Just In
Don't Miss
- News
LIVE: ಜಾರ್ಖಂಡ್ 3ನೇ ಹಂತದ ಮತದಾನ ಸಂಪೂರ್ಣ ಅಪ್ಡೇಟ್ಸ್
- Sports
ವಿಶ್ವದಾಖಲೆಗಾಗಿ ಅಫ್ರಿದಿ, ಗೇಲ್ ಸಾಲು ಸೇರಿದ ಹಿಟ್ಮ್ಯಾನ್ ರೋಹಿತ್!
- Movies
ಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿ
- Lifestyle
ದಂಪತಿ ನಡುವಿದ್ದ ಭಿನ್ನಾಭಿಪ್ರಾಯ ಮತ್ತೆ ಸೆಕ್ಸ್ ಲೈಫ್ ಉತ್ತಮವಾಗಲು ಟಿಪ್ಸ್
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಚಂದ್ರಯಾನ-2 ಯಶಸ್ವಿ ಉಡಾವಣೆ: ನೀವು ತಿಳಿಯಲೇಬೇಕಾದ ಕುತೂಹಲ ಮಾಹಿತಿಗಳು!
ಇಡೀ ವಿಶ್ವವೇ ಕಣ್ಣರಳಿಸಿ ನೋಡುತ್ತಿರುವ ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಯಶಸ್ವಿಯಾಗಿ ಉಡಾವಣೆಯಾಗಿದೆ. ಇಂದು ಮಧ್ಯಾಹ್ನ 2.43ಕ್ಕೆ ಸರಿಯಾಗಿ ಭಾರತದ ಅತ್ಯಂತ ಬಲಿಷ್ಠ ಉಡಾಹಕ ಎನಿಸಿಕೊಂಡಿರುವ ಜಿಎಸ್ಎಲ್ವಿ ಮಾರ್ಕ್ 3 ನೌಕೆಯು ಚಂದ್ರಯಾನ್-2 ಉಪಗ್ರಹ ಮತ್ತು ಪ್ರಜ್ಞಾನ್ ರೋವರ್ ಅನ್ನು ಹೊತ್ತೊಯ್ದಿದ್ದು, ಚಂದ್ರನ ದಕ್ಷಿಣ ಧ್ರುವಕ್ಕೆ ಉಪಗ್ರಹ ಕಳುಹಿಸುತ್ತಿರುವ ವಿಶ್ವದ ಮೊಟ್ಟ ಮೊದಲ ರಾಷ್ಟ್ರ ಎನ್ನುವ ಖ್ಯಾತಿಗೆ ಭಾರತ ಪಾತ್ರವಾಗುತ್ತಿದೆ.
ಚಿತ್ರ ಕೃಪೆ: ಡಿಡಿ
ಹೌದು, ಈ ವರೆಗೆ ಚಂದ್ರನಲ್ಲಿಗೆ ರಷ್ಯಾ, ಅಮೆರಿಕ ಮತ್ತು ಚೀನಾ ಈ ಮೂರೇ ರಾಷ್ಟ್ರಗಳು ರೋವರ್ ಕಳುಹಿಸಿವೆ. ಈಗ ಈ ಸಾಲಿಗೆ ಭಾರತ ಕೂಡ ಸೇರ್ಪಡೆಯಾಗುತ್ತಿದ್ದು, ಇದೇ ಮೊದಲ ಬಾರಿಗೆ ಭಾರತವು ಚಂದ್ರನ ದಕ್ಷಿಣ ಭಾಗದ ಬಗ್ಗೆ ಅಧ್ಯಯನ ನಡೆಸಲಿರುವ ರಾಷ್ಟ್ರ ಎಂಬ ಪಟ್ಟವನ್ನು ಸಹ ಪಟೆಯಲಿದೆ. ವಿಶ್ವದ ಯಾವ ರಾಷ್ಟ್ರವೂ ಚಂದ್ರನ ಮತ್ತೊಂದು ಪಾರ್ಶ್ವಮುಖವಾದ ದಕ್ಷಿಣ ಧ್ರುವವವನ್ನು ಅಧ್ಯಯನ ಮಾಡಿಲ್ಲವಾದುದರಿಂದ ಚಂದ್ರಯಾನ-2 ಯೋಜನೆಯನ್ನು ವಿಶ್ವವೇ ಕಣ್ಣರಳಿಸಿ ನೋಡುತ್ತಿದೆ.
10 ವರ್ಷಗಳ ಹಿಂದೆ ಸ್ವದೇಶಿ ನಿರ್ಮಿತ ಚಂದ್ರಯಾನ-1 ಯೋಜನೆ ಯಶಸ್ವಿಯಾಗಿತ್ತು. ಇದಾದ 10 ವರ್ಷಗಳ ನಂತರ ಭಾರತೀಯ ಇಸ್ರೋ ಚಂದ್ರನ ಅಂಗಳಕ್ಕೆ ಮತ್ತೊಂದು ಉಪಗ್ರಹ ಉಡಾವಣೆ ಮಾಡಿದೆ. ರೋವರ್ ಪ್ರಜ್ಞಾನ್ ಮತ್ತು ವಿಕ್ರಂ ಎಂಬ ಹೆಸರಿನ ಲ್ಯಾಂಡರ್ ಸೇರಿ ಒಟ್ಟು 14 ವೈಜ್ಞಾನಿಕ ಪ್ರಯೋಗಗಳಿಗೆ ಅವಕಾಶ ಕಲ್ಪಿಸುವ ಸೂಟ್ ಅನ್ನು ಚಂದ್ರುಯಾನ 2 ಕೊಂಡೊಯ್ಯಲಿದೆ. ಹಾಗಾದರೆ, ಚಂದ್ರಯಾನ-2 ಯೋಜನೆಯ ಇನ್ನಿತರ ವಿಶೇಷತೆಗಳೇನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

