ಅಮೆಜಾನ್‌ ಸೇಲ್: ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಖರೀದಿಗೆ ಸೂಕ್ತ ಸಮಯ!

|

ಇ-ಕಾಮರ್ಸ್‌ ಸೈಟ್‌ ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣವಾಗಿದೆ. ಹಬ್ಬ, ಹರಿದಿನ, ಮತ್ರವಲ್ಲದೆ ವಿಕೆಂಡ್‌ ಮಂತ್‌ಎಂಡ್‌ ಸೇಲ್‌ಗಳನ್ನು ಆಯೋಜಸುತ್ತಾ ಬಂದಿದೆ. ಇನ್ನು ಅಮೆಜಾನ್‌ ತನ್ನ ವಿಶೇಷ ಸೇಲ್‌ಗಳಲ್ಲಿ ಗ್ರಾಹಕರಿಗೆ ಬಿಗ್‌ ಡಿಸ್ಕೌಂಟ್‌ ನೀಡುತ್ತಲೇ ಬಂದಿದೆ. ಇದೀಗ ತನ್ನ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಡೇಟ್‌ ಫಿಕ್ಸ್‌ ಮಾಡಿದೆ. ಇನ್ನು ಎಂದಿನಂತೆ ಈ ಬಾರಿಯ ಅಮೆಜಾನ್‌ ವಿಶೇಷ ಸೇಲ್‌ನಲ್ಲಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲಿ ಬಿಗ್‌ ಡಿಸ್ಕೌಂಟ್‌ ಘೋಷಣೆ ಮಾಡಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ದಿನಾಂಕ ಘೋಷಣೆ ಆಗಿದೆ. ಹಬ್ಬದ ಸೀಸನ್‌ನಲ್ಲಿ ಬರುತ್ತಿರುವ ಈ ಸೇಲ್‌ನಲ್ಲಿ ಹಲವು ಮಾದರಿಯ ಡಿಸ್ಕೌಂಟ್‌ಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಇನ್ನು ಈ ವಿಶೇಷ ಸೇಲ್‌ನ ಭಾಗವಾಗಿ ಸ್ಮಾರ್ಟ್‌ಫೋನ್‌ಗಳ ಮೇಲೆ ಹೆಚ್ಚಿನ ರಿಯಾಯತಿ ಸಿಗಲಿದೆ. ಹೀಗಾಗಿ ಹೊಸ ಸ್ಮಾರ್ಟ್‌ಫೋನ್‌ಖರೀದಿ ಮಾಡುವವರಿಗೆ ಇದು ಸೂಕ್ತ ಸಮಯವಾಗಿದೆ. ಹಾಗಾದ್ರೆ ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ನೀವು ಖರೀದಿಸಬಹುದಾದ ಟಾಪ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S21

ಸ್ಯಾಮ್‌ಸಂಗ್ ಗ್ಯಾಲಕ್ಸಿ S21

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಸ್ಮಾರ್ಟ್‌ಫೋನ್‌ 2400 x1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.2 ಇಂಚಿನ ಡೈನಾಮಿಕ್ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ AMOLED 2X ಡಿಸ್‌ಪ್ಲೇ ಆಗಿದೆ. ಇದು 2.9GHz ಎಕ್ಸಿನೋಸ್ 2100 ಆಕ್ಟಾ-ಕೋರ್ ಪ್ರೊಸೆಸರ್ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಜೊತೆಗೆ 4000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಹಲವಾರು ಉತ್ತಮ ಗುಣಮಟ್ಟದ ಆಡಿಯೋ ಫಾರ್ಮ್ಯಾಟ್‌ಗಳನ್ನು ಬೆಂಬಲಿಸುತ್ತದೆ. ಇದನ್ನು ಡಾಲ್ಬಿ ಅಟ್ಮೋಸ್ ಬೆಂಬಲಿಸುತ್ತದೆ, ಇದು ಚಲನಚಿತ್ರಗಳನ್ನು ನೋಡಲು ಅಥವಾ ಸಂಗೀತವನ್ನು ಕೇಳಲು ಸೂಕ್ತವಾದ ವಿಶಾಲವಾದ ಸೌಂಡ್ ಸ್ಟೇಜ್ ಅನ್ನು ಸೃಷ್ಟಿಸುತ್ತದೆ. ಇದು ಸ್ಪಷ್ಟ ಮತ್ತು ಗಟ್ಟಿಯಾದ ಧ್ವನಿ ಉತ್ಪಾದನೆಯನ್ನು ಒದಗಿಸುತ್ತದೆ. ಸದ್ಯ ಅಮೆಜಾನ್‌ನಲ್ಲಿ ಈ ಸ್ಮಾರ್ಟ್‌ಫೋನ್‌ 69,999ರೂ ಬೆಲೆಗೆ ಲಭ್ಯವಿದೆ.

