ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಈ ಸ್ಮಾರ್ಟ್‌ಫೋನ್‌ಗಳ ಮೇಲೆ ಬಿಗ್‌ ಆಫರ್!

|

ಇ-ಕಾಮರ್ಸ್‌ ಸೈಟ್‌ಗಳು ತಮ್ಮ ವಿಶೇಷ ಸೇಲ್‌ಗಳಿಂದಲೇ ಗ್ರಾಹಕರನ್ನು ಸೆಳೆಯುತ್ತಿವೆ. ಈ ಪೈಕಿ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್‌ ಕೂಡ ವಿಶೇಷ ಸೇಲ್‌ ಗಳನ್ನು ಆಯೋಜಿಸುತ್ತಾ ಬಂದಿದೆ. ಇದೀಗ ಫ್ಲಿಪ್‌ಕಾರ್ಟ್‌ ಆಕ್ಟೋಬರ್‌ 3ರಿಂದ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ ಅನ್ನು ಆಯೋಜಿಸಿದೆ. ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ವಾಚ್‌ ಸೇರಿದಂತೆ ಹಲವು ಗ್ಯಾಜೆಟ್ಸ್‌ಗಳ ಮೇಲೆ ರಿಯಾಯಿತಿಯನ್ನು ನೀಡುತ್ತಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ನೀಡುತ್ತಿದೆ. ಅದರಲ್ಲೂ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಾದ ಐಫೋನ್ 12, ಗೂಗಲ್‌ ಪಿಕ್ಸೆಲ್ 4ಎ, ರಿಯಲ್‌ಮಿ ಜಿಟಿ 5ಜಿ, ಐಫೋನ್ ಎಸ್‌ಇ 2020 ಸೇರಿದಂತೆ ಹಲವು ಫೋನ್‌ಗಳನ್ನು ಆಫರ್‌ನಲ್ಲಿ ಖರೀದಿಸಬಹುದಾಗಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಡಿಸ್ಕೌಂಟ್‌ ದೊರೆಯುತ್ತಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಐಫೋನ್ 12

ಐಫೋನ್ 12

ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಆಪಲ್ ಐಫೋನ್ 12 ಡಿಸ್ಕೌಂಟ್‌ನಲ್ಲಿ ದೊರೆಯಲಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 12 ಕೇವಲ 52,999 ರೂ.ಗಳಿಗೆ ಲಬ್ಯವಿದೆ. ಅಲ್ಲದೆ ಎಕ್ಸ್‌ಚೇಂಜ್‌ ಆಫರ್‌ನಲ್ಲಿ ಖರೀದಿಸಿದರೆ 50,000 ಕ್ಕಿಂತ ಕಡಿಮೆ ಬೆಲೆಗೆ ಪಡೆಯಬಹುದು. ಫ್ಲಿಪ್‌ಕಾರ್ಟ್‌ ಐಫೋನ್ 12 ಮೇಲೆ ಎಕ್ಸ್‌ಚೇಂಜ್‌ ಆಫರ್‌ನಲ್ಲಿ 15,600ರೂ, ವರೆಗೆ ರಿಯಾಯಿತಿ ನೀಡುತ್ತದೆ. ಇನ್ನು ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 12 128GB ಮಾದರಿಯನ್ನು 57,999ರೂ.ಗಳಿಗೆ ಪಟ್ಟಿ ಮಾಡಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F22

ಸ್ಯಾಮ್‌ಸಂಗ್ ಗ್ಯಾಲಕ್ಸಿ F22

ಈ ಸ್ಮಾರ್ಟ್‌ಫೋನ್‌ 6.4-ಇಂಚಿನ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್‌ ಡಿಸ್‌ಪ್ಲೇ ಹೊಂದಿದೆ. ಜೊತೆಗೆ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕರು ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ 1,150ರೂ. ರಿಯಾಯಿತಿ ಪಡೆಯಬಹುದು. ಪ್ರಿಪೇಯ್ಡ್ ವಹಿವಾಟುಗಳ ಮೇಲೆ 1,000 ರೂ.ಗಳ ತ್ವರಿತ ರಿಯಾಯಿತಿ ಕೊಡುಗೆಯೂ ಇದೆ. ಈ ಫೋನ್‌ ರಿಯಾಯಿತಿ ದರದಲ್ಲಿ 10,349 ರೂ.ಗಳಿಗೆ ಲಭ್ಯವಿದೆ.

ಐಫೋನ್ SE (2020)

ಐಫೋನ್ SE (2020)

ಐಫೋನ್ SE (2020) ಫ್ಲಿಪ್‌ಕಾರ್ಟ್‌ನಲ್ಲಿ 30,199ರೂ. ಬೆಲೆಗೆ ಖರೀದಿಸಬಹುದಾಗಿದೆ. ಅಲ್ಲದೆ ಬ್ಯಾಂಕ್ ಮತ್ತು ಎಕ್ಸ್‌ಚೇಂಜ್ ಆಫರ್‌ಗಳೊಂದಿಗೆ ನೀವು ಅದನ್ನು 25,000ರೂ.ಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ 1,250ರೂ. ರಿಯಾಯಿತಿ ಆಫರ್ ಸಿಗಲಿದೆ. ಇನ್ನು ಈ ಐಫೋನ್ ಆಪಲ್‌ನ A13 ಬಯೋನಿಕ್ ಚಿಪ್‌ಸೆಟ್‌ನಿಂದ ಮೂರನೇ ತಲೆಮಾರಿನ ನ್ಯೂರಲ್ ಇಂಜಿನ್ ಹೊಂದಿದೆ. ಇದು ಒಟ್ಟು ಎರಡು ಕ್ಯಾಮೆರಾಗಳನ್ನು ಹೊಂದಿದೆ.

ಪೊಕೊ C3

ಪೊಕೊ C3

ಪೊಕೊ C3 ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ ನಿಮಗೆ 8,299ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.53-ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಜೊತೆಗೆ ಈ ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇದು 10W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ರಿಯಲ್‌ಮಿ GT 5G

ರಿಯಲ್‌ಮಿ GT 5G

ರಿಯಲ್‌ಮಿ GT 5G ಸ್ಮಾರ್ಟ್‌ಫೋನ್‌ ರಿಯಲ್‌ಮಿ ಕಂಪನಿ ಹೊಸ ರಿಯಲ್‌ಮಿ GT 5G ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಇದು 120Hz AMOLED ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಡಾಲ್ಬಿ ಅಟ್ಮೋಸ್ ಆಡಿಯೊ ಫೀಚರ್ಸ್‌ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಮೇಲೆ 2,000ರೂ.ಗಳ ವರೆಗೆ ರಿಯಾಯಿತಿ ದೊರೆಯಲಿದೆ. ನೀವು ಆಕ್ಸಿಸ್ ಬ್ಯಾಂಕ್ ಅಥವಾ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ 1,250 ರೂ.ಗಳ ವರೆಗೆ ರಿಯಾಯಿತಿ ಕೂಡ ಸಿಗಲಿದೆ.

Most Read Articles
Best Mobiles in India

English summary
Flipkart Big Billion Days sale best deals: Popular phones like iPhone 12, Pixel 4a, Realme GT 5G, iPhone SE 2020, and more are on sale.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X