ಖಾಸಗಿ ಟೆಲಿಕಾಂಗಳ ಮಾದರಿಯಲ್ಲಿಯೇ ಹೊಸ ಹೆಜ್ಜೆ ಇಟ್ಟ ಬಿಎಸ್‌ಎನ್‌ಎಲ್‌!

|

ದೇಶದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂಗಳು ದರ್ಬಾರ್‌ ನಡೆಸುತ್ತಿವೆ. ಇದರ ನಡುವೆ ಖಾಸಗಿ ಟೆಲಿಕಾಂಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಂಸ್ಥೆ ಕೂಡ ಹಲವು ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಈ ಪೈಕಿ ಏರ್‌ಟೆಲ್‌, ಜಿಯೋ ವಿ ಟೆಲಿಕಾಂಗಳಿಗೆ ಸೆಡ್ಡು ಹೊಡೆಯಬಲ್ಲ ಹಲವು ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಅಗ್ಗದ ಬೆಲೆಯಲ್ಲಿ ಪರಿಚಯಿಸಿದೆ. ಇದೀಗ ಖಾಸಗಿ ಟೆಲಿಕಾಂಗಳ ಮಾದರಿಯಲ್ಲಿಯೇ ಬಿಎಸ್‌ಎನ್‌ಎಲ್‌ ಕೂಡ ತನಗೆ ಮೀಸಲಾದ ಹೊಸ ಅಪ್ಲಿಕೇಶನ್‌ ಅನ್ನು ಬಿಡುಗಡೆ ಮಾಡಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಸಂಸ್ಥೆ ಹೊಸದಾಗಿ ಬಿಎಸ್‌ಎನ್‌ಎಲ್‌ ಸೆಲ್ಫ ಕೇರ್‌ ಎಂಬ ಅಪ್ಲಿಕೇಶನ್‌ ಅನ್ನು ಪರಿಚಯಿಸಿದೆ. ಇದು ಬಳಕೆದಾರರು ತಮ್ಮ ರೀಚಾರ್ಜ್‌ಗಳನ್ನು ಮಾಡಲು ಮತ್ತು ಇತ್ತೀಚಿನ ಯೋಜನೆಗಳ ಕುರಿತು ನೋಟಿಫಿಕೇಶನ್ ಪಡೆಯುವುದಕ್ಕೆ ಸಹಾಯ ಮಾಡಲಿದೆ. ಇದು ಗೂಗಲ್ ಪ್ಲೇಸ್ಟೋರ್ ಮತ್ತು ಆಪ್ ಸ್ಟೋರ್‌ಗೆ ಲಭ್ಯವಿದೆ. ಏರ್‌ಟೆಲ್‌ , ಜಿಯೋ, ವಿ ಟೆಲಿಕಾಂಗಳು ಕೂಡ ತಮಗೆ ಮೀಸಲಾದ ಅಪ್ಲಿಕೇಶನ್‌ ಹೊಂದಿವೆ. ಇದೇ ಹಾದಿಯಲ್ಲಿ ಬಿಎಸ್‌ಎನ್‌ಎಲ್‌ ಕುಡ ಹೆಜ್ಜೆ ಹಾಕಿದೆ. ಹಾಗಾದ್ರೆ ಬಿಎಸ್ಎನ್‌ಎಲ್‌ನ ಹೊಸ ಅಪ್ಲಿಕೇಸನ್‌ ಏನೆಲ್ಲಾ ಫೀಚರ್ಸ್‌ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌ ಖಾಸಗಿ ಟೆಲಿಕಾಂಗಳ ಮಾದರಿಯಲ್ಲಿಯೇ ಬಿಎಸ್‌ಎನ್‌ಎಲ್‌ ಸೆಲ್ಫ್ ಕೇರ್‌ ಅಪ್ಲಿಕೇಶನ್‌ ಹೊರತಂದಿದೆ. ಈ ಅಪ್ಲಿಕೇಶನ್‌ ಮೂಲಕ ಬಿಎಸ್‌ಎನ್‌ಎಲ್‌ ಬಳಕೆದಾರರು ಪ್ರಿಪೇಯ್ಡ್ ಮೊಬೈಲ್ ಪ್ಲಾನ್‌ಗಳು, ಮೇನ್‌ ಅಕೌಂಟ್‌ ಬ್ಯಾಲೆನ್ಸ್, ಪ್ಲಾನ್ ವ್ಯಾಲಿಡಿಟಿ, ಇತ್ತೀಚಿನ ಆಫರ್‌ಗಳು ಸೇರಿದಂತೆ ಹೊಸದಾಗಿ ಬಿಎಸ್‌ಎನ್‌ಎಲ್‌ ಜಾರಿಗೊಳಿಸುವ ಎಲ್ಲಾ ಪ್ಲಾನ್‌ಗಳ ಬಗ್ಗೆ ಮಾಹಿತಿ ಒದಗಿಸಲಿದೆ. ಇದಲ್ಲದೆ BSNL ಗ್ರಾಹಕರು ತಮ್ಮ ಅಸ್ತಿತ್ವದಲ್ಲಿರುವ ಟಾರಿಫ್‌ ಪ್ಲಾನ್‌ಗಳನ್ನು ಪರಿಶೀಲನೆ ಮಾಡಬಹುದಾಗಿದೆ.

