ಸದ್ಯದಲ್ಲೇ ಭಾರತದಲ್ಲಿ ಕ್ಲಬ್‌ಹೌಸ್‌ನ ಆಂಡ್ರಾಯ್ಡ್ ಅಪ್ಲಿಕೇಶನ್ ಬಿಡುಗಡೆ!

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ಗಳಲ್ಲಿ ಕ್ಲಬ್‌ಹೌಸ್‌ ಕೂಡ ಒಂದಾಗಿದೆ. ಕ್ಲಬ್‌ಹೌಸ್‌ ಆಡಿಯೋ ಚಾಟ್‌ ಅಪ್ಲಿಕೇಶನ್‌ ಆಗಿದೆ. ಈಗಾಗಲೇ ಬಳಕೆದಾರರಿಗೆ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಕ್ಲಬ್‌ಹೌಸ್, ಇನ್ವೈಟ್‌-ಒನ್ಲಿ ಸೊಶೀಯಲ್‌ ಆಡಿಯೊ ಅಪ್ಲಿಕೇಶನ್ ಅನ್ನು ಈಗಾಗಲೇ ಯುಎಸ್‌ನಲ್ಲಿ ಬೀಟಾ ಆವೃತ್ತಿಯಲ್ಲಿ ಬಿಡುಗಡೆ ಮಾಡಿದೆ. ಸದ್ಯ ಇದೀಗ ಇದೇ ಮೇ 21 ರಂದು ಭಾರತದಲ್ಲಿ ತನ್ನ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಿದೆ.

ಕ್ಲಬ್‌ ಹೌಸ್‌

ಹೌದು, ಕ್ಲಬ್‌ ಹೌಸ್‌ ಭಾರತ, ಜಪಾನ್, ಬ್ರೆಜಿಲ್ ಮತ್ತು ರಷ್ಯಾದಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಿದೆ. ಕಳೆದ ವಾರ, ಇದು ಯುನೈಟೆಡ್ ಕಿಂಗ್‌ಡಮ್, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಹಾಗಾದ್ರೆ ಈ ಹೊಸ ಆಂಡ್ರಾಯ್ಡ್‌ ಅಪ್ಲಿಕೇಶನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಪ್ಲಿಕೇಶನ್‌

ಆಡಿಯೋ ಚಾಟ್‌ ಅಪ್ಲಿಕೇಶನ್‌ ಕ್ಲಬ್‌ಹೌಸ್‌ ತನ್ನ ವಿಶೇಷ ಫೀಚರ್ಸ್‌ಗಳಿಂದ ಬಳಕೆದಾರರ ಗಮನ ಸೆಳೆದಿದೆ. ಸದ್ಯ ಈ ಅಪ್ಲಿಕೇಶನ್‌ ಐಒಎಸ್‌ ಮಾದರಿಯಲ್ಲಿ ಮಾತ್ರ ಲಭ್ಯವಿದೆ. ಆದರೆ ಶೀಘ್ರದಲ್ಲೇ ಆಂಡ್ರಾಯ್ಡ್‌ ಅಪ್ಲಿಕೇಶನ್‌ ಕೂಡ ಬಿಡುಗಡೆ ಆಗಲಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಡೌನ್‌ಲೋಡ್‌ಗಳ ಪ್ರಮಾಣದಲ್ಲಿ ಕುಸಿತವನ್ನು ಪಡೆದಿದೆ. ಹೆಚ್ಚು ಅಗತ್ಯವಿರುವ ಬಳಕೆದಾರ ವರ್ಧಕವನ್ನು ಪಡೆಯಲು ಆಂಡ್ರಾಯ್ಡ್ ಅಪ್ಲಿಕೇಶನ್ ನಿರ್ಣಾಯಕವಾಗಿದೆ. ಸೆನ್ಸಾರ್ ಟವರ್ ಪ್ರಕಾರ, ಕ್ಲಬ್‌ಹೌಸ್ ಜಾಗತಿಕವಾಗಿ ಏಪ್ರಿಲ್‌ನಲ್ಲಿ ಕೇವಲ 922,000 ಡೌನ್‌ಲೋಡ್‌ಗಳನ್ನು ಮಾತ್ರ ಹೊಂದಿದೆ. ಇದು ಮಾರ್ಚ್‌ನಲ್ಲಿ 2.7 ಮಿಲಿಯನ್ ಇನ್‌ಸ್ಟಾಲ್‌ಗಳಿಂದ 66% ಮತ್ತು ಫೆಬ್ರವರಿಯಲ್ಲಿ 9.6 ಮಿಲಿಯನ್‌ಗಳಷ್ಟು ಕಡಿಮೆಯಾಗಿದೆ.

