Just In
Don't Miss
- News
ಡ್ರಗ್ಸ್ ಪ್ರಕರಣ: ಜೈಲಿನಲ್ಲಿ ಜೀವಕ್ಕೆ ಬೆದರಿಕೆ ಇದೆ ಎಂದು ಬಿಜೆಪಿ ಯುವ ನಾಯಕಿ ಪಮೇಲಾ ಆರೋಪ
- Movies
ಶಮಂತ್ಗೆ ಸಿಕ್ತು ಬಂಪರ್: ಎರಡನೇ ವಾರವೂ ಬ್ರೋ ಗೌಡ ಸೇಫ್
- Automobiles
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
- Lifestyle
ಬೆಡ್ನಲ್ಲಿ ಪುರುಷರ ಸಾಮರ್ಥ್ಯ ಹೆಚ್ಚಿಸುತ್ತೆ ಈ ಕೆಗೆಲ್ ವ್ಯಾಯಾಮ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಎಸ್ಎನ್ಎಲ್ನ ಬಜೆಟ್ ಬೆಲೆಯ ಬ್ರಾಡ್ಬ್ಯಾಂಡ್ ಪ್ಲ್ಯಾನ್ಗಳ ಲಿಸ್ಟ್ ಇಲ್ಲಿದೆ!
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಭಾರತದ ಪ್ರಮುಖ ವೈರ್ಡ್ ಬ್ರಾಡ್ಬ್ಯಾಂಡ್ ಸೇವಾ ಪೂರೈಕೆದಾರ ಸಂಸ್ಥೆಗಳಲ್ಲಿ ಒಂದಾಗಿದೆ. ಫೈಬರ್-ಟು-ದಿ-ಹೋಮ್ ಮತ್ತು DSL ಸೇವೆಗಳನ್ನು ಒದಗಿಸುವ ಇಂಟರ್ನೆಟ್ ಸೇವಾ ಪೂರೈಕೆದಾರ (ಐಎಸ್ಪಿ) ಇದೀಗ ಏಳು ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆಯು ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಬ್ರಾಡ್ಬ್ಯಾಂಡ್ ಪ್ಲ್ಯಾನ್ಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ.

ಹೌದು, ಚಂದಾದಾರರನ್ನು ಹೆಚ್ಚಿಸಿಕೊಳ್ಳಲು ಬಿಎಸ್ಎನ್ಎಲ್ 2020ರ ಅಕ್ಟೋಬರ್ನಲ್ಲಿ ಆಕರ್ಷಕ ಬೆಲೆಯ ಬ್ರಾಡ್ಬ್ಯಾಂಡ್ ಯೋಜನೆಗಳನ್ನು ಪರಿಚಯಿಸಿತ್ತು. ಅದೇ ಯೋಜನೆಗಳನ್ನು ಕಂಪನಿಯು ಇತ್ತೀಚೆಗೆ ಇನ್ನೂ 90 ದಿನಗಳವರೆಗೆ ವಿಸ್ತರಿಸಿದೆ. ಪ್ರಸಕ್ತ ವರ್ಷ 2021ರಲ್ಲಿ ಬಿಎಸ್ಎನ್ಎಲ್ನಲ್ಲಿ ಬಳಕೆದಾರರು ಆಯ್ಕೆ ಮಾಡಬಹುದಾದ ಉತ್ತಮ ಬ್ರಾಡ್ಬ್ಯಾಂಡ್ ಯೋಜನೆಯಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಬಿಎಸ್ಎನ್ಎಲ್ 499ರೂ.ಗಳ ಬ್ರಾಡ್ಬ್ಯಾಂಡ್ ಪ್ಲ್ಯಾನ್
ಬಿಎಸ್ಎನ್ಎಲ್ 499ರೂ.ಗಳ ಭಾರತ ಫೈಬರ್ ಪ್ಲ್ಯಾನ್ ಒಂದು ಅಗ್ಗದ ಬ್ರಾಡ್ಬ್ಯಾಂಡ್ ಪ್ಲ್ಯಾನ್ ಆಗಿದೆ. ಚಂದಾದಾರರಿಗೆ ಈ ಪ್ಲ್ಯಾನ್ನಲ್ಲಿ ತಿಂಗಳಿಗೆ 100GB ಡೇಟಾ ಸೌಲಭ್ಯವು FUP ಮಿತಿ ಇರುತ್ತದೆ. 20 Mbps ವೇಗದಲ್ಲಿ ಇಂಟರ್ನೆಟ್ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನವು ಲಭ್ಯವಿದೆ. ನಿಗದಿತ ಡೇಟಾ ಮಿತಿ ಮುಗಿದ ಬಳಿಕ 2 Mbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯುತ್ತದೆ.

