Home
ಸುದ್ದಿಜಾಲ

ಕ್ಯಾನನ್‌ನಿಂದ ಮೊದಲ ವ್ಲಾಗಿಂಗ್‌ ಕ್ಯಾಮೆರಾ ಪರಿಚಯ: ವಿಭಿನ್ನ ವಿನ್ಯಾಸ

ಕ್ಯಾನನ್‌ ಕಂಪೆನಿಯು ವಿಭಿನ್ನ ಸಾಮರ್ಥ್ಯದ ಕ್ಯಾಮೆರಾಗಳನ್ನು ಪರಿಚಯಿಸುವ ಮೂಲಕ ಬಹಳ ಜನಪ್ರಿಯತೆ ಪಡೆದುಕೊಂಡಿದೆ. ಅದರಲ್ಲೂ ಹೊಸದಾಗಿ ಕ್ಯಾಮೆರಾ ಖರೀದಿ ಮಾಡುವವರು ಮೊದಲು ಕಣ್ಣಾಡಿಸುವುದು ಕ್ಯಾನನ್‌ ಕ್ಯಾಮೆರಾಗಳ ಕಡೆಗೆ ಅಷ್ಟರ ಮಟ್ಟಿಗೆ ಇದು ತನ್ನನ್ನು ತಾನು ಗುರುತಿಸಿಕೊಂಡಿದೆ. ಈ ನಡುವೆ ಕ್ಯಾನನ್‌ ಹೊಸ ಹಾಗೂ ವಿಶೇಷ ಶೈಲಿಯ ಕ್ಯಾಮೆರಾವನ್ನು ಅನಾವರಣ ಮಾಡಿದೆ.

ಹೌದು, ಕ್ಯಾನನ್ ಇದೀಗ ವ್ಲಾಗಿಂಗ್ ಮಾಡುವವರನ್ನೇ ಉದ್ದೇಶವಾಗಿರಿಸಿಕೊಂಡು ಹೊಸ ಕ್ಯಾಮೆರಾವನ್ನು ಪರಿಚಯಿಸಿದೆ. ಇದು ತುಂಬಾ ಹಗುರವಾದ ವಿನ್ಯಾಸವನ್ನು ಹೊಂದಿದ್ದು, ಯಾವುದೇ ಸಮಯದಲ್ಲಾದರೂ ಸಹ ಬಳಕೆ ಮಾಡಬಹುದಾಗಿದೆ. ಯಾಕೆಂದರೆ ಇದು ಕೇವಲ 211 ಗ್ರಾಂ. ತೂಕ ಹೊಂದಿದೆ. ಹಾಗಿದ್ರೆ, ಈ ಪವರ್‌ಶಾಟ್ V10 (PowerShot V10) ಕ್ಯಾಮೆರಾದ ಪ್ರಮುಖ ಫೀಚರ್ಸ್‌ ಹಾಗೂ ಇದರ ಬೆಲೆ ವಿವರ ತಿಳಿಯೋಣ ಬನ್ನಿ.

ಕ್ಯಾನನ್‌ನಿಂದ ಮೊದಲ ವ್ಲಾಗಿಂಗ್‌ ಕ್ಯಾಮೆರಾ ಪರಿಚಯ: ವಿಭಿನ್ನ ವಿನ್ಯಾಸ

ಪವರ್‌ಶಾಟ್ V10 ಪ್ರಮುಖ ಫೀಚರ್ಸ್‌: ಈ ವಿಶೇಷ ಕ್ಯಾಮೆರಾ 2.0 ಇಂಚಿನ ಎಲ್‌ಸಿಡಿ ಟಚ್‌ಸ್ಕ್ರೀನ್‌ ಹೊಂದಿದ್ದು, ಇದನ್ನು ಫ್ಲಿಪ್ ಮಾಡಬಹುದು. ಜೊತೆಗೆ ಈ ಪವರ್‌ಶಾಟ್ V10 ಉತ್ತಮ ಗುಣಮಟ್ಟದ ಮೈಕ್ರೊಫೋನ್‌ ಆಯ್ಕೆ ಪಡೆದಿದ್ದು, ಇನ್‌ಬಿಲ್ಟ್ ಸ್ಟ್ಯಾಂಡ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಶೇಕ್-ಫ್ರೀ 4K UHD ವಿಡಿಯೋಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಇದು ಪಡೆದುಕೊಂಡಿದೆ. ಇನ್ನುಳಿದಂತೆ ಪವರ್‌ಶಾಟ್ V10 ಲಂಬವಾದ ವಿನ್ಯಾಸ ಪಡೆದುಕೊಂಡಿದ್ದು, ಪೋರ್ಟಬಲ್ ಆಗಿದೆ.