ಗೂಗಲ್ ಪಿಕ್ಸೆಲ್ 4A

ಗೂಗಲ್ ಪಿಕ್ಸೆಲ್ 4A

ಗೂಗಲ್ ಪಿಕ್ಸೆಲ್ 4A ಸ್ಮಾರ್ಟ್‌ಫೋನ್‌ 6.2-ಇಂಚಿನ ಕ್ಯೂಎಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 19:9 ರಚನೆಯ ಅನುಪಾತವನ್ನು ಹೊಂದಿದೆ. ಜೊತೆಗೆ ಇದು 90Hz ರಿಫ್ರೆಶ್ ರೇಟ್‌ ಹೊಂದಿದ್ದು, ಬ್ಲರ್‌- ಫ್ರೀ ಮತ್ತು ಕ್ಲಿಯರ್‌ ವಿಶ್ಯುಯಲ್‌ ನೀಡಲಿದ್ದು, HDR ಬೆಂಬಲವನ್ನು ಸಹ ಹೊಂದಿದೆ. ಇದು ಸ್ನ್ಯಾಪ್‌ಡ್ರಾಗನ್ 730G SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ನಲ್ ಸ್ಟೋರೇಜ್ ಅನ್ನು ಹೊಂದಿದೆ. ಇದು 12.2-ಮೆಗಾಪಿಕ್ಸೆಲ್ ರಿಯರ್‌ ಕ್ಯಾಮರಾವನ್ನು ಹೊಂದಿದ್ದು, 77 ಡಿಗ್ರಿಗಳಷ್ಟು ವಿಶಾಲವಾದ ವೀಕ್ಷಣೆಯನ್ನು ಹೊಂದಿದೆ. ಸದ್ಯ ಇದೀಗ ಅಮೆಜಾನ್‌ ನಲ್ಲಿ 35,100ರೂ,ಗಳಿಗೆ ಲಭ್ಯವಿದೆ.

ಒನ್‌ಪ್ಲಸ್ ನಾರ್ಡ್ CE 5G

ಒನ್‌ಪ್ಲಸ್ ನಾರ್ಡ್ CE 5G

ಒನ್‌ಪ್ಲಸ್ ನಾರ್ಡ್ CE 5G ಸ್ಮಾರ್ಟ್‌ಫೋನ್‌ 2400x1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.43 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಇನ್ನು ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಹೊಂದಿದ್ದು, ಇದು HDR 10+ ಸ್ವರೂಪವನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 750G 5G ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಜೊತೆಗೆ 4500 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಸದ್ಯ ಇದೀಗ ಅಮೆಜಾನ್‌ ನಲ್ಲಿ 24,999ರೂ.ಬೆಲೆಗೆ ಲಭ್ಯವಿದೆ.

ಒಪ್ಪೋ A74

ಒಪ್ಪೋ A74

ಒಪ್ಪೊ A74 ಸ್ಮಾರ್ಟ್‌ಫೋನ್‌ 2400x1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.49 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 90 Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480 5G SoC ನಿಂದ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇನ್ನು ಈ ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದು ಡ್ಯುಯಲ್ ಅಪರ್ಚರ್ ಅನ್ನು ಹೊಂದಿದ್ದು, ವೀಡಿಯೊಗಳು ಮತ್ತು ಫೋಟೋಗಳು ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಜೊತೆಗೆ ಈ ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸದ್ಯ ಇದೀಗ ಅಮೆಜಾನ್‌ ಸೇಲ್‌ನಲ್ಲಿ 17,990ರೂ. ಬೆಲೆಗೆ ಲಭ್ಯವಿದೆ.

Most Read Articles
Best Mobiles in India

English summary
Top Android smartphones you can buy as a part of Amazon’s upcoming Great Indian Festival sale.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X