ಬಿಎಸ್‌ಎನ್‌ಎಲ್‌ 1299ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ನಲ್ಲಿ ಭರ್ಜರಿ ಡೇಟಾ!

|

ದೇಶಿದ ಬ್ರಾಡ್‌ಬ್ಯಾಂಡ್ ವಲಯದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಭಿನ್ನ ಯೋಜನೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅವುಗಳಲ್ಲಿ ಕಡಿಮೆ ಬೆಲೆಯ ಯೋಜನೆಗಳು ಹೆಚ್ಚು ಗಮನ ಸೆಳೆದಿದ್ದು, ಅವುಗಳು ಹೆಚ್ಚಿನ ಡೇಟಾ ಪ್ರಯೋಜನಗಳನ್ನು ಪಡೆದಿವೆ. ಈ ನಿಟ್ಟಿನಲ್ಲಿ ಬಿಎಸ್‌ಎನ್‌ಎಲ್‌ನ 1299ರೂ. ಯೋಜನೆಯು ಭರ್ಜರಿ ಇಂಟರ್ನೆಟ್ ಸೌಲಭ್ಯವನ್ನು ಒಳಗೊಂಡಿದೆ.

ಬಿಎಸ್‌ಎನ್‌ಎಲ್‌ 22GB

ಹೌದು, ಬಿಎಸ್‌ಎನ್‌ಎಲ್ ಸಂಸ್ಥೆಯು ಹೊಸದಾಗಿ ಬಿಎಸ್‌ಎನ್‌ಎಲ್‌ 22GB CUL ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು ಅನಿಯಮಿತ ಡೇಟಾ ಹಾಗೂ ಕಾಲಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಅಧಿಕ ಇಂಟರ್ನೆಟ್ ಬಳಕೆ ಮಾಡುವ ಗ್ರಾಹಕರಿಗೆ ಈ ಯೋಜನೆಯು ಉತ್ತಮ ಅನಿಸಲಿದೆ. ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ.

Mbps ಡೌನ್‌ಲೋಡ್

ಇನ್ನು ಈ ಯೋಜನೆ ಜುಲೈ 1, 2020 ರಿಂದ ಜಾರಿಗೆ ಬಂದಿದೆ. ಈ ಯೋಜನೆಯು ಬಳಕೆದಾರರಿಗೆ 10 Mbps ಡೌನ್‌ಲೋಡ್ ವೇಗವನ್ನು ಒದಗಿಸುತ್ತದೆ. ದಿನದ ಡೇಟಾ ಮಿತಿ 22GB ಆಗಿದ್ದು, ನಂತರ ಇಂಟರ್ನೆಟ್ ವೇಗವನ್ನು 2 Mbps ಗೆ ಇಳಿಸಲಾಗುತ್ತದೆ. ಒಂದು ತಿಂಗಳು ಅಥವಾ ಒಂದು ವರ್ಷಕ್ಕೆ ಬೇರೆ ಯಾವುದೇ ಪ್ರತ್ಯೇಕ ಡೇಟಾ ಮಿತಿಯಿಲ್ಲ, ಆದ್ದರಿಂದ ಬಳಕೆದಾರರು ಎಷ್ಟು ಸಮಯದವರೆಗೆ ಯೋಜನೆಯನ್ನು ಖರೀದಿಸಿದರೂ ಅನಿಯಮಿತ ಡೇಟಾವನ್ನು ಪಡೆಯುತ್ತಾರೆ.

ಅಂಡಮಾನ್ ಮತ್ತು ನಿಕೋಬಾರ್

ಈ ಯೋಜನೆಯ ಅಂಡಮಾನ್ ಮತ್ತು ನಿಕೋಬಾರ್ ಟೆಲಿಕಾಂ ಪ್ರದೇಶಗಳನ್ನು ಹೊರತುಪಡಿಸಿ ಇತರೆ ಪ್ರದೇಶಗಳಲ್ಲಿ ಲಭ್ಯವಿದೆ. ಈ ತಿಂಗಳ ಶುಲ್ಕ 1299ರೂ. ಗಳು ಆಗಿದೆ. ಇನ್ನು ಈ ಯೋಜನೆಯನ್ನು ವಾರ್ಷಿಕ ಅವಧಿಗೆ ಬೇಕಿದ್ದರೇ 12,990ರೂ.ಗಳಿಗೆ ಲಭ್ಯ.

ಬಿಎಸ್‌ಎನ್‌ಎಲ್‌-777ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌-777ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಸಂಸ್ಥೆಯ ಈ 777ರೂ.ಪ್ಲ್ಯಾನ್‌ ಒಂದು ತಿಂಗಳಿನಲ್ಲಿ 500GB ಡೇಟಾ ಸಿಗಲಿದೆ. ಡೇಟಾ ವೇಗದ ಮಿತಿಯು 50 Mbps ಸಾಮರ್ಥ್ಯದಲ್ಲಿರಲಿದ್ದು, ತಿಂಗಳ ನಿಗದಿತ ಡೇಟಾ ಬಳಕೆ ಮುಗಿದ ಬಳಿಕ 2Mbps ವೇಗದಲ್ಲಿ ಡೇಟಾ ಸೌಲಭ್ಯ ಮುಂದವರೆಯಲಿದೆ. ಈ ಪ್ಲ್ಯಾನಿನಲ್ಲಿಯೂ ಸಹ ಹೆಚ್ಚುವರಿಯಾಗಿ ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ದೊರೆಯಲಿದೆ.

ಬಿಎಸ್‌ಎನ್‌ಎಲ್‌-849ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌-849ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಈ ಬ್ರಾಡ್‌ಬಾಂಡ್‌ ಪ್ಲ್ಯಾನಿನಲ್ಲಿ ಒಂದು ತಿಂಗಳಿಗೆ ಒಟ್ಟು 600GB ಡೇಟಾ ಮಿತಿಯನ್ನು ನೀಡಲಾಗಿದ್ದು, ಯಾವುದೇ ದೈನಂದಿನ FUP ಮಿತಿ ಇರುವುದಿಲ್ಲ. ಈ ಪ್ಲ್ಯಾನ್‌ನಲ್ಲಿ ಡೇಟಾ ವೇಗವು 50 Mbps ಸಾಮರ್ಥ್ಯದಲ್ಲಿರಲಿದ್ದು, ಇತರೆ ನೆಟವರ್ಕ್‌ಗಳಿಗೆ ಅನಿಯಮಿತ ಉಚಿತ ಕರೆಗಳ ಸೌಲಬ್ಯವನ್ನು ಪಡೆದಿದೆ.

Most Read Articles
Best Mobiles in India

English summary
The new BSNL 22GB CUL broadband plan is available for every telecom circle except for users in the Andaman and Nicobar islands.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X