ಇನ್ನು ಈ ಕ್ಯಾಮೆರಾದ ಮೂಲಕ ಜನನಿಬಿಡ ಪ್ರದೇಶಗಳಲ್ಲಿ ರೆಕಾರ್ಡ್ ಮಾಡುವಾಗ ಬಳಕೆದಾರರಿಗೆ ಹಲವು ಅನುಕೂಲ ಮಾಡಿಕೊಡಲಿದೆ. ಅಂದರೆ ಕೇಂದ್ರೀಕೃತ ರೆಕಾರ್ಡ್ ಬಟನ್ ತ್ವರಿತ ಮತ್ತು ಚುರುಕುಬುದ್ಧಿಯ ಒನ್-ಹ್ಯಾಂಡೆಡ್ ಕ್ಯಾಮೆರಾ ಕಂಟ್ರೋಲ್‌ ಆಗಿ ಬಳಕೆ ಮಾಡಬಹುದು. ಅಂದರೆ ಈ ಕ್ಯಾಮೆರಾವನ್ನು ಸಂಪೂರ್ಣವಾಗಿ ಒಬ್ಬರೇ ಕಂಟ್ರೋಲ್‌ ಮಾಡಬಹುದು. ಜೊತೆಗೆ ಕ್ಯಾಮರಾದ ಹೃದಯಭಾಗದಲ್ಲಿ 1 ಇಂಚಿನ CMOS ಸೆನ್ಸರ್‌ ಆಯ್ಕೆ ನೀಡಲಾಗಿದ್ದು, ಇದು 4K ವಿಡಿಯೋ ಗುಣಮಟ್ಟವನ್ನು ಹೊಂದಿದೆ.

ಇನ್ನುಳಿದತೆ ಸ್ಟಿಲ್ಸ್ ಶೂಟಿಂಗ್ ಸಾಮರ್ಥ್ಯ ಪಡೆದುಕೊಂಡಿರುವ ಈ ಕ್ಯಾಮೆರಾದಲ್ಲಿ ನೀವು 14 ಕಲರ್ ಫಿಲ್ಟರ್ ಎಫೆಕ್ಟ್‌ಗಳು ಮತ್ತು ಸ್ಮೂತ್ ಸ್ಕಿನ್ ಮೋಡ್‌ನಲ್ಲಿ ಯಾವುದನ್ನಾದರೂ ಬಳಸಿಕೊಂಡು ವಾತಾವರಣವನ್ನು ತಕ್ಷಣಕ್ಕೆ ಬದಲಾಯಿಸಬಹುದು. ಇದರೊಂದಿಗೆ ವಿವಿಧ ಇತರೆ ಟೂಲ್ಸ್‌ಗಳನ್ನು ಬಳಕೆ ಮಾಡಿಕೊಳ್ಳಲು ಈ ಕ್ಯಾಮೆರಾ ಅನುವು ಮಾಡಿಕೊಟ್ಟಿದೆ. ಜೊತೆಗೆ ಎರಡು ದೊಡ್ಡ ಸ್ಟಿರಿಯೊ ಮೈಕ್ರೊಫೋನ್‌ಗಳನ್ನು ಹೊಂದಿರುವುದಲ್ಲದೆ ಅನಗತ್ಯ ಶಬ್ಧವನ್ನು ಆಟೋಮ್ಯಾಟಿಕ್‌ ಆಗಿ ಕಂಟ್ರೋಲ್‌ ಮಾಡುವ ಸಾಮರ್ಥ್ಯ ಪಡೆದುಕೊಂಡಿದೆ.

ಕ್ಯಾನನ್‌ನಿಂದ ಮೊದಲ ವ್ಲಾಗಿಂಗ್‌ ಕ್ಯಾಮೆರಾ ಪರಿಚಯ: ವಿಭಿನ್ನ ವಿನ್ಯಾಸ

ಈ ವಿಶೇಷ ಕ್ಯಾಮೆರಾ ಕ್ಯಾನನ್‌ ಕ್ಯಾಮೆರಾ ಕನೆಕ್ಟ್‌ ಆಪ್‌ಗೆ ಬೆಂಬಲ ನೀಡಲಿದ್ದು. ಇದರಿಂದಾಗಿ ನೀವು ನಿಮ್ಮ ವಿಡಿಯೋಗಳನ್ನು ವೈ-ಫೈ ಮೂಲಕ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ಗೆ ಸುಲಭವಾಗಿ ವರ್ಗಾಯಿಸಬಹುದು. ಇದಿಷ್ಟೇ ಅಲ್ಲದೆ ಲ್ಯಾಪ್‌ಟಾಪ್ ಅಥವಾ ಪಿಸಿಗೆ ವರ್ಗಾವಣೆ ಮಾಡಲು ಸಾಕಷ್ಟು ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಇದನ್ನು ಲ್ಯಾಪ್‌ಟಾಪ್ ಹಾಗೂ ಪಿಸಿಯಲ್ಲಿ ವೆಬ್‌ಕ್ಯಾಮ್ ಆಗಿಯೂ ಬಳಕೆ ಮಾಡಿಕೊಳ್ಳಬಹುದಾಗಿದೆ.

