Just In
Don't Miss
- Lifestyle
ದಿನ ಭವಿಷ್ಯ: ಶುಕ್ರವಾರದ ರಾಶಿಫಲ ಹೇಗಿದೆ ನೋಡಿ
- News
ಡ್ರಗ್ಸ್ ಪ್ರಕರಣ: ಜೈಲಿನಲ್ಲಿ ಜೀವಕ್ಕೆ ಬೆದರಿಕೆ ಇದೆ ಎಂದು ಬಿಜೆಪಿ ಯುವ ನಾಯಕಿ ಪಮೇಲಾ ಆರೋಪ
- Movies
ಶಮಂತ್ಗೆ ಸಿಕ್ತು ಬಂಪರ್: ಎರಡನೇ ವಾರವೂ ಬ್ರೋ ಗೌಡ ಸೇಫ್
- Automobiles
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಎಸ್ಎನ್ಎಲ್ನ 1999ರೂ. ಪ್ಲ್ಯಾನಿನಲ್ಲಿ ಬದಲಾವಣೆ; ಗ್ರಾಹಕರಿಗೆ ಖುಷಿ!
ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆಯು ಇತ್ತೀಚಿಗೆ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ನೇರವಾಗಿ ಪೈಪೋಟಿ ನೀಡುವ ಯೋಜನೆಗಳನ್ನು ಪರಿಚಯಿಸುತ್ತ ಸಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲವು ಆಕರ್ಷಕ ಪ್ರೀಪೇಡ್ ಪ್ಲ್ಯಾನ್ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಇದೀಗ ಬಿಎಸ್ಎನ್ಎಲ್ ತನ್ನ ಜನಪ್ರಿಯ ಪ್ಲ್ಯಾನ್ವೊಂದನ್ನು ಪರಿಷ್ಕರಿಸಿದ್ದು, ಈ ಯೋಜನೆಯು ದೀರ್ಘ ಅವಧಿಯ ವ್ಯಾಲಿಡಿಟಿಯ ಜೊತೆಗೆ ಅಧಿಕ ಡೇಟಾ ಸೌಲಭ್ಯವನ್ನು ಒಳಗೊಂಡಿದೆ.

ಹೌದು, ಬಿಎಸ್ಎನ್ಎಲ್ ಇದೀಗ ತನ್ನ ಜನಪ್ರಿಯ 1999ರೂ.ಗಳ ವಾರ್ಷಿಕ ಪ್ರೀಪೇಡ್ ಪ್ಲ್ಯಾನ್ ಅನ್ನು ಪರಿಷ್ಕರಣೆ ಮಾಡಿದೆ. ಈ ವಾರ್ಷಿಕ ವ್ಯಾಲಿಡಿಟಿಯ ಯೋಜನೆಯಲ್ಲಿ ಡೇಟಾ ಸೌಲಭ್ಯದ ಜೊತೆಗೆ ಹೆಚ್ಚುವರಿಯಾಗಿ Eros Now-ಇರೋಸ್ ನೌ ಓಟಿಟಿ 60 ದಿನಗಳ ದಿನಗಳ ಚಂದಾದಾರಿಕೆ ಲಭ್ಯವಿತ್ತು. ಆದ್ರೀಗ ಗ್ರಾಹಕರಿಗೆ 365 ದಿನಗಳ Eros Now ವಾರ್ಷಿಕ ಚಂದಾದಾರಿಕೆ ಲಭ್ಯವಾಗಲಿದೆ. ಇದರೊಂದಿಗೆ Lokdhun-ಲೋಕ್ಧೂನ್ ಚಂದಾದಾರಿಕೆ ಸಹ ಸಿಗಲಿದೆ. ಹಾಗಾದರೇ ಬಿಎಸ್ಎನ್ಎಲ್ನ 1999ರೂ. ಯೋಜನೆಯ ಪ್ರಯೋಜನಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಬಿಎಸ್ಎನ್ಎಲ್ 1999ರೂ. ಯೋಜನೆ
ಬಿಎಸ್ಎನ್ಎಲ್ 1999ರೂ. ಪ್ರೀಪೇಡ್ ಪ್ಲ್ಯಾನ್ ವಾರ್ಷಿಕ ಅವಧಿಯ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಯೋಜನೆಯು ಪ್ರತಿದಿನ 3GB ಡೇಟಾ ಸೌಲಭ್ಯವನ್ನು ಹೊಂದಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 1095GB ಡೇಟಾ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ಪ್ರತಿದಿನ 250 ನಿಮಿಷದ ಉಚಿತ ಕರೆಗಳ ಪ್ರಯೋಜನವನ್ನು ಒಳಗೊಂಡಿದೆ. ಪ್ರತಿದಿನದ 3GB ಡೇಟಾ ಮಿತಿ ಮುಗಿದ ಬಳಿಕ (FUP ) 80 Kbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯುವುದು. ಹಾಗೆಯೇ ಗ್ರಾಹಕರಿಗೆ 365 ದಿನಗಳ Eros Now ವಾರ್ಷಿಕ ಚಂದಾದಾರಿಕೆ ಲಭ್ಯವಾಗಲಿದೆ.