3,877 ಕೆಜಿ ತೂಕದ ಉಪಗ್ರಹ
ಉಪಗ್ರಹದ ಒಟ್ಟಾರೆ ತೂಕ 3,877 ಕೆಜಿ ಆಗಿದ್ದು, ರೋವರ್ ಪ್ರಜ್ಞಾನ್ 27 ಕೆ.ಜಿ. ಭಾರವಿದೆ. ಇನ್ನು ಲ್ಯಾಂಡರ್ ವಿಕ್ರಮ್ ಅನ್ನು ಆರ್ಬಿಟರ್ನ ಮೇಲ್ಭಾಗದಲ್ಲಿ ಇರಿಸಲಾಗಿದೆ. ಒಂದು ವರ್ಷದ ಅವಧಿಯಲ್ಲಿ ಚಂದ್ರಯಾನ-2 ಉಪಗ್ರಹದ ಒಳಭಾಗದಲ್ಲಿನ ಭಾರಿ ತಾಪಮಾನವನ್ನು ತಡೆದುಕೊಳ್ಳಲು ಅನುವಾಗುವಂತೆ ಚಿನ್ನದ ಫಿಲಂನಲ್ಲಿ ಇದನ್ನು ಸುತ್ತಿರಿಸಲಾಗಿದೆ. ಆರು ಗಾಲಿಗಳನ್ನು ಹೊಂದಿರುವ ಇದು ಇದುವರೆಗೂ ಯಾರೊಬ್ಬರೂ ಅನ್ವೇಷಿಸದಿರುವ ಚಂದ್ರನ ದಕ್ಷಿಣ ಧ್ರುವದಲ್ಲಿ ಅನ್ವೇಷಣೆ ಕಾರ್ಯ ನಡೆಸಲಿದೆ.

ಇದೊಂದು ರೋಬಾಟಿಕ್ ಯೋಜನೆ
ಇನ್ನು ಲ್ಯಾಂಡರ್ನ ಒಳಭಾಗದಲ್ಲಿ ರೋವರ್ ಪ್ರಜ್ಞಾನ್ ಅನ್ನು ಇರಿಸಲಾಗಿದ್ದು, ಇದೊಂದು ರೋಬಾಟಿಕ್ ಯೋಜನೆಯಾಗಿದ್ದು, ಇದರಲ್ಲಿ ಬಾಹ್ಯಾಕಾಶಯಾನಿಗಳು ಪ್ರಯಾಣಿಸುವುದಿಲ್ಲ. 10 ವರ್ಷಗಳ ನಂತರ ಎರಡನೇ ಬಾರಿಗೆ ಭಾರತ ಚಂದ್ರಯಾನ ಯೋಜನೆಯನ್ನು ಕೈಗೆತ್ತಿಕೊಂಡಿದೆ. 2009ರಲ್ಲಿ ಇಸ್ರೋ ಚಂದ್ರಯಾನ 1 ಯೋಜನೆ ಕೈಗೊಂಡಿತ್ತು. ಆದರೆ ರೋವರ್ ಅನ್ನು ಈ ಯೋಜನೆಯಲ್ಲಿ ಸೇರಿಸಿರಲಿಲ್ಲ. ಆರ್ಬಿಟರ್ ಮತ್ತು ಇಂಪ್ಯಾಕ್ಟರ್ ಗಳು ಚಂದ್ರಯಾನ 1ರ ಭಾಗವಾಗಿದ್ದವು. ಇಂಪ್ಯಾಕ್ಟರ್ ಚಂದ್ರನ ಮೇಲ್ಮೈನ ದಕ್ಷಿಣ ಭಾಗದಲ್ಲಿ ಪತನವಾಗಿತ್ತು.

