ಲಾಕ್‌ಡೌನ್‌ ಎಫೆಕ್ಟ್‌: BSNLನಿಂದ ಉಚಿತ ಟಾಕ್‌ಟೈಮ್ ಮತ್ತು ವ್ಯಾಲಿಡಿಟಿ ಕೊಡುಗೆ!

|

ದೇಶದಲ್ಲಿ ಕೊರೊನಾ ವೈರಸ್‌ ಹರಡದಂತೆ ತಡೆಯಲು ಸರ್ಕಾರ 21 ದಿನಗಳ ಲಾಕ್‌ಡೌನ್‌ ಘೋಷಿಸಿದೆ. ಈ ಸಂದರ್ಭದಲ್ಲಿ ಟೆಲಿಕಾಂಗಳು ಚಂದಾದಾರರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಹೆಜ್ಜೆಗಳನ್ನು ಇಟ್ಟಿವೆ. ಈಗಾಗಲೇ ಜಿಯೋ, ವೊಡಾಫೋನ್, ಏರ್‌ಟೆಲ್ ಟೆಲಿಕಾಂಗಳು ಆಕರ್ಷಕ ಕೊಡುಗೆ ಘೋಷಿಸಿವೆ. ಆದ್ರೆ ಇದೀಗ ಬಿಎಸ್‌ಎನ್‌ಎಲ್‌ ಸಹ ತನ್ನ ಚಂದಾದಾರರ ಅನುಕೂಲಕ್ಕಾಗಿ ಭರ್ಜರಿ ಕೊಡುಗೆಯೊಂದನ್ನು ತಿಳಿಸಿದೆ.

 ಲಾಕ್‌ಡೌನ್ ಪರಿಣಾಮ

ಹೌದು, ಸದ್ಯ ಲಾಕ್‌ಡೌನ್ ಪರಿಣಾಮ ಮನೆಯಲ್ಲಿಯೇ ಇರುವುದು ಅವಶ್ಯ ಮತ್ತು ಅನಿವಾರ್ಯ ಆಗಿದೆ. ಈ ಸಮಯದಲ್ಲಿ ಮೊಬೈಲ್ ಪ್ಲ್ಯಾನ್ ಅಥವಾ ಡೇಟಾ ಪ್ಲ್ಯಾನ್‌ ಮುಗಿದರೇ ಗ್ರಾಹಕರಿಗೆ ಅನುಕೂಲವಾಗಲೆಂದು ಬಿಎಸ್‌ಎನ್ಎಲ್ ಉಚಿತವಾಗಿ ಟಾಕ್‌ಟೈಮ್ ಮತ್ತು ವ್ಯಾಲಿಡಿಟಿ ಅವಧಿ ವಿಸ್ತರಿಸುವ ಕೊಡುಗೆ ಘೋಷಿಸಿದೆ. ಹಾಗಾದರೇ ಬಿಎಸ್‌ಎನ್ಎಲ್‌ನ ಹೊಸ ಕೊಡುಗೆಯಲ್ಲಿ ಗ್ರಾಹಕರಿಗೆ ಎಷ್ಟು ಟಾಕ್‌ಟೈಮ್ ಹಾಗೂ ವ್ಯಾಲಿಡಿಟಿ ಸಿಗುತ್ತೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಬಿಎಸ್‌ಎನ್ಎಲ್ ಕೊಡುಗೆ

ಬಿಎಸ್‌ಎನ್ಎಲ್ ಕೊಡುಗೆ

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಲಾಕ್‌ಡೌನ್‌ ಅವಧಿಯಲ್ಲಿ ತನ್ನ ಚಂದಾದಾರರಿಗೆ ನೆರವಾಗಲೂ ಎರಡು ಕೊಡುಗೆಗಳನ್ನು ತಿಳಿಸಿದೆ. ತನ್ನ ಪ್ರೀಪೇಯ್ಡ್‌ ಗ್ರಾಹಕರಿಗೆ 10ರೂ. ಟಾಕ್‌ಟೈಮ್ ನೀಡುವುದಾಗಿ ಹೇಳಿದ್ದು, ಇದರೊಂದಿಗೆ ಇದೇ ಏಪ್ರಿಲ್ 20, 2020ವರೆಗೂ ವ್ಯಾಲಿಡಿಟಿ ವಿಸ್ತರಣೆ ಮಾಡುವುದಾಗಿ ಹೇಳಿದೆ.

ಕೊಡುಗೆಯ ಪ್ರಯೋಜನಗಳು

ಕೊಡುಗೆಯ ಪ್ರಯೋಜನಗಳು

ಲಾಕ್‌ಡೌನ್‌ ಎಫೆಕ್ಟ್‌ ಅವಧಿಯಲ್ಲಿ ಪ್ರೀಪೇಯ್ಡ್ ವ್ಯಾಲಿಡಿಟಿ ಮುಕ್ತಾಯವಾಗಿದ್ದರೇ ಅಂತಹ ಚಂದಾದಾರರ ಫೋನ್ ವ್ಯಾಲಿಡಿಟಿಯನ್ನು ಏಪ್ರಿಲ್ 20, 2020ವರೆಗೂ ಉಚಿತವಾಗಿ ವಿಸ್ತರಿಸಲಿದೆ. ಹಾಗೂ ಲಾಕ್‌ಡೌನ್‌ ಅವಧಿಯಲ್ಲಿ ಬ್ಯಾಲೆನ್ಸ್/ಕರೆನ್ಸಿ ಮುಗಿದ ಚಂದಾದಾರರಿಗೆ 10ರೂ. ಉಚಿತ ರೀಚಾರ್ಜ್ ಮಾಡಲಿದೆ.

ಬಿಎಸ್‌ಎನ್‌ಎಲ್ ಆಪ್

ಬಿಎಸ್‌ಎನ್‌ಎಲ್ ಆಪ್

ಬಿಎಸ್ಎನ್ಎಲ್ ಟೆಲಿಕಾಂ ''ಮೈ ಬಿಎಸ್ಎನ್ಎಲ್'' ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಈ ಅಪ್ಲಿಕೇಶನ್‌ನಲ್ಲಿ ರೀಚಾರ್ಜ್ ಮತ್ತು ಪ್ಲಾನ್ ವೆರಿಫಿಕೇಶನ್‌ನಂತಹ ಎಲ್ಲಾ ಅಗತ್ಯ ಸೇವೆಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಹಾಗೆಯೇ ಲಾಕ್‌ಡೌನ್‌ ಸಂದರ್ಭದಲ್ಲಿ ಈ ಆಪ್‌ ಮೂಲಕ ಗ್ರಾಹಕರು ದೂರು ನೀಡಲು, ನೆಟವರ್ಕ್, ಪ್ಲ್ಯಾನ್, ರೀಚಾರ್ಜ್ ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದೆ. ಇತ್ತೀಚಿಗೆ ದೇಶಿಯ ಟೆಲಿಕಾಂಗಳು ಆರ್ಥಿಕ ಸಂಕಷ್ಟದಲ್ಲಿ ಇರುವುದು ನಿಮಗೆ ತಿಳಿದ ಸಂಗತಿಯೇ ಆಗಿದೆ. ಅದಾಗ್ಯೂ ಈ ಸಂದರ್ಭದಲ್ಲಿ ಟೆಲಿಕಾಂ ಸಂಸ್ಥೆಗಳ ಈ ನಿರ್ಧಾರ ಉತ್ತಮ ನಡೆ ಎನ್ನಬಹುದು.

Best Mobiles in India

English summary
BSNL is extending prepaid account validity of users at no extra cost.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X