ಕಂಪ್ಯೂಟರ್ ಮೌಸ್ ಹುಟ್ಟಿಗೆ 50 ವರ್ಷಗಳು!..ಇತಿಹಾಸದ ರೋಚಕ ವಿಷಯಗಳು!!

|

ವಿಶ್ವದ ಕಂಪ್ಯೂಟರ್ ಬಳಕೆದಾರರ ಅಚ್ಚುಮೆಚ್ಚಿನ ಸಂಗಾತಿಯಾಗಿ ಸಾಗಿಬಂದಿರುವ ಸಾಧನವೆಂದರೆ ಅದು 'ಕಂಪ್ಯೂಟರ್ ಮೌಸ್'. ಈಗಲೂ ಕಂಪ್ಯೂಟರ್ ಬಳಸಬೇಕಾದರೆ ಮೌಸ್ ಬೇಕೇ ಬೇಕು ಎನ್ನುವಷ್ಟರ ಮಟ್ಟದ್ದು ಈ ಒಂದು ಚಿಕ್ಕ ಸಾಧನದ ಜನಪ್ರಿಯತೆ. ಇಂದಿಗೆ ಐದು ದಶಕಗಳ ಹಿಂದೆ ಬಳಕೆಗೆ ಬಂದ ಈ ಸಾಧನದ ಸೃಷ್ಟಿ ಪ್ರಾಯಶಃ ಗಣಕ ಜಗತ್ತಿನ ಅತ್ಯಂತ ಪ್ರಮುಖ ಸಾಧನೆಗಳಲ್ಲಿ ಒಂದು ಎಂದು ಹೇಳಿದರೆ ನೀವೂ ಕೂಡ ಒಪ್ಪುತ್ತೀರಾ ಅಲ್ಲವೇ.?

ಹೌದು, ಈ ಕಂಪ್ಯೂಟರ್ ಮೌಸ್‌ನ ಇತಿಹಾಸ ಶುರುವಾಗುವುದು 1968ರಲ್ಲಿ. ಅದು ಕೂಸ ಡಿಸೆಂಬರ್ 9 ರಂದು. ಅಂದರೆ, ಈ ತಿಂಗಳು ಡಿಸೆಂಬರ್ 9 ಕ್ಕೆ ಕಂಪ್ಯೂಟರ್ ಮೌಸ್ ಹುಟ್ಟಿಗೆ 50 ವರ್ಷಗಳು ತುಂಬಿವೆ ಎನ್ನುವುದೇ ಈಗಿನ ವಿಶೇಷ. ಆಗಿನ್ನೂ ಕಂಪ್ಯೂಟರ್ ತಂತ್ರಜ್ಞಾನ ನಿಧಾನವಾಗಿ ಅಭಿವೃದ್ಧಿ ಹೊಂದುತ್ತಿದ್ದ ಕಾಲದಲ್ಲೇ ಈ ಕಂಪ್ಯೂಟರ್ ಮೌಸ್ ತಯಾರಾಗಿತ್ತು. ನಿಮಗೆ ಗೊತ್ತಾ?, ಮೊದಲ ಮೌಸ್ ಅನ್ನು ಮರದಿಂದ ತಯಾರಿಸಿದ್ದಾಗಿತ್ತು.!

ಕಂಪ್ಯೂಟರ್ ಮೌಸ್ ಹುಟ್ಟಿಗೆ 50 ವರ್ಷಗಳು!..ಇತಿಹಾಸದ ರೋಚಕ ವಿಷಯಗಳು!!

ಹೀಗೆ 'ಕಂಪ್ಯೂಟರ್ ಮೌಸ್' ಕೂಡ ಹಲವು ರೋಚಕ ವಿಷಯಗಳನ್ನು ತನ್ನಲ್ಲಿ ಹೊಂದಿದೆ. ಹಾಗಾಗಿ, ಇದೇ ಡಿಸೆಂಬರ್ 9 ನೇ ತಾರೀಖಿನಂದು ತನ್ನ 50 ನೇ ವರ್ಷದ ಬೆಳ್ಳಿ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ 'ಕಂಪ್ಯೂಟರ್ ಮೌಸ್' ಹುಟ್ಟಿ ಬೆಳೆದುಬಂದ ಇತಿಹಾಸ, ಕಂಪ್ಯೂಟರ್ ಮೌಸ್ ಹೊಂದಿರುವ ರೋಚಕ ವಿಷಯಗಳು ಯಾವುವು ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ಮುಂದಿನ ಸ್ಲೈಡರ್‌ಗಳಲ್ಲಿ ಆ ಬಗ್ಗೆ ಓದಿ ತಿಳಿಯಿರಿ.

