ಬಿಎಸ್‌ಎನ್‌ಎಲ್‌ನ ಈ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಬೆಲೆ ಅಗ್ಗ; ಆದ್ರೆ, ರೀಚಾರ್ಜ್‌ ಕಷ್ಟ!

|

ಸದ್ಯಕ್ಕೆ ಏರ್‌ಟೆಲ್‌, ಜಿಯೋ ಹಾಗೂ ವಿ ಕಂಪೆನಿಗಳು ತಮ್ಮ ಗ್ರಾಹಕರಿಗೆ ವಿವಿಧ ರೀತಿಯ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ಅದಾಗ್ಯೂ ಕಾಲಕಾಲಕ್ಕೆ ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸುವ ಮೂಲಕ ಹೊಸ ಗ್ರಾಹಕರಿಗೆ ಗಾಳ ಹಾಕುತ್ತಿವೆ. ಹಾಗೆಯೇ ಇದೇ ಮಾರ್ಗವನ್ನು ಬಿಎಸ್‌ಎನ್‌ಎಲ್‌ ಸಹ ಅನುಸರಿಸುತ್ತಿದ್ದು, ಅಗ್ಗದ ಬೆಲೆಯ ರೀಚಾರ್ಜ್‌ ಪ್ಲ್ಯಾನ್‌ಗಳಲ್ಲಿ ಹಲವಾರು ಸೌಲಭ್ಯಗಳನ್ನು ನೀಡುತ್ತಾ ಬರುತ್ತಿದೆ. ಅಂತೆಯೇ ಇದೀಗ ಬಿಎಸ್‌ಎನ್‌ಎಲ್‌ನ 199 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ ಎಲ್ಲರ ಗಮನ ಸೆಳೆಯಲಿದೆ.

ಬಿಎಸ್‌ಎನ್‌ಎಲ್‌ನ ಈ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಬೆಲೆ ಅಗ್ಗ; ರೀಚಾರ್ಜ್‌ ಕಷ್ಟ!

ಹೌದು, ಬಿಎಸ್‌ಎನ್‌ಎಲ್‌ ಈಗಾಗಲೇ ಹಲವು ರೀತಿಯ ರೀಚಾರ್ಜ್‌ ಕೊಡುಗೆಗಳನ್ನು ಗ್ರಾಹಕರಿಗೆ ನೀಡಿದೆ. ಅದರಂತೆ ಪೋಸ್ಟ್‌ಪೇಯ್ಡ್ ವಿಭಾಗದಲ್ಲಿ 199 ರೂ. ಗಳ ಪ್ಲ್ಯಾನ್‌ ಬಳಕೆದಾರರಿಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತದೆ. ಹಾಗಿದ್ರೆ, ಈ 199 ರೂ. ಗಳಲ್ಲಿ ನೀವು ಏನೆಲ್ಲಾ ಸೌಲಭ್ಯ ಪಡೆಯಬಹುದು, ಈ ರೀಚಾರ್ಜ್‌ ಪ್ರಕ್ರಿಯೆಯನ್ನು ಮೊಬೈಲ್‌ನಲ್ಲಿಯೇ ಮಾಡಿಕೊಳ್ಳಬಹುದೇ? ಇದು ಎಲ್ಲಿಯವರೆಗೆ ಮಾನ್ಯವಾಗಿರುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಬಿಎಸ್‌ಎನ್‌ಎಲ್‌ನ 199 ರೂ. ಗಳ ಪ್ಲ್ಯಾನ್‌
ಬಿಎಸ್‌ಎನ್‌ಎಲ್‌ ಪ್ರವೇಶ ಮಟ್ಟದ 199 ರೂ.ಗಳ ರೀಚಾರ್ಜ್‌ ಪ್ಲ್ಯಾನ್‌ ಪರಿಚಯಿಸಿದ್ದು, ಈ ಮೂಲಕ ಅನಿಯಮಿತ ಕರೆ, ಡೇಟಾ ಮತ್ತು ಎಸ್‌ಎಮ್‌ಎಸ್‌ ಪ್ರಯೋಜನಗಳನ್ನು ಒದಗಿಸುತ್ತದೆ. ಹಾಗೆಯೇ ಅಂತಾರಾಷ್ಟ್ರೀಯ ರೋಮಿಂಗ್ ಮತ್ತು ಇತರ ಪ್ರಯೋಜನಗಳಂತಹ ವಿವಿಧ ಆಡ್-ಆನ್ ಸೇವೆ ಸಹ ಇದರಿಂದ ಲಭ್ಯ.

