ತಿಂಡಿಪೊತ ಬೆಂಗಳೂರಿಗರೇ ಇಲ್ಲಿ ನೋಡಿ: ಆನ್‌ಲೈನ್ ಫುಡ್ ಡೆಲಿವರಿ ತಾಣಗಳ ಪಟ್ಟಿ

|

ಬೆಂಗಳೂರಿನಲ್ಲಿ ದಿನ ನಿತ್ಯ ಸಂಜೆ-ಬೆಳಿಗ್ಗೆ ಎನ್ನದೇ ಮಳೆ ಸುರಿಯುತ್ತಿದ್ದು, ಮನೆಯಿಂದ ಹೊರಗೆ ಹೋಗಲು ಆಗದಂತಹ ಸ್ಥಿತಿಯೂ ನಿರ್ಮಾಣವಾಗುತ್ತಿದೆ. ಈ ಮಳೆ ಬಂದ ಸಂದರ್ಭದಲ್ಲಿಯೇ ಬಾಯಿ ಸಹ ರುಚಿ-ರುಚಿಯಾಗಿ ಏನ್ನಾದರು ತಿನ್ನಬೇಕು ಎನ್ನುವ ಬಯಕೆಯನ್ನು ವ್ಯಕ್ತಪಡಿಸುತ್ತದೆ.

ತಿಂಡಿಪೊತ ಬೆಂಗಳೂರಿಗರೇ ಇಲ್ಲಿ ನೋಡಿ: ಆನ್‌ಲೈನ್ ಫುಡ್ ಡೆಲಿವರಿ ತಾಣಗಳ ಪಟ್ಟಿ

ಗೂಗಲ್ -ಶಿಯೋಮಿ ಜುಗಲ್ ಬಂದಿ: ರೂ. 2000ಕ್ಕೆ ಬೊಂಬಾಟ್ ಸ್ಮಾರ್ಟ್‌ಫೋನ್..!

ಇಂತಹ ಸಂದರ್ಭದಲ್ಲಿ, ಇಲ್ಲವೇ ಮನೆಯಲ್ಲಿ ಅಡುಗೆಯನ್ನು ಮಾಡಿಕೊಳ್ಳಲಾಗದ ಸಂದರ್ಭದಲ್ಲಿ ಆನ್‌ಲೈನ್‌ನಿಲ್ಲಿಯೇ ರುಚಿ-ರುಚಿ ಅಡುಗೆಯನ್ನು ಸವಿಯುವ ಸಲುವಾಗಿ ಲಭ್ಯವಿರುವ ಟಾಪ್ ಆನ್‌ಲೈನ್ ತಾಣಗಳ ಕುರಿತ ಸಂಪೂರ್ಣ ಮಾಹಿತಿಯೂ ಇಲ್ಲಿದೆ.

ಫುಡ್‌ಪಾಂಡ:

ಫುಡ್‌ಪಾಂಡ:

ನಿಮ್ಮ ಹಸಿವನ್ನು ತಣಿಸುವ ಸಲಯವಾಗಿ ಫುಡ್‌ಪಾಂಡ ವೇಗದ ಡೆಲಿವರಿಯನ್ನು ನೀಡುವುದರಲ್ಲಿ ಮುಂದಿದೆ ಎನ್ನಲಾಗಿದೆ. ಅಲ್ಲದೇ ಕೇಲವು ಮಾದರಿಯ ಆಹಾರಗಳ ಮೇಲೆ ಆಫರ್ ಸಹ ನೀಡಲಿದೆ. ಬೆಂಗಳೂರಿನಲ್ಲಿರುವ ಎಲ್ಲಾ ಹೋಟೆಲ್ ಗಳಿಂದ ಆಹಾರವನ್ನು ತಲುಪಿಸುವ ಕಾರ್ಯವನ್ನು ಮಾಡುತ್ತದೆ. ಫುಡ್ ಪಾಂಡ ಸೇವೆ ನಂ.1 ಸ್ಥಾನದಲ್ಲಿದೆ.

ಜಸ್ಟ್ ಇಟ್‌ಇನ್:

ಜಸ್ಟ್ ಇಟ್‌ಇನ್:

ಇದು ಸಹ ಉತ್ತಮ ಸೇವೆಯನ್ನು ನೀಡುತ್ತಿದ್ದು, ಇದು ಸಹ ವಿವಿಧ ರೀತಿಯ ಆಹಾರವನ್ನು ನಿಮ್ಮ ಮನೆಯ ಬಾಗಿಲಿಗೆ ತಲುಪಿಸಲಿದೆ. ಅಲ್ಲದೇ ಇಲ್ಲಿಯೂ ಆಫರ್ ಗಳು ಲಭ್ಯವಿದೆ ಎನ್ನಲಾಗಿದೆ. ಇದು ಸಹ ವೇಗದ ಸೇವೆಯನ್ನು ನೀಡಲಿದೆ. JustEat.inನಲ್ಲಿ ನೀವು ಬುಕ್ ಮಾಡಬಹುದು.

ಡೆಲಿವರ್:

ಡೆಲಿವರ್:

ಇದು ಸಹ ಬೆಂಗಳೂರಿನಲ್ಲಿ ಬೆಳೆಯುತ್ತಿರುವ ವೆಬ್‌ಸೈಟ್‌ಗಳಲ್ಲಿ ಒಂದು ಎನ್ನಲಾಗಿದೆ. ಇದು ಬಳಕೆದಾರರ ಸ್ನೇಹಿಯಾಗಿದೆ. ದಿನೇ ದಿನೇ ತನ್ನ ಸೇವೆಯನ್ನು ಉತ್ತಮಗೊಳಿಸಿಕೊಳ್ಳುವ ಹಾದಿಯಲ್ಲಿದೆ ಎನ್ನಲಾಗಿದೆ.

ಸ್ವ್ಯಾಗಿ:

ಸ್ವ್ಯಾಗಿ:

ಇದು ಕೇವಲ ಆರು ಕಿ.ಮೀ ವ್ಯಾಪ್ತಿಯಲ್ಲಿರು ರೆಸ್ಟೋರೆಂಟ್ ಗಳಿಂದ ಮಾತ್ರವೇ ಫುಡ್ ಸಪ್ಲೇ ಮಾಡುತ್ತದೆ. ಅಲ್ಲದೇ ಸದ್ಯದ ದಿನದಲ್ಲಿ ಹೆಚ್ಚಿನ ಸದ್ದು ಮಾಡುತ್ತಿದೆ ಎನ್ನಲಾಗಿದೆ.

ನ್ಯೂಟ್ರಿ ಟೌನ್‌:

ನ್ಯೂಟ್ರಿ ಟೌನ್‌:

ಬೆಂಗಳೂರಿನಲ್ಲಿ ಹೊಸ ಮಾದರಿಯ ಸೇವೆಯನ್ನು ಶುರು ಮಾಡಲು ಮುಂದಾಗಿದೆ. ಇದು ಉತ್ತಮ ಮತ್ತು ಆರೋಗ್ಯಕರವಾದ ಆಹಾರವನ್ನು ತಲುಪಿಸುವ ಕಾರ್ಯವನ್ನು ಮಾಡಲು ಮುಂದಾಗಿದೆ. ಇಲ್ಲಿ ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟದ ಸೇವೆ ಲಭ್ಯವಿದೆ.

Most Read Articles
Best Mobiles in India

Read more about:
English summary
As you know Bengaluru is a foodies paradise and for all the foodies, online ordering and door delivery is a paradise on earth. Understanding this concept lot of start ups have come up with online line order and we foodies love the concept. to know more visit kannnada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X