ಇನ್‌ಸ್ಟಾಗ್ರಾಮ್‌ ಸೇರಿದ ಮತ್ತೊಂದು ಆಕರ್ಷಕ ಫೀಚರ್ಸ್‌!.ವಿಶೇಷತೆ ಏನು?

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ಗಳಲ್ಲಿ ಇನ್‌ಸ್ಟಾಗ್ರಾಮ್‌ ಕೂಡ ಒಂದಾಗಿದೆ. ಬಳಕೆದಾರರ ನೆಚ್ಚಿನ ಫೋಟೋ ಶೇರಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇನ್‌ಸ್ಟಾಗ್ರಾಮ್‌ ಈಗಾಗಲೇ ಬಳಕೆದಾರರಿಗೆ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಇನ್‌ಸ್ಟಾಗ್ರಾಮ್‌ ಸ್ಟೋರೀಸ್‌ ಫೀಚರ್ಸ್‌ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಇದೀಗ ಇನ್‌ಸ್ಟಾಗ್ರಾಮ್ ಸ್ಟೋರಿಸ್‌ಗಾಗಿ ಕ್ಯಾಪ್ಶನ್‌ ಸ್ಟಿಕ್ಕರ್ ಅನ್ನು ಪರಿಚಯಿಸಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ಸ್ಟೋರಿಸ್‌ ಫೀಚರ್ಸ್‌ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಬಳಕೆದಾರರು ಸ್ಟೋರೀಸ್‌ನಲ್ಲಿ ತಮ್ ನೆಚ್ಚಿನ ಶಾರ್ಟ್‌ ವೀಡಿಯೋಗಳು, ಫೋಟೋಗಳನ್ನು ಶೇರ್‌ ಮಾಡುತ್ತಾರೆ. ಈ ಮೂಲಕ ತಮ್ಮ ಮದುರ ಕ್ಷಣಗಳನ್ನು ಸ್ಟೋರಿಸ್‌ನಲ್ಲಿ ಅನುಭವಿಸುತ್ತಾರೆ. ಇದೀಗ ಸ್ಟೋರೀಸ್‌ ಫೀಚರ್ಸ್‌ಗೆ ಹೊಸ ಟಚ್‌ ನೀಡುವ ಕ್ಯಾಪ್ಶನ್‌ ಸ್ಟಿಕ್ಕರ್‌ ಫೀಚರ್ಸ್‌ ಅನ್ನು ಇನ್‌ಸ್ಟಾಗ್ರಾಮ್‌ ಲಾಂಚ್‌ ಮಾಡಿದೆ. ಹಾಗಾದ್ರೆ ಈ ಹೊಸ ಕ್ಯಾಪ್ಶನ್‌ ಸ್ಟಿಕ್ಕರ್‌ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ ಸ್ಟೋರಿಗಳಲ್ಲಿ ಪರಿಚಯಿಸಿರುವ ಹೊಸ ಕ್ಯಾಪ್ಶನ್‌ ಸ್ಟಿಕ್ಕರ್ ಫೀಚರ್ಸ್‌ ಅನ್ನು ಸ್ಟಿಕ್ಕರ್ ಟ್ರೇನಲ್ಲಿ ಕಾಣಬಹುದು. ನಿಮ್ಮ ವೀಡಿಯೊವನ್ನು ನೀವು ಒಮ್ಮೆ ರೆಕಾರ್ಡ್ ಮಾಡಿದ ನಂತರ ನೀವು ಕ್ಯಾಪ್ಶನ್‌ ಸ್ಟಿಕ್ಕರ್ ಅನ್ನು ಟ್ಯಾಪ್ ಮಾಡಬಹುದು. ಇದು ವೀಡಿಯೊದಲ್ಲಿನ ಸ್ಪೀಚ್‌ ಅನ್ನು ಆಟೋಮ್ಯಾಟಿಕ್‌ ಕಾಪಿ ಮಾಡಲಿದೆ. ಅಲ್ಲದೆ ಲಭ್ಯವಿರುವ ವಿಭಿನ್ನ ಫಾಂಟ್‌ಗಳಲ್ಲಿ ಆಯ್ಕೆ ಮಾಡಲು ಇನ್‌ಸ್ಟಾಗ್ರಾಮ್‌ ನಿಮಗೆ ಅನುಮತಿಸುತ್ತದೆ. ಜೊತೆಗೆ ಕ್ಯಾಪ್ಶನ್‌ಗಳಿಗೆ ಬಣ್ಣವನ್ನು ಸಹ ಬದಲಾಯಿಸುತ್ತದೆ. ಕ್ಯಾಪ್ಶನ್‌ಗಳಲ್ಲಿ ಪದಗಳನ್ನು ಎಡಿಟ್‌ ಮಾಡುವ ಆಯ್ಕೆಯೂ ಇದೆ, ಏಕೆಂದರೆ ಪ್ರತಿಲೇಖನವು ನಿಖರವಾಗಿರುವುದಿಲ್ಲ.