199 ರೂ.ಗಳ ರೀಚಾರ್ಜ್‌ ಪ್ಲ್ಯಾನ್‌ಗಾಗಿ ಭದ್ರತಾ ಠೇವಣಿ ಇಡಬೇಕು
ಇಲ್ಲಿ ಗಮನಿಸಬೇಕಾದ ಪ್ರಮುಖ ವಿಷಯ ಏನೆಂದರೆ ಈ 199 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ ಪಡೆಯಬೇಕು ಎಂದರೆ ಹಾಗೂ ಈ ಸೇವೆ ಸಕ್ರಿಯವಾಗಬೇಕಾದರೆ ಬಳಕೆದಾರರು ಲೋಕಲ್‌ ಮತ್ತು ಎಸ್‌ಟಿಡಿ ಸೇವೆಗೆ ಭದ್ರತೆಯಾಗಿ ಹಾಗೂ ಅಗತ್ಯಕ್ಕೆ ಅನುಗುಣವಾಗಿ 100ರೂ.,500 ರೂ. ಹಾಗೂ ಲೋಕಲ್‌, ಎಸ್‌ಟಿಡಿ ಮತ್ತು ಐಎಸ್‌ಡಿ ಸೇವೆಗಾಗಿ 2,000 ರೂ. ಗಳನ್ನು ಪಾವತಿಸಬೇಕಾಗುತ್ತದೆ.

ಬಿಎಸ್‌ಎನ್‌ಎಲ್‌ನ ಈ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಬೆಲೆ ಅಗ್ಗ; ರೀಚಾರ್ಜ್‌ ಕಷ್ಟ!

ಬಿಎಸ್‌ಎನ್‌ಎಲ್‌ 199 ಪ್ಲ್ಯಾನ್‌ನ ಪ್ರಯೋಜನಗಳು
ಎಮ್‌ಟಿಎನ್‌ಎಲ್‌ ನೆಟ್‌ವರ್ಕ್‌ ಮೂಲಕ ಮುಂಬೈ ಮತ್ತು ದೆಹಲಿ ಸೇರಿದಂತೆ ಗೃಹ ಮತ್ತು ರಾಷ್ಟ್ರೀಯ ರೋಮಿಂಗ್‌ನಲ್ಲಿ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯ್ಸ್‌ ಕಾಲ್‌ ಮಾಡಬಹುದಾಗಿದೆ. ಹಾಗೆಯೇ ದಿನವೂ ನೀವು 100 ಎಸ್‌ಎಮ್‌ಎಸ್‌ಗಳನ್ನು ಬಳಕೆ ಮಾಡಬಹುದಾಗಿದ್ದು, 25 GB ಬಲ್ಕ್ ಡೇಟಾ ಆಯ್ಕೆ ಸಹ ನೀಡಲಾಗುತ್ತದೆ. ಇದಿಷ್ಟೇ ಅಲ್ಲದೆ, ನಿಮ್ಮ ಸ್ಥಳದಲ್ಲಿ ಯಾವ ನೆಟ್‌ವರ್ಕ್‌ ಲಭ್ಯವಿದೆಯೋ ಅಂದರೆ 2G, 3G ಮತ್ತು 4G ಗೆ ಬೆಂಬಲ ಸಿಗಲಿದೆ. ಇಷ್ಟೆಲ್ಲಾ ಸೌಲಭ್ಯದ ಜೊತೆಗೆ 75 GB ಡೇಟಾ ರೋಲ್‌ ಓವರ್ ಆಯ್ಕೆ ಸಹ ಇದೆ. ಇನ್ನು ಡೇಟಾ ಖಾಲಿಯಾದ ನಂತರ ಪ್ರತಿ MB ಗೆ ಒಂದು ಪೈಸೆಯನ್ನು ನೀಡಬೇಕಿದೆ. ಈ ಮೂಲಕ ಪ್ರತಿ GB ನಿಮಗೆ 10.24 ರೂ. ಗಳಲ್ಲಿ ಲಭ್ಯವಾಗುತ್ತದೆ.

