ಭಾರತದಲ್ಲಿ ಬೌನ್ಸ್ ಸಂಸ್ಥೆಯ ಎಲೆಕ್ಟ್ರಿಕ್ ಸ್ಕೂಟರ್‌ ಲಾಂಚ್!..ಮೈಲೇಜ್ ಎಷ್ಟು?

|

ಬೌನ್ಸ್‌ ಕಂಪನಿಯು ತನ್ನ ಬಹುನಿರೀಕ್ಷಿತ ಬೌನ್ಸ್ ಇನ್ಫಿನಿಟಿ ಇ1 (Bounce Infinity E1) ಎಲೆಕ್ಟ್ರಿಕ್ ಸ್ಕೂಟರ್‌ (Electric Scooter)‌ ಅನ್ನು ಭಾರತದಲ್ಲಿ ಅನಾವರಣ ಮಾಡಿದೆ. ಬಿಡುಗಡೆ. ಈ ಸ್ಕೂಟರ್ ಅನ್ನು ಭಾರತದಲ್ಲಿ ತಯಾರಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷ ಎಂದರೇ ಬ್ಯಾಟರಿ ಸಹಿತ ಮತ್ತು ಬ್ಯಾಟರಿ ರಹಿತವಾಗಿ ಖರೀದಿಸುವ ಆಯ್ಕೆ ನೀಡಿರುವುದು.

ಕರ್ನಾಟಕದಲ್ಲಿ

ಹೌದು, ಬೌನ್ಸ್‌ ಸಂಸ್ಥೆಯು ಬ್ಯಾಟರಿ ಸಹಿತ ಮತ್ತು ಬ್ಯಾಟರಿ ರಹಿತ ಖರೀದಿಗೆ ಅವಕಾಶ ನೀಡಿದೆ. ಬೌನ್ಸ್ ಇನ್ಫಿನಿಟಿ ಇ1 (Bounce Infinity E1) ಎಲೆಕ್ಟ್ರಿಕ್ ಸ್ಕೂಟರ್‌ನ ಎಕ್ಸ್‌ಷೋರೂಂ ಬೆಲೆಯು ಕರ್ನಾಟಕದಲ್ಲಿ 68,999ರೂ. ಆಗಿರಲಿದೆ. ಬ್ಯಾಟರಿ ರಹಿತವಾಗಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸಿದರೇ, ಎಕ್ಸ್‌ಷೋರೂಂ ಬೆಲೆಯು 45,099ರೂ. ಆಗಿರಲಿದೆ. ಇನ್ನು ಗ್ರಾಹಕರಿಗೆ ಬ್ಯಾಟರಿಯನ್ನು ಬಾಡಿಗೆ ಆಧಾರದಲ್ಲಿ ಪಡೆದುಕೊಳ್ಳುವ ಆಯ್ಕೆ ಇರಲಿದೆ.

ಸ್ಕೂಟರ್‌

ಹಾಗೆಯೇ ಬ್ಯಾಟರಿ ಸಹಿತ ಮಾಡೆಲ್‌ ಸ್ಕೂಟರ್‌ ಅನ್ನು ಖರೀದಿಸಬಹುದಾಗಿದೆ. ಬ್ಯಾಟರಿಯನ್ನು ಸ್ಕೂಟರ್‌ನಿಂದ ಬೇರ್ಪಡಿಸಿ ಸುಲಭವಾಗಿ ಚಾರ್ಜ್ ಮಾಡಬಹುದಾಗಿದೆ. ಇನ್ನು ಈ ಸ್ಕೂಟರ್ ಪ್ರತಿ ಚಾರ್ಜಿಗೆ 85 ಕಿ.ಮೀ ವರೆಗೂ ಮೈಲೇಜ್ ಒದಗಿಸಲಿದೆ ಎಂದು ಕಂಪನಿಯು ಹೇಳಿದೆ. ಹಾಗೆಯೇ ಸ್ಕೂಟರ್ ಕೇವಲ 8 ಸೆಕೆಂಡಗಳಲ್ಲಿ ನಿಂತ ಸ್ಥಿತಿಯಿಂದ ಸುಮಾರು 45 ಕಿ.ಮೀ ವರೆಗಿನ ವೇಗ ತಲುಪುತ್ತದೆ ಎಂದು ತಿಳಿಸಿದೆ.

