ಕಡಿಮೆ ಬೆಲೆಯಲ್ಲಿ 100Mbps ವೇಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳ ಮಾಹಿತಿ!

|

ದೇಶದ ಬ್ರಾಡ್‌ಬ್ಯಾಂಡ್‌ ವಲಯದಲ್ಲಿ ದರ ಬದಲಾವಣೆಗಳು ನಡೆದಿದ್ದು, ಸಂಸ್ಥೆಗಳ ನಡುವೆ ಪೈಪೋಟಿ ಇದೆ. ಈ ವಲಯದಲ್ಲಿ ಬಿಎಸ್‌ಎನ್‌ಎಲ್‌, ಜಿಯೋ, ಏರ್‌ಟೆಲ್‌ ಮತ್ತು ACT ಸಂಸ್ಥೆಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಈ ಸಂಸ್ಥೆಗಳು ಹೆಚ್ಚಿನ ಗ್ರಾಹಕರಿಗೆ ಸೆಳೆಯುವ ನಿಟ್ಟಿನಲ್ಲಿ ಹಲವು ವಿಶೇಷ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ಅವುಗಳೊಂದಿಗೆ ಬಹುತೇಕ ಪ್ಲ್ಯಾನ್‌ಗಳು ಡೇಟಾ ಲಿಮಿಟ್ ರಹಿತ ಸೇವೆ ಹೊಂದಿದ್ದು, ಇನ್ನು ಕೆಲವು ಪ್ಲ್ಯಾನ್‌ಗಳು 100Mbps ವೇಗದಲ್ಲಿವೆ.

ಬ್ರಾಡ್‌ಬ್ಯಾಂಡ್‌

ಹೌದು, ಜನಪ್ರಿಯ ಬ್ರಾಡ್‌ಬ್ಯಾಂಡ್‌ ಸಂಸ್ಥೆಗಳು ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ವೇಗದ ಸೇವೆಯ ಯೋಜನೆಗಳನ್ನು ಪರಿಚಯಿಸಿವೆ. ಈ ನಿಟ್ಟಿನಲ್ಲಿ ಏರ್‌ಟೆಲ್‌, ಬಿಎಸ್‌ಎನ್‌ಎಲ್‌, ಜಿಯೋ ಹಾಗೂ ACT ಫೈಬರ್‌ನೆಟ್‌ ಹೆಚ್ಚು ಗಮನ ಸೆಳೆದಿವೆ. ಈ ಸಂಸ್ಥೆಗಳು ಆರಂಭಿಕ ಪ್ಲ್ಯಾನ್‌ ಶುಲ್ಕವು ತಿಂಗಳಿಗೆ 1,000ರೂ.ಆಸುಪಾಸಿನಲ್ಲಿದ್ದು, 100 Mbps ವೇಗದ ಡೇಟಾ ಸೇವೆಯ ಪ್ರಯೋಜನೆ ನೀಡುವುದಾಗಿ ಹೇಳಿವೆ. ಹಾಗಾದರೇ 100Mbps ವೇಗದ ಆರಂಭಿಕ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ದರಗಳೆನು ಮತ್ತು ಪ್ರಯೋಜನಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ACT ಫೈಬರ್‌ನೆಟ್‌

ACT ಫೈಬರ್‌ನೆಟ್‌

ACT ಫೈಬರ್‌ನೆಟ್‌ ಸಹ ಅಗ್ಗದ ಬ್ರಾಡ್‌ಬ್ಯಾಂಡ್‌ ಯೋಜನೆಗಳ ಆಯ್ಕೆಗಳನ್ನು ಹೊಂದಿದ್ದು, 100 Mbps ವೇಗದ ಆರಂಭಿಕ ಪ್ಲ್ಯಾನ್ 799ರೂ.ಗಳಾಗಿದೆ(ದೆಹಲಿಯಲ್ಲಿ). ಇದೇ ಪ್ಲ್ಯಾನ್‌ ಹೈದ್ರಾಬಾದನಲ್ಲಿ ಟಾಕ್ಸ್‌ ಹೊರತುಪಡಿಸಿ 1,075ರೂ. ಆಗಿದೆ. ಈ ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನಲ್ಲಿ 1000GB ಡೇಟಾ ಸೌಲಭ್ಯವು ದೊರೆಯಲಿದ್ದು, ನಿಗದಿತ ಡೇಟಾ ಬಳಕೆ ಮುಗಿತ ಬಳಿಕ FUP ವೇಗದ ಮಿತಿಯು 5 Mbps ಸಾಮರ್ಥ್ಯದಲ್ಲಿರಲಿದೆ.

