ಈ ಪ್ಲ್ಯಾನ್‌ಗಳನ್ನು BSNL ಮತ್ತು Airtel ಚಂದಾದಾರರು ಗಮನಿಸಲೇಬೇಕು!

|

ದೇಶದಲ್ಲಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಮತ್ತು ಭಾರ್ತಿ ಏರ್‌ಟೆಲ್ ತಮ್ಮದೇ ಭಿನ್ನ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದಿವೆ. ಈ ಎರಡು ಟೆಲಿಕಾಂ ಕಂಪನಿಗಳು ಸ್ಥಾಪಿಸಿವೆ. ತಮ್ಮ ಚಂದಾದಾರರಿಗೆ ಭಿನ್ನ ಪ್ರೈಸ್‌ ಟ್ಯಾಗ್‌ನಲ್ಲಿ 4G ಡೇಟಾ ಯೋಜನೆಗಳ ಆಯ್ಕೆ ನೀಡಿವೆ. ಬಿಎಸ್‌ಎನ್‌ಎಲ್‌ ಪ್ಯಾನ್ ಇಂಡಿಯಾ 4G ಕನೆಕ್ಷನ್ ಹೊಂದಿಲ್ಲವಾದರೂ, ಅದಾಗ್ಯೂ ಸಂಸ್ಥೆಯ ಯೋಜನೆಗಳು 4G ನೆಟ್‌ವರ್ಕ್‌ಗಳ ಅಡಿಯಲ್ಲಿ ಕೆಲಸ ಮಾಡುತ್ತವೆ. ಅದೇ ರೀತಿ ಏರ್‌ಟೆಲ್‌ ಟೆಲಿಕಾಂ ಸಹ 4G ಡೇಟಾ ಯೋಜನೆಗಳ ಆಯ್ಕೆ ಹೊಂದಿದೆ.

ಈ ಪ್ಲ್ಯಾನ್‌ಗಳನ್ನು BSNL ಮತ್ತು Airtel ಚಂದಾದಾರರು ಗಮನಿಸಲೇಬೇಕು!

ಬಿಎಸ್‌ಎನ್‌ಎಲ್‌ ಮತ್ತು ಏರ್‌ಟೆಲ್‌ ಟೆಲಿಕಾಂಗಳು ಹಲವು ಅತ್ಯುತ್ತಮ ಪ್ರೀಪೇಯ್ಡ್‌ ಯೋಜನೆಗಳನ್ನು ಒಳಗೊಂಡಿವೆ. ಸಂಸ್ಥೆಗಳ ಬಹುತೇಕ ಯೋಜನೆಗಳು ಅನಿಯಮಿತ ವಾಯಿಸ್ ಕರೆ, ದೈನಂದಿನ ಡೇಟಾ ಪ್ರಯೋಜನ ಪಡೆದಿವೆ. ಅದರೊಂದಿಗೆ 4G ಡೇಟಾ ವೋಚರ್‌ ಆಯ್ಕೆಗಳನ್ನು ಗ್ರಾಹಕರಿಗೆ ನೀಡಿವೆ. ಸದ್ಯ (ಅಕ್ಟೋಬರ್ 2021) ರೀಚಾರ್ಜ್‌ ಮಾಡಿಸಬಹುದಾದ 4G ಡೇಟಾ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್‌ಎಲ್‌ 251ರೂ. ಡೇಟಾ ವೋಚರ್‌
ಬಿಎಸ್‌ಎನ್‌ಎಲ್‌ನ ಈ ಹೊಸ ಡೇಟಾ ವೋಚರ್‌ ಸಹ (STV DATA251) ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಆದರೆ ಈ ಅವಧಿಯಲ್ಲಿ ಒಟ್ಟು 70GB ಡೇಟಾ ಸೌಲಭ್ಯವನ್ನು ಒದಗಿಸಲಿದೆ.

ಬಿಎಸ್‌ಎನ್‌ಎಲ್‌ 151ರೂ. ಡೇಟಾ ವೋಚರ್‌
ಬಿಎಸ್‌ಎನ್‌ಎಲ್‌ನ ಈ ಹೊಸ ಡೇಟಾ ವೋಚರ್‌ (STV DATA151) ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಈ ಅವಧಿಯಲ್ಲಿ ಒಟ್ಟು 40GB ಡೇಟಾ ಸೌಲಭ್ಯವನ್ನು ಒದಗಿಸಲಿದೆ.

ಈ ಪ್ಲ್ಯಾನ್‌ಗಳನ್ನು BSNL ಮತ್ತು Airtel ಚಂದಾದಾರರು ಗಮನಿಸಲೇಬೇಕು!

ಬಿಎಸ್‌ಎನ್‌ಎಲ್‌ 398ರೂ.ಗಳ ಪ್ಲ್ಯಾನ್‌
ಬಿಎಸ್‌ಎನ್‌ಎಲ್‌ 398ರೂ.ಗಳ ಪ್ರಿಪೇಯ್ಡ್‌ ಪ್ಲ್ಯಾನ್‌ ದಿನನಿತ್ಯ ಅನಿಯಮಿತ ಡೇಟಾ ಜೊತೆಗೆ ಅನಿಯಮಿತ ಕರೆ ಸೌಲಭ್ಯ ಪಡೆದುಕೊಂಡಿದೆ. ಇದು 30 ದಿನಗಳ ಮಾನ್ಯತೆ ಹೊಂದಿದೆ. ಮುಂಬೈ ಮತ್ತು ದೆಹಲಿಯ ಎಂಟಿಎನ್ಎಲ್ ಪ್ರದೇಶಗಳು ಸೇರಿದಂತೆ ದಿನಕ್ಕೆ 100 ಎಸ್‌ಎಂಎಸ್‌ ಸೌಲಭ್ಯ ಪಡೆದಿದೆ.

