BSNLನಿಂದ ಮತ್ತೆ ಹೊಸದೊಂದು ಪ್ಲ್ಯಾನ್ ಬಿಡುಗಡೆ; 395 ದಿನ ವ್ಯಾಲಿಡಿಟಿ!

|

ಭಾರತ ಸಂಚಾರ ನಿಗಮ ಲಿಮಿಟೆಡ್ (BSNL) ಸಂಸ್ಥೆಯು ಟೆಲಿಕಾಂ ಕ್ಷೇತ್ರದಲ್ಲಿ ತನ್ನ ಜನಪ್ರಿಯತೆ ಉಳಿಸಿಕೊಳ್ಳಲು ಹಲವು ಆಕರ್ಷಕ ಪ್ಲ್ಯಾನ್‌ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಅವುಗಳಲ್ಲಿ ಕೆಲವು ಯೋಜನೆಗಳು ಪ್ರತಿದಿನ ಡೇಟಾ ಪ್ರಯೋಜನದ ಹಾಗೂ ಅಧಿಕ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದಿವೆ. ಈ ದಿಸೆಯಲ್ಲಿ ಮುಂದುವರೆದಿರುವ ಸಂಸ್ಥೆಯು ಈಗ ಹೊಸದಾಗಿ ಆಕರ್ಷಕ ಪ್ರೀಪೇಯ್ಡ್‌ ಪ್ಲ್ಯಾನ್‌ ಅನ್ನು ಅನಾವರಣ ಮಾಡಿ ಗ್ರಾಹಕರನ್ನು ಸೆಳೆದಿದೆ.

ಬಿಎಸ್‌ಎನ್‌ಎಲ್‌

ಹೌದು, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಂಸ್ಥೆಯು ಹೊಸದಾಗಿ PV-1499ರೂ.ಗಳ ಪ್ರೀಪೇಡ್‌ ಪ್ಲ್ಯಾನ್‌ ಅನ್ನು ಗ್ರಾಹಕರಿಗೆ ಪರಿಚಯಿಸಿದೆ. ಈ ಯೋಜನೆಯು ಒಂದು ವರ್ಷದ (365 ಡೇಸ್ಸ್) ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಸಂಪೂರ್ಣ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ ಆರಂಭಿಕ ಕೊಡುಗೆಯಾಗಿ ಹೆಚ್ಚುವರಿ ವ್ಯಾಲಿಡಿಟಿ ಲಭ್ಯವಾಗಲಿದೆ. ಈ ಯೋಜನೆಯ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿರಿ.

ವಾರ್ಷಿಕ ವ್ಯಾಲಿಡಿಟಿ

ವಾರ್ಷಿಕ ವ್ಯಾಲಿಡಿಟಿ

ಬಿಎಸ್‌ಎನ್‌ಎಲ್‌ ಸಂಸ್ಥೆಯ PV-1499ರೂ.ಗಳ ರೀಚಾರ್ಜ್‌ ಮಾಡಿಸಿಕೊಳ್ಳುವ ಗ್ರಾಹಕರು ಒಂದು ವರ್ಷದ ಅವಧಿಯ ವ್ಯಾಲಿಡಿಟಿ ಪಡೆಯಲಿದ್ದಾರೆ. ಆರಂಭಿಕ ಹಂತದಲ್ಲಿ ಪ್ರಮೋಷನಲ್ ಕೊಡುಗೆಯಾಗಿ 30 ದಿನ ಹೆಚ್ಚುವರಿ ವ್ಯಾಲಿಡಿಟಿ ಸಿಗಲಿದೆ. ಹೀಗಾಗಿ ಗ್ರಾಹಕರಿಗೆ ಒಟ್ಟಾರೆ 395 ದಿನಗಳ ದೀರ್ಘಾವಧಿಯ ವ್ಯಾಲಿಡಿಟಿ ಸೌಲಭ್ಯ ಲಭ್ಯವಾಗಲಿದೆ.

1499ರೂ. ಪ್ಲ್ಯಾನಿನ ಪ್ರಯೋಜನಗಳೆನು

1499ರೂ. ಪ್ಲ್ಯಾನಿನ ಪ್ರಯೋಜನಗಳೆನು

ಬಿಎಸ್‌ಎನ್‌ಎಲ್‌ನ ಹೊಸ 1499ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ 24GB FUP ಡೇಟಾ ಸೌಲಭ್ಯವನ್ನು ಒಳಗೊಂಡಿದೆ. ಇದರೊಂದಿಗೆ ಸಂಪೂರ್ಣ ಅನಿಯಮಿತ ವಾಯಿಸ್ ಕರೆಯ ಪ್ರಯೋಜನವನ್ನು ಸಹ ಪಡೆದುಕೊಂಡಿದ್ದು, ಕರೆಗಳು 250ನಿಮಿಷಗಳ ಮಿತಿ ಪಡೆದಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಮ್ಎಸ್‌ಗಳು ಸಹ ಲಭ್ಯವಾಗಲಿವೆ.

PV-365 ಯೋಜನೆ

PV-365 ಯೋಜನೆ

ಬಿಎಸ್‌ಎನ್‌ಎಲ್‌ನ ಈ ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಪ್ರತಿದಿನ 2 ಜಿಬಿ ಡೇಟಾ ಸೌಲಭ್ಯವನ್ನು ಪಡೆದಿದ್ದು, ದಿನಕ್ಕೆ 250 ನಿಮಿಷಗಳ ಅನಿಯಮಿತ ವಾಯಿಸ್ ಕರೆಗಳನ್ನು ನೀಡುತ್ತದೆ. ನಿಗದಿತ ಡೇಟಾ ಮುಗಿದ ಬಳಿಕ 80kbps ವೇಗದಲ್ಲಿ ಮುಂದುವರೆಯಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಂಎಸ್ ಪ್ರಯೋಜನ ಸಹ ಲಭ್ಯ. ಈ ಯೋಜನೆ ಎಲ್ಲಾ ಉಚಿತಗಳು ಮೊದಲ 60 ದಿನಗಳವರೆಗೆ ಮಾತ್ರ ಬರುತ್ತವೆ. ಉಚಿತ ಸೇವೆಯ ಮೊದಲ 60 ದಿನಗಳ ನಂತರ, ಕರೆಗಳನ್ನು ಮಾಡಲು ಅಥವಾ ಡೇಟಾವನ್ನು ಬಳಸಲು ಅಗತ್ಯ ರೀಚಾರ್ಜ್ ಮಾಡಿಸಬೇಕಾಗುತ್ತದೆ.

Most Read Articles
Best Mobiles in India

English summary
BSNL introduced a new prepaid plan for its customers PV-1499.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X