ಅಮೆಜಾನ್‌ ಪ್ರೈಮ್‌ ಡೇ ಸೇಲ್‌: ಸ್ಮಾರ್ಟ್‌ಟಿವಿಗಳ ಮೇಲೆ ಭಾರಿ ರಿಯಾಯಿತಿ!

|

ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ ಆಯ್ದ ಉತ್ಪನ್ನಗಳಿಗೆ ಭರ್ಜರಿ ಡಿಸ್ಕೌಂಟ್‌ ನೀಡಲಾಗ್ತಿದೆ. ನೆನ್ನೆಯಿಂದ ಶುರುವಾಗಿರುವ ಈ ಸೇಲ್‌ ಇಂದು ಕೊನೆಯಾಗಲಿದೆ. ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನ ಕೊನೆಯ ದಿನವಾದ ಇಂದು ಕೂಡ ಹೆಚ್ಚಿನ ರಿಯಾಯಿತಿಯನ್ನು ನೀಡಲಾಗ್ತಿದೆ. ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ಟಿವಿಗಳ ಮೇಲೆ ಇಂದೆಂದೂ ನೀಡದ ರಿಯಾಯಿತಿ ನೀಡಲಾಗ್ತಿದೆ. ಅದರಲ್ಲೂ ಸ್ಮಾರ್ಟ್‌ಟಿವಿಗಳ ಮೇಲೆ 65% ತನಕ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.

ಅಮೆಜಾನ್‌ ಪ್ರೈಮ್‌ ಡೇ ಸೇಲ್‌: ಸ್ಮಾರ್ಟ್‌ಟಿವಿಗಳ ಮೇಲೆ ಭಾರಿ ರಿಯಾಯಿತಿ!

ಹೌದು, ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ ಜನಪ್ರಿಯ ಸ್ಮಾರ್ಟ್‌ಟಿವಿಗಳ ಮೇಲೆ 20% ನಿಂದ 65%ವರೆಗೆ ರಿಯಾಯಿತಿ ದೊರೆಯಲಿದೆ. ಇಂದು ಸೇಲ್‌ನ ಕೊನೆಯ ದಿನವಾಗಿರುವುದರಿಂದ ಈ ರಿಯಾಯಿತಿಯನ್ನು ಪಡೆದುಕೊಳ್ಳಲು ನಿಮಗೆ ಕೊನೆಯ ಅವಕಾಶವಾಗಿದೆ. ಹಾಗಾದ್ರೆ ಈ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಟಿವಿಗಳ ಮೇಲೆ ರಿಯಾಯಿತಿ ಘೋಷಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

LG 139.7 cm (55 inches) 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ OLED TV
ಎಲ್‌ಜಿ 139.7 cm 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ OLED TV ಸ್ಮಾರ್ಟ್‌ಟಿವಿ ಪ್ರಿಯರ ನೆಚ್ಚಿನ ಆಯ್ಕೆಯಲ್ಲಿ ಒಂದಾಗಿದೆ. ಸದ್ಯ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ ಈ ಸ್ಮಾರ್ಟ್‌ಟಿವಿ ಮೇಲೆ 38% ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇದರ ಮೂಲ ಬೆಲೆ 2,09,990 ರೂ ಆಗಿದ್ದು, ರಿಯಾಯಿತಿ ದರದಲ್ಲಿ 1,29,990 ರೂ. ಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ 3840x2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಎಲ್‌ಜಿ 80cm (32 ಇಂಚು) ಹೆಚ್‌ಡಿ ರೆಡಿ ಎಲ್ಇಡಿ ಸ್ಮಾರ್ಟ್ ಟಿವಿ 32LM560BPTC ಕೂಡ ರಿಯಾಯಿತಿ ದರದಲ್ಲಿ ದೊರೆಯಲಿದೆ. 20,990 ಮೂಲ ಬೆಲೆಯ ಸ್ಮಾರ್ಟ್‌ಟಿವಿ ನಿಮಗೆ ಅಮೆಜಾನ್‌ ಸೇಲ್‌ನಲ್ಲಿ 20,259ರೂ,ಗಳಿಗೆ ದೊರೆಯಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ಅಮೆಜಾನ್ ಪ್ರೈಮ್ ವಿಡಿಯೋ, ವೆಬ್ ಓಎಸ್ ಸ್ಮಾರ್ಟ್ ಟಿವಿ, ಕ್ವಾಡ್ ಕೋರ್ ಪ್ರೊಸೆಸರ್,ಫೀಚರ್ಸ್‌ಗಳನ್ನು ಒಳಗೊಂಡಿದೆ.