ಅಪ್ಲಿಕೇಶನ್

ಇನ್ನು ಈ ಕ್ಲಬ್‌ಹೌಸ್ ಅಪ್ಲಿಕೇಶನ್ ಮೊಬೈಲ್ ಬಳಕೆದಾರರಿಗೆ ಕ್ವಿಕ್‌ ಟ್ಯಾಪ್ ಸ್ಟೋರಿ ಕ್ರಿಯೆಟ್‌, ಸ್ಟೋರಿ ಸರ್ಚಿಂಗ್‌, ಮಹಾಕಾವ್ಯಗಳ ಪ್ರಗತಿಯ ಗೋಚರತೆ, ವರ್ಕಿಂಗ್‌ ಡ್ಯಾಶ್‌ಬೋರ್ಡ್ ಮತ್ತು ಆಕ್ಟಿವಿಟಿ ಫೀಡ್‌ನಲ್ಲಿ ಪ್ರಾಜೆಕ್ಟ್ ಆಕ್ಟಿವಿಟಿ ಟ್ರ್ಯಾಕಿಂಗ್ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ಒದಗಿಸುತ್ತದೆ. ಅದರೆ ಕ್ಲಬ್‌ಹೌಸ್‌ನ ಪ್ರಸ್ತುತ ಐಒಎಸ್ ಅಪ್ಲಿಕೇಶನ್‌ ಆಂಡ್ರಾಯ್ಡ್‌ ಅಪ್ಲಿಕೇಶನ್‌ಗೆ ಹೋಲಿಸಿದರೆ ಫೀಚರ್ಸ್‌ಗಳ ವಿಷಯದಲ್ಲಿ ಸಾಕಷ್ಟು ವಿಶೇಷತೆ ಹೊಂದಿರಲಿದೆ ಎನ್ನಲಾಗಿದೆ.

ಆಂಡ್ರಾಯ್ಡ್‌

ಕ್ಲಬ್‌ಹೌಸ್‌ನ ಆಂಡ್ರಾಯ್ಡ್‌ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ತಮ್ಮ ಸೊಶೀಯಲ್‌ ಮೀಡಿಯಾ ಪ್ರೊಫೈಲ್‌ಗಳನ್ನು ಲಿಂಕ್ ಮಾಡಲು, ಅವರ ಪ್ರೊಫೈಲ್ ಹೆಸರನ್ನು ಬದಲಾಯಿಸಲು, ವಿಷಯವನ್ನು ಅನುಸರಿಸಲು ಅಥವಾ ಕ್ಲಬ್ ಅನ್ನು ರಚಿಸಲು ಅಥವಾ ನಿರ್ವಹಿಸಲು ಅಪ್ಲಿಕೇಶನ್ ಅನುಮತಿಸುವುದಿಲ್ಲ ಎನ್ನಲಾಗಿದೆ. ಇದಲ್ಲದೆ ಕ್ಲಬ್‌ಹೌಸ್‌ ಸೊಶೀಯಲ್‌ ಆಡಿಯೊ ಚಾಟ್‌ನ ಫೀಚರ್ಸ್‌ ಟ್ವಿಟರ್, ಡಿಸ್ಕಾರ್ಡ್, ಫೇಸ್‌ಬುಕ್, ಸ್ಪಾಟಿಫೈ, ರೆಡ್ಡಿಟ್, ಲಿಂಕ್ಡ್‌ಇನ್, ಸ್ಲಾಕ್, ಟೆಲಿಗ್ರಾಮ್‌ ಅಪ್ಲಿಕೇಶನ್‌ಗಳಲ್ಲಿ ಸಹ ಆಕರ್ಷಿಸಿದೆ. ಇದೇ ಕಾರಣಕ್ಕೆ ತಮ್ಮದೇ ಆದ ಸ್ಪರ್ಧಾತ್ಮಕ ಉತ್ಪನ್ನಗಳನ್ನು ಪ್ರಾರಂಭಿಸಿವೆ. ಕ್ಲಬ್‌ಹೌಸ್‌ ಮಾದರಿಯ ಫೀಚರ್ಸ್‌ ಅನ್ನು ಟ್ವಿಟ್ಟರ್‌ ಕೂಡ ಸ್ಪೇಸಸ್ ಫಿಚರ್ಸ್‌ ಅನ್ನು ಪರಿಚಯಿಸಿದೆ. ಭಾರತದ ಎಲ್ಲಾ ಬಳಕೆದಾರರಿಗೆ ಟ್ವೀಟರ್‌ನ "ಸ್ಪೇಸ್" ಅನ್ನು ಹೋಸ್ಟ್ ಮಾಡಲು ಅನುಮತಿಸುತ್ತದೆ. ಸದ್ಯ ಕ್ಲಬ್‌ಹೌಸ್‌ನ ಆಂಡ್ರಾಯ್ಡ್‌ ಅಪ್ಲಿಕೇಶನ್‌ ಹೊಸ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ.

Most Read Articles
Best Mobiles in India

Read more about:
English summary
Clubhouse will launch its Android app in India on May 21.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X