ರಾಜ್ಯ ಸರ್ಕಾರದ ಈ ಆಪ್‌ಗಳು ಕೊರೊನಾ ಟ್ರಾಕ್ ಮಾಡಲು ಸಹಾಯಕ!

|

ದೇಶದಲ್ಲಿ ಕೊರೊನಾ ವೈರಸ್‌ ನಿಯಂತ್ರಿಸಲು ಕೇಂದ್ರ ಸರ್ಕಾರ ಹಂತ ಹಂತವಾಗಿ ಲಾಕ್‌ಡೌನ್ ಜಾರಿ ಮಾಡಿದೆ. ಸದ್ಯ ಲಾಕ್‌ಡೌನ್‌ 4.0 ಜಾರಿಯಲ್ಲಿದ್ದು, ಮುನ್ನೆಚ್ಚರಿಕೆಯ ಕ್ರಮಗಳೊಂದಿಗೆ ಸ್ವಲ್ಪಮಟ್ಟಿಗೆ ಸಡಿಲಿಕೆ ನೀಡಿದೆ. ಅದಾಗ್ಯೂ ಸರ್ಕಾರ ಕೊರೊನಾ ವೈರಸ್ ಟ್ರಾಕಿಂಗ್ ಮಾಡಲು ಮತ್ತು ಕೋವಿಡ್‌-19 ಸೋಂಕಿತರಿಂದ ಸುರಕ್ಷಿತ ಅಂತರ ಕಾಪಾಡಲು ಆರೋಗ್ಯ ಸೇತು ಆಪ್‌ ಬಿಡುಗಡೆ ಮಾಡಿದೆ. ಹಾಗೆಯೇ ರಾಜ್ಯ ಸರ್ಕಾರವು ಸಹ ಕೊರೊನಾ ವೈರಸ್ ಟ್ರಾಕ್ ಮಾಡಲು ಕೆಲವು ಅನುಕೂಲಕರ ಮೊಬೈಲ್‌ ಅಪ್ಲಿಕೇಶನ್‌ಗಳನ್ನು ಪರಿಚಯಿಸಿದೆ.

ಕೋವಿಡ್‌-19

ಹೌದು, ಮಹಾಮಾರಿ ಕೋವಿಡ್‌-19 ವಕ್ಕರಿಸಿ ಆತಂಕದ ವಾತಾವರಣ ಸೃಷ್ಠಿಸಿದೆ. ರಾಜ್ಯ ಸರ್ಕಾರ ಕೋವಿಡ್-19 ಇನ್ಫರ್ಮೇಷನ್ ಪೋರ್ಟೆಲ್‌ನಲ್ಲಿ ಕೊರೊನಾ ವೈರಸ್‌ ಕುರಿತಾಗಿ ಜನರಿಗೆ ಅಧಿಕೃತ ಮಾಹಿತಿ, ಸಹಾಯವಾಣಿ ಮತ್ತು ಜಾಗೃತಿ ನೀಡುತ್ತಿದೆ. ಇದರೊಂದಿಗೆ ಕೊರೊನಾ ಸಂಬಂಧಿತ ಕೆಲವು ಮೊಬೈಲ್ ಅಪ್ಲಿಕೇಶನ್‌ಗಳನ್ನು ರೂಪಿಸಿದ್ದು, ಆಂಡ್ರಾಯ್ಡ್‌ ಹಾಗೂ ಐಓಎಸ್‌ ಬೆಂಬಲ ಪಡೆದಿದೆ. ಹಾಗೆಯೇ ಆರೋಗ್ಯ ಸಹಾಯವಾಣಿ 104 ಮತ್ತು ಆಪ್ತಮಿತ್ರ ಸಹಾಯವಾಣಿ 14410 ಕಾರ್ಯನಿರ್ವಹಿಸುತ್ತಿವೆ. ಕೊರೊನಾ ಸಂಬಂಧಿತ ರಾಜ್ಯ ಸರ್ಕಾರದ ಮೊಬೈಲ್ ಆಪ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಕಂಟೈನ್‌ಮೆಂಟ್ ವಾಚ್

