ಕ್ಲಬ್‌ಹೌಸ್‌ಗೆ ಪ್ರತಿಸ್ಪರ್ಧಿಯಾಗಿ ಸ್ಪಾಟಿಫೈನಿಂದ ಹೊಸ ಅಪ್ಲಿಕೇಶನ್‌ ಲಾಂಚ್‌!

|

ಇತ್ತೀಚಿನ ದಿನಗಳಲ್ಲಿ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಕೊರೊನಾ ನಂತರ ಜನರ ಜೀವನ ಶೈಲಿ ಬದಲಾಗಿದ್ದು, ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಅಲ್ಲದೆ ಗೆಳೆಯರ ಜೊತೆ ಹರಟೆ ಚರ್ಚೆ ಕೂಡ ವೀಡಿಯೊ ಕಾನ್ಫರೆನ್ಸಿಂಗ್‌ ಅಪ್ಲಿಕೇಶನ್‌ಗಳಲ್ಲಿ ಮುಗಿದು ಹೋಗುತ್ತಿದೆ. ಸದ್ಯ ಇದೀಗ ಜನಪ್ರಿಯ ಮ್ಯೂಸಿಕ್‌ ಸಂಸ್ಥೆ ಸ್ಪಾಟಿಫೈ ಕೂಡ ಹೊಸ ಅಪ್ಲಿಕೇಶನ್‌ ಪರಿಚಯಿಸಿದೆ. ಇದು ಕ್ಲಬ್‌ಹೌಸ್‌ ಅಪ್ಲಿಕೇಶನ್‌ಗೆ ಪ್ರತಿಸ್ಫರ್ದಿಯಾಗಿದೆ ಎನ್ನಲಾಗಿದೆ.

ಸ್ಪಾಟಿಫೈ

ಹೌದು, ಸ್ಪಾಟಿಫೈ ಮ್ಯೂಸಿಕ್‌ ಸಂಸ್ಥೆ ಕ್ಲಬ್‌ಹೌಸ್‌ ಅಪ್ಲಿಕೇಶನ್‌ಗೆ ಸೆಡ್ಡು ಹೊಡೆಯಲು ಹೊಸ ಅಪ್ಲಿಕೇಶನ್‌ ಗ್ರೀನ್‌ರೂಮ್ ಅನ್ನು ಪರಿಚಯಿಸಿದೆ. ಇದು ಲೈವ್ ಆಡಿಯೊ ಸ್ವರೂಪವನ್ನು ಕೇಂದ್ರೀಕರಿಸುತ್ತದೆ. ಇನ್ನು ಈ ವರ್ಷದ ಮಾರ್ಚ್‌ನಲ್ಲಿ, ಲಾಕರ್ ರೂಮ್‌ನ ಸೃಷ್ಟಿಕರ್ತರಾದ ಬೆಟ್ಟಿ ಲ್ಯಾಬ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಸ್ಪಾಟಿಫೈ ಘೋಷಿಸಿತ್ತು. ಅದರಂತೆ ಇದೀಗ ಇದು ಲೈವ್ ಆಡಿಯೊ ಸ್ವರೂಪದಲ್ಲಿ ಗ್ರೀನ್‌ರೂಮ್‌ ಪರಿಚಯಿಸಿದೆ. ಹಾಗಾದ್ರೆ ಗ್ರೀನ್‌ರೂಮ್‌ ಅಪ್ಲಿಕೇಶನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಪಾಟಿಫೈ

ಸ್ಪಾಟಿಫೈ ಸಂಸ್ಥೆಯ ಹೊಸ ಲೈವ್ ಆಡಿಯೊ ಅಪ್ಲಿಕೇಶನ್, ಗ್ರೀನ್ ರೂಮ್, ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್ ಕ್ರಿಯೆಟ್‌ ಮಾಡುವ ಮೊದಲ ನೈಜ ಪ್ರಯತ್ನವಾಗಿದೆ. ಇದು ಕ್ಲಬ್‌ಹೌಸ್‌ಗೆ ಹೋಲುವ ಸಾಮಾಜಿಕ ಆಡಿಯೊ ಅಪ್ಲಿಕೇಶನ್ ಆಗಿದೆ. ಇನ್ನು ಈ ಅಪ್ಲಿಕೇಶನ್‌ ಬಳಕೆದಾರರಿಗೆ ಕ್ರೀಡೆ, ಸಂಗೀತ ಮತ್ತು ಸಂಸ್ಕೃತಿಯ ಬಗ್ಗೆ ನೇರ ಸಂವಾದಗಳನ್ನು ಆಯೋಜಿಸಲು ಅನುವು ಮಾಡಿಕೊಡುತ್ತದೆ. ಸ್ಪಾಟಿಫೈ ಗ್ರೀನ್‌ರೂಮ್ ಐಒಎಸ್ ಮತ್ತು ಆಂಡ್ರಾಯ್ಡ್‌ನಲ್ಲಿ ವಿಶ್ವದ 135 ಕ್ಕೂ ಹೆಚ್ಚು ಮಾರುಕಟ್ಟೆಗಳಲ್ಲಿ ಲಭ್ಯವಿದೆ.