ಚಂದ್ರನ ಅಂಗಳಕ್ಕೆ ರೋವರ್
ಚಂದ್ರನ ಮೇಲ್ಮೈನ ಚಿತ್ರವನ್ನು ಸರೆಹಿಡಿಯಲಿರುವ ಆರ್ಬಿಟರ್ ಚಂದ್ರನ ಅಂಗಳದಲ್ಲಿರುವ ಖನಿಜ ಸಂಪತ್ತನ್ನು ಆಮೂಲಾಗ್ರವಾಗಿ ಪರಿಶೀಲಿಸಲಿದೆ. ಲ್ಯಾಂಡರ್ನಲ್ಲಿ ವ್ಯವಸ್ಥೆಗೊಳಿಸಲಾಗಿರುವ ರ್ಯಾಂಪ್ ಅನ್ನು ಬಳಸಿಕೊಂಡು ಚಂದ್ರನ ಅಂಗಳಕ್ಕೆ ರೋವರ್ ಇಳಿಯಲಿದೆ. ಒಟ್ಟು 1,471 ಕೆ.ಜಿ. ಭಾರವಿರುವ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಉಂಟಾಗುವ ಕಂಪನಗಳು ಮತ್ತು ಅಲ್ಲಿನ ತಾಪಮಾನ ಕುರಿತು ಅಧ್ಯಯನ ನಡೆಯಲಿದೆ. ಚಂದ್ರ ಮಣ್ಣಿನ ವಿಶ್ಲೇಷಣೆ ನಡೆಸಲು ಅನುವಾಗುವಂತೆ ಪ್ರಜ್ಞಾನ್ನಲ್ಲಿ ಕ್ಯಾಮರಾಗಳು ಮತ್ತು ಉಪಕರಣಗಳನ್ನು ವ್ಯವಸ್ಥೆ ಮಾಡಲಾಗಿದೆ.

ಯೋಜನೆಯ ಉದ್ದೇಶವೇನು?
ಈ ಉಪಗ್ರಹ ಟೆರ್ರೇನ್ ಮ್ಯಾಪಿಂಗ್ ಕ್ಯಾಮರಾ 2 ಅನ್ನು ಹೊಂದಿದೆ. ಚಂದ್ರನ ಮೇಲಿಳಿಯುವ 20 ಕೆಜಿ ತೂಕದ ರೋವರ್, ಚಂದ್ರನ ಮೇಲೆ ಸಂಚಾರ ನಡೆಸಿ ಅಲ್ಲಿಯ ಹವಾಮಾನ, ಅಲ್ಲಿನ ಕಲ್ಲು ಮತ್ತು ಮಣ್ಣಿನ ಬಗ್ಗೆ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸುತ್ತದೆ. ನಂತರ ಅದನ್ನು ಆರ್ಬಿಟರ್ ಮೂಲಕ ಭೂಮಿಗೆ ಕಳುಹಿಸುತ್ತದೆ. ಲ್ಯಾಂಡರ್-ರೋವರ್ನ ಆಯುಷ್ಯ 14 ದಿನಗಳಿದ್ದರೆ ಆರ್ಬಿಟರ್ 1 ವರ್ಷದವರೆಗೆ ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇದು ಉಪಗ್ರಹ ಹೊಂದಿರುವ ಸಾಮರ್ಥ್ಯಕ್ಕೆ ಕೈಗನ್ನಡಿಯಾಗಿದೆ.

ಕೇವಲ 978 ಕೋಟಿ ರೂ ವೆಚ್ಚ!
ಈ ಯೋಜನೆಗೆ ತಗುಲುತ್ತಿರುವ ಒಟ್ಟು ವೆಚ್ಚ ಕೇವಲ 978 ಕೋಟಿ ರೂಪಾಯಿ. ಇಷ್ಟು ಕಡಿಮೆ ವೆಚ್ಚದಲ್ಲಿ ಯಾವ ದೇಶವೂ ಸಹ ಇಂತಹ ಮಹಾನ್ ಯೋಜನೆಯನ್ನು ರೂಪಿಸಲು ಸಾಧ್ಯವಾಗಿಲ್ಲ. ನಿಮಗೆ ಗೊತ್ತಾ? ಇತ್ತೀಚಿಗೆ ಬಿಡುಗಡೆಯಾದ ಹಾಲಿವುಡ್ನ 'ಅವೆಂಜರ್ ಎಂಡ್ಗೇಮ್ ' ಸಿನಿಮಾ ಬಜೆಟ್ಗಿಂತ ಕಡಿಮೆ ಮೊತ್ತದಲ್ಲಿ ಈ ಯೋಜನೆ ಸಿದ್ಧಗೊಂಡಿದೆ. 'ಅವೆಂಜರ್ ಎಂಡ್ಗೇಮ್ ' ಸಿನಿಮಾಗೆ 2400 ಕೋಟಿ ರೂ. ವೆಚ್ಛ ಮಾಡಲಾಗಿತ್ತು. ಬಾಹುಬಲಿ ಸಿನಿಮಾ ಗಳಿಗಿಂತ ಕಡಿಮೆ ಎಂಬುದು ಸಹ ವಿಶೇಷವೇ.!
ಭಾರತದ ಹೆಮ್ಮೆಯ ಚಂದ್ರಯಾನ-2 ಯೋಜನೆಯನ್ನು ನೇರವಾಗಿ ವೀಕ್ಷಿಸಿ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090