ಕ್ಯಾಪ್ಶನ್‌

ಇನ್ನು ಕ್ಯಾಪ್ಶನ್‌ ಸ್ಟಿಕ್ಕರ್ ಮೊದಲು ಇಂಗ್ಲಿಷ್ ಮತ್ತು ಇಂಗ್ಲಿಷ್ ಮಾತನಾಡುವ ದೇಶಗಳಿಗೆ ಲಭ್ಯವಿರುತ್ತದೆ ಎಂದು ದಿ ವರ್ಜ್ ವರದಿ ಮಾಡಿದೆ. ಇನ್‌ಸ್ಟಾಗ್ರಾಮ್ ಇತರ ಭಾಷೆಗಳನ್ನೂ ಸೇರಿಸುವ ಕೆಲಸ ಮಾಡುತ್ತಿದೆ. ಕ್ಯಾಪ್ಶನ್‌ಗಳಲ್ಲಿ ಪಠ್ಯವನ್ನು ಹೈಲೈಟ್ ಮಾಡಲು ಯಾವುದೇ ಆಯ್ಕೆಗಳಿಲ್ಲ ಎಂದು ಉಲ್ಲೇಖಿಸಲಾಗಿದೆ. ಆದರೆ ನೀವು ಇದನ್ನು ಡ್ರಾಯಿಂಗ್ ಟೂಲ್ ಅಥವಾ ಪಠ್ಯದ ಹಿಂದೆ ಸ್ಟಿಕ್ಕರ್ ಅನ್ನು ಬಳಸಬಹುದು. ಇನ್ನು ಈ ಫೀಚರ್ಸ್‌ ಜನಪ್ರಿಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ, ಜೊತೆಗೆ ಇದು ಶ್ರವಣದೋಷವುಳ್ಳ ಜನರಿಗೆ ಸಹಕಾರಿಯಾಗಿದೆ.

ಇನ್‌ಸ್ಟಾಗ್ರಾಮ್

ಇದಲ್ಲದೆ ಇನ್‌ಸ್ಟಾಗ್ರಾಮ್ ತನ್ನ ಕ್ಯಾಮೆರಾ-ಫಸ್ಟ್ ಥ್ರೆಡ್ಸ್ ಅಪ್ಲಿಕೇಶನ್‌ನೊಂದಿಗೆ ಕಳೆದ ವರ್ಷ ಇದೇ ಮಾದರಿಯ ಫೀಚರ್ಸ್‌ ಅನ್ನು ಪರಿಚಯಿಸಿತು. ಇಲ್ಲಿ, ರೆಕಾರ್ಡ್ ಮಾಡಿದ ಪ್ರತಿಯೊಂದು ವೀಡಿಯೊಗೆ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಕ್ಯಾಪ್ಶನ್‌ಗಳನ್ನು ಸೇರಿಸುತ್ತದೆ. ನಂತರ ನೀವು ಕ್ಯಾಪ್ಶನ್‌ಗಳನ್ನು ತೆಗೆದುಹಾಕಬಹುದು, ಅಥವಾ ಪ್ರತಿ ಪದವನ್ನು ಎಡಿಟ್‌ ಮಾಡಬಹುದು. ನೀವು ಕ್ಯಾಪ್ಶನ್‌ಗಳನ್ನೂ ವೀಡಿಯೊದ ಸುತ್ತಲೂ ಸರಿಸಬಹುದು ಮತ್ತು ನಿಮಗೆ ಬೇಕಾದ ಸ್ಥಳದಲ್ಲಿ ಇರಿಸಬಹುದು. ಥ್ರೆಡ್‌ಗಳಲ್ಲಿ, ಪ್ರತಿಲೇಖನಗಳು 15 ಸೆಕೆಂಡುಗಳ ಕಾಲ ಕಾರ್ಯನಿರ್ವಹಿಸುತ್ತವೆ. ಕ್ಯಾಪ್ಶನ್‌ಗಳು ಐಜಿಟಿವಿಯಲ್ಲೂ ಸಹ ಲಭ್ಯವಿದೆ.

Most Read Articles
Best Mobiles in India

Read more about:
English summary
captions stickers for stories now available on Instagram.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X