ಸೋನಿ ಬ್ರಾವಿಯಾ 164cm (65 ಇಂಚು)4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಎಲ್ಇಡಿ ಗೂಗಲ್ ಟಿವಿ
ಇನ್ನು ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ ಸೋನಿ ಬ್ರಾವಿಯಾ 164cm (65 ಇಂಚು)4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಎಲ್ಇಡಿ ಗೂಗಲ್ ಟಿವಿ ಮೇಲೆ 39% ರಿಯಾಯಿತಿ ದೊರೆಯಲಿದೆ. ಈ ಸ್ಮಾರ್ಟ್‌ಟಿವಿ 1,79,990 ರೂ ಮೂಲ ಬೆಲೆಯನ್ನು ಹೊಂದಿದ್ದು, ಸೇಲ್‌ನಲ್ಲಿ 1,09,990 ರೂ ಬೆಲೆಯಲ್ಲಿ ಲಭ್ಯವಾಗಲಿದೆ. ಇದರಿಂದ ನೀವು 70,000 ರೂ ಗಳನ್ನು ಉಳಿಸಬಹುದಾಗಿದೆ. ಇದು ಅಮೆಜಾನ್ ಪ್ರೈಮ್ ವಿಡಿಯೋವನ್ನು ಬೆಂಬಲಿಸಲಿದೆ.

ಇದಲ್ಲದೆ ಸೋನಿ ಬ್ರಾವಿಯಾ 139cm (55 ಇಂಚು) 4ಕೆ ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಎಲ್ಇಡಿ ಗೂಗಲ್ ಟಿವಿ ಕೂಡ ಅಮೆಜಾನ್‌ ಸೇಲ್‌ನಲ್ಲಿ ರಿಯಾಯಿತಿಯಲ್ಲಿ ದೊರೆಯಲಿದೆ. ಈ ಸ್ಮಾರ್ಟ್‌ಟಿವಿ 1,09,990 ರೂ ಮೂಲ ಬೆಲೆ ಹೊಂದಿದೆ. ಇದರ ಮೇಲೆ 29% ರಿಯಾಯಿತಿ ಘೋಷಿಸಲಾಗಿದ್ದು, ಕೇವಲ 77,990 ರೂ ಗಳಿಗೆ ಈ ಸ್ಮಾರ್ಟ್‌ಟಿವಿಯನ್ನು ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ 3840 x 2160 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದ 4 ಕೆ ಅಲ್ಟ್ರಾ ಎಚ್ಡಿ ಡಿಸ್‌ಪ್ಲೇ ಹೊಂದಿದೆ. ಸ್ಮಾರ್ಟ್‌ಟಿವಿ ಕನೆಕ್ಟಿವಿಟಿ ಆಯ್ಕೆಯಲ್ಲಿ 4 ಎಚ್‌ಡಿಎಂಐ ಪೋರ್ಟ್‌ಗಳು ಹಾರ್ಡ್ ಡ್ರೈವ್‌ಗಳು ಮತ್ತು ಇತರ ಯುಎಸ್‌ಬಿ ಸಾಧನಗಳನ್ನು ಸಂಪರ್ಕಿಸಲು 2 ಯುಎಸ್‌ಬಿ ಪೋರ್ಟ್‌ಗಳನ್ನು ಒಳಗೊಂಡಿದೆ.

ಹಿಸ್ಸೆನ್ಸ್ 164cm (65 ಇಂಚು) 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಸರ್ಟಿಫೈಡ್ ಆಂಡ್ರಾಯ್ಡ್ ಎಲ್ಇಡಿ ಟಿವಿ
ಹಿಸ್ಸೆನ್ಸ್ 164cm 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಸರ್ಟಿಫೈಡ್ ಆಂಡ್ರಾಯ್ಡ್ ಎಲ್ಇಡಿ ಟಿವಿ 65ಇಂಚಿನ ಆಯ್ಕೆಗೆ ಹೆಚ್ಚಿನ ರಿಯಾಯಿತಿ ದೊರೆಯಲಿದೆ. ಇದರ ಮೂಲ ಬೆಲೆ 89,990 ರೂ ಆಗಿದ್ದು, 70,999 ರೂ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ ಮೇಲೆ 21% ರಿಯಾಯಿ ದೊರೆಯಲಿದ್ದು, ಒಟ್ಟು 18,991 ರೂ,ಗಳನ್ನು ನೀವು ಉಳಿಸಬಹುದಾಗಿದೆ.ಈ ಸ್ಮಾರ್ಟ್‌ಟಿವಿ ಡಾಲ್ಬಿ ವಿಷನ್ ಹೆಚ್‌ಡಿಆರ್, ಅಲ್ಟ್ರಾ ಡಿಮ್ಮಿಂಗ್, ಯುಹೆಚ್‌ಡಿ ಎಐ ಅಪ್ಸ್ಕೇಲರ್ ಅನ್ನು ಒಳಗೊಂಡಿದೆ.

Most Read Articles
Best Mobiles in India

Read more about:
English summary
Best Smart TV Deals On Amazon Prime Day Sale.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X