ಕೊರೊನಾ ವೈರಸ್‌: ಗೂಗಲ್‌ ಅಸಿಸ್ಟಂಟ್‌ನಲ್ಲಿ ಸರಿಯಾಗಿ ಕೈ ತೊಳೆಯುವ ಬಗ್ಗೆ ಜಾಗೃತಿ!

|

ವಿಶ್ವದೆಲ್ಲೆಡೆ ಭೀತಿ ಮೂಡಿಸಿರುವ ಕೊರೊನಾ ವೈರಸ್‌ ಭಾರತವನ್ನು ತಲ್ಲಣಗೊಳಿಸಿದೆ. ಇನ್ನು ಈ ಸಾಂಕ್ರಾಮಿಕ ಹರಡದಂತೆ ತಡೆಯಲು ವಿಶ್ವ ಆರೋಗ್ಯ ಸಂಸ್ಥೆಯು ಕೆಲವು ಅಗತ್ಯ ಮಾರ್ಗಸೂಚಿಗಳನ್ನು ತಿಳಿಸಿದೆ. ಮುಖ್ಯವಾಗಿ ಸ್ವಚ್ಛವಾಗಿ ಕೈ ತೊಳೆಯಬೇಕೆಂದು ಮಾಹಿತಿ ನೀಡಿದೆ. ಈ ಆದೇಶವನ್ನು ಬಳಕೆದಾರರಿಗೆ ತಲುಪಿಸುವ ನಿಟ್ಟಿನಲ್ಲಿ ಗೂಗಲ್ ಮುಂದಾಗಿದ್ದು, ತನ್ನ ಗೂಗಲ್ ಅಸಿಸ್ಟಂಟ್‌ನಲ್ಲಿ ಹ್ಯಾಂಡ್‌ ವಾಶ್ ಮಾಡುವ ಬಗ್ಗೆ ಮಾಹಿತಿ ಅಳವಡಿಸಿದೆ.

ಕೊರೊನಾ ವೈರಸ್‌

ಹೌದು, ಮಾರಕ ಕೊರೊನಾ ವೈರಸ್‌ ತಡೆಗೆ ಟೆಕ್ ದಿಗ್ಗಜ ಗೂಗಲ್ ಸಹ ಸಾಥ್ ನೀಡಿದ್ದು, ತನ್ನ ಸೇವೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಕೊರೊನಾ ವೈರಸ್‌ ಬಗೆ ದಾರಿ ತಪ್ಪಿಸುವ ನಕಲಿ ಮಾಹಿತಿಗಳನ್ನು ತಗೆದಿದೆ. ಹಾಗೂ ಜನರು ಕೊರೊನಾ ವೈರಸ್‌ ಬಗ್ಗೆ ಸರ್ಚ್ ಮಾಡಿದಾಗ ಅಧಿಕೃತ ಆರೋಗ್ಯ ಸಂಸ್ಥೆಗಳ ಮಾಹಿತಿ ಮೊದಲು ಹಾಗೆ ಫಲಿತಾಂಶ ಪುಟವನ್ನು ರೂಪಿಸಿದೆ. ಅದೇ ರೀತಿ ಈಗ ತನ್ನ ಗೂಗಲ್‌ ಅಸಿಸ್ಟಂಟ್‌ ಸೇವೆಯಲ್ಲಿ ಕೈ ತೊಳೆಯುವ ಬಗ್ಗೆ (Hey Google, help me wash my hands) ಮಾಹಿತಿ ಸೇರಿಸಿದೆ.

ಸಾಂಗ್ ಮೂಲಕ ಮಾಹಿತಿ

ಸಾಂಗ್ ಮೂಲಕ ಮಾಹಿತಿ

ಗೂಗಲ್ ಅಸಿಸ್ಟಂಟ್‌ನಲ್ಲಿ ಸರಿಯಾಗಿ ಕೈ ತೊಳೆಯುವ ಕುರಿತು ಮಾಹಿತಿ ಲಭ್ಯ ಮಾಡಿದೆ. ಬಳಕೆದಾರರು 'ಹೇ ಗೂಗಲ್, ನನ್ನ ಕೈ ತೊಳೆಯಲು ನನಗೆ ಸಹಾಯ ಮಾಡಿ.' ಎಂದು ಹೇಳಿದಾಗ, ಗೂಗಲ್‌ ಅಸಿಸ್ಟಂಟ್‌ನಿಂದ ಕೈ ತೊಳೆಯುವ ಕುರಿತಾದ 40 ಸೆಕೆಂಡುಗಳವರೆಗೆ ಹಾಡು ಕೇಳಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದಂತೆ ಸರಿಯಾಗಿ ಕೈ ತೊಲೆಯುವ ಬಗ್ಗೆ ಜನರಿಗೆ ಮಾಹಿತಿ ಸಿಗಲಿದೆ.

