BSNLನ 777ರೂ. ಬ್ರಾಡ್‌ಬ್ಯಾಂಡ್ ಯೋಜನೆಯ ಅವಧಿ ವಿಸ್ತರಣೆ!

|

ದೇಶಿಯ ಬ್ರಾಡ್‌ಬ್ಯಾಂಡ್‌ ವಲಯದಲ್ಲಿ ಪೈಪೋಟಿ ಜೋರಾಗಿದ್ದು, ಟೆಲಿಕಾಂ ಸಂಸ್ಥೆಗಳು ಗ್ರಾಹಕರನ್ನು ಸೆಳೆಯುವ ಯೋಜನೆಗಳನ್ನು ಪರಿಚಯಿಸುತ್ತಿವೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಹ ಖಾಸಗಿ ಸಂಸ್ಥೆಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಸಾಗಿದೆ. ಆ ಪೈಕಿ ಕಳೆದ ವರ್ಷದಲ್ಲಿ ಸಂಸ್ಥೆಯು 777ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಅನ್ನು ಬಿಡುಗಡೆ ಮಾಡಿ ಚಂದಾದಾರರಿಂದ ಸೈ ಅನಿಸಿಕೊಂಡಿತ್ತು. ಈಗ ಮತ್ತೊಂದು ಖುಷಿ ಸಂಗತಿ ಹೊರಹಾಕಿದೆ.

ಬಿಎಸ್‌ಎನ್‌ಎಲ್ ಸಂಸ್ಥೆ

ಹೌದು, ಬಿಎಸ್‌ಎನ್‌ಎಲ್ ಸಂಸ್ಥೆಯು ಪರಿಚಯಿಸಿದ್ದ, ತನ್ನ 777ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಅನ್ನು ಈಗ ವಿಸ್ತರಿಸಲು ಮುಂದಾಗಿದೆ. ಈ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್ ಜೂನ್ ವೇಳೆ ನಿಲ್ಲಿಸಲು ಯೋಜಿಸಲಾಗಿತ್ತು. ಆದರೆ ಇದೀಗ ಸಂಸ್ಥೆಯು ಕಡಿಮೆ ಬೆಲೆಯ ಈ ಯೋಜನೆಯನ್ನು ಸೆಪ್ಟಂಬರ್ 20, 2020 ವರೆಗೂ ಕೆಲವು ಆಯ್ದ ಟೆಲಿಕಾಂ ವ್ಯಾಪ್ತಿಗಳಲ್ಲಿ ವಿಸ್ತರಿಸಲು ಮುಂದಾಗಿದೆ. ಇನ್ನು ಈ ಯೋಜನೆಯಲ್ಲಿ ಗ್ರಾಹಕರು 500GB ವರೆಗೂ ಡೇಟಾ ಬಳಕೆ ಮಾಡಬಹುದಾಗಿದೆ. ಹಾಗಾದರೇ ಬಿಎಸ್‌ಎನ್‌ಎಲ್‌ 777ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಕುರಿತು ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಬಿಎಸ್‌ಎನ್ಎಲ್‌ 777ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್

ಬಿಎಸ್‌ಎನ್ಎಲ್‌ 777ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್

ಜಿಯೋ ಫೈಬರ್‌ನ 699ರೂ. ಆರಂಭಿಕ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗೆ ಪ್ರಬಲ ಎದುರಾಳಿಯಾಗಿ ಬಿಎಸ್‌ಎನ್‌ಎಲ್ 777ರೂ ಬ್ರಾಡ್‌ಬ್ಯಾಂಡ್‌ ಗುರುತಿಸಿಕೊಂಡಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ 50mbps ವೇಗದಲ್ಲಿ 500GB ಡೇಟಾ ಲಭ್ಯವಾಗಲಿದೆ. ನಿಗದಿಪಡಿಸಿದ 500GB ಡೇಟಾ ಬಳಕೆ ಮುಗಿದ ಬಳಿಕ 2mbps ವೇಗದಲ್ಲಿ ಇಂಟರ್ನೆಟ್‌ ಸೇವೆಯನ್ನು ಮುಂದುವರೆಯಲಿದೆ.

ಯೋಜನೆ ಲಭ್ಯತೆ

ಯೋಜನೆ ಲಭ್ಯತೆ

ಬಿಎಸ್‌ಎನ್‌ಎಲ್‌ ಸಂಸ್ಥೆಯ 777 ರೂ.ಗಳ ಆಕರ್ಷಕ ಬ್ರಾಡ್‌ಬ್ಯಾಂಡ್‌ ಯೋಜನೆಯು ದಾದ್ರಾ ಮತ್ತು ನಗರ ಹವೇಲಿ, ಚತ್ತೀಸಘಡ, ದಮನ್ ಮತ್ತು ಡಿಯು, ಗುಜರಾತ್, ಗೋವಾ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಟೆಲಿಕಾಂ ಪ್ರದೇಶಗಳಲ್ಲಿ ಲಭ್ಯವಿದೆ. ಬಿಎಸ್‌ಎನ್‌ಎಲ್‌ನ ಇತರೆ ಭಾರತ್ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

BSNL ಭಾರತ್ ಬ್ರಾಡ್‌ಬ್ಯಾಂಡ್

BSNL ಭಾರತ್ ಬ್ರಾಡ್‌ಬ್ಯಾಂಡ್

ಬಿಎಸ್‌ಎನ್‌ಎಲ್ ಸಂಸ್ಥೆಯು 'ಭಾರತ್ ಬ್ರಾಡ್‌ಬ್ಯಾಂಡ್‌'ನ ಹೆಸರಿನಲ್ಲಿ ಹಲವು ಜನಪ್ರಿಯ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ. 1,277ರೂ ಪ್ಲ್ಯಾನ್‌ನಲ್ಲಿ ತಿಂಗಳಿಗೆ ಒಟ್ಟು 750GB ಡೇಟಾ ಸಿಗಲಿದೆ. ಹಾಗೆಯೇ 2,499ರೂ. ಪ್ಲ್ಯಾನ್‌ನಲ್ಲಿ ಪ್ರತಿದಿನ 40GB ಡೇಟಾ ಲಭ್ಯವಾಗಲಿದೆ. 9,999ರೂ. ಪ್ಲ್ಯಾನ್‌ ಸಂಸ್ಥೆಯ ತಿಂಗಳ ದುಬಾರಿ ಪ್ಲ್ಯಾನ್‌ ಎಂದೆನಿಸಿಕೊಂಡಿದ್ದು, ಪ್ರತಿದಿನ ಒಟ್ಟು 120GB ಡೇಟಾ ಒಳಗೊಂಡಿದೆ.

Most Read Articles
Best Mobiles in India

English summary
The Rs 777 BSNL broadband plan is valid in Dadra and Nagar Haveli, Chhattisgarh, Daman and Diu, Gujarat, Goa and other circles until September 20.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X