ಬಿಎಸ್‌ಎನ್‌ಎಲ್‌ ಕೇಂದ್ರಕ್ಕೆ ಭೇಟಿ ನೀಡಬೇಕು....
ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾ ಪೂರೈಕೆದಾರ ಬಿಎಸ್‌ಎನ್‌ಎಲ್‌ ತನ್ನ ಬಳಕೆದಾರರಿಗೆ ಮೊಬೈಲ್, ಬ್ರಾಡ್‌ಬ್ಯಾಂಡ್, ಫಿಕ್ಸೆಡ್‌ಲೈನ್, ಏರ್ ಫೈಬರ್ ಮತ್ತು ಇತರ ಸೇವೆಗಳನ್ನು ನೀಡುತ್ತಿದ್ದು, ಅದರಲ್ಲಿ ಈ ಪೋಸ್ಟ್‌ಪೇಯ್ಡ್ ಸೇವೆ ಸಹ ಒಂದಾಗಿದೆ. ಆದರೆ, ಗ್ರಾಹಕರು ಈ ಸೇವೆ ಪಡೆಯಬೇಕು ಎಂದರೆ ಹತ್ತಿರದ ಬಿಎಸ್‌ಎನ್‌ಎಲ್‌ ಕಚೇರಿಗೆ ಭೇಟಿ ನೀಡಬೇಕು. ಜೊತೆಗೆ ಕೆವೈಸಿ ಮಾಡಿ ಮೊದಲೇ ತಿಳಿಸಿದಂತೆ ಭದ್ರತಾ ಠೇವಣಿ ಪಾವತಿಸಬೇಕಿದೆ.

ಬಿಎಸ್‌ಎನ್‌ಎಲ್‌ನ ಈ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಬೆಲೆ ಅಗ್ಗ; ರೀಚಾರ್ಜ್‌ ಕಷ್ಟ!

ಇದರ ನಡುವೆ ಕೆಲವು ದಿನಗಳ ಹಿಂದೆಯಷ್ಟೇ ಗ್ರಾಹಕರಿಗೆ ಹಲವು ಓಟಿಟಿ ಸೇವೆಯನ್ನು ನೀಡುವ ರೀಚಾರ್ಜ್‌ ಪ್ಲ್ಯಾನ್‌ ಅನ್ನು ಸಹ ಘೋಷಣೆ ಮಾಡಿದೆ. ಗ್ರಾಹಕರು 249ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ ಅನ್ನು ಖರೀದಿಸುವ ಮೂಲಕ ಜೀ5, ಸೋನಿಲೈವ್, ವೋಟ್‌ ಸೆಲೆಕ್ಟ್‌, ಯುಪ್‌ ಟಿವಿ, ಆಹಾ, Lionsgate Play, ಹಂಗಾಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ ಇದರೊಂದಿಗೆ ಇನ್ನೊಂದು ಓಟಿಟಿ ಪ್ರಯೋಜನ ಪಡೆಯಬಹುದಾಗಿದೆ. ಹೀಗಾಗಿ ಯಾರೆಲ್ಲಾ ಓಟಿಟಿ ಪ್ಲಾಟ್‌ಫಾರ್ಮ್‌ ಬಳಕೆ ಮಾಡುತ್ತಾರೋ ಅವರಿಗೆ ಇದು ಅಗ್ಗದ ಹಾಗೂ ಸುಲಭ ರೀಚಾರ್ಜ್‌ ಪ್ಲ್ಯಾನ್‌ ಆಗಿರಲಿದೆ.

Best Mobiles in India

English summary
Postpaid Recharge plan will be available from BSNL at a cheap rate of Rs 199. It has a validity of one month and will get many benefits. Details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X