ಪ್ರತಿದಿನ 3GB ಡೇಟಾಗೆ ಬಿಎಸ್ಎನ್ಎಲ್‌ನ ಈ ಒಂದು ಪ್ಲ್ಯಾನ್ ಸಾಕು!

|

ದೇಶದ ಟೆಲಿಕಾಂ ವಲಯವು ಸದ್ಯ ಪೈಪೋಟಿಯಲ್ಲಿದ್ದು, ಖಾಸಗಿ ಟೆಲಿಕಾಂಗಳು ಚಂದಾದಾರರನ್ನು ಹೆಚ್ಚಿಸಿಕೊಳ್ಳಲು ಹೆಣಗಾಡುತ್ತಿವೆ. ಈ ನಡುವೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಟೆಲಿಕಾಂ ಖಾಸಗಿ ಟೆಲಿಕಾಂಗಳಿಗೆ ನೇರವಾಗಿ ಟಕ್ಕರ್ ನೀಡುತ್ತಾ ಸಾಗಿದೆ. ಬಿಎಸ್ಎನ್ಎಲ್ ಇತ್ತೀಚಿನ ಹೊಸ ಪ್ರೀಪೇಡ್‌ ಪ್ಲ್ಯಾನ್‌ಗಳ ಪ್ರಯೋಜನಗಳನ್ನು ನೋಡಿ ಖಾಸಗಿ ಟೆಲಿಕಾಂಗಳು ದಂಗಾಗಿ ಹೋಗಿವೆ. ಏಕೆಂದರೇ ಬಿಎಸ್ಎನ್ಎಲ್ ಹೆಚ್ಚು ವ್ಯಾಲಿಡಿಟಿ ಮತ್ತು ಅಧಿಕ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ.

ಬಿಎಸ್ಎನ್ಎಲ್ ನೆಟವರ್ಕ

ಬಿಎಸ್ಎನ್ಎಲ್ ನೆಟವರ್ಕ ಸರಿಯಿಲ್ಲ ಎಂದು ಮೂಗು ಮುರಿಯುವವರೇ ಹೆಚ್ಚು, ಆದರೆ ಇರುವುದರಲ್ಲಿ ಬಿಎಸ್ಎನ್ಎಲ್ ನೆಟವರ್ಕ ಎಷ್ಟೋ ಉತ್ತಮ ಅಂತಾ ಅಪ್ಪಿಕೊಳ್ಳುವ ಗ್ರಾಹಕರು ಇದ್ದಾರೆ. ಬಿಎಸ್ಎನ್ಎಲ್ ಇದೀಗ 4G ನೆಟವರ್ಕಗೆ ಲಗ್ಗೆ ಇಟ್ಟಿದ್ದು, ಸದ್ಯದಲ್ಲಿಯೇ ದೇಶದಾದ್ಯಂತ ಎಲ್ಲಾ ಟೆಲಿಕಾಂ ಸರ್ಕಲ್‌ಗಳಲ್ಲಿ ಬಿಎಸ್ಎನ್ಎಲ್ 4G ಸೇವೆ ಲಭ್ಯವಾಗಲಿದೆ. ಇನ್ನು ಬಹುತೇಕ ಗ್ರಾಹಕರು ಬಯಸುವ ಅಧಿಕ ಡೇಟಾ ಮತ್ತು ದೀರ್ಘ ವ್ಯಾಲಿಡಿಟಿ ಸೌಲಭ್ಯಗಳಿರುವ ಪ್ಲ್ಯಾನ್‌ಗಳನ್ನು ಬಿಎಸ್ಎನ್ಎಲ್ ಪರಿಚಯಿಸಿದ್ದು, ಆ ಪ್ಲ್ಯಾನ್‌ಗಳು ಈಗಾಗಲೇ ಚಾಲ್ತಿಯಲ್ಲಿವೆ. ಹಾಗಾದರೆ ಬಿಎಸ್ಎನ್ಎಲ್ ಟೆಲಿಕಾಂನ ದೀರ್ಘಾವಧಿಯ ಪ್ರೀಪೇಡ್‌ ಪ್ಲ್ಯಾನ್‌ಗಳು ಯಾವುವು? ಏನೆಲ್ಲಾ ಪ್ರಯೋಜನಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಬಿಎಸ್ಎನ್ಎಲ್  ಪ್ರೀಪೇಡ್‌ ಪ್ಲ್ಯಾನ್‌

