ಕೇಂದ್ರ ಬಜೆಟ್ 2022: 5G ಸೇವೆ ಇನ್ನೂ ಸನಿಹ; ಇದೇ ವರ್ಷ ತರಂಗಾಂತರ ಹರಾಜು!

|

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2022-23ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಬಹುನಿರೀಕ್ಷಿತ 5G ಸೇವೆಯನ್ನು ಎರಡು ವರ್ಷದೊಳಗಾಗಿ ಆರಂಭಿಸುವುದಾಗಿ ಸಚಿವರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ 5G ಮೊಬೈಲ್ ಸೇವೆಗಳನ್ನು ಸಕ್ರಿಯಗೊಳಿಸಲು ಸ್ಪೆಕ್ಟ್ರಮ್ ಹಂಚಿಕೆ ಹರಾಜು ಪ್ರಕ್ರಿಯೆಯನ್ನು 2022-23 ರೊಳಗೆ ಕೈಗೊಳ್ಳಲಾಗುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಹಾಗೆಯೇ ಪ್ರಸಕ್ತ ಬಜೆಟ್‌ನಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ನೀಡಿರುವ ಇತರೆ ಪ್ರಮುಖ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ.

ಕೇಂದ್ರ ಬಜೆಟ್ 2022: 5G ಸೇವೆ ಇನ್ನೂ ಸನಿಹ; ಇದೇ ವರ್ಷ ತರಂಗಾಂತರ ಹರಾಜು!

* ನೂತನ ತಂತ್ರಜ್ಞಾನಗಳೊಂದಿಗೆ ಚಿಪ್‌ ಒಳಗೊಂಡ ಇ-ಪಾಸ್‌ಪೋರ್ಟ್‌ ಮುಂದಿನ ವರ್ಷದಿಂದ ಜಾರಿ.
* ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಹೆಚ್ಚಿನ ಉತ್ತೇಜನ ನೀಡುವುದಾಗಿ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
* ದೇಶದ ಪ್ರಮುಖ ನಗರಗಳಲ್ಲಿ ಬ್ಯಾಟರಿ ಬದಲಾವಣೆ ಕೇಂದ್ರ ಶುರು ಮಾಡುವುದಾಗಿ ತಿಳಿಸಿದ್ದಾರೆ.
* ಎಲೆಕ್ಟ್ರಿಕ್ ವಾಹನ ಬ್ಯಾಟರಿ ಬದಲಾವಣೆ ಯೋಜನೆ ಜಾರಿ. ಚಾರ್ಜ್ ಆಗಿರುವ ಬ್ಯಾಟರಿ ಬದಲಾವಣೆಗೆ ಸ್ಟೇಷನ್ ಓಪನ್ ಮಾಡಲಾಗುವುದು.
* ಜಮೀನು ನೋಂದಣಿಗೆ ಡಿಜಿಟಲೀಕರಣ ವ್ಯವಸ್ಥೆ ಜಾರಿ. ಅದಕ್ಕಾಗಿ ಒನ್ ನೇಷನ್ ಒನ್ ರಿಜಿಸ್ಟ್ರೇಷನ್‌ ವ್ಯವಸ್ಥೆ ಪ್ರಾರಂಭಿಸುವುದಾಗಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2022: 5G ಸೇವೆ ಇನ್ನೂ ಸನಿಹ; ಇದೇ ವರ್ಷ ತರಂಗಾಂತರ ಹರಾಜು!

* ಕೇಂದ್ರದಲ್ಲಿ ವಿವಿಧ ಯೋಜನೆಗಳ ನಿರ್ವಹಣೆಗಾಗಿ ಇ-ಬಿಲ್ ವ್ಯವಸ್ಥೆ. ಗುತ್ತಿಗೆದಾರರು ಇ-ಬಿಲ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಣೆ ಮಾಡಬೇಕು. ಕಾಗದ ರಹಿತ ಪ್ರಕ್ರಿಯೆ ಜಾರಿಗೊಳಿಸಲು ಇ-ಬಿಲ್ ಸ್ಕೀಮ್ ಜಾರಿ ಮಾಡುವ ಯೋಜನೆ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿದಿದ್ದಾರೆ.

* 75 ಜಿಲ್ಲೆಗಳಲ್ಲಿ 75 ಡಿಜಿಟಲ್‌ ಬ್ಯಾಂಕ್‌ಗಳ ನಿರ್ಮಾಣಕ್ಕೆ ಆದ್ಯತೆ. ಪೋಸ್ಟ್‌ ಆಫೀಸ್‌ಗಳಿಗೆ ಬ್ಯಾಂಕಿಂಗ್ ರೂಪ. ಎಟಿಎಂ (ATM) ರೀತಿ ಡಿಜಿಟಲ್ ಬ್ಯಾಂಕಿಂಗ್ ಸೇವೆ ಒದಗಿಸಲು ಯೋಜನೆ.

