Just In
Don't Miss
- News
ಮೇಯರ್ ಅವಧಿ ಇಂದು ಮುಕ್ತಾಯ; ಮೀಸಲಿನತ್ತ ಎಲ್ಲರ ಚಿತ್ತ
- Finance
ಸತತ ಮೂರನೇ ದಿನ ಚಿನ್ನದ ಬೆಲೆ ಇಳಿಕೆ; ಒಂದು ತಿಂಗಳ ಹಿಂದಿನ ಕನಿಷ್ಠ ಮಟ್ಟಕ್ಕೆ
- Movies
'ಬಿಗ್ ಬಾಸ್ ತಮಿಳು ಸೀಸನ್ 4' ಗೆದ್ದು ಬೀಗಿದ ನಟ ಆರಿ ಅರ್ಜುನ; ಗಳಿಸಿದ್ದೆಷ್ಟು?
- Automobiles
ಸೆಗ್ಮೆಂಟ್ ಇನ್ ಫಸ್ಟ್ ಫೀಚರ್ಸ್ ಪಡೆದುಕೊಳ್ಳಲಿದೆ ಟಾಟಾ ಹೊಸ ಸಫಾರಿ ಎಸ್ಯುವಿ
- Sports
ಐಎಸ್ಎಲ್: ಸಮಬಲದ ಪ್ರದರ್ಶನ ನೀಡಿ ಡ್ರಾ ಮಾಡಿಕೊಂಡ ಎಟಿಕೆಎಂಬಿ, ಗೋವಾ
- Lifestyle
ಅಂಡಾಣು ಶೈತ್ಯೀಕರಣ: ಮಗುವನ್ನು ಪಡೆಯಲು ಈ ವಿಧಾನ ಸುರಕ್ಷಿತವೇ?
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪಬ್ಜಿ ಗೇಮ್ನಲ್ಲಿ ಈ ತಪ್ಪು ಮಾಡಿದರೇ 10ವರ್ಷ ನಿಷೇಧ!
ವಿಶ್ವದ ಅತ್ಯಂತ ಜನಪ್ರಿಯ ವಿಡಿಯೋ ಗೇಮ್ ಎಂದರೇ ಅದು 'ಪಬ್ಜಿ' ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಸದ್ಯ ಯುವ ಸಮೂಹವು ಈ ಗೇಮ್ನ ಕ್ರೇಜ್ಗೆ ಒಳಗಾಗಿದ್ದು, ಯಾವಾಗಲೂ ಪಬ್ಜಿ ಹ್ಯಾಂಗೋವರ್ನಲ್ಲಿಯೇ ಇರುತ್ತಾರೆ. ಪಬ್ಜಿ ಗೇಮ್ಗೆ ಅತೀಯಾಗಿ ಅಡಿಕ್ಟ್ ಆದವರೇ ನಿಮಗೊಂದು ಶಾಕಿಂಗ್ ಸುದ್ದಿ ಬಂದಿದೆ. ನೀವೆನಾದರೂ ಈ ತಪ್ಪು ಮಾಡಿದರೇ ನಿಮಗೆ ಪಬ್ಜಿ ಆಡುಲು ಅನುಮತಿಯೇ ಇರಲ್ಲ.

ಹೌದು, ಪಬ್ಜಿ ಗೇಮ್ ಸಂಸ್ಥೆಯು ತನ್ನ ಗೇಮಿಂಗ್ ಮಾನದಂಡಗಳನ್ನು ಉಲ್ಲಂಘನೆ ಮಾಡುವ ಆಟಗಾರರಿಗೆ 10 ವರ್ಷ ಪಬ್ಜಿಯಿಂದ ನಿಷೇಧ ಹೇರುವ ಕಠಿಣ ನಿರ್ಧಾರ ಕೈಗೊಂಡಿದೆ. ಪಬ್ಜಿ ಗೇಮ್ ಈಗಾಗಲೇ ಸಿಕ್ಕಾಪಟ್ಟೆ ಜನಪ್ರಿಯತೆಗಳಿಸಿದ್ದು, ಪಬ್ಜಿ ಡೆವಲಪರ್ ರೂಲ್ಸ್ ಬ್ರೇಕ್ ಮಾಡಿ ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳ ಅಥವಾ ಇತರೆ ಭಿನ್ನ ಮಾರ್ಗದ ಮೂಲಕ ಗೇಮ್ ಆಡುವ ಆಟಗಾರರು ನಿಷೇಧದ ಬಿಸಿ ತಟ್ಟಲಿದೆ.

ಪಬ್ಜಿ ಗೇಮ್ ಸಂಸ್ಥೆಯು ಥರ್ಡ ಪಾರ್ಟಿಗಳ ಮೂಲಕ ತನ್ನ ನಿಯಮಗಳನ್ನು ಉಲ್ಲಂಘಿಸುವ ಆಟಗಾರರ ವಿರುದ್ಧ ಸಂಪೂರ್ಣ ಕಠಿಣ ನಿಲುವು ತಾಳಿದೆ. ಹೀಗಾಗಿ ಸಂಸ್ಥೆಯ ನಿಯಮಾವಳಿಗಳಿಗೆ ಮೋಸ ಮಾಡುವ ಆಟಗಾರರಿಗೆ 10 ವರ್ಷ ಆಟದಿಂದ ದೂರವಿಡುವ ಕ್ರಮಕ್ಕೆ ಮುಂದಾಗಿದೆ. ಅಂತಹ ಆಟಗಾರರ ಗೇಮ್ ಐಡಿಗಳನ್ನು ಕಂಪನಿಯು ಪ್ರಕಟಿಸುವುದಾಗಿಯೂ ತಿಳಿಸಿದೆ.

ಪಬ್ಜಿ ಗೇಮ್ ಅನ್ನು ಆಡುವ ಪ್ರತಿಯೊಬ್ಬ ಆಟಗಾರನಿಗೂ ನ್ಯಾಯಯುತ ಮತ್ತು ಆನಂದದಾಯಕವಾದ ಗೇಮಿಂಗ್ ವಾತಾವರಣದ ಅನುಕೂಲ ಒದಗಿಸುವುದು ಕಂಪನಿಯ ಉದ್ದೇಶವಾಗಿದೆ. ಅದಕ್ಕಾಗಿ ಅನ್ಯಾಯದ ಮಾರ್ಗದಲ್ಲಿ ಗೇಮ್ ಮಾಡುವುದನ್ನು ತಡೆಯಲು ಪಬ್ಜಿ ಸಂಸ್ಥೆಯು ಈ ನಿರ್ಧಾರಕ್ಕೆ ಮುಂದಾಗಿದೆ. ಹೀಗಾಗಿ ಇನ್ನು ಮುಂದೆ ಅಂತಹ ವಂಚನೆಗಳು ಕಂಡು ಬಂದರೇ ಅಂತಹ ಆಟಗಾರರ ಐಡಿಗಳನ್ನು ಬಹಿರಂಗಪಡಿಸಲಿದೆ.

ಪಬ್ಜಿ ಸಂಸ್ಥೆಯು ಕಳೆದ ವರ್ಷ ಡಿಸೆಂಬರ್ನಲ್ಲಿ, ಸುಮಾರು 30,000 ಕ್ಕೂ ಅಧಿಕ PUBG ಪ್ಲೇಯರ್ ಖಾತೆಗಳು ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದಕ್ಕಾಗಿ ಆ ಖಾತೆಗಳು ನಿಷೇಧಕ್ಕೆ ಒಳಗಾಗಿದ್ದವು.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190