ಮೌಸ್‌ನ ಪೂರ್ವಜ ಯಾರು ಗೊತ್ತಾ?

ಮೌಸ್‌ನ ಪೂರ್ವಜ ಯಾರು ಗೊತ್ತಾ?

ಆಗಿನ್ನೂ ಕಂಪ್ಯೂಟರ್ ತಂತ್ರಜ್ಞಾನ ನಿಧಾನವಾಗಿ ಅಭಿವೃದ್ಧಿ ಹೊಂದುತ್ತಿತ್ತು. ಆ ವರ್ಷ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದ ಕಂಪ್ಯೂಟರ್ ತಂತ್ರಜ್ಞಾನ ಸಮ್ಮೇಳನದಲ್ಲಿ ಡಗ್ಲಾಸ್ ಎಂಗೆಲ್‌ಬಾರ್ಟ್ ಎಂಬಾತ 'ಎಕ್ಸ್-ವೈ ಪೊಸಿಷನ್ ಇಂಡಿಕೇಟರ್ ಫಾರ್ ಎ ಡಿಸ್ಪ್ಲೇ ಸಿಸ್ಟಮ್' ಎಂಬ ಸಾಧನವನ್ನು ಪ್ರದರ್ಶಿಸಿದ. ಇದೇ ಇಂದಿನ ಗಣಕಗಳ ಜೀವಾಳವಾಗಿರುವ ಮೌಸ್‌ನ ಪೂರ್ವಜ. ಅಂದರೆ, ಅದೇ ವಿಶ್ವದಲ್ಲಿ ಮೊದಲು ತಯಾರಾದ ಕಂಪ್ಯೂಟರ್ ಮೌಸ್.!

ಹೇಗಿತ್ತು ಮೊದಲ ಕಂಪ್ಯೂಟರ್ ಮೌಸ್?

ಹೇಗಿತ್ತು ಮೊದಲ ಕಂಪ್ಯೂಟರ್ ಮೌಸ್?

'ಮದರ್​ ಆಫ್​ ಆಲ್​ ಡೆಮೋಸ್'​ ಎಂದು ಕರೆಯಲಾದ ವಿಶ್ವದ ಮೊದಲ ಕಂಪ್ಯೂಟರ್ ಮೌಸ್ ಮರದ ತುಂಡುಗಳಿಂದ ಮಾಡಿದ್ದಾಗಿತ್ತು.! ಎಕ್ಸ್​ ಮತ್ತು ವೈ ಎಂಬ ಎರಡು ಭಾಗಗಳನ್ನಾಗಿ ಅದನ್ನು ವಿಂಗಡಣೆ ಮಾಡಲಾಗಿತ್ತು. ಎಡ ಪಾರ್ಶ್ವದ ಬಟನ್ ಒತ್ತಿದಾಗ ಎಡಕ್ಕೂ, ಬಲ ಪಾರ್ಶ್ವದ ಬಟನ್​ ಒತ್ತಿದಾಗ ಬಲಕ್ಕೂ ಕಂಪ್ಯೂಟರ್​ ಪರದೆಯ ಮೇಲೆ ಕರ್ಜರ್​ ಓಡಾಡುತ್ತಿತ್ತು. ಕಂಪ್ಯೂಟರ್​ ಬಳಕೆಯೇ ಹೊಸದಾಗಿದ್ದ ಆಗಿನ ಕಾಲದಲ್ಲಿ ಇದು ಕಂಪ್ಯೂಟರ್​ ತಜ್ಞರನ್ನೇ ಅಚ್ಚರಿಗೊಳಿಸಿತ್ತು.

ಅಷ್ಟಕ್ಕೂ ಮೌಸ್ ಎಂದು ಕರೆದದ್ದು ಏಕೆ?

ಅಷ್ಟಕ್ಕೂ ಮೌಸ್ ಎಂದು ಕರೆದದ್ದು ಏಕೆ?