ಆನ್‌ಲೈನ್‌

ಬೌನ್ಸ್ ಇನ್ಫಿನಿಟಿ ಇ1 (Bounce Infinity E1) ಎಲೆಕ್ಟ್ರಿಕ್ ಸ್ಕೂಟರ್‌ನ ಖರೀದಿಸುವ ಗ್ರಾಹಕರು ಆನ್‌ಲೈನ್‌ ಮೂಲಕ ಅಥವಾ ಅಧಿಕೃತ ಡೀಲರ್ ಮೂಲಕ 499ರೂ. ಪಾವತಿಸಿ ಬುಕ್ ಮಾಡಬಹುದಾಗಿದೆ. ಮಾರ್ಚ್ ತಿಂಗಳಲ್ಲಿ ಗ್ರಾಹಕರಿಗೆ ಈ ಸ್ಕೂಟರ್ ಸಿಗಲಿದೆ ಎಂದು ಹೇಳಲಾಗಿದೆ. ಇನ್ನು ಈ ಸ್ಕೂಟರ್ ಕೆಂಪು, ಕಪ್ಪು, ಬಿಳಿ, ಸಿಲ್ವರ್ ಮತ್ತು ಬೂದು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಸ್ಪೀಡೋಮೀಟರ್

ಬೌನ್ಸ್ ಇನ್ಫಿನಿಟಿ ಇ1 ಡಿಜಿಟಲ್ ಸ್ಪೀಡೋಮೀಟರ್ ಹೊಂದಿದ್ದು, 12 ಲೀಟರ್ ಬೂಟ್ ಸ್ಪೇಸ್ ಸ್ಥಳಾವಕಾಶ ಪಡೆದಿದೆ. ಜೊತೆಗೆ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಎಲ್ಇಡಿ ಲೈಟ್‌ಗಳು, ಹೈಡ್ರಾಲಿಕ್ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳೊಂದಿಗೆ ಬರುತ್ತದೆ. ಅಲ್ಲದೇ ಈ ಸ್ಕೂಟರ್ ಅಪ್ಲಿಕೇಶನ್‌ನೊಂದಿಗೆ ಬರುತ್ತದೆ, ಇದನ್ನು ಬಳಸಿಕೊಂಡು ನೀವು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೂರದಿಂದಲೇ ಟ್ರ್ಯಾಕ್ ಮಾಡಬಹುದು.

ಮೋಡ್‌ಗಳನ್ನು

ಈ ಸ್ಕೂಟರ್ ಮೂರು ಮೋಡ್‌ಗಳನ್ನು ಹೊಂದಿರಲಿದೆ. ಅವುಗಳು ಕ್ರಮವಾಗಿ ಇಕೋ ಮೋಡ್, ಪವರ್ ಮೋಡ್, ಡ್ರ್ಯಾಗ್ ಮೋಡ್ ಮತ್ತು ರಿವರ್ಸ್ ಮೋಡ್‌ ಆಗಿವೆ. ಡ್ರ್ಯಾಗ್ ಮೋಡ್ ಬಳಕೆದಾರರಿಗೆ ವಾಕಿಂಗ್ ವೇಗದಲ್ಲಿ ಸ್ಕೂಟರ್ ಅನ್ನು ಎಳೆಯಲು ಅನುಮತಿಸುತ್ತದೆ. ರಿವರ್ಸ್ ಮೋಡ್ ಬಳಕೆದಾರರಿಗೆ ಸ್ಕೂಟರ್ ಅನ್ನು ಹಿಂದಕ್ಕೆ ಸರಿಸಲು ಅನುಮತಿಸುತ್ತದೆ. ಹಾಗೆಯೇ ಇದು 48V 39 AH ರೇಟೆಡ್ ಬ್ಯಾಟರಿಯು IP67 ಧೂಳು ಮತ್ತು ನೀರಿನ ಪ್ರತಿರೋಧದ ರೇಟಿಂಗ್‌ನೊಂದಿಗೆ ಬರುತ್ತದೆ.

ಬ್ಯಾಟರಿಯನ್ನು

ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ 85 ಕಿಮೀ ವ್ಯಾಪ್ತಿಯೊಂದಿಗೆ ಬರುತ್ತದೆ. ಈ ಸ್ಕೂಟರ್ ಸೊನ್ನೆಯಿಂದ 100 ಪ್ರತಿಶತದಷ್ಟು ಚಾರ್ಜ್ ಮಾಡಲು 5 ಗಂಟೆಗಳವರೆಗೆ ಬೇಕಾಗುತ್ತದೆ ಎಂದು ಹೇಳುತ್ತದೆ. ತೆಗೆಯಬಹುದಾದ ಬ್ಯಾಟರಿಯನ್ನು ಸ್ಕೂಟರ್‌ನಿಂದ ತೆಗೆದುಹಾಕಬಹುದು ಮತ್ತು ಮನೆ ಅಥವಾ ಕಚೇರಿಯಲ್ಲಿ ಚಾರ್ಜ್ ಮಾಡಬಹುದು.

Most Read Articles
Best Mobiles in India

English summary
Bounce Infinity E1 with removable battery launched in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X