ಪ್ರಿಪೇಯ್ಡ್ ಪ್ಲಾನ್‌

ಬಿಎಸ್‌ಎನ್‌ಎಲ್‌ ಈ ಹೊಸ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಪ್ರತಿದಿನ 250 ನಿಮಿಷಗಳ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಆದರೆ ಡೇಟಾ, ಎಸ್‌ಎಮ್‌ಎಸ್‌ ಹಾಗೂ ವಾಯಿಸ್‌ ಕರೆಗಳ ಪ್ರಯೋಜನಗಳು ಮೊದಲ 60 ದಿನಗಳ ವರೆಗೆ ಲಭ್ಯವಾಗಲಿವೆ.

ಬಿಎಸ್‌ಎನ್‌ಎಲ್‌ 699ರೂ. ಪ್ರಿಪೇಯ್ಡ್ ಪ್ಲಾನ್‌

ಬಿಎಸ್‌ಎನ್‌ಎಲ್‌ 699ರೂ. ಪ್ರಿಪೇಯ್ಡ್ ಪ್ಲಾನ್‌

BSNL 699ರೂ. ಪ್ರಿಪೇಯ್ಡ್ ಪ್ಲಾನ್‌ ದೈನಂದಿನ 0.5GB ಡೇಟಾ ಪ್ರಯೋಜನ ನೀಡಲಿದೆ. ಇದು ಪ್ರತಿನಿತ್ಯ 100 SMS ಮತ್ತು ಮೊದಲ 60 ದಿನಗಳವರೆಗೆ ಉಚಿತ ಟ್ಯೂನ್‌ಗಳನ್ನು ನೀಡಲಿದೆ.

ಬಿಎಸ್‌ಎನ್‌ಎಲ್‌ 997ರೂ. ಪ್ರಿಪೇಯ್ಡ್ ಪ್ಲಾನ್‌

ಬಿಎಸ್‌ಎನ್‌ಎಲ್‌ 997ರೂ. ಪ್ರಿಪೇಯ್ಡ್ ಪ್ಲಾನ್‌

BSNL 997ರೂ. ಪ್ರಿಪೇಯ್ಡ್ ಪ್ಲಾನ್‌ 3GB ದೈನಂದಿನ ಡೇಟಾ, ಪ್ರತಿನಿತ್ಯ 100 SMS ಪ್ರಯೋಜನ ನೀಡಲಿದೆ. ಇನ್ನು ಈ ಪ್ಲಾನ್‌ನಲ್ಲಿ Sony Live ಮತ್ತು Lokdhun ವಿಷಯಕ್ಕೆ ಪ್ರವೇಶವನ್ನು ಪಡೆಯಬಹುದಾಗಿದೆ. ಇದು 180 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

Most Read Articles
Best Mobiles in India

English summary
Best recharge plans from BSNL that costs less than Rs. 2500 with up to 425 days validity.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X