ಇದರ ಕನೆಕ್ಟಿವಿಟಿವಿ ವಿಚಾರದಲ್ಲಿ ಹೆಚ್‌ಡಿಎಮ್‌ಐ ಹಾಗೂ ಯುಎಸ್‌ಬಿ ಪೋರ್ಟ್‌ ಹೊಂದಿದ್ದು, ಈ ಕ್ಯಾಮೆರಾದ ಜೊತೆಗೆ ವಿಡಿಯೋ ಮಾಡಲು ಎಲ್ಲಾದರೂ ಹೊರಹೋದಾಗ ಯುಎಸ್‌ಬಿ ಟೈಪ್‌-ಸಿ ಕೇಬಲ್ ಬಳಕೆ ಮಾಡಿಕೊಂಡು ಚಾರ್ಜಿಂಗ್ ಮಾಡಿಕೊಳ್ಳಬಹುದು. ಈ ಮೂಲಕ ನಿಮ್ಮ ಅಗತ್ಯಕ್ಕೆ ತಕ್ಕಂತೆ ಎಲ್ಲಾ ರೀತಿಯಲ್ಲೂ ಈ ಕ್ಯಾಮೆರಾ ಹೊಂದಾಣಿಕೆ ಆಗಲಿದ್ದು, ಇದರಿಂದ ವಿಶೇಷ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

ಈ ಕ್ಯಾಮೆರಾವನ್ನು ಖರೀದಿ ಮಾಡುವವರಿಗೆ ವಿವಿಧ ಆಯ್ಕೆಗಳನ್ನು ನೀಡಲಾಗಿದೆ. ಅಂದರೆ ಕ್ಯಾಮೆರಾವನ್ನು ಎರಡು ವಿಭಿನ್ನ ಬಂಡಲ್‌ಗಳ ಭಾಗವಾಗಿ ವರ್ಗೀಕರಿಸಲಾಗಿದ್ದು, ಸ್ಟ್ಯಾಂಡರ್ಡ್ ಕಿಟ್‌ನಲ್ಲಿ ಪವರ್ ಕೇಬಲ್, ಸಾಫ್ಟ್ ಕೇಸ್, ಲೆನ್ಸ್ ಕ್ಯಾಪ್, ವಿಂಡ್ ಶೀಲ್ಡ್ ಮತ್ತು ಮಣಿಕಟ್ಟಿನ ಪಟ್ಟಿಯನ್ನು ಒಳಗೊಂಡಿದೆ. ಹೆಚ್ಚು ಸೃಜನಶೀಲ ಆಯ್ಕೆಗಳನ್ನು ಬಯಸುವವರಿಗೆ, ಸ್ಮಾಲ್‌ರಿಂಗ್‌ ಸಹಯೋಗದೊಂದಿಗೆ ವಿನ್ಯಾಸಗೊಳಿಸಲಾದ ಸುಧಾರಿತ ಕಿಟ್‌ನಲ್ಲಿ ರಿಂಗ್ ಲೈಟ್ ಅನ್ನು ಲಗತ್ತಿಸಲು ಅಥವಾ ಬಾಹ್ಯ ಮೈಕ್ರೊಫೋನ್ ಅನ್ನು ಹಿಡಿದಿಡಲು ಬಳಸಬಹುದಾದ ಕೇಜ್ ಆಯ್ಕೆಯನ್ನು ಪಡೆದುಕೊಂಡಿದೆ.

ಕ್ಯಾನನ್‌ನಿಂದ ಮೊದಲ ವ್ಲಾಗಿಂಗ್‌ ಕ್ಯಾಮೆರಾ ಪರಿಚಯ: ವಿಭಿನ್ನ ವಿನ್ಯಾಸ

ಪವರ್‌ಶಾಟ್ V10 ಬೆಲೆ ಹಾಗೂ ಲಭ್ಯತೆ: ಭಾರತದಲ್ಲಿ ಈ ಕ್ಯಾಮೆರಾಗೆ 39,995ರೂ.ಗಳನ್ನು ನಿಗದಿ ಮಾಡಲಾಗಿದೆ. ಈ ಕ್ಯಾಮೆರಾವನ್ನು ನೀವು ಖರೀದಿ ಮಾಡಬೇಕು ಎಂದರೆ ಸ್ವಲ್ಪ ಸಮಯ ಕಾಯಬೇಕಿದೆ. ಯಾಕೆಂದರೆ ಇದು ಜೂನ್ 2023 ಮಾರಾಟಕ್ಕೆ ಲಭ್ಯವಾಗಲಿದೆ. ಇದರ ಜೊತೆಗೆ ನೀವು ಕ್ಯಾನನ್ ಸ್ಟೋರ್‌ಗಳು ಅಥವಾ ಯಾವುದೇ ಪ್ರಮುಖ ರಿಟೇಲರ್‌ ಸ್ಟೋರ್‌ ಹಾಗೂ ಪ್ರಮುಖ ಇ-ಕಾಮರ್ಸ್‌ ಸೈಟ್‌ ಮೂಲಕ ಖರೀದಿ ಮಾಡಬಹುದಾಗಿದೆ.

Best Mobiles in India

English summary
Canon has introduced a new camera aimed at vloggers. This PowerShot V10 camera weighs only 211 grams and these camera Got attractive features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+