Just In
Don't Miss
- News
ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಎಲ್ಲಾ ಆರೋಪಿಗಳ ಎನ್ ಕೌಂಟರ್
- Movies
ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಪುನೀತ್ ರಾಜ್ ಕುಮಾರ್ ವರ್ಕೌಟ್ ವಿಡಿಯೋ
- Lifestyle
ಶುಕ್ರವಾರವಾದ ದಿನ ಭವಿಷ್ಯ 6-12-2019
- Sports
ರನ್ ಬೆನ್ನತ್ತುವ ಪರೀಕ್ಷೆಗೆ ಭಾರತ ಸಿದ್ದ: ವಿರಾಟ್ ಕೊಹ್ಲಿ
- Automobiles
ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ
- Finance
ವಿಶ್ವದ ಬೃಹತ್ ಕಂಪನಿಗಳನ್ನು ಮುನ್ನಡೆಸುತ್ತಿರುವ ಟಾಪ್ 10 ಭಾರತೀಯರು
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
- Travel
ಭಾರತದಲ್ಲಿ ಖಗೋಳ ಛಾಯಾಚಿತ್ರಗ್ರಹಣ ಮಾಡಲು ಇಲ್ಲಿವೆ ಬೆಸ್ಟ್ ಸ್ಥಳಗಳು
ವಿಶ್ವದಾದ್ಯಂತ ಉಚಿತ ಇಂಟರ್ನೆಟ್!..ಚೀನಾ ಕಂಪೆನಿಯ ಹೊಸ ಸಾಹಸ!!
ಯಾವಾಗಲೂ ಅನಿಯಮಿತ ಹೈ ಸ್ಪೀಡ್ ಉಚಿತ ಇಂಟರ್ನೆಟ್ ಸಿಕ್ಕರೆ ಹೇಗಿರುತ್ತದೆ?.. ಹೌದು, ಇಂತಹದೊಂದು ದೊಡ್ಡ ಕಲ್ಪನೆಯು ನನಸಾಗುವ ಕಾಲ ಸನಿಹದಲ್ಲಿದೆ. ವಿಶ್ವದಾದ್ಯಂತ ಉಚಿತ ಇಂಟರ್ನೆಟ್ ಸೇವೆಯನ್ನು ಒದಗಿಸಲು ಈಗ ಚೀನಾ ಮೂಲದ ಕಂಪೆನಿಯೊಂದು ಸಜ್ಜಾಗಿದೆ. ಪ್ರಪಂಚದಾದ್ಯಂತ ಉಚಿತ ವೈ ಫೈ ನೀಡುವುದಾಗಿ ಆ ಕಂಪೆನಿ ಘೋಷಿಸಿಕೊಂಡಿದೆ.
ಹೌದು, ಈಗಾಗಲೇ ವಿಶ್ವದಾದ್ಯಂತ ಅಂತರ್ಜಾಲ ಸಂಪರ್ಕವನ್ನು ಒದಗಿಸುವ ಕ್ಲಪನೆಯನ್ನು ಹೊಂದಿರುವ ಸ್ಪೇಸ್ ಎಕ್ಸ್, ಫೇಸ್ಬುಕ್ ಮತ್ತು ಗೂಗಲ್ನಂತಹ ಕಂಪೆನಿಗಳ ಸಾಲಿಗೆ ಈಗ ಚೀನಾದ ಅಂತರ್ಜಾಲ ತಂತ್ರಜ್ಞಾನ ಕಂಪನಿಯೊಂದು ಸೇರಿಕೊಂಡಿದೆ. ಶಾಂಘೈ ಮೂಲದ 'ಲಿಂಕ್ಶೂರ್ ನೆಟ್ವರ್ಕ್' ಎಂಬ ಕಂಪೆನಿ ಇಂತಹದೊಂದು ಬೃಹತ್ ಯೋಜನೆಗೆ ಕೈಹಾಕಿದೆ.
2026ರ ವೇಳೆಗೆ ಲಿಂಕ್ಶೂರ್ ನೆಟ್ವರ್ಕ್ ಕಂಪೆನಿ 272 ಉಪಗ್ರಹಗಳನ್ನು ಅಂತರಿಕ್ಷಕ್ಕೆ ಉಡಾವಣೆ ಮಾಡಲು ನಿರ್ಧರಿಸಿದ್ದು, ಇದರ ಮೂಲಕ ಜಗತ್ತಿನ ಯಾವುದೇ ಭಾಗದಲ್ಲಿ ಉಚಿತ ಇಂಟರ್ನೆಟ್ ಸಿಗಲಿದೆ ಎಂದು ಹೇಳಲಾಗಿದೆ. 2020ರಲ್ಲಿ ಸಂಶೋಧನೆಯ ಮೊದಲ ಹಂತದ ಭಾಗವಾಗಿ 10 ಉಪಗ್ರಹಗಳನ್ನು ಉಡಾವಣೆ ಮಾಡಲು ಸಂಸ್ಥೆ ಯೋಜನೆ ಹಾಕಿಕೊಂಡಿದೆ.
ಈ ಯೋಜನೆಗಾಗಿ ಲಿಂಕ್ಶೂರ್ ನೆಟ್ವರ್ಕ್ ಕಂಪೆನಿ ಕನಿಷ್ಟ 3 ಶತಕೋಟಿ ಯುವಾನ್ ($ 590 ಮಿಲಿಯನ್ ಅಥವಾ ಅಂದಾಜು 4 ಸಾವಿರ ಕೋಟಿ ) ಹೂಡಿಕೆಯು ಮಾಡಲಿದೆ ಎಂದು ಹೇಳಲಾಗಿದ್ದು, ಭೂಮಿ, ಸಮುದ್ರ ಅಥವಾ ಮರುಭೂಮಿಯಂತಹ ಅನೇಕ ಭೂಪ್ರದೇಶಗಳಲ್ಲಿಯೂ ಇನ್ಮುಂದೆ ಅಂತರ್ಜಾಲ ಸಿಗಲಿರುವ ವಿಶ್ವಾಸವನ್ನು ಈ ಸಂಸ್ಥೆ ವ್ಯಕ್ತಪಡಿಸಿದೆ.
ಇನ್ನು ಲಿಂಕ್ಶೂರ್ ವೆಬ್ಸೈಟ್ ಪ್ರಕಾರ, ಲಿಂಕ್ಶೂರ್ ಈಗಾಗಲೇ 223 ದೇಶಗಳಲ್ಲಿ ಮತ್ತು ಪ್ರದೇಶಗಳಲ್ಲಿ 900 ದಶಲಕ್ಷಕ್ಕೂ ಹೆಚ್ಚು ಬಳಕೆದಾರರಿಗೆ ಸೇವೆ ಸಲ್ಲಿಸುತ್ತದೆ ಎಂದು ಹೇಳಿಕೊಂಡಿದೆ. ಮುಖ್ಯವಾಗಿ ಲಿಂಕ್ಶೂರ್ ಅಪ್ WiFi ಮಾಸ್ಟರ್ ಕೀ ಮೂಲಕ, ಬಳಕೆದಾರರಿಗೆ ನಿರ್ದಿಷ್ಟ ಲಾಗಿನ್ ವಿವರಬಳಸದೆ ಕೆಲವು Wi-Fi ಸಂಪರ್ಕ ಕಲ್ಪಿಸಲು ಇದು ಅನುಮತಿಸುತ್ತದೆ.
-
29,999
-
14,999
-
28,999
-
37,430
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
37,430
-
15,999
-
25,999
-
46,354
-
19,999
-
17,999
-
9,999
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090
-
15,500