ಜನೆವರಿ 1ರಿಂದ ಜಾರಿ
ಬಿಎಸ್ಎನ್ಎಲ್ ಬಳಕೆದಾರರು ಸಂಪೂರ್ಣ ಮಾನ್ಯತೆಯ ಅವಧಿಗೆ ಅನಿಯಮಿತ ಹಾಡು ಬದಲಾವಣೆ ಆಯ್ಕೆಯೊಂದಿಗೆ ವೈಯಕ್ತಿಕಗೊಳಿಸಿದ ರಿಂಗ್ಬ್ಯಾಕ್ ಟೋನ್ಗೆ ಉಚಿತ ಪ್ರವೇಶವನ್ನು ಪಡೆಯುತ್ತಾರೆ. ಈ ಪರಿಷ್ಕೃತ ಯೋಜನೆ ಜನವರಿ 1, 2021 ರಿಂದ ಜಾರಿಗೆ ಬರಲಿದೆ. ಇನ್ನುಳಿದಂತೆ ಬಿಎಸ್ಎನ್ಎಲ್ನ ಇತರೆ ಬಿಗ್ ವ್ಯಾಲಿಡಿಟಿ ಯೋಜನೆಗಳನ್ನು ತಿಳಿಯಲು ಮುಂದೆ ಓದಿರಿ.

180 ದಿನಗಳ ವ್ಯಾಲಿಡಿಟಿ ಪ್ಲ್ಯಾನ್
ಬಿಎಸ್ಎನ್ಎಲ್ ಇತ್ತೀಚಿಗೆ 997ರೂ. ಪ್ರೀಪೇಡ್ ಪ್ಲ್ಯಾನ್ ಬಿಡುಗಡೆ ಮಾಡಿದ್ದು, ಈ ಪ್ಲ್ಯಾನ್ ಒಟ್ಟು 180 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ ಲೋಕಲ್ ಮತ್ತಯ ನ್ಯಾಶನಲ್ ಕರೆಗಳು ಉಚಿತವಾಗಿ ಲಭ್ಯವಾಗಲಿದ್ದು, ಇದರೊಂದಿಗೆ ಪ್ರತಿದಿನ 3GB ಡೇಟಾ ಸೌಲಭ್ಯವು ದೊರೆಯಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ಗಳ ಪ್ರಯೋಜನವು ಲಭ್ಯವಾಗಲಿದೆ.

ವರ್ಷದ ವ್ಯಾಲಿಡಿಟಿ ಪ್ಲ್ಯಾನ್
ಬಿಎಸ್ಎನ್ಎಲ್ನ 1699ರೂ.ಗಳ ವಾರ್ಷಿಕ ಪ್ರೀಪೆಡ್ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿ ದೊರೆಯಲಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಮತ್ತು ಅನಿಯಮಿತ ಲೋಕಲ್ ಹಾಗೂ ನ್ಯಾಶನಲ್ ಉಚಿತ ಕರೆಗಳು ಸಹ ಲಭ್ಯವಾಗುತ್ತವೆ. ಹಾಗೆಯೇ ಪ್ರತಿದಿನ ಉಚಿತ 100 ಎಸ್ಎಮ್ಎಸ್ಗಳ ಪ್ರಯೋಜನವು ಸಹ ಸೇರಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190