ಕ್ರಿಪ್ಟೋಕರೆನ್ಸಿ ನಿಷೇಧಕ್ಕೆ ಮುಂದಾದ ಸರ್ಕಾರ!..ಆರ್‌ಬಿಐನಿಂದ ಹೊಸ ಡಿಜಿಟಲ್‌ ಕರೆನ್ಸಿ!

|

ಕ್ರಿಪ್ಟೋ ಕರೆನ್ಸಿಗಳನ್ನು ನಿಯಂತ್ರಿಸುವ ಸಲುವಾಗಿ ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 'ಕ್ರಿಪ್ಟೋ ಕರೆನ್ಸಿ ಮತ್ತು ಅಧಿಕೃತ ಡಿಜಿಟಲ್‌ ಕರೆನ್ಸಿ ನಿಯಂತ್ರಣ ವಿಧೇಯಕ- 2021' ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ವಿಧೇಯಕದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ (Reserve Bank Of India) ಹೊಸ ಕ್ರಿಪ್ಟೋ ಕರೆನ್ಸಿ ಬಿಡುಗಡೆ ಮಾಡುವುದು ಮತ್ತು ಭಾರತದಲ್ಲಿ ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸುವ ಪ್ರಸ್ತಾಪ ಇದೆ ಎಂದು ವರದಿಯಾಗಿದೆ.

ಕ್ರಿಪ್ಟೋಕರೆನ್ಸಿ ನಿಷೇಧಕ್ಕೆ ಮುಂದಾದ ಸರ್ಕಾರ!..RBIನಿಂದ ಹೊಸ ಡಿಜಿಟಲ್‌ ಕರೆನ್ಸಿ

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 'ಕ್ರಿಪ್ಟೋ ಕರೆನ್ಸಿ ಮತ್ತು ಅಧಿಕೃತ ಡಿಜಿಟಲ್‌ ಕರೆನ್ಸಿ ನಿಯಂತ್ರಣ ವಿಧೇಯಕ- 2021' ವಿಧೇಯಕ ಮಂಡಿಸಲಿದೆ. ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸುವ ಪ್ರಸ್ತಾಪ ಇದೆ. ಅಲ್ಲದೇ ಭಾರತೀಯ ರಿಸರ್ವ್ ಬ್ಯಾಂಕ್‌ (RBI) ನಿಂದ ಅಧಿಕೃತ ಡಿಜಿಟಲ್‌ ಕರೆನ್ಸಿಯ ಬಿಡುಗಡೆ ಮಾಡುವ ಪ್ರಸ್ತಾಪ ಇದೆ ಎಂದು ವರದಿಯಾಗಿದೆ.

ಕ್ರಿಪ್ಟೋ ಕರೆನ್ಸಿಗಳ ನಿಯಂತ್ರಣ, ಅವುಗಳ ವರ್ಗೀಕರಣ ಮತ್ತು ಅವುಗಳಿಗೆ ತೆರಿಗೆ ವಿಧಿಸುವ ಉದ್ದೇಶದ ಮಸೂದೆಗೆ ಸಚಿವ ಸಂಪುಟದ ಅನುಮೋದನೆ ಪಡೆದ ನಂತರ, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರಕ್ಕೆ ತೆಗೆದುಕೊಳ್ಳಬಹುದು ಎಂದು ತಿಳಿದು ಬಂದಿದೆ.

ಕ್ರಿಪ್ಟೋಕರೆನ್ಸಿ ನಿಷೇಧಕ್ಕೆ ಮುಂದಾದ ಸರ್ಕಾರ!..RBIನಿಂದ ಹೊಸ ಡಿಜಿಟಲ್‌ ಕರೆನ್ಸಿ

ದೇಶದಲ್ಲಿ ಕ್ರಿಪ್ಟೋ ಕರೆನ್ಸಿಗಳಿಗೆ ಮಾನ್ಯತೆಯೂ ಇಲ್ಲ, ನಿಷೇಧವೂ ಇಲ್ಲ. ಅದಾಗ್ಯೂ, ಅನೇಕರು ಇದರಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಡಿಜಿಟಲ್‌ ಕರೆನ್ಸಿ, ಅಕ್ರಮ ಹಣ ವರ್ಗಾವಣೆಗೆ ಮಾರ್ಗವಾಗಿ ಬಳಕೆಯಾಗುತ್ತಿರುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಕ್ರಿಪ್ಟೋ ಕರೆನ್ಸಿ ವಲಯಕ್ಕೆ ಹೊಸ ಕಾನೂನಿನ ಚೌಕಟ್ಟು ಒದಗಿಸುವ ಸಲುವಾಗಿ ಕ್ರಿಪ್ಟೋ ಕರೆನ್ಸಿ ಮತ್ತು ಅಧಿಕೃತ ಡಿಜಿಟಲ್‌ ಕರೆನ್ಸಿ ನಿಯಂತ್ರಣ ಮಸೂದೆ, 2021 ಅನ್ನು ಸರ್ಕಾರ ಸಿದ್ಧಪಡಿಸಿದೆ.

ಆರ್‌ಬಿಐನಿಂದ ಹೊಸ ಕ್ರಿಪ್ಟೋ ಕರೆನ್ಸಿ
ಝಾಸಗಿ ಕ್ರಿಪ್ಟೋ ಕರೆನ್ಸಿಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಹಾಗೆಯೇ ಭಾರತೀಯ ರಿಸರ್ವ್ ಬ್ಯಾಂಕ್‌ (RBI) ಹೊಸದಾಗಿ ಡಿಜಿಟಲ್‌ ಕರೆನ್ಸಿಯನ್ನು ಬಿಡುಗಡೆ ಮಾಡಲು ಸರ್ಕಾರ ಸಜ್ಜಾಗಿದೆ ಎನ್ನಲಾಗಿದೆ.

