700ರೂ. ಒಳಗಿನ ಏರ್‌ಟೆಲ್‌ ಮತ್ತು ಬಿಎಸ್‌ಎನ್‌ಎಲ್‌ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳು!

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ ಫೋನ್‌ ಸೇರಿದಂತೆ ಇತರೆ ಸ್ಮಾರ್ಟ್‌ ಡಿವೈಸ್‌ಗಳು ಇಂಟರ್‌ನೆಟ್‌ ಸಂಪರ್ಕ ಬೇಡುತ್ತವೆ. ಈ ನಿಟ್ಟಿನಲ್ಲಿ ಸ್ಥಿರ ಇಂಟರ್ನೆಟ್ ಸಂಪರ್ಕಕ್ಕಾಗಿ ಬಹುತೇಕ ಬಳಕೆದಾರರು ಬ್ರಾಡ್‌ಬ್ಯಾಂಡ್‌ ಸಂಪರ್ಕ ಹೊಂದಲು ಮುಂದಾಗುತ್ತಾರೆ. ಇನ್ನು ಏರ್‌ಟೆಲ್‌, ಟಾಟಾಸ್ಕೈ, ಜಿಯೋಫೈಬರ್, ಎಸಿಟಿ ಸೇರಿದಂತೆ ಇತರೆ ಸಂಸ್ಥೆಗಳು ಭಿನ್ನ ವೇಗದಲ್ಲಿ ಹಾಗೂ ಭಿನ್ನ ಬೆಲೆಯಲ್ಲಿ ಬ್ರಾಡ್‌ಬ್ಯಾಂಡ್‌ ಪೂರೈಸುತ್ತವೆ. ಆ ಪೈಕಿ ಬಜೆಟ್‌ ದರದಲ್ಲಿ ಲಭ್ಯ ಇರುವ ಯೋಜನೆಗಳು ಆಕರ್ಷಕ ಎನಿಸುತ್ತವೆ.

ತಡೆರಹಿತ

ಹೌದು, ಸದ್ಯ ಕಛೇರಿ ಹಾಗೂ ಮನೆಗಳಲ್ಲಿ ಬ್ರಾಂಡ್‌ಬ್ಯಾಂಡ್‌ ಸಂಪರ್ಕ ಇತ್ತೀಚಿನ ದಿನಗಳಲ್ಲಿ ಅಗತ್ಯ ಎನಿಸಿದೆ. ತಡೆರಹಿತ ಇಂಟರ್‌ನೆಟ್‌ ಸಂಪರ್ಕವನ್ನು ನೀಡುವಲ್ಲಿ ಬ್ರಾಂಡ್‌ಬ್ಯಾಂಡ್‌ ಸಂಸ್ಥೆಗಳು ಪ್ರಮುಖ ಎನಿಸಿಕೊಂಡಿವೆ. ಇನ್ನು ಗ್ರಾಹಕರು ಅಗ್ಗದ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಯೋಜನೆಗಳತ್ತ ಗಮನ ನೀಡುತ್ತಾರೆ. ಈ ನಿಟ್ಟಿನಲ್ಲಿ ಕಂಪನಿಗಳು ಸಹ ಆಕರ್ಷಕ ದರದಲ್ಲಿ ಬ್ರಾಡ್‌ಬ್ಯಾಂಡ್‌ ಯೋಜನೆಗಳ ಆಯ್ಕೆ ಗ್ರಾಹಕರಿಗೆ ನೀಡಿವೆ. ಆ ಪೈಕಿ ಏರ್‌ಟೆಲ್‌ ಮತ್ತು ಬಿಎಸ್‌ಎನ್‌ಎಲ್‌ನ 700ರೂ. ಒಳಗೆ ಲಭ್ಯ ಇರುವ ಕೆಲವು ಯೋಜನೆಗಳು ಉತ್ತಮ ಎನಿಸಿವೆ. ಹಾಗಾದರೇ 700ರೂ. ಒಳಗೆ ಲಭ್ಯ ಇರುವ ಏರ್‌ಟೆಲ್‌ ಮತ್ತು ಬಿಎಸ್‌ಎನ್‌ಎಲ್‌ ಬ್ರಾಡ್‌ಬ್ಯಾಂಡ್‌ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್‌ ಎಕ್ಸ್‌ಟ್ರಿಮ್ ಫೈಬರ್ 499ರೂ. ಪ್ಲ್ಯಾನ್‌

ಏರ್‌ಟೆಲ್‌ ಎಕ್ಸ್‌ಟ್ರಿಮ್ ಫೈಬರ್ 499ರೂ. ಪ್ಲ್ಯಾನ್‌

ಏರ್‌ಟೆಲ್‌ 499ರೂ. ಪ್ಲ್ಯಾನ್‌ ಸಂಸ್ಥೆಯ ಬೇಸಿಕ್ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಅನಿಯಮಿತ ಇಂಟರ್ನೆಟ್ ಸೌಲಭ್ಯ ಒದಗಿಸಲಾಗಿದೆ. ಹಾಗೆಯೇ ಈ ಯೋಜನೆಯು 40 Mbps ವೇಗವನ್ನು ನೀಡುತ್ತದೆ. ಇದು ಗೃಹ ಬಳಕೆದಾರರಿಗೆ ಅಥವಾ ವೈಯಕ್ತಿಕ ಬಳಕೆದಾರರಿಗೆ ಸೂಕ್ತವಾಗಿದೆ. ಇದರೊಂದಿಗೆ ಉಚಿತ ಮ್ಯೂಸಿಕ್ ಮತ್ತು ಶಾ ಅಕಾಡೆಮಿಗೆ ಚಂದಾದಾರಿಕೆಯನ್ನು ಒಳಗೊಂಡಿದೆ.

