ಬಿಎಸ್‌ಎನ್‌ಎಲ್‌ನ ಈ ನಡೆಗೆ ಖಾಸಗಿ ಟೆಲಿಕಾಂಗಳು ಶಾಕ್‌ ಆಗೋದು ಗ್ಯಾರಂಟಿ!

|

ಟೆಲಿಕಾಂ ವಲಯದಲ್ಲಿ ಖಾಸಗಿ ಕಂಪೆನಿಗಳು ತಮ್ಮ ದರ್ಬಾರ್‌ ಮುಂದುವರೆಸಿವೆ. ಇದರ ನಡುವೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಂಸ್ಥೆ ಕೂಡ ತನ್ನದೇ ಆದ ಪ್ರಾಬಲ್ಯವನ್ನು ಸಾಧಿಸಿದೆ. ಏರ್‌ಟೆಲ್‌, ಜಿಯೋ, ವಿ ಟೆಲಿಕಾಂಗಳ ಪ್ಲಾನ್‌ಗಳಿಗೆ ಸೆಡ್ಡು ಹೊಡೆಯುವ ಅನೇಕ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಇದೀಗ ತನ್ನ ಪ್ರಮೋಷನಲ್‌ ಪ್ಲಾನ್‌ 699ರೂ ಯೋಜನೆಯ ಅವಧಿಯನ್ನು 90 ದಿನಗಳವರೆಗೆ ವಿಸ್ತರಿಸಿದೆ. ಈ ಪ್ರಿಪೇಯ್ಡ್ ಯೋಜನೆ 180 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಸಂಸ್ಥೆ ತನ್ನ ಪ್ರಮೋಷನಲ್‌ ಪ್ಲಾನ್‌ ಅವಧಿಯನ್ನು ಇನ್ನಷ್ಟು ವಿಸ್ತರಣೆ ಮಾಡಿದೆ. ಈ ಪ್ರಮೋಷನಲ್‌ ಪ್ಲಾನ್‌ನ ಅವಧಿ ಸೆಪ್ಟೆಂಬರ್ 28ಕ್ಕೆ ಕೊನೆಯಾಗಿತ್ತು. ಅದನ್ನು ಇನ್ನೂ 90 ದಿನಗಳವರೆಗೆ ವಿಸ್ತರಿಸಿದೆ. ಈ ಪ್ಲಾನ್‌ 0.5GB ದೈನಂದಿನ ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ಪ್ರಯೋಜನವನ್ನು ನೀಡಲಿದೆ. ಸದ್ಯ ಈ ಯೋಜನೆಯನ್ನು ಈಗ ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. ಹಾಗಾದ್ರೆ ಈ ಪ್ಲಾನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌ ತನ್ನ ಪ್ರಮೋಷನಲ್‌ ಪ್ಲಾನ್‌ 699ರೂ ಪ್ಲಾನ್‌ ಅನ್ನು ಇದೀಗ ಜನವರಿವರೆಗೆ ವಿಸ್ತರಿಸಿದೆ. ಬಳಕೆದಾರರು ಈ ಪ್ರಿಪೇಯ್ಡ್ ಪ್ಲಾನ್‌ ಅನ್ನು ರಿಟೇಲ್‌ ಸ್ಟೋರ್‌ಗಳ ಮೂಲಕ, 123ಗೆ SMS ಕಳುಹಿಸುವ ಮೂಲಕ ಅಥವಾ USSD ಕಿರುಸಂಕೇತವನ್ನು ಡಯಲ್ ಮಾಡುವ ಮೂಲಕ ಪಡೆಯಬಹುದು. ಸದ್ಯ ಈ ಬೆಳವಣಿಗೆಯನ್ನು ಕೇರಳ ಟೆಲಿಕಾಂ ಮೊದಲು ವರದಿ ಮಾಡಿದೆ. ಇನ್ನು ಈ ಪ್ಲಾನ್‌ ಅನಿಯಮಿತ ಕರೆ ಹಾಗೂ ಡೈಲಿ 100 ಸಂದೇಶ ಪ್ರಯೋಜನವನ್ನು ಒಳಗೊಂಡಿದೆ. ಅಧಿಕ ಡೇಟಾ ಬಯಸದೆ ಅಧಿಕ ವ್ಯಾಲಿಡಿಟಿ ಬಯಸುವ ಬಳಕೆದಾರರಿಗೆ BSNL ನ 699 ರೂ.ಪ್ಲಾನ್‌ ಸೂಕ್ತವಾಗಿದೆ. ಇದು 180 ದಿನಗಳ ವ್ಯಾಲಿಡಿಟಿಯನ್ನು ನೀಡುವ ಯೋಜನೆ ಆಗಿದೆ. ಬಿಎಸ್‌ಎನ್ಎಲ್‌ ಪರಿಚಯಿಸಿರುವ ಇದೇ ಬೆಲೆಯಲ್ಲಿ ಏರ್‌ಟೆಲ್‌ ವಿ, ಜಿಯೋ ಕೂಡ ಕೆಲವು ಪ್ಲಾನ್‌ಗಳನ್ನು ಹೊಂದಿವೆ. ಆ ಪ್ಲಾನ್‌ಗಳ ಬಗ್ಗೆ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಏರ್‌ಟೆಲ್ 699ರೂ ಪ್ರಿಪೇಯ್ಡ್ ಪ್ಲಾನ್