ಅಪ್ಲಿಕೇಶನ್‌

ಇನ್ನು ಈ ಅಪ್ಲಿಕೇಶನ್‌ ಮೂಲಕ ಬಳಕೆದಾರರು ಈಗಾಗಲೇ ಲಭ್ಯವಿರುವ ಪ್ಯಾಕೇಜ್‌ಗಳನ್ನು, ಲಭ್ಯವಿರುವ ಒಟ್ಟು ಉಚಿತ ಡೇಟಾವನ್ನು ಸಹ ಪರಿಶೀಲಿಸಬಹುದು. ಇನ್ನು ಬಿಲ್ ಪೇ, ರೀಚಾರ್ಜ್, ಖಾತೆ ನಿರ್ವಹಣೆ, ವಹಿವಾಟು ಇತಿಹಾಸ, ವಿಶೇಷ ಕೊಡುಗೆಗಳು, ಸಹಾಯ ಮತ್ತು ಬೆಂಬಲ, ಬಿಎಸ್‌ಎನ್‌ಎಲ್ ರಿವಾರ್ಡ್ಸ್‌, ಲ್ಯಾಂಗ್ವೇಜ್‌ ಸೆಟ್ಟಿಂಗ್ಸ್‌ ಮತ್ತು ಲಾಗ್‌ಔಟ್ ಆಯ್ಕೆಗಳನ್ನು ಒಳಗೊಂಡಿದ್ದು, ಸೆಲ್ಫ್ ಕೇರ್ ಆಪ್ ಉತ್ತಮ ಇಂಟರ್‌ಫೇಸ್ ಅನ್ನು ಪಡೆದುಕೊಂಡಿದೆ.

ಬಿಎಸ್‌ಎನ್‌ಎಲ್

ಬಿಎಸ್‌ಎನ್‌ಎಲ್ ಬಳಕೆದಾರರು ಈ ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್ ಮಾಡಿದ ನಂತರ ಒಟಿಪಿ ಮೂಲಕ ನೋಂದಾಯಿಸಿಕೊಳ್ಳಬಹುದು. ಇನ್ನು ಬಿಎಸ್‌ಎನ್‌ಎಲ್‌ ಸೆಲ್ಫ್‌ಕೇರ್ ಮೊಬೈಲ್ ಅಪ್ಲಿಕೇಶನ್ ಫಿಂಗರ್‌ಪ್ರಿಂಟ್ ದೃಡೀಕರಣದ ಮೂಲಕ ಬಳಕೆದಾರರಿಗೆ ಹೆಚ್ಚಿನ ಭದ್ರತೆಯನ್ನು ನೀಡುತ್ತದೆ. ಇದು ಅಪ್ಲಿಕೇಶನ್‌ಗೆ ಯಾವುದೇ ಅನಧಿಕೃತ ಪ್ರವೇಶವನ್ನು ಖಚಿತಪಡಿಸುತ್ತದೆ. ಇನ್ನು ಈ ಅಪ್ಲಿಕೇಶನ್‌ ಮೂಲಕ ರೀಚಾರ್ಜ್ ಮಾಡಲು, ಬಳಕೆದಾರರು ಆಪ್‌ನ ಮುಖಪುಟದಲ್ಲಿರುವ ರೀಚಾರ್ಜ್ ನೌ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ಲಭ್ಯವಿರುವ ಪ್ಲಾನ್‌ ವಿವರಗಳನ್ನು ಪರಿಶೀಲಿಸಿದ ನಂತರ ನಿಮ್ಮ ಆಯ್ಕೆಯ ಪ್ಲಾನ್‌ ರೀಚಾರ್ಜ್‌ ಮಾಡಬಹುದಾಗಿದೆ.

ಅಪ್ಲಿಕೇಶನ್‌

ಇದಲ್ಲದೆ ಈ ಅಪ್ಲಿಕೇಶನ್‌ ಮೂಲಕ ಬಿಎಸ್ಎನ್ಎಲ್ ಪೋಸ್ಟ್ ಪೇಯ್ಡ್ ಮೊಬೈಲ್ ಬಳಕೆದಾರರು ಬಿಲ್ ಪಾವತಿ ಮಾಡುವ ಅವಕಾಶ ಕಲ್ಪಿಸಲಾಗಿದೆ. ಬಳಕೆದಾರರು ಮುಖಪುಟದಲ್ಲಿ ಅಥವಾ ಸೈಡ್ ಮೆನುವಿನಲ್ಲಿರುವ 'ಬಿಲ್ ಪೇ' ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಬಿಲ್‌ ಪೇ ಮಾಡಬಹುದಾಗಿದೆ. ಇದರಲ್ಲಿ ಬಿಎಸ್‌ಎನ್‌ಎಲ್ ಪೋಸ್ಟ್‌ಪೇಯ್ಡ್ ಮೊಬೈಲ್ ಸಂಖ್ಯೆ ಅಥವಾ ಖಾತೆ ಸಂಖ್ಯೆಯನ್ನು ನಮೂದಿಸಿ ಇತ್ತೀಚಿನ ಬಿಲ್ ವಿವರಗಳನ್ನು ಪಡೆಯಬಹುದು. ಸದ್ಯ ಬಿಎಸ್ಎನ್ಎಲ್ ಸೆಲ್ಫ್ ಕೇರ್ ಆಪ್ ಇಂಗ್ಲಿಷ್ ಮತ್ತು ಹಿಂದಿ ಸೇರಿದಂತೆ ಎರಡು ಭಾಷೆಗಳಲ್ಲಿ ಲಭ್ಯವಿದೆ.

Most Read Articles
Best Mobiles in India

English summary
BSNL has launched a new app for mobile users to ease the process of bill payment and recharges.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X