Just In
Don't Miss
- Education
Bank Of Maharashtra Recruitment 2019: 300 ಸಾಮಾನ್ಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಜೆಮೊಪಾಯ್
- Finance
ಡಾಲರ್ ಎದುರು ಹೆಚ್ಚಿದ ರುಪಾಯಿ ಬಲ: 6 ವಾರಗಳಲ್ಲಿ ಗರಿಷ್ಠ ಮಟ್ಟ
- News
ರಾಮನಗರ, ಚನ್ನಪಟ್ಟಣಕ್ಕೆ ಕಾವೇರಿ ನೀರು ಸ್ಥಗಿತ
- Lifestyle
ಈ ರೀತಿ ಈಜುವುದರಿಂದ ಮೈ ಬೊಜ್ಜು ಸುಲಭವಾಗಿ ಕರಗಿಸಬಹುದು
- Movies
ಮಧ್ಯರಾತ್ರಿ ಆರಾಧ್ಯ ದೈವನ ಹುಟ್ಟು ಹಬ್ಬ ಆಚರಿಸಿದ ವಿಜಿ 'ಸಲಗ' ಟೀಮ್
- Sports
ಐಎಸ್ಎಲ್ 2019: ಒಡಿಶಾ ಎಫ್ಸಿಗೆ ಪುಣೆಯಲ್ಲಿ ಅಮೂಲ್ಯ ಜಯ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಸೇರಿತು ಚಂದ್ರಯಾನ-2 ನೌಕೆ!
ದೇಶದ ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆಯು ಇಂದು ಬೆಳಗ್ಗೆ ಚಂದ್ರನ ಇನ್ನಷ್ಟು ಸನಿಹಕ್ಕೆ ಸರಿದಿದೆ. ಚಂದ್ರಯಾನ-2 ನೌಕೆಯನ್ನು ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ಏರಿಸುವ ಕೆಲಸ ಇಂದು ಬೆಳಿಗ್ಗೆ 9.02 ರಲ್ಲಿ ಯಶಸ್ವಿಯಾಗಿ ನಡೆದಿದ್ದು, 30 ದಿನಗಳ ನಂತರ ನೌಕೆಯು ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರಿದೆ ಎಂದು ಇಸ್ರೋ ತಿಳಿಸಿದೆ. ಈ ಮೂಲಕ ಚಂದ್ರಯಾನ ಯೋಜನೆಯಲ್ಲಿ ಸವಾಲಿನ ಕಾರ್ಯಾಚರಣೆಯಾಗಿದ್ದ ಮಹತ್ವದ ಮೈಲುಗಲ್ಲನ್ನು ಇಸ್ರೋ ಸಾಧಿಸಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಇಸ್ರೊ ಅಧ್ಯಕ್ಷ ಕೆ. ಶಿವನ್ ಅವರು 'ಚಂದ್ರನ ಕಕ್ಷೆ ಪ್ರವೇಶಿಸಿದ ಬಗ್ಗೆ ಖಚಿತ ಮಾಹಿತಿ ನೀಡಿ ಇಡೀ ದೇಶಕ್ಕೆ ಸಿಹಿಸುದ್ದಿ ನೀಡಿದ್ದಾರೆ. 'ಚಂದ್ರಯಾನ-2'ಗೆ ಚಂದ್ರನ ಮೇಲೆ ಇಳಿಯಲು ಕೆಲವೇ ದಿನಗಳಷ್ಟೇ ಬಾಕಿಯಿದೆ. ಕಕ್ಷೆ ಬದಲಾವಣೆ ಕೆಲಸ ಇಲ್ಲಿಗೆ ಮುಗಿಯುವುದಿಲ್ಲ. ಚಂದ್ರನ ನಿಗದಿತ ಕಕ್ಷೆಗೆ ನೌಕೆಯು ತಲುಪುವುದಕ್ಕೆ ಇನ್ನೂ ನಾಲ್ಕು ಕಾರ್ಯಾಚರಣೆ ನಡೆಸಬೇಕಿದೆ. ಅಂತಿಮವಾಗಿ, ಚಂದ್ರನ ಧ್ರುವ ಪ್ರದೇಶಕ್ಕೆ ಸುಮಾರು 100 ಕಿ.ಮೀ. ಹತ್ತಿರದ ಕಕ್ಷೆಗೆ ನೌಕೆಯು ಸೇರಲಿದೆ ಎಂದು ತಿಳಿಸಿದ್ದಾರೆ.