ಏರ್‌ಟೆಲ್ ಬ್ರಾಡ್‌ಬ್ಯಾಂಡ್‌

ಏರ್‌ಟೆಲ್ ಬ್ರಾಡ್‌ಬ್ಯಾಂಡ್‌

ಭಾರ್ತಿ ಏರ್‌ಟೆಲ್‌ ಸಂಸ್ಥೆಯು ಹಲವು ಆಕರ್ಷಕ ಪ್ಲ್ಯಾನ್‌ಗಳನ್ನು ಗ್ರಾಹಕರಿಗೆ ನೀಡಿದ್ದು, ಅವುಗಳಲ್ಲಿ 799ರೂ. ಪ್ಲ್ಯಾನ್ ಹೆಚ್ಚು ಆಕರ್ಷಿಸಿದೆ. ಈ ಪ್ಲ್ಯಾನಿನಲ್ಲಿ 100 Mbps ವೇಗದಲ್ಲಿ ಇಂಟರ್ನೆಟ್‌ ಸೌಲಭ್ಯ ದೊರೆಯಲಿದ್ದು, ತಿಂಗಳಿಗೆ 150GB FUP ಮಿತಿ ನೀಡಲಾಗಿದೆ. ಈ ಪ್ಯಾನಿನೊಂದಿಗೆ ಏರ್‌ಟೆಲ್ ಎಕ್ಸ್‌ಟ್ರಿಮ್‌ ಸದಸ್ಯತ್ವ ದೊರೆಯಲಿದ್ದು, ಜೊತೆಗೆ ಅನಿಯಮಿತ ಉಚಿತ ಕರೆಗಳು ಪ್ರಯೋಜನ ಸಿಗಲಿದೆ.

ಬಿಎಸ್‌ಎನ್ಎಲ್ ಬ್ರಾಡ್‌ಬ್ಯಾಂಡ್

ಬಿಎಸ್‌ಎನ್ಎಲ್ ಬ್ರಾಡ್‌ಬ್ಯಾಂಡ್

ಬಿಎಸ್‌ಎನ್ಎಲ್ ಸಂಸ್ಥೆಯು ಬ್ರಾಡ್‌ಬ್ಯಾಂಡ್‌ ವಲಯದಲ್ಲಿ ಗುರುತಿಸಿಕೊಂಡಿದ್ದು, ಸಂಸ್ಥೆಯ 1277ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ 100 Mbps ವೇಗದ ಪ್ರಯೋಜನವನ್ನು ಒಳಗೊಂಡಿದೆ. ಈ ಪ್ಲ್ಯಾನಿನಲ್ಲಿ 750GB ಡೇಟಾ ಸೌಲಭ್ಯವು ದೊರೆಯಲಿದ್ದು, ಈ ನಿಗದಿತ ಡೇಟಾ ಮುಗಿದ ಬಳಿಕ 2 Mbps ಸಾಮರ್ಥ್ಯದಲ್ಲಿ ಇಂಟರ್ನೆಟ್‌ ಮುಂದುವರೆವುದು. ಅನಿಯಮಿತ ಲ್ಯಾಂಡ್‌ಲೈನ್ ಕರೆಗಳ ಪ್ರಯೋಜನ ಸಹ ಲಭ್ಯವಾಗಲಿದೆ.

ಜಿಯೋ ಬ್ರಾಡ್‌ಬ್ಯಾಂಡ್‌

ಜಿಯೋ ಬ್ರಾಡ್‌ಬ್ಯಾಂಡ್‌

ಜಿಯೋ ಸಂಸ್ಥೆಯು 100 Mbps ನಿಂದ 1 Gbps ವರೆಗಿನ ಹಲವು ಪ್ಲ್ಯಾನ್‌ಗಳ ಆಯ್ಕೆ ಹೊಂದಿದೆ. ಅವುಗಳಲ್ಲಿ ಆರಂಭಿಕ ಯೋಜನೆಯು 100mbps ವೇಗದಲ್ಲಿ ಗಮನ ಸೆಳೆದಿದೆ. ಜಿಯೋ 699ರೂ.ಗಳ ಆರಂಭಿಕ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ 100mbps ವೇಗದ ಸೌಲಭ್ಯವನ್ನು ಪಡೆದಿದ್ದು, ಒಟ್ಟು 1200GB ಡೇಟಾ ಪ್ರಯೋಜನ ಒದಗಿಸಲಿದೆ. ಇದರೊಂದಿಗೆ ಜಿಯೋದ ಇತರೆ ಪ್ರಯೋಜನಗಳು ಸಹ ಲಭ್ಯವಾಗಲಿವೆ.

Most Read Articles
Best Mobiles in India

English summary
You can get a good broadband connection from the following — Airtel Xstream Fiber, JioFiber, BSNL and ACT Fibernet.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X