ಕ್ಲಬ್‌ಹೌಸ್‌ನಿಂದ ಹೊಸ ಸರೌಂಡ್‌-ಸೌಂಡ್‌ ಫೀಚರ್ಸ್‌ ಬಿಡುಗಡೆ!

|

ಆಡಿಯೋ ಒನ್ಲಿ ಚಾಟ್‌ ಅಪ್ಲಿಕೇಶನ್‌ ಕ್ಲಬ್‌ಹೌಸ್‌ ಆಂಡ್ರಾಯ್ಡ್‌ ಆವೃತ್ತಿಗೆ ಎಂಟ್ರಿ ನೀಡಿದ ನಂತರ ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿದೆ. ಈಗಾಗಲೇ ಸೊಶೀಯಲ್‌ ಮೀಡಿಯಾ ದೈತ್ಯ ಎನಿಸಿಕೊಂಡಿರುವ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ಟ್ವಿಟರ್‌ಗೆ ಪೈಪೋಟಿ ನೀಡುತ್ತಾ ಸಾಗಿದೆ. ಸದ್ಯ ಇದೀಗ ಕ್ಲಬ್‌ಹೌಸ್‌ ತನ್ನ ಬಳಕೆದಾರರಿಗೆ ಹೊಸದಾಗಿ ಪ್ರಾದೇಶಿಕ ಆಡಿಯೋ ಫೀಚರ್ಸ್‌ ಅನ್ನು ಬಿಡುಗಡೆ ಮಾಡಿದೆ. ಇದು ಧ್ವನಿಗಳು ವಿಭಿನ್ನ ದಿಕ್ಕುಗಳಿಂದ ಬರುತ್ತಿರುವಂತೆ ಧ್ವನಿಸುತ್ತದೆ, ಸಂಭಾಷಣೆಗಳು ಮತ್ತು ವರ್ಚುವಲ್ ಪ್ರದರ್ಶನಗಳು ಹೆಚ್ಚು ಜೀವನದಂತಹ ಅನುಭವವನ್ನು ನೀಡುತ್ತದೆ.

ಕ್ಲಬ್‌ಹೌಸ್

ಹೌದು, ಕ್ಲಬ್‌ಹೌಸ್, ತನ್ನ ಬಳಕೆದಾರರಿಗೆ ಪ್ರಾದೇಶಿಕ ಆಡಿಯೋ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಇದರಿಂದ ವಾಯ್ಸ್‌ ವಿಭಿನ್ನ ದಿಕ್ಕುಗಳಿಂದ ಬರುತ್ತಿರುವಂತೆ ಎಕೋ ಕೊಡಲಿದೆ. ಇದರಿಂದ ವರ್ಚುವಲ್‌ ಶೋ ಇನ್ನಷ್ಟು ರೋಚಕವಾಗಿರಲಿದೆ. ಈ ಹೊಸ ಸರೌಂಡ್-ಸೌಂಡ್ ಫೀಚರ್ಸ್‌ ಕ್ಲಬ್‌ಹೌಸ್ ಆಪ್‌ನಲ್ಲಿ ಹೆಚ್ಚಿದ ಪ್ರದರ್ಶನಗಳು ಮತ್ತು ಮನರಂಜನಾ ಕೊಠಡಿಗಳಿಗೆ ಒಲವು ತೋರಿಸಲು ಸಹಾಯ ಮಾಡುತ್ತದೆ. ಹಾಗಾದ್ರೆ ಕ್ಲಬ್‌ಹೌಸ್‌ ಪರಿಚಯಿಸಿರುವ ಹೊಸ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕ್ಲಬ್‌ಹೌಸ್