ಕಂಟೈನ್‌ಮೆಂಟ್ ವಾಚ್

ಕಂಟೈನ್‌ಮೆಂಟ್ ವಾಚ್ ಮೊಬೈಲ್ ಅಪ್ಲಿಕೇಶನ್ ಅಧಿಕೃತ ಇಲಾಖೆಯ ಅಧಿಕಾರಿಗಳಿಗೆ ಕುಟುಂಬ ಸದಸ್ಯರ ಆರೋಗ್ಯ ಸ್ಥಿತಿಯ ಕುರಿತು ಹೌಸ್ ಹೋಲ್ಡ್ ಸಮೀಕ್ಷೆ ನಡೆಸಲು ಬಳಸಲಾಗುತ್ತಿದೆ. ಹಾಗೆಯೇ ಆರೋಗ್ಯದ ಅಪಾಯದ ಗುರುತಿಸಲ್ಪಟ್ಟ ಕುಟುಂಬಗಳಿಗೆ ನಿಯಮಿತ ಅನುಸರಣಾ ಸಮೀಕ್ಷೆಯನ್ನು ನಡೆಸಲು ಸಹ ಈ ಆಪ್ ಬಳಸಲಾಗುತ್ತದೆ. ಈ ಆಪ್‌ ಆಂಡ್ರಾಯ್ಡ್ ಓಎಸ್‌ ಬೆಂಬಲ ಪಡೆದಿದೆ.

ಕರ್ನಾಟಕ ಹೆಲ್ತ್ ವಾಚ್

ಕರ್ನಾಟಕ ಹೆಲ್ತ್ ವಾಚ್

ಕರ್ನಾಟಕ ಹೆಲ್ತ್_ವಾಚ್ ಅಪ್ಲಿಕೇಶನ್ ಅನ್ನು ಸಮೀಕ್ಷೇ ಮಾಡಿ ಆರೋಗ್ಯದ ಅಪಾಯದ ಗುರುತಿಸಲ್ಪಟ್ಟ ಕುಟುಂಬಗಳಿಗೆ ನಿಯಮಿತ ಅನುಸರಣಾ ಸಮೀಕ್ಷೆಯನ್ನು ನಡೆಸಲು ಈ ಆಪ್ ಬಳಸಲಾಗುತ್ತದೆ. ಈ ಆಪ್‌ ಆಂಡ್ರಾಯ್ಡ್ ಓಎಸ್‌ ಬೆಂಬಲ ಪಡೆದಿದೆ.

ಕೊರೊನಾ ವಾಚ್

ಕೊರೊನಾ ವಾಚ್

ಕೊರೊನಾ ವಾಚ್ ಅಪ್ಲಿಕೇಶನ್ ಕರೋನಾ ಸೋಂಕಿತರ ಸ್ಥಳಗಳನ್ನು ಮತ್ತು ಅವರ 14 ದಿನಗಳ ಚಲನೆಯ ಇತಿಹಾಸ ತೋರಿಸುವುದಕ್ಕಾಗಿ ಆಗಿದೆ. ಹಾಗೆಯೇ ಕೊರೊನಾ ಪರೀಕ್ಷೆ ನಡುಸುವ ಹತ್ತಿರದ ಆಸ್ಪತ್ರೆಗಳನ್ನು ಗುರುತಿಸಲು ನಾಗರಿಕರಿಗೆ ಈ ಆಪ್ ಅನುಕೂಲವಾಗುತ್ತದೆ. ಈ ಆಪ್‌ ಆಂಡ್ರಾಯ್ಡ್ ಓಎಸ್‌ ಹಾಗೂ ಐಓಎಸ್‌ ಓಎಸ್‌ನ ಬೆಂಬಲವನ್ನು ಸಹ ಪಡೆದಿದೆ.