ಏರ್‌ಟೆಲ್‌ 251ರೂ. ಡೇಟಾ ಪ್ಲ್ಯಾನ್‌
ಏರ್‌ಟೆಲ್‌ ಸಂಸ್ಥೆಯ ಈ ಡೇಟಾ ಯೋಜನೆಯಲ್ಲಿ ಒಟ್ಟು 50GB ಡೇಟಾ ಸಿಗಲಿದೆ. ವರ್ಕ್ ಫ್ರಂ ಹೋಮ್ ಕೆಲಸಕ್ಕೆ ಅನುಕೂಲವಾಗಲೆಂದು ಕಂಪನಿಯು ಈ ಯೋಜನೆಯನ್ನು ಪರಿಚಯಿಸಿತ್ತು. ಇನ್ನು ಮೂಲ ಪ್ಲ್ಯಾನಿನ ವ್ಯಾಲಿಡಿಯೇ ಈ ಯೋಜನೆಯಲ್ಲಿ ಮುಂದುವರೆಯಲಿದೆ.

ಏರ್‌ಟೆಲ್ 98ರೂ. ಡೇಟಾ ಪ್ಲ್ಯಾನ್
ಏರ್‌ಟೆಲ್‌ನ ಈ ಪ್ಲ್ಯಾನ್ ಒಟ್ಟು 12GB ಉಚಿತ ಡೇಟಾವನ್ನು ಒಳಗೊಂಡಿದ್ದು, 3G ಅಥವಾ 4G ನೆಟ್‌ವರ್ಕ್‌ನಲ್ಲಿ ಡೇಟಾ ಬಳಸಬಹುದಾಗಿದೆ. ಇದು ಸಹ 28 ದಿನಗಳ ವ್ಯಾಲಿಡಿಟಿಯಲ್ಲಿ ದೊರೆಯಲಿದ್ದು, ಪ್ರತಿ ದಿನ 10 ಉಚಿತ ಎಸ್‌ಎಮ್‌ಎಸ್‌ ಮಾಡಬಹುದಾಗಿದೆ. ಕಂಪನಿಯ ಪ್ರೀಪೇಡ್‌ ಬಳಕೆದಾರರು ಈ ರೀಚಾರ್ಜ್‌ನ ಪ್ರಯೋಜನ ಪಡೆಯಬಹುದಾಗಿದೆ.

ಏರ್‌ಟೆಲ್ 89ರೂ. ಡೇಟಾ ಪ್ಲ್ಯಾನ್
ಏರ್‌ಟೆಲ್‌ನ ಈ ಪ್ಯಾಕ್‌ನಲ್ಲಿ ಬಳಕೆದಾರರಿಗೆ 6GB ಡೇಟಾ ಲಭ್ಯವಾಗಲಿದ್ದು, ಇದರೊಂದಿಗೆ ಅಸ್ತಿತ್ವದಲ್ಲಿರುವ ಯಾವುದೇ ಏರ್‌ಟೆಲ್‌ ಪ್ರೀಪೇಯ್ಡ್‌ ಯೋಜನೆ ವ್ಯಾಲಿಡಿಟಿಯೇ ಹೊಂದಿದೆ. 28 ದಿನಗಳ ಅವಧಿಗೆ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯ ಚಂದಾದಾರಿಗೆ ಹಾಗೂ ಉಚಿತ ಹೆಲೋಟೂನ್ಸ್ ಮತ್ತು ಏರ್ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್ ಸದಸ್ಯತ್ವ ಲಭ್ಯ.

ಈ ಪ್ಲ್ಯಾನ್‌ಗಳನ್ನು BSNL ಮತ್ತು Airtel ಚಂದಾದಾರರು ಗಮನಿಸಲೇಬೇಕು!

ಏರ್‌ಟೆಲ್‌ 558ರೂ. ಪ್ರೀಪೇಯ್ಡ್‌ ಪ್ಲ್ಯಾನ್‌
ಏರ್‌ಟೆಲ್‌ನ ಜನಪ್ರಿಯ ಪ್ರೀಪೇಡ್‌ ಪ್ಯಾನ್‌ಗಳಲ್ಲಿ ಒಂದಾಗಿರುವ 558ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್‌ ಇಲ್ಲದೇ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.

ಏರ್‌ಟೆಲ್‌ 448ರೂ. ಪ್ರೀಪೇಯ್ಡ್‌ ಪ್ಲ್ಯಾನ್‌
ಏರ್‌ಟೆಲ್‌ನ 448ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್‌ ಇಲ್ಲದೇ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ.

Most Read Articles
Best Mobiles in India

English summary
BSNL And Airtel Affordable 4G Data Plans For October 2021.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X