ಈ ಹೊಸ ಫೀಚರ್ಸ್‌ ಕ್ಲಬ್‌ಹೌಸ್ ರೂಮ್‌ನಲ್ಲಿ ಎಷ್ಟು ಸ್ಪೀಕರ್‌ಗಳು ಮತ್ತು ಇತರ ಹಲವು ಅಂಶಗಳ ಆಧಾರದ ಮೇಲೆ, ಆಪ್‌ನ ತಂತ್ರಜ್ಞಾನವು ಬಳಕೆದಾರರಿಗೆ ಪ್ರಾದೇಶಿಕ ಸ್ಥಾನವನ್ನು ನೀಡುತ್ತದೆ. ಇದರಿಂದಾಗಿ ಕೇಳುಗರು ತಮ್ಮ ಹೆಡ್‌ಫೋನ್‌ಗಳಲ್ಲಿ ತಮ್ಮ ಸುತ್ತಲಿನ ಧ್ವನಿಗಳನ್ನು ಕೇಳುತ್ತಾರೆ. ಇದರಿಂದ ಸರೌಂಡ್-ಸೌಂಡ್ ತರಹದ ಫೀಚರ್ಸ್‌ ಕ್ಲಬ್‌ಹೌಸ್ ಅಪ್ಲಿಕೇಶನ್‌ನಲ್ಲಿ ಹೆಚ್ಚಿದ ಪ್ರದರ್ಶನಗಳು ಮತ್ತು ಮನರಂಜನಾ ಕೊಠಡಿಗಳಿಗೆ ಒಲವು ತೋರಿಸಲು ಸಹಾಯ ಮಾಡುತ್ತದೆ.

ಸರೌಂಡ್‌ ಸೌಂಡ್‌

ಕ್ಲಬ್‌ಹೌಸ್‌ನ ಸರೌಂಡ್‌ ಸೌಂಡ್‌ ಫೀಚರ್ಸ್‌ನಲ್ಲಿ ಕ್ಲಬ್‌ಹೌಸ್‌ನ ತಂತ್ರಜ್ಞಾನವು ಮುಖ್ಯ ಸ್ಪೀಕರ್ ಅನ್ನು ಪತ್ತೆ ಮಾಡುತ್ತದೆ. ಆ ವ್ಯಕ್ತಿಯ ಧ್ವನಿಯನ್ನು "ಮುಂಭಾಗ" ದಲ್ಲಿ ಇರಿಸುತ್ತದೆ. ಆದರೆ ಇತರ ಜನರ ನಗು ಅವರು ಕೇಳುಗನ ಎಡ ಮತ್ತು ಬಲ ಭಾಗದಿಂದ ಬರುವಂತೆ ತೋರುತ್ತದೆ. ಇದರಿಂದ ಪ್ರಾದೇಶಿಕ ತಂತ್ರಜ್ಞಾನವು ವಿಭಿನ್ನ ಬಳಕೆದಾರರು ಮಾತನಾಡುವಾಗ ಪತ್ತೆಹಚ್ಚುವುದನ್ನು ಸುಲಭಗೊಳಿಸುತ್ತದೆ. ಆದರೆ ಜನರು ಹಿಂದೆ ಸ್ಪೀಕರ್‌ಗಳ ಧ್ವನಿ ಮತ್ತು ಗಾಯನ ಟಿಂಬ್ರೆ ಬಗ್ಗೆ ಗಮನ ಹರಿಸಬೇಕಾಗಬಹುದು. ಇನ್ನು ಕ್ಲಬ್‌ಹೌಸ್ ಮೇ ತಿಂಗಳಲ್ಲಿ 300,000 ದಿಂದ ಈಗ ಪ್ರತಿ ದಿನ 700,000 ಕ್ಕಿಂತ ಹೆಚ್ಚು ಕೊಠಡಿಗಳನ್ನು ರಚಿಸಲಾಗಿದೆ ಎಂದು ಹೇಳಲಾಗಿದೆ.