ಚಂದ್ರಯಾನ-2 ನೌಕೆಯನ್ನು ಜುಲೈ 22ರಂದು ಉಡ್ಡಯನ ಮಾಡಲಾಗಿತ್ತು. ಚಂದ್ರ ಕಕ್ಷೆಗೆ ವರ್ಗಾವಣೆಯಾಗುವ ದಿಕ್ಕಿನಲ್ಲಿ ನೌಕೆಯು ನಿಗದಿಯಂತೆಯೇ ಸಂಚರಿಸುತ್ತಿದೆ ಎಂದು ಆ. 14ರಂದು ಇಸ್ರೊ ಹೇಳಿತ್ತು. ಇದೀಗ ಇಂದು ಬೆಳಿಗ್ಗೆ 9.02 ರಲ್ಲಿ ಯಶಸ್ವಿಯಾಗಿ ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ಸೇರಿಸಿದೆ.ಚಂದ್ರಯಾನ-2 ಚಂದ್ರನಿಗೆ ಸಂಬಂಧಿಸಿ ಇಸ್ರೊ ಕೈಗೆತ್ತಿಕೊಂಡಿರುವ ಎರಡನೇ ಯೋಜನೆ. ಈ ಬಾರಿ, ಈವರೆಗೆ ಯಾರೂ ಶೋಧಿಸದ ದಕ್ಷಿಣ ಧ್ರುವದ ಬಗ್ಗೆ ಚಂದ್ರಯಾನ-2 ನೌಕೆಯ ಗಮನವನ್ನು ಕೇಂದ್ರೀಕರಿಸಲಾಗಿದೆ.
44 ಮೀಟರ್ ಎತ್ತರದ ಜಿಎಸ್ಎಲ್ವಿ ಮಾರ್ಕ್-3 ರಾಕೆಟ್ ತನ್ನ ದೈತ್ಯ ಗಾತ್ರದಿಂದಾಗಿ ಬಾಹುಬಲಿ ಎಂದೇ ಹೆಸರಾಗಿದೆ. 13 ದೇಸಿ ಉಪಕರಣಗಳನ್ನು ಹೊತ್ತೊಯ್ದಿರುವ ಚಂದ್ರಯಾನ - 2, ಸ್ಥಳಾಕೃತಿ, ಭೂಕಂಪಶಾಸ್ತ್ರ, ಖನಿಜ ಗುರುತಿಸುವಿಕೆ ಮತ್ತು ವಿತರಣೆ, ಮೇಲ್ಮೈ ರಾಸಾಯನಿಕ ಸಂಯೋಜನೆ, ಮೇಲಿನ ಮಣ್ಣಿನ ಉಷ್ಣ-ಭೌತಿಕ ಗುಣಲಕ್ಷಣಗಳು ಮತ್ತು ನಿಧಾನವಾದ ಚಂದ್ರನ ವಾತಾವರಣದ ಸಂಯೋಜನೆ ಮುಂತಾದ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಲಿದೆ. ಒಟ್ಟು 48 ದಿನಗಳ ನಂತರ ಬಾಹುಬಲಿ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ.
ಕೇಬಲ್ ಮತ್ತು ಡಿಟಿಎಚ್ ನೀತಿ ದುರ್ಬಳಕೆಯಾಗುತ್ತಿದೆ ಎಂದ ಟ್ರಾಯ್!
ಇದುವರೆಗೆ ಚಂದ್ರನ ದಕ್ಷಿಣ ಧ್ರುವವನ್ನು ಯಾರು ಪ್ರವೇಶಿಸಿಲ್ಲ. ಭಾರತೀಯ ಬಾಹ್ಯಾಕಾಶ ಯೋಜನೆಯ ಪಿತಾಮಹ ಡಾ. ವಿಕ್ರಮ್ ಸಾರಾಭಾಯಿ ಅವರ ಹೆಸರನ್ನು ನಾಮಕರಣ ಮಾಡಲಾದ 'ವಿಕ್ರಮ್ ಲ್ಯಾಂಡರ್', 27 ಕೆ.ಜಿ ತೂಕದ 'ಪ್ರಜ್ಞಾನ್' ಹೆಸರಿನ ರೋಬಾಟಿಕ್ ರೋವರ್ ಮತ್ತು ಇವೆರಡನ್ನೂ ಒಳಗೊಂಡ 'ಆರ್ಬಿಟರ್' ಅನ್ನು ರಾಕೆಟ್ ನಭಕ್ಕೆ ಹೊತ್ತೊಯ್ದಿದೆ. 'ಲ್ಯಾಂಡರ್' ಸಾಧನವು ವ್ಯೋಮನೌಕೆಯನ್ನು ಚಂದ್ರನ ಮೇಲೆ ಇಳಿಸಲು ನೆರವಾಗಲಿದೆ. ರೋವರ್, ಲ್ಯಾಂಡರ್ ಸೇರಿದಂತೆ 3,850 ಕೆಜಿ ತೂಕದ ರಾಕೆಟ್ ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪುವ ಮೂಲಕ ವಿಶ್ವದಲ್ಲೇ ಗುರುತರ ಸಾಧನೆಯನ್ನು ಇಸ್ರೋ ಮಾಡಲಿದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090