ಕೇಂದ್ರ ಬಜೆಟ್ 2022: 5G ಸೇವೆ ಇನ್ನೂ ಸನಿಹ; ಇದೇ ವರ್ಷ ತರಂಗಾಂತರ ಹರಾಜು!

* ವರ್ಚುವಲ್, ಡಿಜಿಟಲ್ ಆಸ್ತಿಗಳನ್ನು ಆಮದು ಮಾಡಿಕೊಳ್ಳುವ ಆದಾಯದ ಮೇಲೆ ಶೇ 30 ಕಸ್ಟಮ್ಸ್​​ ತೆರಿಗೆಯನ್ನು ಪಾವತಿಸಬೇಕಿದೆ. ಇದು ಮೊಬೈಲ್​, ಸ್ಮಾರ್ಟ್‌ ಟಿವಿ ಬೆಲೆಗಳಲ್ಲಿ ಹೆಚ್ಚಳ ಆಗುವ ಸಾಧ್ಯತೆ ಇದೆ.

* ಕಸ್ಟಮ್ಸ್ ಸುಂಕ ನೀತಿಯು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಅಲ್ಲದೇ, ಜಾಗತಿಕ ದರ ಮತ್ತು ದೇಶದ ಪ್ರಾದೇಶಿಕ ಉತ್ಪನ್ನಗಳನ್ನು ರಫ್ತು ಮಾಡಲು ಇದು ಪೂರಕವಾಗಲಿದೆ ಎಂದು ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾರೆ.

* ಭಾರತ್ ನೆಟ್‌ ಯೋಜನೆ ಅಡಿಯಲ್ಲಿ ದೇಶದ ಎಲ್ಲ ಗ್ರಾಮಗಳಿಗೆ ಆಪ್ಟಿಕಲ್ ಫೈಬರ್ ಜೋಡಣೆಗಾಗಿ ಕೇಂದ್ರ ಗುತ್ತಿಗೆ ನೀಡುವ ಯೋಜನೆ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ತಿಳಿಸಿದ್ದಾರೆ.

* ಒನ್‌ ಕ್ಲಾಸ್‌ ಒನ್ ಟಿವಿ ಚಾನೆಲ್ ಯೋಜನೆ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾವ ಮಾಡಿದ್ದಾರೆ. 1 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಈ ಮೂಲಕ ಪಾಠ ಮಾಡುವ ಯೋಜನೆ. ಹಾಗೆಯೇ PM eVidya ಯೋಜನೆ ಅಡಿಯಲ್ಲಿ ಚಾನೆಲ್‌ಗಳ ಸಂಖ್ಯೆಯನ್ನು 200 ರವರೆಗೂ ವಿಸ್ತರಿಸುವ ಯೋಜನೆ.

* ಪ್ರಸ್ತುತ ದೇಶದಲ್ಲಿ ಕ್ರಿಪ್ಟೋಕರೆನ್ಸಿ ಸದ್ದು ಮಾಡುತ್ತಿದೆ. ಈ ನಿಟ್ಟಿನಲ್ಲಿ ಆರ್‌ಬಿಐ ನಿಂದಲೆ ಡಿಜಿಟಲ್ ರುಪಿ ಬಿಡುಗಡೆ ಮಾಡುವ ಯೋಜನೆ ಬಗ್ಗೆ ಬಜೆಟ್‌ನಲ್ಲಿ ತಿಳಿಸಿದ್ದಾರೆ. ಆರ್‌ಬಿಐನಿಂದ ಬ್ಲಾಕ್ ಚೈನ್ ಟೆಕ್ನಾಲಜಿ ಬಳಸಿ ಡಿಜಿಟಲ್ ರುಪಿ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.

* ಐಟಿ ರಿಟರ್ನ್ಸ್‌ ಫೈಲ್ ಮಾಡಲು ನೂತನ ನಿಯಮ ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ. ಎರಡು ವರ್ಷಗಳ ಅವಧಿಯಲ್ಲಿ ಐಟಿ ರಿಟರ್ನ್ಸ್ ಅಪ್ಡೇಟ್ ಮಾಡಬಹುದು ಎಂದು ಅವರು ತಿಳಿಸಿದ್ದಾರೆ. ಕ್ರಿಪ್ಟೋ ಕರೆನ್ಸಿಗಳ ಲಾಭದ ಮೇಲೆ 30% ರಷ್ಟು ತೆರಿಗೆ ಸಾಧ್ಯತೆ.

Most Read Articles
Best Mobiles in India

English summary
Budget 2022: 5G Spectrum Auction This Year, Says finance minister Nirmala Sitharaman.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X