ಕ್ಲಬ್‌ಹೌಸ್‌

ಇನ್ನು ಇತ್ತೀಚಿಗೆ ಕ್ಲಬ್‌ಹೌಸ್‌ ವೇಟ್‌ಲಿಸ್ಟ್ ವ್ಯವಸ್ಥೆಯನ್ನು ತೆಗೆದುಹಾಕಿದ್ದು, ಎಲ್ಲರಿಗೂ ಮುಕ್ತವಾಗಿದೆ. ಐಒಎಸ್ ಮತ್ತು ಆಂಡ್ರಾಯ್ಡ್‌ನಲ್ಲಿ ಎಲ್ಲರಿಗೂ ಕ್ಲಬ್‌ಹೌಸ್ ಈಗ ಮುಕ್ತವಾಗಿದೆ ಎಂದು ಡೆವಲಪರ್ ಘೋಷಿಸಿದ್ದಾರೆ. ಈಗ ಡೆವಲಪರ್ ಆಲ್ಫಾ ಎಕ್ಸ್‌ಪ್ಲೋರೇಶನ್ ಕ್ಲಬ್‌ಹೌಸ್ ಬೀಟಾದಿಂದ ಹೊರಗಿದೆ ಎಂದು ಘೋಷಿಸಿದೆ. ಕ್ಲಬ್‌ಹೌಸ್‌ ಸೇರಲು ಆಹ್ವಾನ ಅಗತ್ಯವಿಲ್ಲ. ಕಂಪನಿಯು ಹೊಸ ಲೋಗೋ ಮತ್ತು ವೆಬ್‌ಸೈಟ್ ಅನ್ನು ಸಹ ಪಡೆದುಕೊಂಡಿದೆ. ಇನ್ನು ಕ್ಲಬ್‌ಹೌಸ್‌ ಕಳೆದ ವರ್ಷ ಬೀಟಾದಲ್ಲಿ ಪ್ರಾರಂಭವಾದಾಗಿನಿಂದ ಇದು ಆಹ್ವಾನ-ಮಾತ್ರ/ಇನ್ವೈಟ್‌ ಓನ್ಲಿ ವೇದಿಕೆಯಾಗಿದೆ. ಹಾಗೂ ಆರಂಭದಲ್ಲಿ, ಇದು ಐಓಎಸ್‌ನಲ್ಲಿ ಮಾತ್ರ ಲಭ್ಯವಿತ್ತು. ಆದರೆ ಆಂಡ್ರಾಯ್ಡ್ನಲ್ಲಿ ಬೀಟಾ ಪರೀಕ್ಷೆ ಈ ವರ್ಷದ ಮೇ ನಲ್ಲಿ ಪ್ರಾರಂಭವಾಯಿತು.

ಕ್ಲಬ್‌ಹೌಸ್‌

ಇದಲ್ಲದೆ ಕ್ಲಬ್‌ಹೌಸ್‌ಗಾಗಿ ತಂಡವು ಕೆಲವು ಅಂಕಿಅಂಶಗಳನ್ನು ಹಂಚಿಕೊಂಡಿದೆ. ಈಗ ದೈನಂದಿನ ರೋಮ್‌ಗಳ ಸಂಖ್ಯೆ 50,000 ದಿಂದ ಅರ್ಧ ಮಿಲಿಯನ್‌ಗೆ ಏರಿದೆ. ಆಂಡ್ರಾಯ್ಡ್‌ಗಾಗಿ ಬೀಟಾ ಪ್ರಾರಂಭವಾದಾಗಿನಿಂದ, 10 ಮಿಲಿಯನ್ ಬಳಕೆದಾರರು ಸಮುದಾಯಕ್ಕೆ ಸೇರ್ಪಡೆಗೊಂಡಿದ್ದಾರೆ ಮತ್ತು ಕಳೆದ ವಾರ ಕ್ಲಬ್‌ಹೌಸ್‌ಗೆ ಬ್ಯಾಕ್‌ಚಾನೆಲ್ - ನೇರ ಸಂದೇಶ ಕಳುಹಿಸುವಿಕೆಯ ವೈಶಿಷ್ಟ್ಯವನ್ನು ಸೇರಿಸಿದ ನಂತರ 90 ಮಿಲಿಯನ್ ನೇರ ಸಂದೇಶಗಳನ್ನು ಕಳುಹಿಸಲಾಗಿದೆ.

Most Read Articles
Best Mobiles in India

Read more about:
English summary
Clubhouse, an audio-only chat app it will launch a spatial audio feature to make voices sound as if they're coming from different directions.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X