ಬಿಎಸ್ಎನ್ಎಲ್ ಪ್ರೀಪೇಡ್‌ ಪ್ಲ್ಯಾನ್‌

ಕಳೆದ ಡಿಸೆಂಬರ್‌ನಲ್ಲಿ ಖಾಸಗಿ ಟೆಲಿಕಾಂಗಳು ತಮ್ಮ ಪ್ರೀಪೇಡ್‌ ಬೆಲೆಯಲ್ಲಿ ಏರಿಕೆ ಮಾಡಿದವು. ಬಿಎಸ್‌ಎನ್ಎಲ್ ಸಹ ಬೆಲೆ ಹೆಚ್ಚಳ ಮಾಡುವ ಮಾತುಗಳು ಕೇಳಿಬಂದಿದ್ದವು ಆದರೆ ಯಾವುದೇ ದರ ಏರಿಕೆ ಮಾಡಲಿಲ್ಲ. ಬಿಎಸ್ಎನ್ಎಲ್ ತನ್ನ ಜನಪ್ರಿಯ ಪ್ರೀಪೇಡ್‌ ಪ್ಲ್ಯಾನ್‌ಗಳಲ್ಲಿ ಮತ್ತಷ್ಟು ಹೆಚ್ಚುವರಿ ಪ್ರಯೋಜನಗಳನ್ನು ನೀಡುವ ಯೋಜನೆಗಳನ್ನು ಮಾಡಿತು. ಅವುಗಳಲ್ಲಿ ವಾರ್ಷಿಕ ಪ್ರೀಪೇಡ್ರ್ ಪ್ಲ್ಯಾನ್ ಹೆಚ್ಚು ಪ್ರಯೋಜನಗಳನ್ನು ಪಡೆದಿದೆ.

ಬಿಎಸ್ಎನ್ಎಲ್ 1,999ರೂ ಪ್ಲ್ಯಾನ್

ಬಿಎಸ್ಎನ್ಎಲ್ 1,999ರೂ ಪ್ಲ್ಯಾನ್

ಬಿಎಸ್ಎನ್ಎಲ್ 1,999ರೂ ಪ್ಲ್ಯಾನ್ ಇದು ವಾರ್ಷಿಕ ಪ್ರೀಪೇಡ್ ಯೋಜನೆ ಆಗಿದೆ. ಒಂದು ವರ್ಷದ 365 ದಿನಗಳ ವ್ಯಾಲಿಡಿಟಿಯನ್ನು ಪಡೆದಿರುವ ಈ ಪ್ಲ್ಯಾನ್ ದೀರ್ಘಾವಧಿಯ ವ್ಯಾಲಿಡಿಟಿ ಮತ್ತು ಅಧಿಕ ಡೇಟಾ ಬಯಸುವ ಗ್ರಾಹಕರಿಗೆ ಉತ್ತಮ. ಇನ್ನು ಈ ಪ್ಲ್ಯಾನ್ ಪ್ರತಿದಿನ 3GB ಡೇಟಾ ಸೌಲಭ್ಯ ಒದಗಿಸುತ್ತದೆ. ಇದರೊಂದಿಗೆ ಪ್ರತಿದಿನ 250 ನಿಮಿಷಗಳ ಉಚಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ಪಡೆದಿದೆ. ಹಾಗೂ ಪ್ರತಿದಿನ 100 ಎಸ್ಎಮ್ಎಸ್‌ಗಳ ಪ್ರಯೋಜನಗಳು ಸೇರಿವೆ. ಇದರೊಂದಿಗೆ ಬಿಎಸ್ಎನ್ಎಲ್ ಟ್ಯೂನ್ ಚಂದಾದಾರಿಕೆ ಸೇವೆ ಪಡೆದಿದೆ.