ಬಿಎಸ್ಎನ್ಎಲ್ 599ರೂ.ಗಳ ಬ್ರಾಡ್ಬ್ಯಾಂಡ್ ಪ್ಲ್ಯಾನ್
ಬಿಎಸ್ಎನ್ಎಲ್ನ ಈ ಫೈಬರ್ ಬೇಸಿಕ್ ಪ್ಲಸ್ ಬ್ರಾಡ್ಬ್ಯಾಂಡ್ ಯೋಜನೆ 3300GB ವರೆಗೆ 60 Mbps ವೇಗವನ್ನು ನೀಡುತ್ತದೆ. ಆದಾಗ್ಯೂ, ISP ಯೋಜನೆಯನ್ನು ಪ್ರತಿಸ್ಪರ್ಧಿ ಬ್ರಾಡ್ಬ್ಯಾಂಡ್ ಆಪರೇಟರ್ಗಳಂತೆಯೇ ಅನಿಯಮಿತ ಡೇಟಾ ಯೋಜನೆ ನೀಡಿದೆ. ಬಳಕೆದಾರರು ಮಾಸಿಕ FUP ಮಿತಿಯನ್ನು ಖಾಲಿ ಮಾಡಿದ ನಂತರ, ವೇಗವನ್ನು 2 Mbpsಗೆ ಇಳಿಸಲಾಗುತ್ತದೆ.

ಬಿಎಸ್ಎನ್ಎಲ್ 777ರೂ. ಬ್ರಾಡ್ಬ್ಯಾಂಡ್ ಪ್ಲ್ಯಾನ್
ಬಿಎಸ್ಎನ್ಎಲ್ನ 777ರೂ. ಬ್ರಾಡ್ಬ್ಯಾಂಡ್ ಯೋಜನೆಯಲ್ಲಿ ಗ್ರಾಹಕರಿಗೆ 50mbps ವೇಗದಲ್ಲಿ 500GB ಡೇಟಾ ಲಭ್ಯವಾಗಲಿದೆ. ನಿಗದಿಪಡಿಸಿದ 500GB ಡೇಟಾ ಬಳಕೆ ಮುಗಿದ ಬಳಿಕ 5 mbps ವೇಗದಲ್ಲಿ ಇಂಟರ್ನೆಟ್ ಸೇವೆಯನ್ನು ಮುಂದುವರೆಯಲಿದೆ.

ಬಿಎಸ್ಎನ್ಎಲ್ 799ರೂ.ಗಳ ಬ್ರಾಡ್ಬ್ಯಾಂಡ್ ಪ್ಲ್ಯಾನ್
ಬಿಎಸ್ಎನ್ಎಲ್ ‘ಫೈಬರ್ ವ್ಯಾಲ್ಯೂ' ಯೋಜನೆ ಶುಲ್ಕವು ಗಾಗಿ ತಿಂಗಳಿಗೆ 799 ರೂ. ಆಗಿದೆ. ಬಳಕೆದಾರರು ಅದೇ 3.3 ಟಿಬಿ (3,300 ಜಿಬಿ) ಮಾಸಿಕ ಡೇಟಾದವರೆಗೆ 100 ಎಮ್ಬಿಪಿಎಸ್ ವೇಗದಲ್ಲಿ ಬ್ರೌಸ್ ಮಾಡಲು ಅನುವು ಮಾಡಿಕೊಡುವ ಯೋಜನೆ ಇದಾಗಿದೆ. ಫೈಬರ್ ಬೇಸಿಕ್ ಯೋಜನೆಯಂತೆಯೇ, ಆಪರೇಟರ್ 3.3 ಟಿಬಿ ಡೇಟಾ ಮಿತಿಯನ್ನು ತಲುಪಿದ ನಂತರ ವೇಗವನ್ನು 2 ಎಮ್ಬಿಪಿಎಸ್ಗೆ ನಿರ್ಬಂಧಿಸುತ್ತದೆ.

ಬಿಎಸ್ಎನ್ಎಲ್ 999ರೂ.ಗಳ ಬ್ರಾಡ್ಬ್ಯಾಂಡ್ ಪ್ಲ್ಯಾನ್
ಬಿಎಸ್ಎನ್ಎಲ್ನ ಈ 999ರೂ.ಗಳ ಬ್ರಾಡ್ಬ್ಯಾಂಡ್ ಪ್ಲ್ಯಾನ್ ಭಾರತ್ ಫೈಬರ್ ಪ್ಲ್ಯಾನ್ ಅನ್ನು ಫೈಬರ್ ಪ್ರೀಮಿಯಂ ಯೋಜನೆ ಎಂದು ಹೇಳಲಾಗಿದೆ. 3300GB ಅಥವಾ 3.3TB ವರೆಗೆ 100 Mbps ವೇಗದಲ್ಲಿ ಇಂಟರ್ನೆಟ್ ಸೌಲಭ್ಯ ನೀಡುತ್ತದೆ. ಡೇಟಾ ಮಿತಿ ಮುಗಿದ ಬಳಿಕ 2 Mbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯುತ್ತದೆ. ಚಂದಾದಾರರಿಗೆ ಅನಿಯಮಿತ ಧ್ವನಿ ಕರೆ ಪ್ರಯೋಜನವನ್ನು ಸಹ ನೀಡುತ್ತದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190