ಎಂಗೆಲ್‌ಬಾರ್ಟ್‌ನ ಮೊದಲ ಮೌಸ್ ಮರದಿಂದ ತಯಾರಿಸಿದ್ದಾಗಿತ್ತು. ಆತನ ಸಹಚರ ಬಿಲ್ ಇಂಗ್ಲಿಷ್ ಎಂಬಾತ ಇದನ್ನು ನಿರ್ಮಿಸಿದ್ದ. ಈ ಸಾಧನದ ತಳದಲ್ಲಿ ಎರಡು ಗಾಲಿಗಳಿದ್ದರೆ, ಮೇಲ್ಭಾಗದಲ್ಲಿ ಒಂದೇ ಒಂದು ಕೆಂಪು ಬಣ್ಣದ ಗುಂಡಿ ಇತ್ತು. ಎಂಗೆಲ್‌ಬಾರ್ಟ್‌ನ ಸಹೋದ್ಯೋಗಿಗಳಿಗೆ ಈ ವಿಚಿತ್ರ ಯಂತ್ರ ಇಲಿಯಂತೆ ಕಂಡಿದ್ದರಿಂದ ಅವರು ಅದನ್ನು ಮೌಸ್ ಎಂದು ಕರೆದರು ಎನ್ನುವುದು ಪ್ರತೀತಿ ಇದೆ.

ಮೌಸ್​ನ ಪರಿಕಲ್ಪನೆ ಬಂದಿದ್ದು ಹೇಗೆ?

ಮೌಸ್​ನ ಪರಿಕಲ್ಪನೆ ಬಂದಿದ್ದು ಹೇಗೆ?

ಕಂಪ್ಯೂಟರ್ ಕೀ ಬೋರ್ಡ್​ ಕಮಾಂಡ್​ಗಳು ಕಂಪ್ಯೂಟರ್‌ಗೆ ಯೂಸರ್​ ಫ್ರೆಂಡ್ಲಿ ಆಗಿರಲಿಲ್ಲ. ಹಾಗಾಗಿ ಅದಕ್ಕೆ ಬದಲಾವಣೆಯೊಮದನ್ನು ತರಲು ಡಗ್ಲಸ್​ ಅವರ ಮಾಲೀಕತ್ವದ ಸಂಶೋಧನಾ ಕೇಂದ್ರ ಮುಂದಾಯಿತು. ಕ್ಯಾಲಿಫೋರ್ನಿಯಾದ ಮೆನ್ಲೋ ಪಾರ್ಕ್​ನಲ್ಲಿದ್ದ ಆಗುಮೆಂಟೇಶನ್​ ಸಂಶೋಧನಾ ಕೇಂದ್ರಕ್ಕೆ 1963ರಿಂದಲೇ ದೇಣಿಗೆಗಳು ಹರಿದುಬರುತ್ತಿದ್ದವು. ಇದನ್ನು ವಿನಿಯೋಗಿಸಿಕೊಂಡು ಡಗ್ಲಸ್​ ಅವರು ಮೌಸ್​ನ ಪರಿಕಲ್ಪನೆಯನ್ನು ಕಂಡುಹಿಡಿದರು ಎಂದು ಹೇಳಲಾಗಿದೆ.

ಜಿಯುಐ ಸೃಷ್ಟಿಸಿದ್ದು ಸಹ ಇದೇ ಡಗ್ಲಾಸ್!

ಜಿಯುಐ ಸೃಷ್ಟಿಸಿದ್ದು ಸಹ ಇದೇ ಡಗ್ಲಾಸ್!

ನಂತರ ಇದೇ ಎಂಗೆಲ್‌ಬಾರ್ಟ್ ಡಗ್ಲಾಸ್ ಮುಂದೆ ಚಿತ್ರಾತ್ಮಕ ಸಂಪರ್ಕ ಸಾಧನ -ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್ (ಜಿಯುಐ) ಅನ್ನೂ ಸಹ ಸೃಷ್ಟಿಸಿದ. ಪಠ್ಯರೂಪದ ಆದೇಶಗಳ ಬದಲಿಗೆ ಮೌಸ್ ಕ್ಲಿಕ್‌ಗಳಿಂದ ಗಣಕಕ್ಕೆ ಆದೇಶ ನೀಡುವುದು ಈ ವ್ಯವಸ್ಥೆಯಿಂದಾಗಿ ಸಾಧ್ಯವಾಯಿತು. ಈ ವ್ಯವಸ್ಥೆಯನ್ನು ಆಧರಿಸಿ ರೂಪಗೊಂಡ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆ ಗಣಕಗಳ ಬಳಕೆಯಲ್ಲಿ ಹೊಸದೊಂದು ಶಕೆಯನ್ನೇ ಪ್ರಾರಂಭಿಸಿತು.

ಮೊದಲ ಮೌಸ್ ಬೆಲೆ ಗೊತ್ತಾ?