ಬಿಎಸ್ಎನ್ಎಲ್ 1,699ರೂ ಪ್ಲ್ಯಾನ್

ಬಿಎಸ್ಎನ್ಎಲ್ 1,699ರೂ ಪ್ಲ್ಯಾನ್

ಬಿಎಸ್ಎನ್ಎಲ್ 1,699ರೂ ಪ್ಲ್ಯಾನ್ ಸಹ ಒಂದು ವಾರ್ಷಿಕ ಅವಧಿಯ ಪ್ರೀಪೇಡ್ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ಒದಗಿಸುವ ಜೊತೆಗೆ ಪ್ರತಿದಿನ 250 ನಿಮಿಷಗಳ ಉಚಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ನೀಡುತ್ತದೆ. ಹಾಗೂ ಪ್ರತಿದಿನ 100 ಎಸ್ಎಮ್ಎಸ್‌ಗಳ ಪ್ರಯೋಜನಗಳು ಸೇರಿವೆ. ಇದರೊಂದಿಗೆ ಬಿಎಸ್ಎನ್ಎಲ್ ಟ್ಯೂನ್ ಚಂದಾದಾರಿಕೆ ಸೇವೆ ಪಡೆದಿದೆ.

ಈ ಪ್ಲ್ಯಾನ್ ಉತ್ತಮವೇ?

ಈ ಪ್ಲ್ಯಾನ್ ಉತ್ತಮವೇ?

ಬಿಎಸ್ಎನ್ಎಲ್ ಬಿಎಸ್ಎನ್ಎಲ್ 1,999ರೂ ಪ್ಲ್ಯಾನ್ ಮತ್ತು 1,699ರೂ ಪ್ಲ್ಯಾನ್ ಪ್ಲ್ಯಾನ್‌ ಎರಡು ವಾರ್ಷಿಕ ಅವಧಿಯ ಪ್ರೀಪೇಡ್ ಪ್ಲ್ಯಾನ್‌ಗಳಾಗಿವೆ. ಇದರೊಂದಿಗೆ ಪ್ರತಿದಿನ ಡೇಟಾ, ವಾಯಿಸ್‌ ಕರೆ ಸೌಲಭ್ಯ ಸಹ ಪಡೆದಿವೆ ಹಾಗೂ ಎಸ್ಎಮ್ಎಸ್ ಸಹ ಒಳಗೊಂಡಿವೆ. ಹೀಗಾಗಿ ಪ್ರತಿದಿನ 1GB ಗಿಂತಲೂ ಹೆಚ್ಚಿನ ಡೇಟಾ ಬಯಸುವ ಗ್ರಾಹಕರಿಗೆ ಮತ್ತು ಒಂದು ವರ್ಷದ ವ್ಯಾಲಿಡಿಟಿ ಬೇಕು ಎನ್ನುವ ಗ್ರಾಹಕರಿಗೆ ಈ ಪ್ಲ್ಯಾನ್ ಖಂಡಿತಾ ಉತ್ತಮ ಎಂದು ಹೇಳಬಹುದು.

ಏರ್‌ಟೆಲ್‌ನ ವಾರ್ಷಿಕ ಪ್ಲ್ಯಾನ್

ಏರ್‌ಟೆಲ್‌ನ ವಾರ್ಷಿಕ ಪ್ಲ್ಯಾನ್

ಏರ್‌ಟೆಲ್‌ ಟೆಲಿಕಾಂ ಸಹ ವಾರ್ಷಿಕ ಪ್ರೀಪೇಡ್‌ ಪ್ಲ್ಯಾನ್ ಅನ್ನು ಹೊಂದಿದ್ದು, ಬೆಲೆಯು 2398ರೂ. ಆಗಿದೆ. ಇನ್ನು ಈ ಪ್ಲ್ಯಾನ್ ದೀರ್ಘಾವಧಿಯ ಪ್ಲ್ಯಾನ್ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 1.5GB ಡೇಟಾ ಸೌಲಭ್ಯಗಳನ್ನು ಒದಗಿಸಲಿದೆ. ಇದರೊಂದಿಗೆ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ ಇರಲಿದೆ. ಹಾಗೆಯೇ ಏರ್‌ಟೆಲ್‌ ಆಪ್‌ನ ಇತರೆ ಸೇವೆಗಳು ಸಹ ಲಭ್ಯವಾಗಲಿವೆ.

