ಬಿಎಸ್‌ಎನ್‌ಎಲ್‌ನ ಅಗ್ಗದ ಬ್ರಾಡ್‌ಬ್ಯಾಂಡ್‌ ಯೋಜನೆಯ ಅವಧಿ ಮತ್ತೆ ವಿಸ್ತರಣೆ!

|

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ತನ್ನ ಭಾರತ್ ಫೈಬರ್ 300GB CUL CS346 ಯೋಜನೆಯನ್ನು ಅಕ್ಟೋಬರ್ 27, 2020 ಕ್ಕೆ ವಿಸ್ತರಿಸಿದೆ. ಭಾರತ್ ಫೈಬರ್ 300GB CUL CS346 ಯೋಜನೆಯನ್ನು 2020 ರ ಆರಂಭದಲ್ಲಿ ಒಡಿಶಾ ವಲಯದಲ್ಲಿ ಪರಿಚಯಿಸಲಾಯಿತು. ಬಿಎಸ್‌ಎನ್‌ಎಲ್‌ ಭಾರತ್ ಫೈಬರ್ 300GB CUL CS346 ಯೋಜನೆಯು ಜುಲೈ 27, 2020 ರವರೆಗೆ ಲಭ್ಯವಿರಲಿದೆ ಎಂದಿತ್ತು. ಆದರೆ ಈಗ ಈ ಯೋಜನೆಯನ್ನು ಮತ್ತೆ ವಿಸ್ತರಿಸಿ ಗ್ರಾಹಕರಿಗೆ ಖುಷಿ ನೀಡಿದೆ.

ಬಿಎಸ್ಎನ್ಎಲ್

ಹೌದು, ಬಿಎಸ್ಎನ್ಎಲ್ ಟೆಲಿಕಾಂ ಅಗ್ಗದ 300GB CUL CS346 ಯೋಜನೆಯನ್ನು ಅಕ್ಟೋಬರ್‌ 27, 2020ರ ವರೆಗೂ ವಿಸ್ತರಿಸಿದೆ. ಇನ್ನು ಈ ಯೋಜನೆಯು 300GB ವರೆಗೆ 40 Mpbs ವೇಗದಲ್ಲಿ ಇಂಟರ್ನೆಟ್ ಬ್ರೌಸ್ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ನಿಗದಿತ ಡೇಟಾ ಮಿತಿಯನ್ನು ತಲುಪಿದ ನಂತರ ವೇಗವು 2 Mpbs ನಲ್ಲಿ ಮುಂದುವರೆಯಲಿದೆ. ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ, ಅನಿಯಮಿತ ಲೋಕಲ್ ಮತ್ತು STD ಕರೆಗಳನ್ನು ಮಾಡಲು ಚಂದಾದಾರರಿಗೆ ಅವಕಾಶ ಇರಲಿದೆ.

ಅರ್ಧ ವಾರ್ಷಿಕ

ಭಾರತ್ ಫೈಬರ್ 300GB CUL CS346 ಯೋಜನೆಯ ಬೆಲೆಯು ತಿಂಗಳಿಗೆ 600ರೂ. ಆಗಿದೆ. ಹಾಗೆಯೇ ಅರ್ಧ ವಾರ್ಷಿಕ, ವಾರ್ಷಿಕ, ದ್ವೈವಾರ್ಷಿಕ ಮತ್ತು ತ್ರೈಮಾಸಿಕ ಚಂದಾದಾರಿಕೆಯ ಆಯ್ಕೆಗಳು ಲಭ್ಯವಿದೆ. ಅರ್ಧ ವಾರ್ಷಿಕ ಪ್ಯಾಕ್ ಬೆಲೆ 3600 ರೂ. ಮತ್ತು ವಾರ್ಷಿಕ ಪ್ಯಾಕ್ ಬೆಲೆ 7200 ರೂ. ಆಗಿದೆ. ಇದಲ್ಲದೆ, ಈ ಯೋಜನೆಯ ದ್ವೈವಾರ್ಷಿಕ ಪ್ಯಾಕ್‌ಗೆ ಚಂದಾದಾರಿಕೆಯ ಬೆಲೆಯು 14,400 ರೂ. ಮತ್ತು ತ್ರೈಮಾಸಿಕ ಪ್ಯಾಕ್ ಬೆಲೆ 21,600 ರೂ. ಆಗಿದೆ. ವಾರ್ಷಿಕ, ದ್ವೈವಾರ್ಷಿಕ ಮತ್ತು ತ್ರೈಮಾಸಿಕ ಪ್ಯಾಕ್‌ಗಳಿಗೆ ಚಂದಾದಾರರಾಗಿರುವ ಬಳಕೆದಾರರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸಂಸ್ಥೆಯು ಕ್ರಮವಾಗಿ ಒಂದು ತಿಂಗಳು, ಮೂರು ತಿಂಗಳು ಮತ್ತು ನಾಲ್ಕು ತಿಂಗಳ ಹೆಚ್ಚುವರಿ ಸೇವೆಯನ್ನು ನೀಡುತ್ತದೆ.

ಟೆಲಿಕಾಂ

ಜೂನ್‌ ತಿಂಗಳಿನಲ್ಲಿ ಬಿಎಸ್‌ಎನ್‌ಎಲ್ ಟೆಲಿಕಾಂ 300GB CUL CS337 ಯೋಜನೆಯನ್ನು ಸೆಪ್ಟೆಂಬರ್ 9, 2020ರ ವರೆಗೂ ವಿಸ್ತರಿಸಿದೆ. ಭಾರತ್ ಫೈಬರ್ 300GB CUL CS346 ಯೋಜನೆಯಂತೆಯೇ, ಈ 300GB CUL CS337 ಯೋಜನೆಯು ಸಹ 300GB ವರೆಗೆ 40 Mpbs ವೇಗದಲ್ಲಿ ಇಂಟರ್ನೆಟ್ ಬ್ರೌಸ್ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

ಬಿಎಸ್‌ಎನ್‌ಎಲ್ ಡೇಟಾ

ಇದಲ್ಲದೆ, 300GB CUL CS337 ಯೋಜನೆಯಲ್ಲಿ 300GB ಯನ್ನು ತಲುಪಿದ ನಂತರ ಬಿಎಸ್‌ಎನ್‌ಎಲ್ ಡೇಟಾ ವೇಗವನ್ನು 1 ಎಮ್‌ಬಿಪಿಎಸ್‌ಗೆ ಸೀಮಿತಗೊಳಿಸುತ್ತದೆ. 300GB ಪ್ಲಾನ್ CS337 ಗೆ ಚಂದಾದಾರರಾಗಿರುವ ಬಳಕೆದಾರರಿಗೆ ಆಪರೇಟರ್ ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳನ್ನು ಸಹ ನೀಡುತ್ತದೆ. 300GB CUL CS337 ಯೋಜನೆಯ ತಿಂಗಳ ಶುಲ್ಕ 499ರೂ. ಆಗಿದೆ. ಇನ್ನು ಈ ಯೋಜನೆಯು ಕೋಲ್ಕತಾ, ರಾಜಸ್ಥಾನ, ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ ವಲಯಗಳಿಗೆ ಸೀಮಿತವಾಗಿದೆ.

Most Read Articles
Best Mobiles in India

English summary
The BSNL 300GB Bharat Fiber FTTH plan is available in the monthly, semi-annual, annual, biennial, triennial subscription packages.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X