ಕ್ವಾರಂಟೈನ್ ವಾಚ್

ಕ್ವಾರಂಟೈನ್ ವಾಚ್

ಈ ಆಪ್ ಸೆಲ್ಫ ಕ್ವಾರಂಟೈನ್ ವ್ಯಕ್ತಿಗಳಿಗೆ ಹಾಗೂ ಕುಟುಂಬ ಸದಸ್ಯರುಗಳಿಗೆ ಸ್ವಯಂ ವರದಿ ಮಾಡುವುದಕ್ಕೆ ಅನುಕೂಲವಾಗಿದೆ. ಇನ್ನು ಈ ಆಪ್‌ ಆಂಡ್ರಾಯ್ಡ್ ಓಎಸ್‌ ಬೆಂಬಲ ಪಡೆದಿದೆ.

ಆಪ್ತಮಿತ್ರ-Apthamitra

ಆಪ್ತಮಿತ್ರ-Apthamitra

ಈ ಆಪ್‌ನಲ್ಲಿ COVID-19 ರೋಗಲಕ್ಷಣಗಳಿಗಾಗಿ ಸಮೀಕ್ಷೆಯನ್ನು ತೆಗೆದುಕೊಳ್ಳಬಹುದಾಗಿದೆ. ಈ ಆಪ್‌ ಆಂಡ್ರಾಯ್ಡ್ ಓಎಸ್‌ ಬೆಂಬಲ ಪಡೆದಿದೆ.

ಕಾಂಟ್ಯಾಕ್ಟ್‌ ಟ್ರೇಸಿಂಗ್ ಆಪ್

ಕಾಂಟ್ಯಾಕ್ಟ್‌ ಟ್ರೇಸಿಂಗ್ ಆಪ್

ಕಾಂಟ್ಯಾಕ್ಟ್‌ ಟ್ರೇಸಿಂಗ್ ಮೊಬೈಲ್ ಅಪ್ಲಿಕೇಶನ್ ಆಗಿದ್ದು, ಮೊಬೈಲ್ ನಲ್ಲಿನ ಕಾಂಟ್ಯಾಕ್ಟ್‌ಗಳ ರೆಕಾರ್ಡಿಂಗ್ ಮತ್ತು ಪರಿಶೀಲನೆ ಮಾಡುತ್ತದೆ. ರಾಜ್ಯಾದ್ಯಂತ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳ ಡೇಟಾಬೇಸ್ ಅನ್ನು ನಿರ್ಮಿಸುತ್ತದೆ. ಆಂಡ್ರಾಯ್ಡ್‌ ಓಎಸ್‌ ಬೆಂಬಲ ಪಡೆದಿದೆ.

ಆರೋಗ್ಯ ಸೇತು

ಆರೋಗ್ಯ ಸೇತು

ಕೊರೊನಾ ಸೋಂಕಿತರನ್ನು ಟ್ರಾಕ್ ಮಾಡಲು ರೂಪಿಸಿಲಾಗಿದೆ. ಈ ಆಪ್ ಬಳಕೆ ಮಾಡುವ ವ್ಯಕ್ತಿಯ ಹತ್ತಿರದಲ್ಲಿ ಸೋಂಕಿತರು ಬಂದರೇ/ಇದ್ದರೇ ಮಾಹಿತಿ ನೀಡುತ್ತದೆ. ಕೇಂದ್ರ ಸರ್ಕಾರ ಈ ಆಪ್ ಬಿಡುಗಡೆ ಮಾಡಿದ್ದು, ಆಂಡ್ರಾಯ್ಡ್ ಹಾಗೂ ಐಓಎಸ್‌ ಎರಡು ಓಎಸ್‌ಗಳ ಬೆಂಬಲ ಹೊಂದಿದೆ.

Most Read Articles
Best Mobiles in India

English summary
State Governments are also releasing new apps to ensure that people can track cases around them with ease and get accurate information.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more