ಮೊದಲ ಮೌಸ್ ಬೆಲೆ ಗೊತ್ತಾ?

ಗಣಕಗಳಲ್ಲಿ ಚಿತ್ರಾತ್ಮಕ ಸಂಪರ್ಕ ಸಾಧನ ಹೊಂದಿರುವ ತಂತ್ರಾಂಶಗಳ ಬಳಕೆ ಹೆಚ್ಚುತ್ತಿದ್ದಂತೆ ಮೌಸ್‌ನ ಜನಪ್ರಿಯತೆಯೂ ಹೆಚ್ಚುತ್ತಾ ಹೋಯಿತು. 1968ರಲ್ಲಿ ಡಗ್ಲಾಸ್ ಮೊದಲ ಕಂಪ್ಯೂಟರ್ ಮೌಸ್ ಕಂಡುಹಿಡಿದರೆ, ಜೆರಾಕ್ಸ್​ ಕಾರ್ಪೊರೇಷನ್​ ಸಂಸ್ಥೆಯು 1970ರಲ್ಲಿ ಮೌಸ್​ ಸಂಶೋಧನೆಯಲ್ಲಿ ತೊಡಗಿತು. 1981ರಲ್ಲಿ ಜೆರಾಕ್ಸ್​ ಸ್ಟಾರ್​ ಕಂಪ್ಯೂಟರ್​ ಎಂಬ ಮೌಸ್​ಗಳನ್ನು ಮೊದಲ ವಾಣಿಜ್ಯ ಮೌಸ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಆಗ ಬಿಕರಿಯಾದ ಮೌಸ್​ಗಳ ಬೆಲೆ 17 ಸಾವಿರ ಡಾಲರ್​. ಅಂದರೆ, ಈಗಿನ ಭಾರತೀಯ ಮೌಲ್ಯದಲ್ಲಿ ಸುಮಾರು 12 ಲಕ್ಷ ರೂ. ಆಗಬಹುದು.!

ಕಂಪ್ಯೂಟರ್​ನಲ್ಲಿ ಜನಪ್ರಿಯತೆ!

ಕಂಪ್ಯೂಟರ್​ನಲ್ಲಿ ಜನಪ್ರಿಯತೆ!

ಕಂಪ್ಯೂಟರ್‌ ಮೌಸ್‌ಗೆ ಹೆಚ್ಚು ಖ್ಯಾತಿಯನ್ನು ತಂದುಕೊಟ್ಟ ಕೀರ್ತಿಗೆ ಸ್ಟೀವ್​ ಜಾಬ್ಸ್​ ಅವರ ನೇತೃತ್ವದ ಆಪಲ್​ ಸಂಸ್ಥೆಗೆ ಸೇರಬೇಕು. 1976ರಲ್ಲಿ ಸ್ಟೀವ್​ ಜಾಬ್ಸ್​ ಅವರ ನೇತೃತ್ವದ ಆಪಲ್​ ಕಂಪ್ಯೂಟರ್ ಸಂಸ್ಥೆಯು ತನ್ನ ಕಂಪ್ಯೂಟರ್​ನಲ್ಲಿ ಮೌಸ್​ಅನ್ನು ಸೇರಿಸಿ ಬಿಡುಗಡೆ ಮಾಡಿತು. ಯೂಸರ್​ ಫ್ರೆಂಡ್ಲಿಯಾಗಿದ್ದ ಈ ಉಪಕರಣವು ಬಹುಬೇಗನೆ ಪ್ರಸಿದ್ಧಿಗೆ ಬಂದಿತು. ಈಗ ಕಂಪ್ಯೂಟರ್‌ನಲ್ಲಿ ಮೌಸ್ ಇಲ್ಲದೆ ಕೆಲಸ ನಿರ್ವಹಣೆ ಮಾಡಲು ಸಾಧ್ಯವೇ ಇಲ್ಲ ಎನ್ನುವಷ್ಟು ನಮ್ಮನ್ನು ಹಚ್ಚಿಕೊಂಡಿದೆ. ಮತ್ತೊಂದು ಊಹಾಪೋಹದಂತೆ ಇನ್ನೈದು ವರ್ಷಗಳಲ್ಲಿ ಮೌಸ್ ಮರೆಯಾಗಬಹುದಂತೆ.!

Most Read Articles
Best Mobiles in India

English summary
The computer mouse has come a long way since it was first presented in the US 50 years ago. It's now on the desks of hundreds of millions of PC users around the globe. Here's some things you may not know about it. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more