ಬಿಎಸ್‌ಎನ್‌ಎಲ್‌ 499ರೂ. ಭಾರತ್ ಫೈಬರ್ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 499ರೂ. ಭಾರತ್ ಫೈಬರ್ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 499ರೂ.ಗಳ ಭಾರತ ಫೈಬರ್‌ ಪ್ಲ್ಯಾನ್‌ ಒಂದು ಅಗ್ಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಆಗಿದೆ. 3.3TB ಡೇಟಾ ಬಳಕೆಯ ವರೆಗೂ 30 Mbps ವೇಗದಲ್ಲಿ ಇಂಟರ್ನೆಟ್ ಸೌಲಭ್ಯವು ಇರುತ್ತದೆ. ನಿಗದಿತ ಡೇಟಾ ಮಿತಿ ಮುಗಿದ ಬಳಿಕ 2 Mbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯುತ್ತದೆ. ಇದರೊಂದಿಗೆ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯಿಸ್‌ ಕರೆ ಪ್ರಯೋಜನ ಲಭ್ಯ.

ಬಿಎಸ್‌ಎನ್‌ಎಲ್‌ 555ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 555ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಸಂಸ್ಥೆಯ ಬೇಸಿಕ್ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಇದಾಗಿದ್ದು, ಈ ಪ್ಲ್ಯಾನಿನಲ್ಲಿ ಒಟ್ಟು 100GB ಡೇಟಾ ಸಿಗಲಿದೆ. 20 Mbps ವೇಗದ ಸಾಮರ್ಥ್ಯದಲ್ಲಿರಲಿದ್ದು, ಪ್ರತಿದಿನ ಯಾವುದೇ ಮಿತಿ ಇಲ್ಲದೇ ಡೇಟಾ ಬಳಕೆ ಮಾಡಬಹುದಾಗಿದೆ. ತಿಂಗಳ ಮಿತಿ 100GB ಡೇಟಾ ಮುಗಿದ ಬಳಿಕ 1 Mbps ವೇಗದಲ್ಲಿ ಡೇಟಾ ಸೌಲಭ್ಯವು ಲಭ್ಯವಾಗಲಿದೆ. ಬಿಎಸ್‌ಎನ್‌ಎಲ್‌ ಕರೆಗಳು ಉಚಿತವಾಗಿವೆ.

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ 799ರೂ. ಬ್ರಾಡ್‌ಬ್ಯಾಂಡ್‌ ಪ್ಲಾನ್‌

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ 799ರೂ. ಬ್ರಾಡ್‌ಬ್ಯಾಂಡ್‌ ಪ್ಲಾನ್‌

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ 799ರೂ. ಪ್ಲಾನ್‌ ಅನಿಯಮಿತ ವಾಯ್ಸ್‌ ಕಾಲ್‌ ಪ್ರಯೋಜನ ನೀಡಲಿದೆ. ಜೊತೆಗೆ ತಿಂಗಳಿಗೆ 100Mbps ವೇಗದ ಅನಿಯಮಿತ ಡೇಟಾ ಪ್ರಯೋಜನವನ್ನು ನೀಡಲಿದೆ. ಇದು ಏರ್‌ಟೆಲ್ ಎಕ್ಸ್‌ಸ್ಟ್ರೀಮ್, ವಿಂಕ್ ಮ್ಯೂಸಿಕ್ ಮತ್ತು ಶಾ ಅಕಾಡೆಮಿಗೆ ಪ್ರವೇಶವನ್ನು ಸಹ ಒದಗಿಸುತ್ತದೆ.

ಬಿಎಸ್‌ಎನ್‌ಎಲ್‌ 777ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 777ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಸಂಸ್ಥೆಯ ಈ 777ರೂ.ಪ್ಲ್ಯಾನ್‌ ಒಂದು ತಿಂಗಳಿನಲ್ಲಿ 500GB ಡೇಟಾ ಸಿಗಲಿದೆ. ಡೇಟಾ ವೇಗದ ಮಿತಿಯು 50 Mbps ಸಾಮರ್ಥ್ಯದಲ್ಲಿರಲಿದ್ದು, ತಿಂಗಳ ನಿಗದಿತ ಡೇಟಾ ಬಳಕೆ ಮುಗಿದ ಬಳಿಕ 2Mbps ವೇಗದಲ್ಲಿ ಡೇಟಾ ಸೌಲಭ್ಯ ಮುಂದವರೆಯಲಿದೆ. ಈ ಪ್ಲ್ಯಾನಿನಲ್ಲಿಯೂ ಸಹ ಹೆಚ್ಚುವರಿಯಾಗಿ ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ದೊರೆಯಲಿದೆ.

Most Read Articles
Best Mobiles in India

English summary
BSNL and Airtel Broadband Plans Under Rs 700: Benefits.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X