ಏರ್‌ಟೆಲ್ 699ರೂ ಪ್ರಿಪೇಯ್ಡ್ ಪ್ಲಾನ್

ಬಿಎಸ್‌ಎನ್‌ಎಲ್‌ ಪ್ಲಾನ್‌ ಮಾದರಿಯ ಬೆಲೆಯನ್ನು ಹೊಂದಿರುವ ಏರ್‌ಟೆಲ್ 699ರೂ ಪ್ರಿಪೇಯ್ಡ್ ಪ್ಲಾನ್ ಅಪ್‌ಗ್ರೇಡ್ ಮಾಡಿದ ಡಿಸ್ನಿ+ ಹಾಟ್‌ಸ್ಟಾರ್ ಪ್ಲಾನ್ ಆಗಿದೆ. ಇದು ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಪ್ಲಾನ್ ಅನ್ನು ನೀಡಲಿದೆ. ಜೊತೆಗೆ ದೈನಂದಿನ 2GB ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್‌ ಪ್ರಯೋಜನವನ್ನು ನೀಡಲಿದೆ. ಈ ಪ್ಲಾನ್‌ 56 ದಿನಗಳ ಮಾನ್ಯತೆಯನ್ನು ನೀಡಲಿದೆ. ಈ ಪ್ಲಾನ್‌ನಲ್ಲಿ ಬಳಕೆದಾರರು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಗೆ ಪ್ರವೇಶವನ್ನು ಪಡೆಯಬಹುದಾಗಿದೆ.

ವಿ 699 ರೂ. ಪ್ರಿಪೇಯ್ಡ್‌ ಪ್ಲಾನ್‌

ವಿ 699 ರೂ. ಪ್ರಿಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂನ ಈ ಪ್ಲಾನ್‌ ಡಬಲ್ ಡೇಟಾ ಪ್ರಯೋಜನವನ್ನು ಪಡೆದಿದೆ. 699ರೂ. ಬೆಲೆಯ ಈ ಪ್ರಿಪೇಯ್ಡ್ ಪ್ಲಾನ್‌ ದೈನಂದಿನ 4GB ಡೇಟಾವನ್ನು ನೀಡಲಿದೆ. ಜೊತೆಗೆ ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ನೀಡುತ್ತದೆ. ಈ ಪ್ಲಾನ್ 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಜಿಯೋ 666ರೂ ಪ್ರಿಪೇಯ್ಡ್‌ ಪ್ಲಾನ್‌

ಜಿಯೋ 666ರೂ ಪ್ರಿಪೇಯ್ಡ್‌ ಪ್ಲಾನ್‌

ಡಿಸ್ನಿ+ ಹಾಟ್‌ಸ್ಟಾರ್‌ಗೆ ಪ್ರವೇಶವನ್ನು ಬಯಸುವ ಬಳಕೆದಾರರಿಗೆ ಜಿಯೋ 666ರೂ ಪ್ಲಾನ್‌ ಪರಿಚಯಿಸಿದೆ. ಇದು ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ಜೊತೆಗೆ 2GB ದೈನಂದಿನ ಡೇಟಾವನ್ನು ನೀಡುತ್ತದೆ. ಈ ಯೋಜನೆಯು 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಬಿಎಸ್‌ಎನ್‌ಎಲ್‌

ಇನ್ನು ಇತ್ತೀಚಿಗೆ ಬಿಎಸ್‌ಎನ್‌ಎಲ್‌ ಖಾಸಗಿ ಟೆಲಿಕಾಂಗಳ ಹಾದಿಯಲ್ಲಿಯೇ ಹೆಜ್ಜೆಹಾಕಿದೆ. ಇದಕ್ಕೆ ಪೂರಕ ಎಂಬಂತೆ ಕೆಲ ದಿನಗಳ ಹಿಂದೆ ಬಿಎಸ್‌ಎನ್‌ಎಲ್‌ ಬಳಕೆದಾರರಿಗೆ ಬಿಎಸ್‌ಎನ್‌ಎಲ್‌ ಸೆಲ್ಫ ಕೇರ್‌ ಎಂಬ ಹೊಸ ಆಪ್ ಅನ್ನು ಬಿಡುಗಡೆ ಮಾಡಿದೆ. ಇದು ಗೂಗಲ್ ಪ್ಲೇಸ್ಟೋರ್ ಮತ್ತು ಆಪ್ ಸ್ಟೋರ್‌ ನಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್‌ ಮೂಲಕ ಪ್ರಿಪೇಯ್ಡ್ ಮೊಬೈಲ್ ಪ್ಲಾನ್‌ಗಳು, ಮುಖ್ಯ ಖಾತೆಯ ಬ್ಯಾಲೆನ್ಸ್, ಪ್ಲಾನ್ ವ್ಯಾಲಿಡಿಟಿ, ಇತ್ತೀಚಿನ ಆಫರ್‌ಗಳು ಇತ್ಯಾದಿ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ.

Most Read Articles
Best Mobiles in India

English summary
BSNL has extended its promotional plan which is priced at Rs 699. The plan offers 180 days validity.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X