ಯಾವ ಡಿವೈಸ್‌ಗಳಲ್ಲಿ ಲಭ್ಯ

ಯಾವ ಡಿವೈಸ್‌ಗಳಲ್ಲಿ ಲಭ್ಯ

ಗೂಗಲ್ ಅಸಿಸ್ಟಂಟ್‌ ಹ್ಯಾಂಡ್‌ ವಾಶ್ ಕುರಿತಾದ ಮಾಹಿತಿಯು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ, ಗೂಗಲ್ ನೆಸ್ಟ್ ಹಬ್ ಹಾಗೂ ಸ್ಮಾರ್ಟ್‌ ಡಿಸ್‌ಪ್ಲೇ ಡಿವೈಸ್‌ಗಳಲ್ಲಿ ಈ ಸೌಲಭ್ಯವು ಕಾಣಿಸುತ್ತದೆ. ಗೂಗಲ್ ಅಸಿಸ್ಟಂಟ್‌ನಲ್ಲಿ ಹ್ಯಾಂಡ್‌ ವಾಶ್ ಹಾಡಿನ ಸಂಪೂರ್ಣ ಸಾಹಿತ್ಯ ಇದ್ದು, ಜೊತೆಗೆ ನೆಸ್ಟ್ ಹಬ್‌ನಂತಹ ಸ್ಮಾರ್ಟ್ ಡಿಸ್‌ಪ್ಲೇ ಡಿವೈಸ್‌ಗಳಲ್ಲಿ ವರ್ಣರಂಜಿತ ಸೋಪ್/ಸಾಬೂನ ಗುಳ್ಳೆಗಳ ಗ್ರಾಫಿಕ್ಸ್ ಅನ್ನು ತೋರಿಸುತ್ತದೆ.

ಗೂಗಲ್ ಸಂಸ್ಥೆ

ಹಾಗೆಯೇ ಗೂಗಲ್ ಸಂಸ್ಥೆಯು ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ, ದೃಢಪಟ್ಟವರ ಸಂಖ್ಯೆ, ಯಾವ ದೇಶದಲ್ಲಿ ಎಷ್ಟು ಜನರಿಗೆ ಈ ಮಾಹಾಮಾರಿ ತಗುಲಿದೆ ಹಾಗೂ ಎಷ್ಟು ಜನ ಸಾವನ್ನಪ್ಪಿದ್ದಾರೆ ಎನ್ನುವ ಕುರಿತಾಗಿ ಅಂಕಿ-ಅಂಶಗಳನ್ನು ಟ್ರಾಕ್ ಮಾಡಲು ವೆಬ್‌ಸೈಟ್ ಆರಂಭಿಸಿದೆ. ಗೂಗಲ್ ತನ್ನ ಡ್ಯೂಡಲ್‌ನಲ್ಲಿಯೂ ಈ ಬಗ್ಗೆ ಮಾಹಿತಿ ತಿಳಿಸಿತ್ತು. ಹೀಗಾಗಿ ಕೊರೊನಾ ವೈರಸ್‌ ಬಗ್ಗೆ ಏನೇ ಸಂದೇಶವಿದ್ದರೇ/ ಸೋಂಕಿನ ಲಕ್ಷಣಗಳ ಬಗ್ಗೆ ನಿಖರಿ ಮಾಹಿತಿ ತಿಳಿಯಲು ಅಧಿಕೃತ ಆರೋಗ್ಯ ಸಂಸ್ಥೆಗಳ ಸೈಟ್‌ಗಳಿಗೆ ಭೇಟಿ ನೀಡಿ.

Most Read Articles
Best Mobiles in India

English summary
Google has introduced a new command for Google Assistant that is aimed at helping people wash their hands better.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X