ಅಪ್ಲಿಕೇಶನ್

ಈ ಹೊಸ ಅಪ್ಲಿಕೇಶನ್ ಬ್ರ್ಯಾಂಡಿಂಗ್ ಮತ್ತು ಕ್ರಿಯೆಟರ್ಸ್‌ ವಿಚಾರದಲ್ಲಿ ಹೊಸ ವಿನ್ಯಾಶವನ್ನು ಒಳಗೊಂಡಿದೆ. ಬಳಕೆದಾರರು ತಮ್ಮ ಸ್ಪಾಟಿಫೈ ಲಾಗ್-ಇನ್ ಮಾಹಿತಿಯನ್ನು ಬಳಸಿಕೊಂಡು ಗ್ರೀನ್‌ರೂಮ್‌ಗೆ ಸೇರಲು ಸಾಧ್ಯವಾಗುತ್ತದೆ. ಕಂಪನಿಯ ಪ್ರಕಾರ, ಹೊಸ ಆನ್‌ಬೋರ್ಡಿಂಗ್ ಅನುಭವವನ್ನು ಸಹ ಸೇರಿಸುತ್ತದೆ. ಗ್ರೀನ್‌ರೂಮ್ ರೆಕಾರ್ಡಿಂಗ್ ಸಾಮರ್ಥ್ಯಗಳೊಂದಿಗೆ ಬರುತ್ತದೆ ಆದ್ದರಿಂದ ಕ್ರಿಯೆಟರ್ಸ್‌ ತಮ್ಮ ಬೇಡಿಕೆಯ ವಿಷಯವನ್ನು ಲೈವ್ ಸಂಭಾಷಣೆಗಳೊಂದಿಗೆ ಪೂರಕಗೊಳಿಸಬಹುದು.

ಗ್ರೀನ್‌ರೂಮ್‌ನಲ್ಲಿ

ಇದಲ್ಲದೆ ಗ್ರೀನ್‌ರೂಮ್‌ನಲ್ಲಿ ಉತ್ತಮ ಅನುಭವವನ್ನು ಖಚಿತಪಡಿಸಿಕೊಳ್ಳಲು ಚಾಟ್ ಕಂಟ್ರೋಲ್‌ ಸಾಮರ್ಥ್ಯವನ್ನು ಸಹ ನೀಡಲಾಗಿದೆ. ಅಲ್ಲದೆ ಬಳಕೆದಾರರು ಗ್ರೂಪ್‌ಗೆ ಸೇರಲು, ಮುಂಬರುವ ರೂಮ್ಸ್‌ಗಳಿಗಾಗಿ ಸರ್ಚ್‌ ಮಾಡಲು, ರೂಮ್ಸ್‌ ಸೇರಲು ಮತ್ತು ಲೈವ್ ಆಡಿಯೊ ಚಾಟ್ ಪ್ರಾರಂಭಿಸಲು ತಮ್ಮದೇ ಆದ ರೂಮ್ಸ್‌ ಅನ್ನು ಕ್ರಿಯೆಟ್‌ ಮಾಡುವುದಕ್ಕೂ ಸಾಧ್ಯವಿದೆ. ಇದಲ್ಲದೆ ಸ್ಪಾಟಿಫೈ ಸಂಸ್ಥೆ ಸ್ಪಾಟಿಫೈ ಕ್ರಿಯೇಟರ್ ಫಂಡ್ ಅನ್ನು ಸಹ ಘೋಷಿಸಿದೆ. ಇದು ಲೈವ್ ಆಡಿಯೊ ಕ್ರಿಯೆಟರ್ಸ್‌ ತಮ್ಮ ಕೆಲಸದ ಮೂಲಕ ಹಣಗಳಿಸಲು ಸಹಾಯ ಮಾಡುತ್ತದೆ. ಕ್ಲಬ್‌ಹೌಸ್‌ನಲ್ಲಿ ಕೂಡ ಇದೇ ರೀತಿಯ ಕ್ರಿಯೇಟರ್ ಫಂಡ್ ಇದ್ದು, ಅದು ನಿನ್ನೆ ಭಾರತ ಮಾರುಕಟ್ಟೆಗೆ ವಿಸ್ತರಿಸಿದೆ.

Most Read Articles
Best Mobiles in India

Read more about:
English summary
Spotify has launched its Clubhouse competitor: a new dedicated app called Greenroom, which focuses on live audio format.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X