ಕ್ರಿಪ್ಟೋ ಕರೆನ್ಸಿ ಎಂದರೇನು?
ಅತೀ ಸರಳವಾಗಿ ಹೇಳುವುದಾದರೇ ಕ್ರಿಪ್ಟೋ ಕರೆನ್ಸಿ ಎಂದರೇ ಡಿಜಿಟಲ್ ಕರೆನ್ಸಿ. ಇದು ಇಂಟರ್ನೆಟ್ ಆಧಾರಿತವಾಗಿದ್ದು, ವಿನಿಮಯಕ್ಕೆ ಹೆಚ್ಚಾಗಿ ಬಳಕೆ ಮಾಡುತ್ತಾರೆ. ನಾಣ್ಯ ಅಥವಾ ನೋಟಿನ ರೂಪದಲ್ಲಿ ಇದು ಲಭ್ಯವಾಗುವುದಿಲ್ಲ. ಡಿಜಿಟಲ್ ತಂತ್ರಜ್ಞಾನ ಬಳಸಿ ವ್ಯವಹಾರ ಮಾಡಲಾಗುತ್ತದೆ.

ಕ್ರಿಪ್ಟೋಕರೆನ್ಸಿ ನಿಷೇಧಕ್ಕೆ ಮುಂದಾದ ಸರ್ಕಾರ!..RBIನಿಂದ ಹೊಸ ಡಿಜಿಟಲ್‌ ಕರೆನ್ಸಿ

ಬ್ಲಾಕ್‌ ಚೈನ್ ತಂತ್ರಜ್ಞಾನ
ಬ್ಲಾಕ್‌ ಚೈನ್ ಎಂಬ ತಂತ್ರಜ್ಞಾನ ಬಳಸಿ ಕ್ರಿಪ್ಟೋ ಕರೆನ್ಸಿಗೆ ಡಿಜಿಟಲ್ ರಕ್ಷಣೆ ನೀಡಲಾಗಿರುತ್ತದೆ. ಕಂಪ್ಯೂಟರ್ ನೆಟ್‌ವರ್ಕ್‌ ಕೂಡಾ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಕ್ರಿಪ್ಟೋ ಕರೆನ್ಸಿಯನ್ನು ನೀಡುವ ಹಲವು ಖಾಸಗಿ ಸಂಸ್ಥೆಗಳಿವೆ ಕಾರ್ಯನಿರ್ವಹಿಸುತ್ತಿವೆ. ಆದ್ರೆ, ಸರ್ಕಾರಗಳು ಈ ವ್ಯವಹಾರ ನಡೆಸೋದಿಲ್ಲ ಮತ್ತು ಭಾಗಿಯಾಗುವುದಿಲ್ಲ.

ಪ್ರಮುಖ ಕ್ರಿಪ್ಟೋ ಕರೆನ್ಸಿಯ ವಿಧಗಳು:
* ಬಿಟ್‌ ಕಾಯಿನ್
* ಎಥೆರಿಯಮ್
* ಎಕ್ಸ್ಆರ್‌ಪಿ
* ಟೆದರ್
* ಡಾಗ್ ಕಾಯಿನ್
* ಬಿಟ್‌ ಕಾಯಿನ್‌ ಕ್ಯಾಶ್‌

ಅತ್ಯಂತ ಜನಪ್ರಿಯ ಕ್ರಿಪ್ಟೋ ಕರೆನ್ಸಿ
ಹಲವು ಬಗೆಯ ಕ್ರಿಪ್ಟೋ ಕರೆನ್ಸಿಗಳಿವೆ. ಆದರೆ ಬಿಟ್ ಕಾಯಿನ್ ಹೆಚ್ಚು ಜನಪ್ರಿಯ ಹಾಗೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಇತ್ತೀಚಿಗೆ ಪ್ರಮುಖ ಐದು ಕ್ರಿಪ್ಟೋ ಕರೆನ್ಸಿಗಳ ಲಿಸ್ಟ್‌ನಲ್ಲಿ ಡಾಗ್ ಕಾಯಿನ್ ಕಾಣಿಸಿಕೊಂಡಿದೆ. ಈ ಡಾಗ್ ಕಾಯಿನ್ 2013ರಲ್ಲಿ ಪರಿಚಿತವಾಗಿದೆ.

ಅದೇ ರೀತಿ 2009ರಲ್ಲಿ ಸಂತೋಷಿ ನಕಮೋಟೋ ಎಂಬ ಹೆಸರಿನ ಸಂಸ್ಥೆಯೊಂದು ಬಿಟ್ ಕಾಯಿನ್ ವ್ಯವಸ್ಥೆಯನ್ನು ಪರಿಚಯಿಸಿತು. ಇದೀಗ ಮಾರ್ಚ್‌ 2021ರ ಅಂಕಿಅಂಶವನ್ನು ಗಮನಿಸಿದರೆ ಇಡೀ ವಿಶ್ವದಲ್ಲಿ ಒಟ್ಟು 18.6 ದಶ ಲಕ್ಷ ಬಿಟ್ ಕಾಯಿನ್‌ಗಳು ಬಳಕೆಯಲ್ಲಿವೆ. ಇದರ ಒಟ್ಟು ಮಾರುಕಟ್ಟೆ ಮೌಲ್ಯ 927 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ.

Most Read Articles
Best Mobiles in India

English summary
Cryptocurrency Bill in Parliament: Govt Intends To Create Official Digital Currency.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X