ಬಿಎಸ್‌ಎನ್‌ಎಲ್‌ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಈಗ ಭರ್ಜರಿ ಕೊಡುಗೆ!.ಏನದು?

|

ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಟೆಲಿಕಾಂ ಗೂಗಲ್ ಬಂಡಲ್ ಆಫರ್‌ ಅನ್ನು ಪ್ರಚಾರದ ಅವಧಿಗೆ ಮತ್ತೆ ಪರಿಚಯಿಸಿದೆ. ಈ ಕೊಡುಗೆಯಲ್ಲಿ ಬಿಎಸ್ಎನ್ಎಲ್ ಭಾರತ್ ಫೈಬರ್ ಬಳಕೆದಾರರು ಗೂಗಲ್ ನೆಸ್ಟ್ ಮತ್ತು ಗೂಗಲ್ ಮಿನಿ ಸ್ಮಾರ್ಟ್ ಡಿವೈಸ್‌ಗಳನ್ನು ರಿಯಾಯಿತಿ ದರದಲ್ಲಿ ಪಡೆಯಬಹುದಾಗಿದೆ. ಈ ಕೊಡುಗೆಯು ಮ್ಯೂಸಿಕ್ ಪ್ರಿಯ ಬಳಕೆದಾರರನ್ನು ಆಕರ್ಷಿಸಲಿದೆ.

ಭಾರತ್

ಹೌದು, ಬಿಎಸ್‌ಎನ್‌ಎಲ್‌ ನ ಈ ಕೊಡುಗೆಯಲ್ಲಿ ಭಾರತ್ ಫೈಬರ್ ಬಳಕೆದಾರರಿಗೆ ಗೂಗಲ್ ನೆಸ್ಟ್ ಮತ್ತು ಗೂಗಲ್ ಮಿನಿ ಸ್ಮಾರ್ಟ್ ಡಿವೈಸ್‌ಗಳು ಡಿಸ್ಕೌಂಟ್‌ ಬೆಲೆಯಲ್ಲಿ ಲಭ್ಯವಾಗಲಿವೆ. ಈ ಯೋಜನೆಯು 90 ದಿನಗಳ ಅವಧಿಯದ್ದಾಗಿದ್ದು, ಇದೇ ಜುಲೈ 14, 2021ರ ವರೆಗೂ ಚಾಲ್ತಿ ಇರಲಿದೆ ಎನ್ನಲಾಗಿದೆ. ವಾರ್ಷಿಕ ಬ್ರಾಡ್‌ಬ್ಯಾಂಡ್ - FTTH, ಏರ್‌ಫೈಬ್ರೆ ಅಥವಾ ಡಿಎಸ್‌ಎಲ್-DSL ಯೋಜನೆಗಳಿಗಾಗಿ ಕನಿಷ್ಠ 799ರೂ ಮತ್ತು ಅದಕ್ಕಿಂತ ಹೆಚ್ಚಿನ ಮಾಸಿಕ ವೆಚ್ಚವನ್ನು ಪಾವತಿಸುವ ಗ್ರಾಹಕರು ಈ ಕೊಡುಗೆಯನ್ನು ಪಡೆಯಬಹುದು. ಈ ರಿಯಾಯಿತಿ ಕೊಡುಗೆಯ ಭಾಗವಾಗಿ, ವಾರ್ಷಿಕ ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಚಂದಾದಾರರು ಗೂಗಲ್ ನೆಸ್ಟ್ ಮಿನಿ ಮತ್ತು ಗೂಗಲ್ ನೆಸ್ಟ್ ಹಬ್ ಸ್ಮಾರ್ಟ್ ಸಾಧನಗಳನ್ನು ಮಾಸಿಕ 99 ಮತ್ತು 199 ರೂ. ಗಳ ಶುಲ್ಕದಲ್ಲಿ ಪಡೆಯುತ್ತಾರೆ.

ಮುಂಚಿತವಾಗಿ

ಅರ್ಹ ಚಂದಾದಾರರು ವಾರ್ಷಿಕ, ದ್ವೈವಾರ್ಷಿಕ, ತ್ರೈಮಾಸಿಕ ಯೋಜನೆ ಚಂದಾದಾರಿಕೆ ಶುಲ್ಕವನ್ನು ಮುಂಚಿತವಾಗಿ ಪಾವತಿಸುವ ಮೂಲಕ ಮಾತ್ರ ಬಿಎಸ್‌ಎನ್‌ಎಲ್ ಆನ್‌ಲೈನ್ ಪೋರ್ಟಲ್ ಮೂಲಕ ಬಂಡಲ್‌ಗೆ ಚಂದಾದಾರರಾಗಬಹುದು. ವಾರ್ಷಿಕ, ದ್ವೈವಾರ್ಷಿಕ ಮತ್ತು ತ್ರೈಮಾಸಿಕ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಆರಿಸಿಕೊಳ್ಳುವ ಬಿಎಸ್‌ಎನ್‌ಎಲ್ ಚಂದಾದಾರರು ಕ್ರಮವಾಗಿ 10.5 ತಿಂಗಳು, 20.5 ತಿಂಗಳು ಮತ್ತು 30.5 ತಿಂಗಳುಗಳನ್ನು ಒಂದು-ಬಾರಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.