ವೊಡಾಫೋನ್‌ ವಾರ್ಷಿಕ ಪ್ಲ್ಯಾನ್

ವೊಡಾಫೋನ್‌ ವಾರ್ಷಿಕ ಪ್ಲ್ಯಾನ್

ವೊಡಾಫೋನ್ ಸಂಸ್ಥೆಯು 2399ರೂ.ಬೆಲೆಯ ಪ್ರೀಪೇಡ್‌ ಪ್ಲ್ಯಾನ್ ಒಂದನ್ನು ಹೊಂದಿದ್ದು, ಈ ಪ್ಲ್ಯಾನ್ ಸಹ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಒದಗಿಸುತ್ತದೆ. ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ನೀಡಲಿದೆ. ಇನ್ನು ಇದರೊಂದಿಗೆ ಅನಿಯಮಿತ ಉಚಿತ ಕರೆಗಳ ಸೌಲಭ್ಯವನ್ನು ಗ್ರಾಹಕರಿಗೆ ನೀಡಲಿದೆ. ಹಾಗೆಯೆ ವೊಡಾಫೋನ್ ಆ ಪ್‌ನ ಇತರೆ ಸೇವೆಗಳು ಸಿಗಲಿವೆ.

ಜಿಯೋ ವಾರ್ಷಿಕ ಪ್ಲ್ಯಾನ್ ಹೇಗಿದೆ

ಜಿಯೋ ವಾರ್ಷಿಕ ಪ್ಲ್ಯಾನ್ ಹೇಗಿದೆ

ಜನಪ್ರಿಯ ಜಿಯೋ ಟೆಲಿಕಾಂ ಸಹ 2020ರೂ. ಬೆಲೆಯ ವಾರ್ಷಿಕ ಪ್ರೀಪೇಡ್ ಪ್ಲ್ಯಾನ್‌ ಅನ್ನು ಒಳಗೊಂಡಿದೆ. ಈ ಪ್ರೀಪೇಡ್‌ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಪ್ರತಿದಿನ 1.5GB ಡೇಟಾ ಪ್ರಯೋಜನವನ್ನು ನೀಡುತ್ತದೆ. ಹಾಗೆಯೇ ಜಿಯೋ ಟು ಜಿಯೋ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಇದೆ. ಜಿಯೋ ದಿಂದ ಇತರೆ ನೆಟವರ್ಕಗಳಿಗೆ ಒಟ್ಟು 12000 ನಿಮಿಷಗಳ ಉಚಿತ ಕರೆ ಸೌಲಭ್ಯ ಹೊಂದಿದೆ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್‌ ಸೌಲಭ್ಯ ಇರಲಿದೆ ಹಾಗೂ ಜಿಯೋ ಆಪ್‌ ಸೇವೆಗಳು ಸಿಗುತ್ತವೆ.

3GB ಡೇಟಾ ಯಾವ ಪ್ಲ್ಯಾನ್ ಬೆಸ್ಟ್?

3GB ಡೇಟಾ ಯಾವ ಪ್ಲ್ಯಾನ್ ಬೆಸ್ಟ್?

ಸ್ಮಾರ್ಟ್‌ಫೋನಿನಲ್ಲಿ ಇಂದಿನ ಪ್ರತಿಯೊಂದು ಕೆಲಸಕ್ಕೂ ಇಂಟರ್ನೆಟ್ ಅಗತ್ಯ ಇದೆ. ಹೀಗಾಗಿ ಪ್ರತಿದಿನ ಅಧಿಕ ಇಂಟರ್ನೆಟ್ ಅವಶ್ಯಕತೆ ಬೇಕಾಗುತ್ತದೆ. ಬಹುತೇಕರು 2GB ಡೇಟಾ ಮತ್ತು 3GB ಡೇಟಾ ಸೌಲಭ್ಯವನ್ನು ಬಯಸುತ್ತಾರೆ. ಅಧಿಕ ಡೇಟಾ ಪ್ರಯೋಜನ ಬೇಕಿದ್ದರೇ ಸದ್ಯ ಬಿಎಸ್ಎನ್ಎಲ್‌ನ 1999ರೂ ಹಾಗೂ 1699ರೂ ಪ್ರೀಪೇಡ್‌ ಪ್ಲ್ಯಾನ್‌ಗಳು ಹೆಚ್ಚು ಗಮನ ಸೆಳೆಯುತ್ತವೆ. ಏಕೆಂದರೇ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್‌ ವಾರ್ಷಿಕ ಪ್ರೀಪೇಡ್‌ ಪ್ಲ್ಯಾನ್‌ಗಳಿಗಿಂತ ಬಿಎಸ್‌ನ್ಎಲ್ ಪ್ಲ್ಯಾನ್ ಯೋಗ್ಯ ಅನಿಸುತ್ತದೆ.

Most Read Articles
Best Mobiles in India

English summary
BSNL Rs 1,999 plan comes with 3GB daily data per day, 250 minutes of voice calling to any network within India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X