ಬ್ರಾಡ್‌ಬ್ಯಾಂಡ್

ಪ್ರತ್ಯೇಕವಾಗಿ ಗೂಗಲ್ ನೆಸ್ಟ್ ಮಿನಿ ಬೆಲೆ 4999ರೂ. ಆಗಿದೆ. ಅರ್ಹ ಬಿಎಸ್ಎನ್ಎಲ್ ಭಾರತ್ ಫೈಬರ್ ಯೋಜನೆಗಳೊಂದಿಗೆ, 13 ತಿಂಗಳವರೆಗೆ ಚಂದಾದಾರರಾದಾಗ 1287ರೂ. ಲಭ್ಯ. ಅಂದರೆ ತಿಂಗಳಿಗೆ 99ರೂ. ಅದೇ 12 ತಿಂಗಳ ಕಾಲ ಬಿಎಸ್‌ಎನ್‌ಎಲ್‌ನ ಬ್ರಾಡ್‌ಬ್ಯಾಂಡ್ ಯೋಜನೆಗಳಿಗೆ ಚಂದಾದಾರರಾಗಲು ಬಯಸುವ ಬಳಕೆದಾರರಿಗೆ, ಗೂಗಲ್ ನೆಸ್ಟ್ ಮಿನಿ ವೆಚ್ಚ 1188ರೂ. ಆಗಿದೆ.

ಗೂಗಲ್

ಬಳಕೆದಾರರು ತಮ್ಮ ಬ್ರಾಡ್‌ಬ್ಯಾಂಡ್ ಯೋಜನೆಗಳ ವಾರ್ಷಿಕ ಚಂದಾದಾರಿಕೆ ಮತ್ತು ಗೂಗಲ್ ನೆಸ್ಟ್ ಮಿನಿ ಯ ವಾರ್ಷಿಕ ಚಂದಾದಾರಿಕೆಯನ್ನು ಪಾವತಿಸಬೇಕಾಗುತ್ತದೆ. ಗೂಗಲ್ ನೆಸ್ಟ್ ಮಿನಿ ಬಳಕೆದಾರರಿಗೆ ತಮ್ಮ ಮನೆಗಳ ಸುತ್ತ ಹ್ಯಾಂಡ್ಸ್-ಫ್ರೀ ಸಹಾಯವನ್ನು ನೀಡುತ್ತದೆ ಮತ್ತು ಸಂಗೀತವನ್ನು ನುಡಿಸಲು ಮತ್ತು ಗೂಗಲ್ ಮಿನಿ ಯಲ್ಲಿ ಆಡಿಯೊಬುಕ್‌ಗಳನ್ನು ಕೇಳಲು ಬಳಸಬಹುದು. ಹಾಗಾದರೇ ಬಿಎಸ್‌ಎನ್‌ಎಲ್‌ ಜನಪ್ರಿಯ ಬ್ರಾಡ್‌ಬ್ಯಾಂಡ್‌ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್‌ಎಲ್‌-777ರೂ. ಬ್ರಾಡ್‌ಬ್ಯಾಂಡ್ ಪ್ಲ್ಯಾನ್

ಬಿಎಸ್‌ಎನ್‌ಎಲ್‌-777ರೂ. ಬ್ರಾಡ್‌ಬ್ಯಾಂಡ್ ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಸಂಸ್ಥೆಯ ಈ 777ರೂ.ಪ್ಲ್ಯಾನ್‌ ಒಂದು ತಿಂಗಳಿನಲ್ಲಿ 500GB ಡೇಟಾ ಸಿಗಲಿದೆ. ಡೇಟಾ ವೇಗದ ಮಿತಿಯು 50 Mbps ಸಾಮರ್ಥ್ಯದಲ್ಲಿರಲಿದ್ದು, ತಿಂಗಳ ನಿಗದಿತ ಡೇಟಾ ಬಳಕೆ ಮುಗಿದ ಬಳಿಕ 2Mbps ವೇಗದಲ್ಲಿ ಡೇಟಾ ಸೌಲಭ್ಯ ಮುಂದವರೆಯಲಿದೆ. ಈ ಪ್ಲ್ಯಾನಿನಲ್ಲಿಯೂ ಸಹ ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ದೊರೆಯಲಿದೆ.

ಬಿಎಸ್‌ಎನ್‌ಎಲ್‌-849ರೂ. ಬ್ರಾಡ್‌ಬ್ಯಾಂಡ್ ಪ್ಲ್ಯಾನ್

ಬಿಎಸ್‌ಎನ್‌ಎಲ್‌-849ರೂ. ಬ್ರಾಡ್‌ಬ್ಯಾಂಡ್ ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಈ ಬ್ರಾಡ್‌ಬಾಂಡ್‌ ಪ್ಲ್ಯಾನಿನಲ್ಲಿ ಒಂದು ತಿಂಗಳಿಗೆ ಒಟ್ಟು 600GB ಡೇಟಾ ಮಿತಿಯನ್ನು ನೀಡಲಾಗಿದ್ದು, ಯಾವುದೇ ದೈನಂದಿನ FUP ಮಿತಿ ಇರುವುದಿಲ್ಲ. ಈ ಪ್ಲ್ಯಾನ್‌ನಲ್ಲಿ ಡೇಟಾ ವೇಗವು 50 Mbps ಸಾಮರ್ಥ್ಯದಲ್ಲಿರಲಿದ್ದು, ಇತರೆ ನೆಟವರ್ಕ್‌ಗಳಿಗೆ ಅನಿಯಮಿತ ಉಚಿತ ಕರೆಗಳ ಸೌಲಬ್ಯವನ್ನು ಪಡೆದಿದೆ. ಇದರೊಂದಿಗೆ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ದೊರೆಯಲಿದೆ.

Most Read Articles
Best Mobiles in India

English summary
The telco is giving Google Nest Mini and Google Nest Hub for Rs 99 and Rs 199 a month with annual broadband plans.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X